ದುರ್ಗಾವರ ಗ್ರಾಪಂ ಲೆಕ್ಕಾಧಿಕಾರಿ ಆತ್ಮಹತ್ಯೆಗೆ ಶರಣು! ಕುಟುಂಬಸ್ಥರು ಹೇಳೋದೇನು?

By Ravi Janekal  |  First Published Jan 12, 2024, 3:23 PM IST

ಳೆದೊಂದು ವಾರದಿಂದ ನಾಪತ್ತೆಯಾಗಿದ್ದ ಚಿತ್ರದುರ್ಗ ಜಿಲ್ಲೆಯ ಚಳ್ಳಕೆರೆ ತಾಲೂಕಿನ ದುರ್ಗಾವರ ಗ್ರಾಪಂ ಅಧ್ಯಕ್ಷ ಇಂದು ಚಿತ್ರದುರ್ಗದ ರಾಷ್ಟ್ರೀಯ ಹೆದ್ದಾರಿ ಪಕ್ಕದಲ್ಲಿ ಶವವಾಗಿ ಪತ್ತೆಯಾಗಿದ್ದಾರೆ. ಮೃತದೇಹ ಕೊಳೆತ ಸ್ಥಿತಿಯಲ್ಲಿ ಪತ್ತೆಗಿರುವುದರಿಂದ ಸುಮಾರು ನಾಲ್ಕೈದು ದಿನಗಳ ಹಿಂದೆಯೇ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎನ್ನಲಾಗಿದೆ.


ಚಿತ್ರದುರ್ಗ (ಜ.12) ಕಳೆದೊಂದು ವಾರದಿಂದ ನಾಪತ್ತೆಯಾಗಿದ್ದ ಚಿತ್ರದುರ್ಗ ಜಿಲ್ಲೆಯ ಚಳ್ಳಕೆರೆ ತಾಲೂಕಿನ ದುರ್ಗಾವರ ಗ್ರಾಪಂ ಅಧ್ಯಕ್ಷ ಇಂದು ಚಿತ್ರದುರ್ಗದ ರಾಷ್ಟ್ರೀಯ ಹೆದ್ದಾರಿ ಪಕ್ಕದಲ್ಲಿ ಶವವಾಗಿ ಪತ್ತೆಯಾಗಿದ್ದಾರೆ. ಮೃತದೇಹ ಕೊಳೆತ ಸ್ಥಿತಿಯಲ್ಲಿ ಪತ್ತೆಗಿರುವುದರಿಂದ ಸುಮಾರು ನಾಲ್ಕೈದು ದಿನಗಳ ಹಿಂದೆಯೇ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎನ್ನಲಾಗಿದೆ.

ಚಿತ್ರದುರ್ಗದ ಕೆಳಗೋಟೆ ಬಡಾವಣೆಯ ನಾಗರಾಜ್ (45) ಮೃತ ದುರ್ದೈವಿ. ದುರ್ಗಾವರ ಗ್ರಾಪಂ ಅಧ್ಯಕ್ಷರಾಗಿದ್ದರು. ತೀವ್ರ ಅನಾರೋಗ್ಯ ಸಮಸ್ಯೆಯಿಂದ ಮನನೊಂದಿದ್ದ ನಾಗರಾಜ್, ಆತ್ಮಹತ್ಯೆ ಆತ್ಮಹತ್ಯೆ ಮಾಡಿಕೊಂಡಿರುವ ಶಂಕೆ. ಕುಟುಂಬಸ್ಥರು ಸಹ ಆತ್ಮಹತ್ಯೆ ಮಾಡಿಕೊಂಡಿರುವ ಬಗ್ಗೆ ಅನುಮಾನ ವ್ಯಕ್ತಪಡಿಸಿದ್ದಾರೆ.

Tap to resize

Latest Videos

undefined

ಚಳ್ಳಕೆರೆ ಪಟ್ಟಣದಲ್ಲಿ ಜನೆವರಿ 3 ರಂದು ನಾಪತ್ತೆಯಾಗಿದ್ದ ನಾಗರಾಜ್. ಮನೆಯವರ ಸಂಪರ್ಕಕ್ಕೂ ಸಿಕ್ಕಿರಲಿಲ್ಲ. ಸುತ್ತಮುತ್ತ ಎಲ್ಲ ಕಡೆ ಹುಡುಕಾಡಿದರೂ ಪತ್ತೆಯಾಗಿರಲಿಲ್ಲ. ಹೀಗಾಗಿ ನಾಗರಾಜ ಕಾಣೆಯಾಗಿರುವ ಬಗ್ಗೆ ಚಳ್ಳಕೆರೆ ಪೊಲೀಸ್ ಠಾಣೆಯಲ್ಲಿ ನಾಪತ್ತೆ ಪ್ರಕರಣ ದಾಖಲಾಗಿತ್ತು. 

ಬೈಕ್ ಸವಾರನ ಮೇಲೆ ಬಿದ್ದ ಹೈ ಟೆನ್ಷನ್ ವಿದ್ಯುತ್ ಕಂಬ; ತಪ್ಪಿದ ಭಾರೀ ದುರಂತ!

ಸಾಲಬಾಧೆಗೆ ರೈತ ಆತ್ಮಹತ್ಯೆ:

ಕಲಬುರಗಿ: ರೈತರೆಲ್ಲರೂ ಪರಿವಾರ ಸಮೇತರಾಗಿ ಹೊಲದಲ್ಲಿ ಸೇರಿ ಸಂಭ್ರಮಿಸುವ ಸುಗ್ಗಿ ಹಬ್ಬ ಎಳ್ಳ ಅಮಾವಾಸ್ಯೆ ದಿನವಾದ ಗುರುವಾರದಂದೇ ಸಾಲಭಾದೆ ತಾಳಲಾರದೆ ರೈತನೋರ್ವ ವಿಷ ಸೇವಿಸಿ ಆತ್ಮಹತ್ಯೆಗೆ ಶರಣಾಗಿರುವ ಘಟನೆ ಜಿಲ್ಲೆಯ ಕಾಳಗಿ ತಾಲೂಕಿನ ರುಮ್ಮನಗೂಡ್ ಗ್ರಾಮದಲ್ಲಿ ನಡೆದಿದೆ.

ಮೃತ ರೈತನನ್ನು ರುಮ್ಮನಗೂಡು ಗ್ರಾಮದ ನಿವಾಸಿ ಹೈದರ್‌ ಪಟೇಲ್‌ (65) ಎಂದು ಗುರುತಿಸಲಾಗಿದೆ. ಚಿಂಚೋಲಿ ಕೃಷ್ಣಾ ಗ್ರಾಮೀಣ ಬ್ಯಾಂಕ್‌ನಲ್ಲಿ ಬೆಳೆಸಾಲ ರೂಪದಲ್ಲಿ 85 ಸಾವಿರ ರು., ಕೋಡ್ಲಿ ಗ್ರಾಮದಲ್ಲಿ ವ್ಯವಸಾಯ ಸೇವಾ ಸಹಕಾರ ಸಂಘದಲ್ಲಿ 50 ಸಾವಿರ ರು, ಖಾಸಗಿ ಸಾಲ ₹3.50 ಲಕ್ಷ ಸೇರಿ ₹5 ಲಕ್ಷದಷ್ಟು ಸಾಲದ ಹೊರೆ ಈತನ ಮೇಲಿತ್ತು ಎಂದು ತಿಳಿದು ಬಂದಿದೆ.

ಅಂಗನವಾಡಿ ಕಾರ್ಯಕರ್ತೆಯಿಂದಲೇ ಮತಾಂತರ: 'ಮತಾಂತರ ನನ್ನಿಷ್ಟ' ಎಂದ ಮಹಿಳೆ ಅಧಿಕಾರಿಗಳ ಮುಂದೆ ಹೈಡ್ರಾಮಾ!

ಸಾಲಸೋಲ ಮಾಡಿಯಾದರೂ ತನ್ನ ಜಮೀನಿನಲ್ಲಿ ತೊಗರಿ ಬೆಳೆಯೋಣವೆಂದು ಈ ರೈ ತ ಬೇಸಾಯಕ್ಕೆ ಮುಂದಾಗಿದ್ದ, ಆದರೆ ಈ ಬಾರಿ ಹಸಿಬರಗಾಲ ಬಂದು ತೊಗರಿ ಇಳುವರಿಯೇ ಕುಸಿದು ಹೋದ ಕಾರಣ ಮನನೊಂದಿದ್ದ ರೈತ. ಇದರಿಂದಾಗಿಯೇ ಸಾಲದ ಹಣ ಹೇಗೆ ಮರಳಿಸೋದು ಎಂಬ ಚಿಂತೆಯಲ್ಲಿಯೇ ವಿಷ ಸೇವಿಸಿ ಸಾವನ್ನಪ್ಪಿದ್ದನೆಂದು ಕುಟುಂಬದವರು ಹೇಳಿದ್ದಾರೆ.

ಪತ್ನಿ ಮತ್ತು ಐವರು ಮಕ್ಕಳಿರುವ ರೈತ ಹೈದರ್‌ ಪಟೇಲ್‌ ತೊಗರಿ ಫಸಲಿಗೆ ಸಿಂಪಡಿಸುವ ಕೀಟನಾಶಕ ಔಷಧಿ ಕುಡಿದು ಸಾವನ್ನಪ್ಪಿದ್ದಾರೆ. ಇವರ ನೊಂದ ಕುಟುಂಬಕ್ಕೆ ಸಾಂತ್ವನ ಹೇಳಿ, ಸೂಕ್ತ ಪರಿಹಾರ ನೀಡುವ ಕೆಲಸವಾಗಬೇಕು ಎಂದು ಪ್ರಾಂತ ರೈತ ಸಂಘದ ಪರವಾಗಿ ಶರಣಬಸಪ್ಪ ಮಮಸೆಟ್ಟಿ ಜಿಲ್ಲಾಡಳಿತ, ಸರ್ಕಾರ ಹಾಗೂ ಜನನಾಯಕರನ್ನು ಆಗ್ರಹಿಸಿದ್ದಾರೆ.

click me!