Suicide Cases: ಪತ್ನಿ ಕಳುಹಿಸಲಿಲ್ಲ ಎಂದು ಪತಿ ಆತ್ಮಹತ್ಯೆ

By Girish Goudar  |  First Published Mar 17, 2022, 7:44 AM IST

*  ಧಾರವಾಡ ತಾಲೂಕಿನ ಚಂದನಮಟ್ಟಿಯಲ್ಲಿ ನಡೆದ ಘಟನೆ
*  ಪತ್ನಿ ಕಳಿಸಲಿಲ್ಲ ಎಂದು ಬೇಸತ್ತ ವ್ಯಕ್ತಿ
*  ಈ ಕುರಿತು ಗ್ರಾಮೀಣ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲು 
 


ಧಾರವಾಡ(ಮಾ.17):  ಪತ್ನಿಯನ್ನು ತನ್ನ ಜತೆಗೆ ಕಳುಹಿಸಲಿಲ್ಲ ಎಂದು ಮನನೊಂದು ಹೆಂಡತಿ ತವರೂರಿನಲ್ಲಿಯೇ ವಿಷ ಸೇವಿಸಿ ಆತ್ಮಹತ್ಯೆ(Suicide) ಮಾಡಿಕೊಂಡ ದುರ್ಘಟನೆ ತಾಲೂಕಿನ ಚಂದನಮಟ್ಟಿಯಲ್ಲಿ ನಡೆದಿದೆ. ತಾಲೂಕಿನ ಮನಗುಂಡಿ ಗ್ರಾಮದ ಮಲ್ಲೇಶಪ್ಪ ಶಿವಪ್ಪ ಸುರಪುರ (40) ಆತ್ಮಹತ್ಯೆ ಮಾಡಿಕೊಂಡವರು. 

ತನ್ನ ಪತ್ನಿಯ ತವರೂರು ಚಂದನಮಟ್ಟಿಗೆ ಹೋಗಿದ್ದನು. ತನ್ನ ಪತ್ನಿಯನ್ನು ಕಳಿಸಲಿಲ್ಲ ಎಂದು ಬೇಸತ್ತು ಅಲ್ಲಿಯೇ ವಿಷ(Poison) ಸೇವಿಸಿದ್ದನು. ತೀವ್ರ ಅಸ್ವಸ್ಥವಾಗಿದ್ದ ಈತನನ್ನು ಚಿಕಿತ್ಸೆಗಾಗಿ ಆಸ್ಪತ್ರೆಗೆ ಸಾಗಿಸುವಾಗ ಮಾರ್ಗ ಮಧ್ಯೆಯೇ ಕೊನೆಯುಸಿರೆಳೆದಿದ್ದಾನೆ. ಈ ಕುರಿತು ಗ್ರಾಮೀಣ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Tap to resize

Latest Videos

Student Suicide:'ಕಾಲೇಜು ಸರಿ ಇಲ್ಲ' ತಾಯಿಗೆ ಮೆಸೇಜ್ ಕಳಿಸಿ ಬೆಂಗಳೂರು ವಿದ್ಯಾರ್ಥಿ ಮಂಗಳೂರಲ್ಲಿ ಸುಸೈಡ್

ಆತ್ಮಹತ್ಯೆಗೆ ಯತ್ನಿಸಿದ ಯುವತಿ

ಧಾರವಾಡ(Dharwad): ಗ್ರಾಮ ಪಂಚಾಯಿತಿ ಸದಸ್ಯರೊಬ್ಬರ ಕಿರುಕುಳದಿಂದ(Harassment) ಮದುವೆ ನಿಶ್ಚಯವಾಗಿದ್ದ ಯುವತಿಯೊಬ್ಬರು ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ ಘಟನೆ ತಾಲೂಕಿನ ಬೋಗೂರಿನಲ್ಲಿ ನಡೆದಿದೆ. ಗ್ರಾಮದ ಸರಸ್ವತಿ ಅಜ್ಜನ್ನವರ (20) ಆತ್ಮಹತ್ಯೆಗೆ ಯತ್ನಿಸಿದ ಯುವತಿ ಎಂದು ಗುರುತಿಸಲಾಗಿದೆ.

ಯುವತಿ ವಿಷ ತೆಗೆದುಕೊಂಡ ತಕ್ಷಣ ಜಿಲ್ಲಾಸ್ಪತ್ರೆಗೆ ತೆಗೆದುಕೊಂಡು ಹೋಗಲಾಯಿತು. ನಂತರ ಹೆಚ್ಚಿನ ಚಿಕಿತ್ಸೆಗಾಗಿ ಕಿಮ್ಸ್‌ಗೆ ರವಾನಿಸಲಾಗಿದೆ. ಸರಸ್ವತಿ ಮದುವೆ ನಿಶ್ಚಯವಾಗಿತ್ತು. ಆದರೆ, ಮದುವೆಯಾಗು ಎಂದು ಗ್ರಾಪಂ ಸದಸ್ಯನೋರ್ವ ಕಿರುಕುಳ ಕೊಡುತ್ತಿದ್ದ ಹಿನ್ನೆಲೆಯಲ್ಲಿ ವಿಷ ಸೇವಿಸಿ ಆತ್ಮಹತ್ಯೆಗೆ ಪ್ರಯತ್ನಿಸಿದ್ದಾಳೆ ಎಂದು ಪಾಲಕರು ಆರೋಪಿಸಿದ್ದಾರೆ. ಈ ಕುರಿತು ಗರಗ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ತನಿಖೆ ನಡೆಯುತ್ತಿದೆ.

ಲಾಡ್ಜ್‌ನಲ್ಲಿ ಪತ್ನಿಯ ಕಾಲು ಕತ್ತರಿಸಿ ತಾನೂ ಆತ್ಮಹತ್ಯೆಗೆ ಯತ್ನಿಸಿದ ಪತಿ

ತುಮಕೂರು(Tumakuru): ಕೌಟುಂಬಿಕ ಕಲಹ ಹಿನ್ನೆಲೆಯಲ್ಲಿ ಪತಿಯೇ ಪತ್ನಿಯ ಕಾಲನ್ನು ಕತ್ತರಿಸಿ, ಬಳಿಕ ತಾನು ಆತ್ಮಹತ್ಯೆಗೆ ಯತ್ನಿಸಿರುವ ಘಟನೆ ನಗರದ ಲಾಡ್ಜ್‌ವೊಂದರಲ್ಲಿ ಬುಧವಾರ ನಡೆದಿದೆ. 

Suicide Cases: 23ನೇ ಮಹಡಿಯಿಂದ ಜಿಗಿದು ವಿದ್ಯಾರ್ಥಿ ಆತ್ಮಹತ್ಯೆ: ಕಾರಣ?

ಮಧುಗಿರಿ ಮೂಲದ ಶಿಕ್ಷಕಿ ಅನಿತಾ (33) ಹಲ್ಲೆಗೊಳಗಾದವರು(Assault). ಗದಗ(Gadag) ಮೂಲದ ಬಾಬು ಹಲ್ಲೆಗೈದ ಆರೋಪಿ. ಕಾಲು ಕತ್ತರಿಸಿದ ಬಾಬು, ಈ ವಿಷಯವನ್ನು ಹೋಟೆಲ್‌ ಸಿಬ್ಬಂದಿಗೆ ತಿಳಿಸಿದ್ದಾನೆ. ಸ್ಥಳಕ್ಕಾಗಮಿಸಿದ ಪೊಲೀಸರು ಅನಿತಾರನ್ನು ಆಸ್ಪತ್ರೆಗೆ ದಾಖಲಿಸಿ, ಆರೋಪಿಯನ್ನು ಬಂಧಿಸಿದ್ದಾರೆ. ಬಾಬು, ಅನಿತಾ ಪ್ರೀತಿಸಿ 2 ವರ್ಷದ ಹಿಂದೆ ಮದುವೆಯಾಗಿದ್ದರು. ಆದರೆ, ಪತ್ನಿ ಅನೈತಿಕ ಸಂಬಂಧ ಹೊಂದಿದ್ದಾಳೆಂದು ಆತ ಜಗಳ ತೆಗೆಯುತ್ತಿದ್ದ. ಇದರಿಂದ ಬೇಸತ್ತ ಅನಿತಾ ತವರು ಸೇರಿ, ವಿಚ್ಛೇದನಕ್ಕೆ ಅರ್ಜಿ ಸಲ್ಲಿಸಿದ್ದರು. ಆದಾಗ್ಯೂ ಇದೇ ಲಾಡ್ಜ್‌ನಲ್ಲಿ ಆಗಾಗ ಭೇಟಿ ಆಗುತ್ತಿದ್ದರು. ಬುಧವಾರ ಸಹ ಇದೇ ರೀತಿ ಭೇಟಿ ಆಗಿದ್ದು, ಈ ವೇಳೆ ಒಡವೆ ವಿಚಾರವಾಗಿ ಜಗಳ ನಡೆದಿದೆ. ಇದರಿಂದ ಸಿಟ್ಟಾದ ಬಾಬು ತಾನು ತಂದಿದ್ದ ಮಚ್ಚಿನಿಂದ ಪತ್ನಿಯ ಕಾಲು ಕತ್ತರಿಸಿ, ಅದೇ ಮಚ್ಚಿನಿಂದ ತಲೆಗೆ ಹೊಡೆದುಕೊಂಡಿದ್ದಾನೆ.

ಪತಿ ಕಿರುಕುಳ ತಾಳಲಾರದೆ ಪತ್ನಿ ಆತ್ಮಹತ್ಯೆ

ಕೆ.ಆರ್‌.ಪೇಟೆ: ಗಂಡನ ಮಾನಸಿಕ ಕಿರುಕುಳದಿಂದ(Mental Harassment) ಬೇಸತ್ತು ಗೃಹಿಣಿಯೊಬ್ಬಳು(Women) ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ತಾಲೂಕಿನ ಅಗ್ರಹಾರಬಾಚಹಳ್ಳಿ ಗ್ರಾಮದಲ್ಲಿ ನಡೆದಿದೆ.

ನಿಶಾಗೌಡ ರಾಮಕೃಷ್ಣ (25) ಆತ್ಮಹತ್ಯೆಗೆ ಶರಣಾದ ಮಹಿಳೆ. ತಾಲೂಕಿನ ಅಗ್ರಹಾರಬಾಚಹಳ್ಳಿ ಗ್ರಾಮದ ಸಮೀಪ ಇರುವ ಬೊಮ್ಮನಾಯಕನಹಳ್ಳಿ ಗ್ರಾಮದ ಮಂಜುನಾಥ್‌ ಅವರಿಗೆ ಕೆಲ ವರ್ಷಗಳ ಹಿಂದೆ ಮದುವೆ ಮಾಡಿಕೊಡಲಾಗಿತ್ತು. ಆದರೆ, ಗಂಡ ಹಾಗೂ ಅವರ ಅತ್ತೆ ಪದೇ ಪದೇ ವರದಕ್ಷಿಣೆ(Dowry) ತರುವಂತೆ ಪೀಡಿಸುತ್ತಿದ್ದರು ಎನ್ನಲಾಗಿದೆ. ವರದಕ್ಷಿಣೆ ನೀಡಲು ನಿಶಾಗೌಡ ನಿರಾಕರಿಸುತ್ತಿದ್ದರು. ಇತ್ತ ಗಂಡನೂ ಮಾನಸಿಕ ಕಿರುಕುಳ ನೀಡುತ್ತಿದ್ದರಿಂದ ಬೇಸತ್ತು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಸಾವಿಗೆ ಕಾರಣರಾದ ರಾಮಕೃಷ್ಣ ಹಾಗೂ ಆತನ ತಂದೆ ನಾಗೇಶ್‌, ದೀಪಾ, ವಿನೋದ, ದೇವರಾಜು ವಿರುದ್ದ ಆಕೆಯ ತಂಗಿ ಕವಿತಾ ವಿಜಯ್‌ ಪಟ್ಟಣದ ಪೋಲೀಸ್‌ ಠಾಣೆಗೆ ದೂರು ನೀಡಿದ್ದಾರೆ.
ಪ್ರಕರಣ ದಾಖಲಿಸಿಕೊಂಡಿರುವ ಕೆ.ಆರ್‌.ಪೇಟೆ ಪೋಲೀಸರು(Police) ನಿಶಾಗೌಡರ ಅತ್ತೆಯನ್ನು ಈಗಾಗಲೇ ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ. ತಲೆಮರೆಸಿಕೊಂಡಿರುವ ಆರೋಪಿಗಳ ಪತ್ತೆಗಾಗಿ ಬಲೆ ಬೀಸಿದ್ದಾರೆ.
 

click me!