ಯುವತಿಯರಿಗೆ ಅಶ್ಲೀಲ ಸಂದೇಶ ರವಾನೆ: ಪತ್ತೇದಾರಿ ಏಜೆಂಟ್‌ ಬಂಧನ

By Kannadaprabha NewsFirst Published Oct 14, 2020, 7:37 AM IST
Highlights

ಸಾಮಾಜಿಕ ಜಾಲತಾಣಗಳಲ್ಲಿ ಯುವತಿಯರ ಹೆಸರಿನಲ್ಲಿ ನಕಲಿ ಖಾತೆ ತೆರೆದು ಅಶ್ಲೀಲ ಸಂದೇಶ ಕಳುಹಿಸುತ್ತಿದ್ದ ಕಿಡಿಗೇಡಿ ಬಂಧನ| ಖಾಸಗಿ ಕ್ರಿಮಿನಲ್‌ ಪತ್ತೆದಾರಿಕೆ ಏಜೆನ್ಸಿಯೊಂದರಲ್ಲಿ ಕೆಲಸ ಮಾಡುತ್ತಿದ್ದ ಬಂಧಿತ ಆರೋಪಿ| 

ಬೆಂಗಳೂರು(ಅ.14): ಸಾಮಾಜಿಕ ಜಾಲತಾಣಗಳಲ್ಲಿ ಯುವತಿಯರ ಹೆಸರಿನಲ್ಲಿ ನಕಲಿ ಖಾತೆ ತೆರೆದು ಅಶ್ಲೀಲ ಸಂದೇಶಗಳನ್ನು ಕಳುಹಿಸುತ್ತಿದ್ದ ಕಿಡಿಗೇಡಿಯೊಬ್ಬ ವೈಟ್‌ಫೀಲ್ಡ್‌ ವಿಭಾಗದ ಸಿಇಎನ್‌ ಠಾಣೆ ಪೊಲೀಸರ ಬಲೆಗೆ ಬಿದ್ದಿದ್ದಾನೆ.

ಕಾಡುಗೋಡಿ ನಿವಾಸಿ ಜಗದೀಶ್‌ (32) ಬಂಧಿತನಾಗಿದ್ದು, ಆರೋಪಿಯಿಂದ ಮೊಬೈಲ್‌ ಜಪ್ತಿ ಮಾಡಲಾಗಿದೆ. ಸಾಮಾಜಿಕ ಜಾಲತಾಣಗಳಲ್ಲಿ ನಕಲಿ ಖಾತೆಗಳ ಬಗ್ಗೆ ಇಬ್ಬರು ಯುವತಿಯರು ದೂರು ನೀಡಿದ್ದರು. ಇನ್‌ಸ್ಪೆಕ್ಟರ್‌ ಗುರುಪ್ರಸಾದ್‌ ನೇತೃತ್ವದ ತಂಡ ಐಪಿ ಅಡ್ರಸ್‌ ಮೂಲಕ ಆರೋಪಿ ಜಾಡು ಪತ್ತೆ ಹಚ್ಚಿದ್ದಾರೆ ಎಂದು ಅಧಿಕಾರಿಗಳು ಹೇಳಿದ್ದಾರೆ.

ನಿವಾಳಿ ಹೆಸರಲ್ಲಿ ಮಹಿಳೆಯರ ಮೇಲೆ ಅತ್ಯಾಚಾರ; ಹೆಣ್ಣು ಬಾಕ ಸ್ವಾಮಿಗೆ ಸಿಕ್ತು ಸರಿಯಾದ ಶಿಕ್ಷೆ!

ಖಾಸಗಿ ಪತ್ತೆದಾರಿಕೆ ಏಜೆನ್ಸಿ ನೌಕರ: 

ಕಾಡುಗೋಡಿಯ ಜಗದೀಶ್‌, ಖಾಸಗಿ ಕ್ರಿಮಿನಲ್‌ ಪತ್ತೆದಾರಿಕೆ ಏಜೆನ್ಸಿಯೊಂದರಲ್ಲಿ ಕೆಲಸ ಮಾಡುತ್ತಿದ್ದ. ಫೇಸ್‌ಬುಕ್‌ ಹಾಗೂ ಇನ್‌ಸ್ಟಾಗ್ರಾಂ ತಾಣಗಳಲ್ಲಿ ಯುವತಿಯರ ಭಾವಚಿತ್ರ ಕದ್ದು ಬಳಿಕ ಆ ಭಾವಚಿತ್ರ ಬಳಸಿ ನಕಲಿ ಖಾತೆಯನ್ನು ಆರೋಪಿ ತೆರೆಯುತ್ತಿದ್ದ. ನಂತರ ಆ ನಕಲಿ ಖಾತೆ ಮೂಲಕ ಯುವತಿಯರ ಸ್ನೇಹಿತರಿಗೆ ಆಶ್ಲೀಲ ಸಂದೇಶ ಕಳುಹಿಸಿ ಕುಚೋದ್ಯತನ ಮಾಡುತ್ತಿದ್ದ ಎಂದು ಅಧಿಕಾರಿಗಳು ಹೇಳಿದ್ದಾರೆ.
 

click me!