ಬುರ್ಖಾಧಾರಿ ಮಹಿಳೆ ಜತೆಗಿದ್ದ ಬೈಕ್ ಸವಾರನ ಮೇಲೆ ಹಲ್ಲೆ: ಇಬ್ಬರ ಬಂಧನ, ಗೃಹ ಸಚಿವ ಅಭಿನಂದನೆ

By Suvarna NewsFirst Published Sep 19, 2021, 7:12 PM IST
Highlights

* ಬುರ್ಖಾ ಧರಿಸಿದ ಮಹಿಳೆ ಜತೆ ಪ್ರಯಾಣಿಸುತ್ತಿದ್ದ ಬೈಕ್ ಸವಾರನ ಹಲ್ಲೆ
* ಹಲ್ಲೆ ಮಾಡಿದ ಆರೋಪಿಗಳನ್ನ ಬಂಧಿಸಿದ ಪೊಲೀಸ್ರು
* ಪೊಲೀಸ್ರ ಕಾರ್ಯಕ್ಕೆ ಗೃಹ ಸಚಿವರ ಅಭಿನಂದನೆ

ಬೆಂಗಳೂರು, (ಸೆ.19): ಬುರ್ಖಾ ಧರಿಸಿದ ಮಹಿಳೆ ಜತೆ ಪ್ರಯಾಣಿಸುತ್ತಿದ್ದ ಬೈಕ್ ಸವಾರನ ನಿಂದನೆ ಮತ್ತು ಹಲ್ಲೆ ಪ್ರಕರಣದ ಆರೋಪಿಗಳನ್ನು ಬಂಧಿಸಲಾಗಿದೆ. 

ಹಲ್ಲೆ ವಿಡಿಯೋ ವೈರಲ್ ಆದ 12 ಗಂಟೆಯಲ್ಲೇ ಬಂಧನ ಬೆಂಗಳೂರಿನ ಸುದ್ದಗುಂಟೆಪಾಳ್ಯ ಪೊಲೀಸರು ಹಲ್ಲೆ ನಡೆಸಿದ ಆರೋಪಿಗಳನ್ನು ಅರೆಸ್ಟ್ ಮಾಡಿದ್ದು, ಇದಕ್ಕೆ ಗೃಹ ಸಚಿವ ಆರಗ ಜ್ಞಾನೇಂದ್ರ ಅಭಿನಂದನೆ ತಿಳಿಸಿದ್ದಾರೆ.

ಅನ್ಯ ಕೋಮಿನ ಯುವತಿ ಜೊತೆಗಿದ್ದ ವ್ಯಕ್ತಿಯ ಹಲ್ಲೆ, ಪುಂಡರು ಅರೆಸ್ಟ್‌!

ಪತ್ರಿಕಾ ಪ್ರಕಣೆ ಮೂಲಕ ಬೆಂಗಳೂರು ನಗರ ಪೊಲೀಸರಿಗೆ ಗೃಹ ಸಚಿವ ಆರಗ ಜ್ಞಾನೇಂದ್ರ ಅಭಿನಂದನೆ ತಿಳಿಸಿದ್ದು, ಜಾಗತಿಕ ನಗರ ಬೆಂಗಳೂರು, ಸರ್ವ ಜನಾಂಗದ ಶಾಂತಿಯ ತೋಟ ವಾಗಿದ್ದು, ಅದರ ಖ್ಯಾತಿಯನ್ನು ಉಳಿಸಲು ಸರಕಾರ, ಬದ್ಧವಾಗಿದೆ, ಯಾರೇ ಆದರೂ ಕಾನೂನನ್ನು  ಕೈಗೆ ತೆಗೆದುಕೊಳ್ಳುವುದನ್ನು, ಸಹಿಸಲಾಗುವುದಿಲ್ಲ ಎಂದಿದ್ದಾರೆ.

ಬೇರೆ ಧರ್ಮದ ಮಹಿಳೆಯೊಂದಿಗೆ ಪ್ರಯಾಣಿಸುತ್ತಿದ್ದರು  ಎಂಬ ವಿಷಯಕ್ಕೆ ವ್ಯಕ್ತಿಯೋರ್ವನ ಮೇಲೆ ಹಲ್ಲೆ ನಡೆಸಿ ಎಚ್ಚರಿಕೆ ನೀಡಿದ್ದರು. ಹಲ್ಲೆಯ ವಿಡಿಯೋ ನಿನ್ನೆಯಿಂದ ವೈರಲ್ ಆಗಿತ್ತು. ಘಟನಾ ಸ್ಥಳ, ಬಾತ್ಮೀದಾರರು ನೀಡಿದ ಮಾಹಿತಿಯ ಅನ್ವಯ ಇಬ್ಬರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.

click me!