ಮಡದಿಯನ್ನು ಕೊಂದು ಆತ್ಮಹತ್ಯೆ ಮಾಡಿಕೊಂಡ ಪತಿ, ಕುಡಕ‌ ಗಂಡನ‌ ಕೊಡಬೇಡ ದೇವ್ರೇ!

Published : Aug 22, 2022, 04:57 PM ISTUpdated : Aug 22, 2022, 05:02 PM IST
ಮಡದಿಯನ್ನು ಕೊಂದು ಆತ್ಮಹತ್ಯೆ ಮಾಡಿಕೊಂಡ ಪತಿ, ಕುಡಕ‌ ಗಂಡನ‌ ಕೊಡಬೇಡ ದೇವ್ರೇ!

ಸಾರಾಂಶ

ಕುಡುಕ ಗಂಡ ಕಾರಣವೇ ಇಲ್ಲದೆ ಹೆಂಡತಿಯನ್ನು ಕೊಂದು ಹಾಕಿದ್ದಾನೆ. ಬಳಿಕ ಪಾಪಪ್ರಜ್ಞೆ ಕಾಡಿ ತಾನು ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಉಡುಪಿ ಜಿಲ್ಲೆಯ ಕುಂದಾಪುರದಲ್ಲಿ ನಡೆದಿದೆ.

ವರದಿ; ಶಶಿಧರ ಮಾಸ್ತಿಬೈಲು, ಏಷ್ಯಾನೆಟ್ ಸುವರ್ಣ ನ್ಯೂಸ್
 
ಉಡುಪಿ (ಆ.22) :
ಕುಡುಕ ಗಂಡ ಕಾರಣವೇ ಇಲ್ಲದೆ ಹೆಂಡತಿಯನ್ನು ಕೊಂದು ಹಾಕಿದ್ದಾನೆ. ಕೊಲೆ ಮಾಡಿದ ಬಳಿಕ ಆತನಿಗೆ ಪಾಪಪ್ರಜ್ಞೆ ಕಾಡಿರಬೇಕು, ತಾನು ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಈ ಸ್ಟೋರಿ‌ ನೋಡಿದ್ರೆ ಕುಡುಕ ಗಂಡನ ಕೊಡಬೇಡಮ್ಮಾ! ಎಂದು ಹೆಣ್ಣು ಮಕ್ಕಳು ಕೈ ಮುಗಿಯುತ್ತಾರೆ. ಕುಡಿದಾಗ ಕಟುಕ ಕುಡಿಯದಿದ್ದರೆ ಪ್ರೇಮಿ. ಈ ಕೊಲೆಗಡುಕನ ಕಥೆ ತುಂಬಾ ಇಂಟರೆಸ್ಟಿಂಗ್ ಆಗಿದೆ.‌ ಟಿಪ್ಪರ್ ಚಾಲಕನಾಗಿರುವ ರವಿ, ಕಾರಣವೇ ಇಲ್ಲದೆ ತನ್ನ ಪತ್ನಿ ಪೂರ್ಣಿಮಾಳನ್ನು ಕೊಂದು ಹಾಕಿದ್ದಾನೆ. ಇವರಿಗೆ ಮದುವೆಯಾಗಿ 15 ವರ್ಷ ಕಳಿತು. ದಂಪತಿಗಳಿಬ್ಬರೂ ಮೂಲತಃ ಶಿವಮೊಗ್ಗ ಜಿಲ್ಲೆಯವರು. ಲಾರಿ ಚಾಲಕನಾಗಿ ಕುಂದಾಪುರಕ್ಕೆ ಬಂದ ನಂತರ ಹೆಮ್ಮಾಡಿ ಸಮೀಪದ ದೇವಲಕುಂದದಲ್ಲಿ ಬಾಡಿಗೆ ಮನೆ ಮಾಡಿಕೊಂಡಿದ್ದ. ಇದೇ ಮನೆಯಲ್ಲಿ ಇಂದು ಬೆಳಿಗ್ಗೆ ದಾರುಣ ಸ್ಥಿತಿಯಲ್ಲಿ ದಂಪತಿಗಳ ಹೆಣ ದೊರಕಿದೆ. ಲಾರಿ ಟಯರ್ ನ ಆಕ್ಸಲ್  ನಿಂದ ಹೊಡೆದು ಪತ್ನಿ ಪೂರ್ಣಿಮಾಳನ್ನು, ರವಿ ಕೊಂದೇ ಹಾಕಿದ್ದಾನೆ. ರಕ್ತದ ಮಡುವಿನಲ್ಲಿ ಬಿದ್ದಿದ್ದ ಪತ್ನಿಯನ್ನು ಕಂಡು ಅದೇನು ಅನಿಸಿತೋ ಏನೋ. ತಾನು ಕೂಡ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ.

ಕಳೆದ ಆರು ತಿಂಗಳಿಂದ ಪೂರ್ಣಿಮಾ ಪತಿಯಿಂದ ದೂರವಿದ್ದಳು, ಸೊರಬದಲ್ಲಿರುವ ತಾಯಿಯ ಮನೆಯಲ್ಲಿ ವಾಸಿಸುತ್ತಿದ್ದಳು. ನಿನ್ನೆ ಸಂಬಂಧಿಕರೊಬ್ಬರ ಸೀಮಂತದ ನೆಪದಲ್ಲಿ ಪತಿ ರವಿ, ಆಕೆಯನ್ನು ಮನೆಗೆ ಕರೆಸಿಕೊಂಡಿದ್ದ. ಶುಭ ಕಾರ್ಯ ಮುಗಿದ ಬಳಿಕ ದಂಪತಿಗಳ ನಡುವೆ ಮತ್ತೆ ಗಲಾಟೆ ಶುರುವಾಗಿದೆ. ಕುಡಿದು ಬಂದ ರವಿ  ಕಚ್ಚಾಡಿ ಹೊಡೆದು ಕೊಂದಿದ್ದಾನೆ. ಬಳಿಕ ತಾನು ಆತ್ಮಹತ್ಯೆ ಮಾಡಿಕೊಂಡಿದ್ದಾನೆ.

ಆದರೆ ಈ ದುರಂತ ನಡೆದಿರುವುದು ಯಾರ ಗಮನಕ್ಕೂ ಬಂದಿರಲಿಲ್ಲ. ಸೊರಬ ದಲ್ಲಿದ್ದ ಮಕ್ಕಳು ತಾಯಿ ಮೊಬೈಲ್ ಕರೆ ಮಾಡಿದಾಗ ತೆಗೆದಿರಲಿಲ್ಲ. ಸಂಶಯಗೊಂಡ ತವರು ಮನೆಯವರು ಮನೆ ಕಡೆ ಹೋಗಿ ನೋಡಿ ಬರಲು ಸಂಬಂಧಿಕರಿಗೆ ಹೇಳಿದ್ದರು. ಭಾನುವಾರ ರಾತ್ರಿ ಮನೆ ಕತ್ತಲಿದ್ದ ಕಾರಣ ಇಬ್ಬರೂ ಮಲಗಿರಬೇಕೆಂದು ಯಾರು ಇತ್ತ ಗಮನಹರಿಸಿಲ್ಲ. ಬೆಳಿಗ್ಗೆಯೂ ಸಂಪರ್ಕಕ್ಕೆ ಸಿಗದೇ ಹೋದಾಗ ಪ್ರಕರಣ ಬೆಳಕಿಗೆ ಬಂದಿದೆ. ತಕ್ಷಣ ಪೊಲೀಸರನ್ನು ಕರೆಸಿ, ಮನೆಯ ಮಾಡು ಹತ್ತಿ ಒಳನೋಡಿದಾಗ, ಕೋಣೆಯೊಳಗೆ ಇಬ್ಬರ ಹೆಣ ಪತ್ತೆಯಾಗಿದೆ.

ಊರ ಮೂಲೆಯಲ್ಲಿರುವ ಈ ಪುಟ್ಟ ಮನೆಯಲ್ಲಿ ದಿನ ಬೆಳಗಾದರೆ ಗಲಾಟೆ. ಪ್ರತಿದಿನ ಮನೆಗೆ ಕುಡಿದು ಬರುತ್ತಿದ್ದ ರವಿ ಪತ್ನಿಯೊಂದಿಗೆ ಜಗಳವಾಡುತ್ತಿದ್ದ. ಈ ಮನೆಯಲ್ಲಿ ಪ್ರತಿದಿನ ಹೊಡಿ ಬಡಿ ನಡೆಯುತ್ತಿತ್ತು. ಪತಿಯ ಕಿರುಕುಳದಿಂದ ಬೀಸತ್ತು ಹೋಗಿದ್ದ ಪೂರ್ಣಿಮಾ ಹಿರಿಯರನ್ನು ಕರೆಸಿ ಕೆಲವು ಬಾರಿ ರಾಜಿ ಪಂಚಾತಿಕೆ ಕೂಡ ಮಾಡಿಸಿದಳು. ಕುಂದಾಪುರ ಗ್ರಾಮಾಂತರ ಠಾಣೆಗೆ ಹೋಗಿ ದೂರು ಕೊಟ್ಟು ಮುಚ್ಚಳಿಕೆ ಕೂಡ ಬರೆಸಲಾಗಿತ್ತು.

ಉಡುಪಿಗೆ ಎಂಟ್ರಿ ಆಗುತ್ತಿದ್ದಂತೆ ಡ್ರಗ್ಸ್ ವಿರುದ್ಧ ಸಮರ ಸಾರಿದ ಎಸ್ಪಿ: 9 ಜನರ ಬಂಧನ

ಪ್ರತಿದಿನ ಕುಡಿದು ಬರುತ್ತಿದ್ದ ಪತಿಯಲ್ಲಿ ಯಾವುದೇ ಪರಿವರ್ತನೆ ಕಾಣದೆ ಹೋದಾಗ ಆರು ತಿಂಗಳ ಹಿಂದೆ ಪೂರ್ಣಿಮಾ ಮನೆ ಬಿಟ್ಟು ತವರಿಗೆ ಹೋಗಿದ್ದಳು. ತನ್ನ ಮಕ್ಕಳಿಬ್ಬರನ್ನು ಅಲ್ಲೇ ಶಾಲೆಗೆ ಸೇರಿಸಿದಳು. ಇಷ್ಟಾದರೂ ದಂಪತಿಗಳ ನಡುವೆ ನಿರಂತರ ಸಂಪರ್ಕವಿತ್ತು. ಯಾವತ್ತೂ ಮೊಬೈಲ್ ಕರೆ ಮಾಡಿ ಪ್ರೀತಿಯಿಂದ ಮಾತನಾಡಿಸುತ್ತಿದ್ದ, ಸೊರಬದ ಮನೆಗೆ ತೆರಳಿ ಮಕ್ಕಳಿಗೆ, ಉಪಚಾರ ಮಾಡುತ್ತಿದ್ದ. ಕುಡಿಯದೆ ಇದ್ದಾಗ ಮನುಷ್ಯ. ಕುಡಿದರೆ ರಾಕ್ಷಸ ಎಂಬಂತೆ ವರ್ತಿಸುತ್ತಿದ್ದ ರವಿ.

ಭಟ್ಕಳವನ್ನೇ ಬೆಚ್ಚಿಬೀಳಿಸಿದ್ದ ಬಾಲಕ ಕಿಡ್ನಾಪ್ ಕೇಸ್‌ಗೆ ಬಿಗ್ ಟ್ವಿಸ್ಟ್: ಅಜ್ಜನಿಂದಲೇ ಕೃತ್ಯ

ಲಾರಿ ಚಾಲಕನಾಗಿ ಉತ್ತಮ ದುಡಿಮೆ ಮಾಡುತ್ತಿದ್ದ ರವಿ ಕುಡಿತ ಕಡಿಮೆ ಮಾಡಿದ್ದರೆ ನೆಮ್ಮದಿಯಿಂದ ಬದುಕು ನಡೆಸಬಹುದಿತ್ತು. ಕುಡುಕ ಗಂಡನಿಂದ ಅಮಾಯಕ ಹೆಣ್ಣು ಜೀವ ಕಳೆದುಕೊಂಡಿದ್ದಾಳೆ, ಮಕ್ಕಳಿಬ್ವರೂ ಅನಾಥವಾಗಿದ್ದಾರೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಡ್ರಗ್ಸ್‌ ಸಪ್ಲೈಗೆ ಸ್ತ್ರೀಯರ ಬಳಕೆ ಅಧಿಕ! ಆಫ್ರಿಕಾ ಖಂಡದ ಸ್ತ್ರೀಯರೇ ಅಧಿಕ
ಗುಜರಾತ್‌ನಲ್ಲೊಂದು ನಿರ್ಭಯಾ ಪ್ರಕರಣ