
ಬೆಂಗಳೂರು(ಅ. 10) ವಾಕಿಂಗ್‌ಗೆ ತೆರಳಿದ್ದ ಯುವತಿ ಸೇರಿ ಮೂವರು ಮಕ್ಕಳು ನಾಪತ್ತೆಯಾಗಿದ್ದು ಆಘಾತಕಾರಿ ಘಟನೆ ಬೆಂಗಳೂರಿನಿಂದ(Bengaluru) ವರದಿಯಾಗಿದೆ.
ನಾಪತ್ತೆಯಾದ ಮಕ್ಕಳು(Children) ಮನೆಯಲ್ಲಿ ಪತ್ರ ಬರೆದಿಟ್ಟಿದ್ದಾರೆ ಎನ್ನಲಾಗ್ತಿದ್ದು, 'ನಮಗೆ ಓದಲು ಆಸಕ್ತಿ ಇಲ್ಲ. ಸ್ಪೋರ್ಟ್ಸ್(Sports)ನಲ್ಲಿ ಆಸಕ್ತಿ ಇದೆ' ಅಂತಾ ಬರೆದಿದ್ದಾರೆ ಎನ್ನಲಾಗ್ತಿದೆ. ಬಾಗಲಗುಂಟೆ, ಸೋಲದೇವನಹಳ್ಳಿ ಠಾಣೆಗೆ ದೂರು ನೀಡಲಾಗಿದ್ದು, ಬಸ್, ರೈಲ್ವೇ ನಿಲ್ದಾಣ, ಪಾರ್ಕ್‌ಗಳಲ್ಲಿ ಪೊಲೀಸರ ಶೋಧ ಕಾರ್ಯಚರಣೆ ನಡೆಸುತ್ತಿದ್ದಾರೆ.
ಸೋಲದೇವನಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿಯೂ ಸಹ ಓರ್ವ ಯುವತಿ ಸೇರಿ ಮೂವರು ಮಕ್ಕಳು ನಾಪತ್ತೆಯಾಗಿದ್ದಾರೆ. ಎಜಿಬಿ ಲೇಔಟ್ ನಲ್ಲಿರುವ ಕ್ರಿಸ್ಟಲ್ ಅಪಾರ್ಟ್ಮೆಂಟ್ ನಲ್ಲಿ ವಾಸವಿದ್ದರು.
ಬಂಟ್ವಾಳ; ಬಾಲಕಿ ಮೇಲೆ ಗ್ಯಾಂಗ್ ರೇಪ್.. ನಾಲ್ವರು ಅರೆಸ್ಟ್
ಒಂದೇ ಅಪಾರ್ಟ್ಮೆಂಟ್ ನಲ್ಲಿ ವಾಸವಾಗಿದ್ದ ನಾಪತ್ತೆಯಾದ ನಾಲ್ವರು. ರಾಯನ್ ಸಿದ್ದಾಂತ (12), ಅಮೃತ ವರ್ಷಿಣಿ (21) ಭೂಮಿ (12) ಚಿಂತನ್ (12) ನಾಪತ್ತೆಯಾಗಿದ್ದಾರೆ. ಪತ್ರ ಬರೆದಿಟ್ಟು ಮಕ್ಕಳು ತೆರಳಿದ್ದಾರೆ.
ಸ್ಫೋರ್ಟ್ ಐಟಂ ಜೊತೆಗೆ ಸ್ಲಿಪರ್, ಬ್ರಶ್, ಟೂತ್ ಪೆಸ್ಟ್, ವಾಟರ್ ಬಾಟಲ್, ಕ್ಯಾಶ್ ತರಬೇಕೆಂದು ಪತ್ರ ಉಲ್ಲೇಖ. ಭಾನುವಾರ ಬೆಳಗ್ಗೆ ನಾಪತ್ತೆಯಾಗಿದ್ದಾರೆ. ನಾಪತ್ತೆಯಾದ ಮಕ್ಕಳ ಪೋಷಕರಿಂದ ಸೋಲದೇವನಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.
ಈ ಬಗ್ಗೆ ಪರಿಕ್ಷೀತ್ ತಂದೆ ದಯಾನಂದ ಹೇಳಿಕೆ ನೀಡಿದ್ದಾರೆ. ಮೂವರು ದಿನಾ ಬೆಳ್ಳಗ್ಗೆ ಐದು ಗಂಟೆಯ ವಾಕಿಂಗ್ ಹೋಗುತ್ತಿದ್ರು...ನಿನ್ನೆ ವಾಕಿಂಗ್ ಹೋದವರು ಬಂದಿಲ್ಲ... ಮೂವರು ಪ್ಲಾನ್ ಮಾಡಿ ಹೋಗಿದ್ದಾರೆ. ನನ್ನ ಮಗನಿಗೆ ಓದುವ ಬಗ್ಗೆ ಯಾವುದೇ ಒತ್ತಡ ಹಾಕುತ್ತಿರಲಿಲ್ಲ... ಒಂದು ಪತ್ರವನ್ನು ಬರೆದಿಟ್ಟು ಹೋಗಿದ್ದಾನೆ. ಪತ್ರ ದಲ್ಲಿ ನಾನು ಕಬ್ಬಡ್ಡಿಯಲ್ಲಿ ಸಾಧನೆ ಮಾಡುಬೇಕು ..ಓದು ನನ್ನ ಕಬ್ಬಡ್ಡಿಗೆ ಅಡ್ಡಿಯಾಗುತ್ತಿದೆ ಎಂದಿದ್ದಾನೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ