ಪಾರಿವಾಳದ ವಿಚಾರಕ್ಕೆ ಇಬ್ಬರು ಯುವಕರು ಪರಸ್ಪರ ಬಡಿದಾಡಿಕೊಂಡ ಘಟನೆ ಬೆಳಗಾವಿ ತಾಲೂಕಿನ ಬಸ್ತವಾಡ ಗ್ರಾಮದಲ್ಲಿ ನಡೆದಿದೆ.
ಬೆಳಗಾವಿ (ಡಿ.5): ಪಾರಿವಾಳದ ವಿಚಾರಕ್ಕೆ ಇಬ್ಬರು ಯುವಕರು ಪರಸ್ಪರ ಬಡಿದಾಡಿಕೊಂಡ ಘಟನೆ ಬೆಳಗಾವಿ ತಾಲೂಕಿನ ಬಸ್ತವಾಡ ಗ್ರಾಮದಲ್ಲಿ ನಡೆದಿದೆ.
ದರ್ಶನ್ ಮತ್ತು ಅಪ್ರಾಪ್ತನ ನಡುವೆ ನಡೆದಿರುವ ಗಲಾಟೆ. ಅಪ್ರಾಪ್ತನಿಗೆ 2 ಸಾವಿರಕ್ಕೆ ಪಾರಿವಾಳ ಮಾರಾಟ ಮಾಡಿದ್ದ ದರ್ಶನ್. ಪಾರಿವಾಳ ಪಡೆದಿದ್ದ ಹಣ ವಾಪಸ್ ಕೊಡುವಂತೆ ದರ್ಶನ್ ಕೇಳಿದ್ದಾನೆ. ಪದೇಪದೆ ಹಣ ಕೇಳ್ತಿರೋದಕ್ಕೆ ಸಿಟ್ಟಿಗೆದ್ದ ಆಪ್ರಾಪ್ತ ಯುವಕ ಬೆದರಿಕೆ ಹಾಕಿದ್ದಾನೆ. ಈ ವಿಚಾವಾಗಿ ಇಬ್ಬರ ನಡುವೆ ಮಾತಿಗೆ ಮಾತು ಬೆಳೆದು ಗಲಾಟೆಯಾಗಿದೆ. ಅಪ್ರಾಪ್ತ ಯುವಕ ತನ್ನ ಸ್ನೇಹಿತರೊಂದಿಗೆ ಸೇರಿ ದರ್ಶನ್ ಎಂಬಾತನಿಗೆ ಮನಸೋ ಇಚ್ಚೆ ಹಲ್ಲೆ ನಡೆಸಿದ್ದಾನೆ ಎನ್ನಲಾಗಿದೆ.
ಇದೇ ಸಿಟ್ಟಿಗೆ ರಾತ್ರೋರಾತ್ರಿ ಸಿನಿಮಾ ಸ್ಟೈಲ್‌ನಲ್ಲಿ 15ಕ್ಕೂ ಹೆಚ್ಚು ಸ್ನೇಹಿತರೊಂದಿಗೆ ಬಸವನಕುಡಚಿ ಗ್ರಾಮಕ್ಕೆ ಬಂದಿರುವ ದರ್ಶನ್. ಗ್ರಾಮದಲ್ಲಿರುವ ಅಪ್ರಾಪ್ತ ಮನೆಗೆ ನುಗ್ಗಿ ಮನೆ ಧ್ವಂಸ ಮಾಡಲು ಯತ್ನಿಸಿದ್ದಾನೆ. ಅಪ್ರಾಪ್ತ ಯುವಕನ ಮನೆಯಲ್ಲಿದ್ದ ಟಿವಿ, ಕಿಟಕಿ ಗಾಜು ದ್ವಂಸಗೊಳಿಸಿ ಪಾತ್ರೆಗಳನ್ನು ಚಿಲ್ಲಾಪಿಲ್ಲಿ ಮಾಡಿರುವ ದರ್ಶನ್ ಗ್ಯಾಂಗ್, ಬಳಿಕ ಅಪ್ರಾಪ್ತನ ತಂದೆಗೆ ಬೆದರಿಸಿ ಕೈಗೆ ಹಗ್ಗದಿಂದ ಕಟ್ಟಿ ಮನೆಯಿಂದ ಕರೆದೊಯ್ಯಲು ಯತ್ನಿಸಿರುವ ಪುಂಡರು. ನಮ್ಮ ಜೊತೆಗೆ ಬಾರದಿದ್ದರೆ ಮನೆಗೆ ಬೆಂಕಿ ಹಚ್ಚುತ್ತೇವೆ ಎಂದು ಬೆದರಿಕೆಯೊಡ್ಡಿದ್ದಾರೆ.
ಬೆಳಗಾವಿ: ಮಗಳನ್ನು ಪ್ರೀತಿಸಲು ನಿರಾಕರಿಸಿದ ತಾಯಿ, ಮಗನ ಬರ್ಬರ ಹತ್ಯೆ
ಸದ್ಯ ಪ್ರಕರಣ ಸಂಬಂಧ ಹಿರೇಬಾಗೇವಾಡಿ, ಮಾಳಮಾರುತಿ ಠಾಣೆಯಲ್ಲಿ ದೂರು, ಪ್ರತಿದೂರು ದಾಖಲಾಗಿದೆ. ಅಪ್ರಾಪ್ತ ಸೇರಿ ಮೂವರನ್ನು ಹಿರೇಬಾಗೇವಾಡಿ ಠಾಣೆ ಪೊಲೀಸರು, ಇತ್ತ ಮನೆ ಧ್ವಂಸಕ್ಕೆ ಯತ್ನಿಸಿದ 7 ಜನರನ್ನು ಬಂಧಿಸಿ ಜೈಲಿಗಟ್ಟಿರುವ ಮಾಳಮಾರುತಿ ಠಾಣೆ ಪೊಲೀಸರು.