ನಿವಾಳಿ ಹೆಸರಲ್ಲಿ ಮಹಿಳೆಯರ ಮೇಲೆ ಅತ್ಯಾಚಾರ; ಹೆಣ್ಣು ಬಾಕ ಸ್ವಾಮಿಗೆ ಸಿಕ್ತು ಸರಿಯಾದ ಶಿಕ್ಷೆ!
ಜನರ ಧಾರ್ಮಿಕ ನಂಬಿಕೆಗಳನ್ನು ಬಂಡವಾಳ ಮಾಡಿಕೊಂಡು ಅದೆಷ್ಟೋ ಕಪಟ ಸ್ವಾಮಿಗಳು ಹಣ ಮಾಡುತ್ತಾರೆ. ಇನ್ನು ಕೆಲವರು ಹೆಣ್ಣು ಮಕ್ಕಳನ್ನು ಬಳಸಿಕೊಳ್ಳುತ್ತಾರೆ. ಪೂಜೆ, ಪುನಸ್ಕಾರ ನೆಪದಲ್ಲಿ ಹೆಣ್ಣು ಮಕ್ಕಳ ಜೊತೆ ಅಸಭ್ಯವಾಗಿ ನಡೆದುಕೊಳ್ಳುತ್ತಾರೆ.
ಬೆಂಗಳೂರು (ಅ. 10): ಜನರ ಧಾರ್ಮಿಕ ನಂಬಿಕೆಗಳನ್ನು ಬಂಡವಾಳ ಮಾಡಿಕೊಂಡು ಅದೆಷ್ಟೋ ಕಪಟ ಸ್ವಾಮಿಗಳು ಹಣ ಮಾಡುತ್ತಾರೆ. ಇನ್ನು ಕೆಲವರು ಹೆಣ್ಣು ಮಕ್ಕಳನ್ನು ಬಳಸಿಕೊಳ್ಳುತ್ತಾರೆ. ಪೂಜೆ, ಪುನಸ್ಕಾರ ನೆಪದಲ್ಲಿ ಹೆಣ್ಣು ಮಕ್ಕಳ ಜೊತೆ ಅಸಭ್ಯವಾಗಿ ನಡೆದುಕೊಳ್ಳುತ್ತಾರೆ.
ಪ್ರತಿ ಕೊಲೆಯ ನಂತರವೂ ಆಡಿನ ಬಲಿ ಕೊಡುತ್ತಿದ್ದ ಈ ನಟೋರಿಯಸ್ ಕಿಲ್ಲರ್!
ಇಂತಹದ್ದೇ ಒಬ್ಬ ಕಪಟ ಸ್ವಾಮಿ ಶಿವಮೊಗ್ಗದಲ್ಲಿ ಹೆಣ್ಣು ಮಕ್ಕಳ ಜೊತೆ ಆಟ ಆಡುತ್ತಿದ್ದ. ವಿಚಾರ ತಿಳಿದ ಸುವರ್ಣ ನ್ಯೂಸ್ ಶಿವಮೊಗ್ಗಕ್ಕೆ ಅವನನ್ನು ಹುಡುಕಿಕೊಂಡು ಹೊರಟಿತು. ಆಗ ಆತನ ಒಂದೊಂದು ವಿಚಾರ ಬಯಲಾಯ್ತು. ಕೆಲವು ಹೆಣ್ಣು ಮಕ್ಕಳು ಮಾತನಾಡಿದರು. ಈ ಹೆಣ್ಣು ಬಾಕನ ಅಸಲಿ ಮುಖವನ್ನು ಸುವರ್ಣ ನ್ಯೂಸ್ ಬಯಲು ಮಾಡಿತು. ಉಪ್ಪು ತಿಂದವ ನೀರು ಕುಡಿಯಲೇಬೇಕು. ತಪ್ಪು ಮಾಡಿದವ ಶಿಕ್ಷೆ ಅನುಭವಿಸಲೇಬೇಕು. ಕೊನೆಗೂ ಈ ಸ್ವಾಮಿಗೆ 14 ವರ್ಷ ಜೈಲು ಶಿಕ್ಷೆಯಾಗಿದೆ. ಇದು ಸುವರ್ಣ ನ್ಯೂಸ್ ಇಂಪ್ಯಾಕ್ಟ್!