ಕಂಠ ಮಟ್ಟ ಕುಡಿದು ಪೊಲೀಸರ ಮೇಲೆ ಆಫ್ರಿಕನ್ ಯುವತಿಯರ ಹಲ್ಲೆ!

By Kannadaprabha NewsFirst Published Aug 30, 2022, 6:51 AM IST
Highlights

ಬ್ರಿಗೇಡ್‌ ರಸ್ತೆಯಲ್ಲಿ ತಡರಾತ್ರಿ ವರೆಗೂ ಪಬ್‌ನಲ್ಲಿ ಕುಳಿತು ಮದ್ಯ ಸೇವನೆ ಮಾಡಿ ಅವಧಿ ಮುಗಿದಿದೆ ಎಂದ ಪಬ್‌ ಸಿಬ್ಬಂದಿ ಮೇಲೆ ಗಲಾಟೆ ಮಾಡಿದ ಯುವತಿಯರು. ಈ ವೇಳೆ ಸ್ಥಳಕ್ಕೆ ಬಂದ ಗಸ್ತು ಪೊಲೀಸರಿಂದ ತಿಳುವಳಿಕೆ. ಇದಕ್ಕೂ ಜಗ್ಗದೆ ಎಸ್‌ಐ, ಪಿಸಿ ಮೇಲೆ ಹಲ್ಲೆ, ರಂಪಾಟ ಮಾಡಿದ್ದಾರೆ.

ಬೆಂಗಳೂರು (ಆ.30): ನಗರದ ಬ್ರಿಗೇಡ್‌ ರಸ್ತೆಯಲ್ಲಿ ಪಾನಮತ್ತ ಇಬ್ಬರು ಆಫ್ರಿಕನ್‌ ಯುವತಿಯರು ಪುಂಡಾಟ ನಡೆಸಿ ಪೊಲೀಸರ ಮೇಲೆ ಹಲ್ಲೆ ಮಾಡಿರುವ ಘಟನೆ ಭಾನುವಾರ ತಡರಾತ್ರಿ ನಡೆದಿದೆ. ಕಮ್ಮನಹಳ್ಳಿ ನಿವಾಸಿಗಳಾದ ಪೀಸ್‌ ಪರ್ನಾಶ್‌ ಮತ್ತು ಜ್ಯೂಲಿಯಾ ವಂಜೀರೋ ಗಲಾಟೆ ಮಾಡಿದವರು. ವೀಕೆಂಡ್‌ ಹಿನ್ನೆಲೆಯಲ್ಲಿ ಮೂವರು ಆಫ್ರಿಕನ್‌ ಯುವತಿಯರು ಬ್ರಿಗೇಡ್‌ ರಸ್ತೆಯ (Brigade Road) ಪಬ್‌ವೊಂದಕ್ಕೆ ಬಂದು ಮದ್ಯ ಸೇವಿಸಿದ್ದಾರೆ. ತಡರಾತ್ರಿ 1.30 ಸಮಯವಾದರೂ ಮನೆಗೆ ಹೋಗದೆ ಪಬ್‌ನಲ್ಲೇ ಇದ್ದರು. ಪಬ್‌ ಅವಧಿ ಮುಗಿದಿದ್ದು ಹೊರಹೋಗುವಂತೆ ಸಿಬ್ಬಂದಿ ಸೂಚಿಸಿದ್ದಾರೆ. ಇದರಿಂದ ಆಕ್ರೋಶಗೊಂಡ ಯುವತಿಯರು ಪಬ್‌ ಸಿಬ್ಬಂದಿ ಜತೆಗೆ ವಾಗ್ವಾದಕ್ಕೆ ಮುಂದಾಗಿದ್ದಾರೆ. ಅಷ್ಟರಲ್ಲಿ ಹೋಯ್ಸಳ ಗಸ್ತು ಪೊಲೀಸರು ಸ್ಥಳಕ್ಕೆ ಬಂದಿದ್ದು, ಮನೆಗೆ ತೆರಳುವಂತೆ ಆಫ್ರಿಕನ್‌ ಯುವತಿಯರಿಗೆ ಸೂಚಿಸಿದ್ದಾರೆ. ಇದಕ್ಕೆ ಕೋಪಗೊಂಡ ಪಾನಮತ್ತ ಯುವತಿಯರು, ಪೊಲೀಸರ ಮೇಲೆ ಮುಗಿಬಿದ್ದು ಅವಾಚ್ಯ ಶಬ್ಧಗಳಿಂದ ನಿಂದಿಸಿದ್ದಾರೆ. ಅಷ್ಟೇ ಅಲ್ಲದೆ, ಪೊಲೀಸರೊಂದಿಗೆ ವಾಗ್ವಾದಕ್ಕೆ ಇಳಿದು ರಂಪಾಟ ಮಾಡಿದ್ದಾರೆ. ಪೊಲೀಸರು ಎಷ್ಟೇ ತಿಳುವಳಿಕೆ ಹೇಳಿದರೂ ಕೇಳದೆ ಹೋಯ್ಸಳ ವಾಹನದ ಹೆಡ್‌ಕಾನ್‌ಸ್ಟೇಬಲ್‌ ಹಾಗೂ ಎಎಸ್‌ಐ ಮೇಲೆ ಹಲ್ಲೆ ಮಾಡಿದ್ದಾರೆ.

ಬಳಿಕ ಸುದ್ದಿ ತಿಳಿದು ಸ್ಥಳಕ್ಕೆ ದೌಡಾಯಿಸಿದ ಮಹಿಳಾ ಪಿಎಸ್‌ಐ ಅವರು, ಯುವತಿಯರನ್ನು ವಶಕ್ಕೆ ಪಡೆದು ವೈದ್ಯಕೀಯ ಪರೀಕ್ಷೆ ಕರೆದೊಯ್ದರು. ವೈದ್ಯಕೀಯ ಪರೀಕ್ಷೆಯಲ್ಲಿ ಇಬ್ಬರು ಕಂಠ ಮಟ್ಟ ಮದ್ಯ ಸೇವಿಸಿರುವುದು ದೃಢಪಟ್ಟಿದೆ. ಬಳಿಕ ಕರೆದಾಗ ವಿಚಾರಣೆಗೆ ಹಾಜರಾಗುವಂತೆ ಸೂಚನೆ ನೀಡಿ ಮನೆಗೆ ಕಳುಹಿಸಲಾಗಿದೆ. ಶೀಘ್ರದಲ್ಲೇ ಇಬ್ಬರಿಗೂ ನೋಟಿಸ್‌ ನೀಡಿ ವಿಚಾರಣೆ ಮಾಡುವುದಾಗಿ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಆಫ್ರಿಕನ್‌ ( African) ಮೂಲದ ಈ ಇಬ್ಬರು ಯುವತಿಯರು ವ್ಯಾಸಂಗಕ್ಕಾಗಿ ಕೆಲ ವರ್ಷಗಳ ಹಿಂದೆ ಬೆಂಗಳೂರಿಗೆ ಬಂದಿದ್ದಾರೆ. ಬಾಣಸವಾಡಿಯ ಕಮ್ಮನಹಳ್ಳಿಯಲ್ಲಿ ಅವರು ನೆಲೆಸಿದ್ದಾರೆ. ಘಟನೆ ಸಂಬಂಧ ಪ್ರಕರಣ ದಾಖಲಿಸಲಾಗಿದೆ. ಯುವತಿಯರ ದಾಖಲೆ ಪರಿಶೀಲಿಸಿ ಕಾನೂನು ಕ್ರಮ ಕೈಗೊಳ್ಳುವುದಾಗಿ ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ. ಈ ಸಂಬಂಧ ಅಶೋಕನಗರ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಬಂಕ್‌ ಬಳಿ ಹೊತ್ತಿ ಉರಿದ  ಕಾರು: ತಪ್ಪಿದ ಅನಾಹುತ
ಬೆಂಗಳೂರು: ಶಾರ್ಚ್‌ ಸಕ್ರ್ಯೂಟ್‌ನಿಂದಾಗಿ ಕಾರೊಂದಕ್ಕೆ ಪೆಟ್ರೋಲ್‌ ಬಂಕ್‌ ಬಳಿಯೇ ಬೆಂಕಿ ಹೊತ್ತಿಕೊಂಡು ಹೊತ್ತಿ ಉರಿದ ಘಟನೆ ಕೋಣನಕುಂಟೆ ಪೊಲೀಸ್‌ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.

ಬೀಫ್ ತಿನ್ನಿಸಿ ಮುಸ್ಲಿಂ ಪತ್ನಿ ಹಾಗೂ ಆಕೆಯ ಸೋದರನ ಕಿರುಕುಳ, ಹಿಂದೂ ಯುವಕ ಆತ್ಮಹತ್ಯೆ!

ಸತ್ಯಕುಮಾರ್‌ ಎಂಬುವವರಿಗೆ ಸೇರಿದ ಕಾರು ಬೆಂಕಿ ಹೊತ್ತಿಕೊಂಡಿತ್ತು. ಗುಬ್ಬಲಾಳ ಸಮೀಪದ ಇಂಡೇನ್‌ ಪೆಟ್ರೋಲ್‌ ಬಂಕ್‌ ಬಳಿ ಸೋಮವಾರ ಬೆಳಗ್ಗೆ 8.30ರ ಸುಮಾರಿಗೆ ಈ ಘಟನೆ ನಡೆದಿದೆ. ಅದೃಷ್ಟವಶಾತ್‌ ಘಟನೆಯಲ್ಲಿ ಯಾವುದೇ ಪ್ರಾಣಹಾನಿಯಾಗಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ.

ಕೈಕೊಟ್ಟ ಲಿಫ್ಟ್‌: ಭದ್ರತಾ ಸಿಬ್ಬಂದಿ, ಲಿಫ್ಟ್ ಆಪರೇಟರ್‌ಗೆ ಥಳಿಸಿದ ಉದ್ಯಮಿ ಬಂಧನ

ಸತ್ಯಕುಮಾರ್‌ ಅವರ ಕಾರಿನಲ್ಲಿ ಪೆಟ್ರೋಲ್‌ ಖಾಲಿ ಆಗಿತ್ತು. ಹೀಗಾಗಿ ಸತ್ಯಕುಮಾರ್‌ ತಳ್ಳಿಕೊಂಡು ಪೆಟ್ರೋಲ್‌ ಬಂಕ್‌ ಬಂದಿದ್ದರು. ಬಳಿಕ ಪೆಟ್ರೋಲ್‌ ಹಾಕಿಸಿ ಕಾರನ್ನು ಸ್ಟಾರ್ಚ್‌ ಮಾಡಲು ಮುಂದಾಗಿದ್ದಾರೆ. ಈ ವೇಳೆ ಕಾರು ಸ್ಟಾರ್ಚ್‌ ಆಗಿಲ್ಲ. ಹೀಗಾಗಿ ದೂಡಿ ಸ್ಟಾರ್ಚ್‌ ಮಾಡಲು ಪ್ರಯತ್ನಿಸಿದ್ದಾರೆ. ಆಗ ಏಕಾಏಕಿ ಎಂಜಿನ್‌ ಬಳಿ ಶಾರ್ಚ್‌ ಸಕ್ರ್ಯೂಟ್‌ ಆಗಿ ಬೆಂಕಿ ಹೊತ್ತಿಕೊಂಡು ಉರಿಯಲು ಆರಂಭಿಸಿದೆ. ಸುದ್ದಿ ತಿಳಿದು ಸ್ಥಳಕ್ಕೆ ದೌಡಾಯಿಸಿದ ಅಗ್ನಿಶಾಮಕ ಸಿಬ್ಬಂದಿ ಯಶಸ್ವಿಯಾಗಿ ಬೆಂಕಿ ನಂದಿಸಿ, ಅನಾಹುತ ತಪ್ಪಿಸಿದ್ದಾರೆ.

click me!