ಸ್ಟೀಲ್‌ ಗ್ಯಾಸ್‌ ಸ್ಟೌನಲ್ಲಿತ್ತು 79 ಲಕ್ಷ ಮೌಲ್ಯದ ಡ್ರಗ್ಸ್‌..!

Published : Oct 17, 2020, 08:10 AM IST
ಸ್ಟೀಲ್‌ ಗ್ಯಾಸ್‌ ಸ್ಟೌನಲ್ಲಿತ್ತು 79 ಲಕ್ಷ ಮೌಲ್ಯದ ಡ್ರಗ್ಸ್‌..!

ಸಾರಾಂಶ

ವಿಮಾನ ನಿಲ್ದಾಣದ ಭದ್ರತಾ ವ್ಯವಸ್ಥೆ ಯಮಾರಿಸಿ ಆಸ್ಪ್ರೇಲಿಯಾಕ್ಕೆ ಸ್ಟೀಲ್‌ ಗ್ಯಾಸ್‌ ಸ್ಟೌನಲ್ಲಿ ಡ್ರಗ್ಸ್‌ ತುಂಬಿ ರವಾನಿಸಲು ಕೆಐಎ ಕೋರಿಯರ್‌ ಸೆಂಟರ್‌ಗೆ ಕಿಡಿಗೇಡಿಗಳು ಯತ್ನ| ಪಾರ್ಸಲ್‌ ವಾರಸುದಾರರ ಪತ್ತೆಗೆ ತನಿಖೆ ಆರಂಭ| 

ಬೆಂಗಳೂರು(ಅ.17): ದೇವನಹಳ್ಳಿಯ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಮತ್ತೆ ಡ್ರಗ್ಸ್‌ ಜಾಲ ಭೇದಿಸಿರುವ ಕಸ್ಟಮ್ಸ್‌ ಅಧಿಕಾರಿಗಳು, ವಿದೇಶಕ್ಕೆ ಸಾಗಿಸಲು ಯತ್ನಿಸಿದ್ದ ಸುಮಾರು 79 ಲಕ್ಷ ಮೌಲ್ಯದ ಮಾದಕ ವಸ್ತು ವನ್ನು ವಶಪಡಿಸಿಕೊಂಡಿದ್ದಾರೆ.

ವಿಮಾನದ ನಿಲ್ದಾಣದ ಭದ್ರತಾ ವ್ಯವಸ್ಥೆಯನ್ನು ಯಮಾರಿಸಿ ಆಸ್ಪ್ರೇಲಿಯಾಕ್ಕೆ ಸ್ಟೀಲ್‌ ಗ್ಯಾಸ್‌ ಸ್ಟೌನಲ್ಲಿ ಡ್ರಗ್ಸ್‌ ತುಂಬಿ ರವಾನಿಸಲು ಕೆಐಎ ಕೋರಿಯರ್‌ ಸೆಂಟರ್‌ಗೆ ಕಿಡಿಗೇಡಿಗಳು ಯತ್ನಿಸಿದ್ದರು. ಆದರೆ ಈ ಬಗ್ಗೆ ಖಚಿತ ಮಾಹಿತಿ ಪಡೆದ ಕಸ್ಟಮ್ಸ್‌ ಗುಪ್ತಚರ ವಿಭಾಗದ ಅಧಿಕಾರಿಗಳು, ಕೋರಿಯರ್‌ ಸೆಂಟರ್‌ಗೆ ದಾಳಿ ನಡೆಸಿ ಸ್ಟೀಲ್‌ ಗ್ಯಾಸ್‌ ಸ್ಟೌಅನ್ನು ವಶಪಡಿಸಿಕೊಂಡಿದ್ದಾರೆ. 

ಡ್ರಗ್ಸ್‌ ಕೇಸ್ ಉರುಳು : ಪ್ರಿಯಾಂಕಾ ವಿಚಾರಣೆಗೆ ಗೈರು

ಆಗ ಸ್ಟೌಕಾಲಿನ ಭಾಗ ತುಂಡು ಮಾಡಿ ಶೋಧಿಸಿದಾಗ ಪುಡಿ ರೂಪದಲ್ಲಿ 79 ಲಕ್ಷ ಮೌಲ್ಯದ 1984 ಗ್ರಾಂ ಎಫೆಡ್ರೇನ್‌ ಡ್ರಗ್ಸ್‌ ಪತ್ತೆಯಾಗಿದೆ ಎಂದು ಅಧಿಕಾರಿಗಳು ವಿವರಿಸಿದ್ದಾರೆ. ಈಗ ಪಾರ್ಸಲ್‌ ವಾರಸುದಾರರ ಪತ್ತೆಗೆ ತನಿಖೆ ನಡೆದಿದೆ.
 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

click me!

Recommended Stories

ಪ್ರೀತಿಯ ಹುಚ್ಚಾಟ! ಪ್ರಿಯಕರನಿಗೆ ಹೊಸ ಬೈಕ್ ಕೊಡಿಸಲು ತಂದೆಯ ಸ್ನೇಹಿತನ ಚಿನ್ನವನ್ನೇ ಕದ್ದ 19 ರ ಹರೆಯದ ಯುವತಿ!
ಕೋಟ್ಯಂತರ ರೂ. ಜಮೀನಿನ ನಕಲಿ ದಾಖಲೆ ಸೃಷ್ಟಿಸಿ ಮಾರಾಟ: ಬೆಳಗಾವಿಯ 80ರ ಕಿಲಾಡಿ ಅಜ್ಜಿ ಅಂದರ್​