ಚಿತ್ರದುರ್ಗ: ಕುಡಿದ ಮತ್ತಿನಲ್ಲಿ ಸ್ಟೀಲ್ ಕಟ್ಟರ್ ನಿಂದ ಮೂವರಿಗೆ ಇರಿದ ಯುವಕ

By Suvarna News  |  First Published Jan 24, 2024, 7:46 PM IST

ಎಣ್ಣೆ ನಶೆಯಲ್ಲಿ ಯುವಕರು ತೇಲಾಡ್ತಾ ಇದ್ರೆ ಯಾರಿಗೆ ಏನು ಮಾಡ್ತೀವಿ ಅನ್ನುವ ಅರಿವೇ ಇರಲ್ಲ ಅನ್ಸುತ್ತೆ. ಅದಕ್ಕೆ ನಿದರ್ಶನ ಎಂಬಂತೆ ಮಲ್ಲಾಪುರ ಗ್ರಾಮದಲ್ಲಿ ಯುವಕನೋರ್ವ ಕುಡಿದ ಅಮಲಿನಲ್ಲಿ ಗ್ರಾಮದ ಮೂವರ ಮೇಲೆ ಸ್ಟೀಲ್ ಕಟ್ಟರ್ ನಿಂದ ಇರಿದಿರೋ ಘಟನೆ ಬೆಳಕಿಗೆ ಬಂದಿದೆ. 


ವರದಿ: ಕಿರಣ್ಎಲ್ ತೊಡರನಾಳ್ ಏಷ್ಯಾನೆಟ್ ಸುವರ್ಣ ನ್ಯೂಸ್

ಚಿತ್ರದುರ್ಗ (ಜ.24): ಎಣ್ಣೆ ನಶೆಯಲ್ಲಿ ಯುವಕರು ತೇಲಾಡ್ತಾ ಇದ್ರೆ ಯಾರಿಗೆ ಏನು ಮಾಡ್ತೀವಿ ಅನ್ನುವ ಅರಿವೇ ಇರಲ್ಲ ಅನ್ಸುತ್ತೆ. ಅದಕ್ಕೆ ನಿದರ್ಶನ ಎಂಬಂತೆ ಮಲ್ಲಾಪುರ ಗ್ರಾಮದಲ್ಲಿ ಯುವಕನೋರ್ವ ಕುಡಿದ ಅಮಲಿನಲ್ಲಿ ಗ್ರಾಮದ ಮೂವರ ಮೇಲೆ ಸ್ಟೀಲ್ ಕಟ್ಟರ್ ನಿಂದ ಇರಿದಿರೋ ಘಟನೆ ಬೆಳಕಿಗೆ ಬಂದಿದೆ. 

Tap to resize

Latest Videos

undefined

ಹೀಗೆ ಚಾಕು ಇರಿತದಿಂದ ಆಸ್ಪತ್ರೆಯ ಬೆಡ್ ಮೇಲೆ ನರಳಾಡ್ತಿರೋ ಯುವಕರು. ತಮ್ಮ ಪಾಡಿಗೆ ತಾವು ನಿಂತಿದ್ರು ಏಕಾಏಕಿ ಚಾಕು ಇರಿದಿರೋ ಭೂಪನ ಹರೀಶ ಅಂತ. ಚಿತ್ರದುರ್ಗ ತಾಲ್ಲೂಕಿನ ಮಲ್ಲಾಪುರ ಗೊಲ್ಲರಹಟ್ಟಿ ಗ್ರಾಮದ ಇವನು, ನಿನ್ನೆ ತಡರಾತ್ರಿ ಗ್ರಾಮದಲ್ಲಿ ಅದ್ದೂರಿ ಜಾತ್ರೆ ನಡೆಯುತ್ತಿತ್ತು. ಗ್ರಾಮ ಅಂದ್ಮೇಲೆ‌ ಜಾತ್ರೆ ಸಮಯದಲ್ಲಿ ಸಣ್ಣ ಪುಟ್ಟ ಗಲಾಟೆಗಳು ಆಗುವುದು ಸಾಮಾನ್ಯ. ಆದ್ರೆ ರಾತ್ರಿ ಗ್ರಾಮದ ಮುಖ್ಯ ರಸ್ತೆಯಲ್ಲಿ ಆರೋಪಿ ವಿರೇಶನಿಗೂ ಗ್ರಾಮದ ಇನ್ನೋರ್ವ ಯುವಕನಿಗೆ ಜಗಳ ಶುರುವಾಗಿದೆ. ಆದ್ರೆ ಯವುದಕ್ಕೂ ಸಂಬಂಧವೇ ಇಲ್ಲದೇ ರಸ್ತೆಯಲ್ಲಿ ತಮ್ಮ ಪಾಡಿಗೆ ತಾವು ನಿಂತಿದ್ದ ಐವರಿಗೆ ನಶೆಯಲ್ಲಿ ಆರೋಪಿ ಚಾಕು ಇರಿದಿರುವುದು ದುರಂತವಾಗಿದೆ. ಎಣ್ಣೆ ನಶೆ ಅಥವಾ ಗಾಂಜಾ ನಶೆಯೇ ಇರಬೇಕು ಹಾಗಾಗಿಯೇ ಸಿಕ್ಕ ಸಿಕ್ಕವರಿಗೆ ವಿರೇಶ ಚಾಕು ಇರಿದನು. ಅವನಿಗೆ ಶಿಕ್ಷೆ ಆಗಬೇಕು ನಮಗೆ ಆಗಿರುವುದಕ್ಕೆ ನ್ಯಾಯ ಸಿಗಬೇಕು ಎಂದು ಗಾಯಾಳುಗಳು ಆಗ್ರಹಿಸಿದರು.

ಬೆಂಗಳೂರಿನಲ್ಲಿ ನಾಪತ್ತೆಯಾಗಿದ್ದ ಬಾಲಕ ಮೂರು ಸಿಟಿ ಸಂಚರಿಸಿ ಹೈದರಾಬಾದ್‌ನಲ್ಲಿ ಪತ್ತೆ!

ಇನ್ನೂ ಸುಮಾರು ವರ್ಷಗಳಿಂದಲೂ ವಿರೇಶ್ ಕುಡಿದ ಅಮಲಿನಲ್ಲಿ ಗ್ರಾಮದ ಜನರ ಮೇಲೆ ಹಾಗಾಗ ಜಗಳ ಆಡುತ್ತಿದ್ದನು. ಆದ್ರೆ ನಿನ್ನೆ ಯಾರೋ ಜೊತೆಗೆ ಶುರುವಾದ ಜಗಳ ಮತ್ಯಾರಿಗೋ ನೋವುಂಟು ತಂದಿರೋದು ಬೇಸರದ ಸಂಗತಿ. ನಿತ್ಯ ಇಂತಹ ಕುಡುಕರ ಹಾವಳಿ ಗ್ರಾಮದಲ್ಲಿ ಮಿತಿ ಮೀರಿದೆ. ಕುಡಿದ ಅಮಲಿನಲ್ಲಿ ಯಾರಿಗೆ ಏನು ಮಾಡ್ತಾರೆ ಎನ್ನುವ ಪರಿಜ್ಞಾನವೇ ಇಲ್ಲದೇ ಈ ರೀತಿ ಮಾಡ್ತಾರೆ. ಆದ್ದರಿಂದ ಪೊಲೀಸರು ಕೂಡಲೇ ಇಂತವರಿಗೆ ತಕ್ಕ ಶಿಕ್ಷೆ ಕೊಡಬೇಕು ಎಂದು ಆಗ್ರಹಿಸಿದರು. ಈ ಸಂಬಂಧ ಚಿತ್ರದುರ್ಗ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು.  ಆರೋಪಿ ವಿರೇಶನನ್ನು ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ.

ತೆಂಡೂಲ್ಕರ್, ಧೋನಿ, ಕೊಹ್ಲಿ ಅಲ್ಲ ಪ್ರಪಂಚದ ಅತ್ಯಂತ ದುಬಾರಿ ಮನೆ ಇರು ...

ಒಟ್ಟಾರೆ ಇತ್ತೀಚಿನ ದಿನಗಳಲ್ಲಿ ಯುವಕರು ಎಣ್ಣೆ ಎಂಬ ಮಾಯಾಜಾಲಕ್ಕೆ ಸಿಲುಕಿ ಹಾಳಾಗ್ತಿರೋದು ದುರಂತ. ಹಾಗಂತ ಕುಡಿದು ತನ್ನಿಷ್ಟಕ್ಕೆ ತಾನು ಇರುವುದು ಬಿಟ್ಟು, ಈ ರೀತಿ ದುಷ್ಕೃತ್ಯ ಎಸಗಿರೋದು ಖಂಡನೀಯ. 

click me!