ದಿಗಂತ್‌, ಐಂದ್ರಿತಾ ಬಗ್ಗೆ ಒಳ್ಳೇ ಅಭಿಪ್ರಾಯವಿಲ್ಲ : ಕೆನ್ನೆಗೆ ಹೊಡೆದಿದ್ರು ನಿರ್ದೇಶಕರು

Kannadaprabha News   | Asianet News
Published : Sep 16, 2020, 10:45 AM IST
ದಿಗಂತ್‌, ಐಂದ್ರಿತಾ ಬಗ್ಗೆ ಒಳ್ಳೇ ಅಭಿಪ್ರಾಯವಿಲ್ಲ : ಕೆನ್ನೆಗೆ ಹೊಡೆದಿದ್ರು ನಿರ್ದೇಶಕರು

ಸಾರಾಂಶ

 ಸ್ಯಾಂಡಲ್‌ವುಡ್ ಡ್ರಗ್ ಮಾಫಿಯಾ ಪ್ರಕರಣದಲ್ಲಿ ಸಿಸಿಬಿಯಿಂದ ನೋಟಿಸ್ ಪಡೆದಿರುವ ಯಂಗ್ ಕಪಲ್ ಐಂದ್ರಿತಾ ಹಾಗೂ ದಿಗಂತ್ ಬಗ್ಗೆ ಚಿತ್ರರಂಗದಲ್ಲಿ ಯಾರಿಗೂ ಒಳ್ಳೆ ಅಭಿಪ್ರಾಯವಿಲ್ಲ. 

ಬೆಂಗಳೂರು (ಸೆ.16): ಡ್ರಗ್ಸ್‌ ಪ್ರಕರಣದಲ್ಲಿ ಸಿಸಿಬಿಯಿಂದ ವಿಚಾರಣಾ ನೋಟೀಸು ಪಡೆದಿರುವ ನಟಿ ಐಂದ್ರಿತಾ ರೇ ಮತ್ತು ದಿಗಂತ್‌ ದಂಪತಿ ಮಾಧ್ಯಮಗಳ ಪ್ರತಿಕ್ರಿಯೆಗೆ ಪ್ರತಿಕ್ರಿಯಿಸಿಲ್ಲ. ಯಾವುದೇ ಕರೆಗಳನ್ನೂ ಅವರಿಬ್ಬರೂ ಸ್ವೀಕರಿಸುತ್ತಿಲ್ಲ. ವಿಚಾರಣೆಗೆ ಹಾಜರಾಗುತ್ತೇವೆ ಎಂದು ಟ್ವೀಟ್‌ ಮಾಡಿರುವುದನ್ನು ಬಿಟ್ಟರೆ, ಅವರ ಮನೆಯವರಿಗೂ ಯಾವುದೇ ಹೆಚ್ಚಿನ ಮಾಹಿತಿ ಲಭ್ಯವಿಲ್ಲ.

ದಿಗಂತ್‌ ಬಗ್ಗೆ ಚಿತ್ರರಂಗದಲ್ಲಿ ಅಂಥ ಒಳ್ಳೆಯ ಅಭಿಪ್ರಾಯ ಮೊದಲಿನಿಂದಲೂ ಇಲ್ಲ. ಅನೇಕ ನಿರ್ಮಾಪಕರು ಅವರಿಂದ ತೊಂದರೆ ಆಗಿರುವುದನ್ನು ಮಾಧ್ಯಮದ ಮುಂದೆ ಹೇಳಿಕೊಂಡ ಪ್ರಕರಣಗಳು ಸಾಕಷ್ಟಿವೆ. ಸಿನಿಮಾ ಒಪ್ಪಿಕೊಳ್ಳುವುದು, ಚಿತ್ರೀಕರಣಕ್ಕೆ ತಡವಾಗಿ ಬರುವುದು, ಇದ್ದಕ್ಕಿದ್ದಂತೆ ಕಣ್ಮರೆಯಾಗುವುದು, ಚಿತ್ರದ ಪ್ರಚಾರಕ್ಕೆ ಆಗಮಿಸದೇ ಇರುವುದು, ಚಿತ್ರೀಕರಣ ಬಾಕಿ ಉಳಿಸಿ ಹಲವಾರು ದಿನ ತಲೆತಪ್ಪಿಸಿಕೊಳ್ಳುವುದು- ಮುಂತಾದ ಆರೋಪಗಳು ಅವರ ಮೇಲಿವೆ.

ಡ್ರಗ್ಸ್ ಮಾಫಿಯಾ: ಸಿಸಿಬಿ ನೋಟಿಸ್, ನಟ ದಿಗಂತ್ ಫಸ್ಟ್ ರಿಯಾಕ್ಷನ್...! ..

ಸಿನಿಮಾ ಒಪ್ಪಿಕೊಂಡ ನಂತರ, ಚಿತ್ರೀಕರಣ ಘಟಕದ ಯಾರ ಕರೆಯನ್ನೂ ಸ್ವೀಕರಿಸದೇ ತೊಂದರೆ ಮಾಡುತ್ತಾರೆ ಎಂದು ಗಾಂಧೀನಗರದ ಹಲವು ನಿರ್ಮಾಪಕರು ಅವರ ನಡವಳಿಕೆ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಈ ಕುರಿತು ವಾಣಿಜ್ಯ ಮಂಡಳಿಯಲ್ಲಿ ಸಂಧಾನ ಕೂಡ ನಡೆದ ಪ್ರಕರಣಗಳ ನಂತರವೂ ದಿಗಂತ್‌ ತಮ್ಮ ನಡವಳಿಕೆ ಬದಲಾಯಿಸಿಕೊಂಡಿಲ್ಲ ಎನ್ನುವ ಆಕ್ಷೇಪವೂ ಕೇಳಿಬಂದಿತ್ತು.

ಕೆನ್ನೆಗೆ ಬಾರಿಸಿದ್ದ ನಾಗತಿಹಳ್ಳಿ:

ಚಿತ್ರರಂಗಕ್ಕೆ ಬಂದ ಕೆಲವೇ ದಿನಗಳಲ್ಲಿ ಹಿರಿಯ ನಿರ್ದೇಶಕ ನಾಗತಿಹಳ್ಳಿ ಚಂದ್ರಶೇಖರ್‌ ವಿರುದ್ಧ ದೂರು ಹೇಳಿದವರು ಐಂದ್ರಿತಾ ರೇ. ನಾಗತಿಹಳ್ಳಿ ಚಂದ್ರಶೇಖರ್‌ ಅವರಂತೂ ಐಂದ್ರಿತಾ ಅಶಿಸ್ತು ಸಹಿಸಲಾರದೇ ಚಿತ್ರೀಕರಣದ ಸ್ಥಳದಲ್ಲಿಯೇ ಐಂದ್ರಿತಾಗೆ ಕೆನ್ನೆಗೆ ಹೊಡೆದಿದ್ದರು. ಈ ವಿರುದ್ಧ ಪತ್ರಿಕಾಗೋಷ್ಠಿ ಕರೆದ ಐಂದ್ರಿತಾ ಅದನ್ನು ಸಮರ್ಥಿಸಿಕೊಳ್ಳುವುದಕ್ಕೆ ನಾಗತಿಹಳ್ಳಿ ಚಂದ್ರಶೇಖರ್‌ ವಿರುದ್ಧ ಆಪಾದನೆ ಮಾಡಿದ್ದರು. ರಾತ್ರಿಯೆಲ್ಲ ಎಚ್ಚರವಿದ್ದು ಬೆಳಗ್ಗೆ ಶೂಟಿಂಗ್‌ ತಾಣಕ್ಕೆ ತಡವಾಗಿ ಬರುತ್ತಿದ್ದ ಕಾರಣವನ್ನು ಪ್ರಶ್ನಿಸಿದಾಗ ಐಂದ್ರಿತಾ ನಿರ್ದೇಶಕರ ವಿರುದ್ಧ ಮಾತಾಡಿದ್ದರು ಎಂಬುದನ್ನು ಚಿತ್ರತಂಡ ಬಹಿರಂಗ ಪಡಿಸಿತ್ತು. ಈ ಘಟನೆಯ ನಂತರ ಐಂದ್ರಿತಾಗೆ ಚಿತ್ರರಂಗದಲ್ಲಿ ಅವಕಾಶಗಳೂ ಕಡಿಮೆಯಾದವು. ಕೇವಲ ಐಟಂ ಸಾಂಗುಗಳಲ್ಲಿ ಮಾತ್ರ ಅವರು ಕಾಣಿಸಿಕೊಳ್ಳುತ್ತಿದ್ದರು.

ಡ್ರಗ್ಸ್ ಮಾಫಿಯಾ: ಸ್ಟಾರ್​ ದಂಪತಿಗೆ ಸಿಸಿಬಿ ನೋಟಿಸ್, ನಟ ದಿಗಂತ್​ ತಾಯಿ ಹೇಳಿದ್ದು ಹೀಗೆ .

ಆದರೂ ಇವರಿಬ್ಬರು ವರ್ಷದ ಹಿಂದೆ ಮದುವೆಯಾದಾಗ ಹೇಳಿ ಮಾಡಿಸಿದ ಜೋಡಿ ಎಂದು ಚಿತ್ರರಂಗ ಆಶೀರ್ವಾದ ಮಾಡಿತ್ತು. ಇದೀಗ ಇವರಿಬ್ಬರೂ ಒಂದೇ ಪ್ರಕರಣದಲ್ಲಿ ಸಿಸಿಬಿ ಮೆಟ್ಟಿಲೇರುತ್ತಿದ್ದಾರೆ.

ದಿಗಂತ್‌ ಕೈಯಲ್ಲೂ ಸದ್ಯಕ್ಕೆ ಯಾವುದೇ ದೊಡ್ಡ ಸಿನಿಮಾಗಳಿಲ್ಲ. ಕಳೆದ ವಾರವಷ್ಟೇ ‘ಎವರು’ ತೆಲುಗು ಚಿತ್ರದ ಕನ್ನಡ ಅವತರಣಿಕೆಯಲ್ಲಿ ಹರಿಪ್ರಿಯಾ ಜೋಡಿಯಾಗಿ ದಿಗಂತ್‌ ಕಾಣಿಸಿಕೊಳ್ಳಲಿದ್ದಾರೆ ಎಂದು ಸುದ್ದಿಯಾಗಿತ್ತು. ಈ ಡ್ರಗ್‌ ಪ್ರಕರಣ ಅವರನ್ನು ಎಲ್ಲಿಗೆ ಒಯ್ದು ನಿಲ್ಲಿಸುತ್ತದೆ ಅನ್ನುವುದರ ಮೇಲೆ ಆ ಚಿತ್ರದಲ್ಲಿ ದಿಗಂತ್‌ ಅಭಿನಯದ ಭವಿಷ್ಯ ನಿಂತಿದೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

click me!

Recommended Stories

8ನೇ ಕ್ಲಾಸ್ ಹುಡುಗಿ ಮೇಲೆ ಬಲತ್ಕಾರ, ಬೆದರಿಸಿ ಚಿನ್ನ ದೋಚಿದ್ದ 10ನೇ ಕ್ಲಾಸ್ ಹುಡುಗ ಅರೆಸ್ಟ್
ಬಿಜೆಪಿ ನಾಯಕನ ಸಂಬಂಧಿ 17ರ ಯುವಕನಿಗೆ ಚೂರಿ ಇರಿದು ಕೊಂದ ದುಷ್ಕರ್ಮಿಗಳು!