Bagalkot: ತೋಟದ ಮನೆಯಲ್ಲಿ 500 ಕೆಜಿ ಸ್ಫೋಟಕ ವಸ್ತುಗಳು ಪತ್ತೆ..!

By Kannadaprabha NewsFirst Published Jan 21, 2022, 7:01 AM IST
Highlights

*  ತೋಟದ ಮನೆಯಲ್ಲಿ ಸಂಗ್ರಹ, ಇಬ್ಬರು ವಶಕ್ಕೆ
*  ಹೊನ್ನಾಕಟ್ಟಿ ಗ್ರಾಮದಲ್ಲಿ ನಡೆದ ಘಟನೆ
*  ಹಾವೇರಿಯಲ್ಲಿ ಗ್ರೆನೇಡ್‌ ರೀತಿ ವಸ್ತು ಪತ್ತೆ
 

ಬಾಗಲಕೋಟೆ/ಹಾವೇರಿ(ಜ.21): ಬಾಗಲಕೋಟೆ ನಗರಕ್ಕೆ ಸಮೀಪವಿರುವ ಹೊನ್ನಾಕಟ್ಟಿ ಗ್ರಾಮದ ತೋಟದ ಮನೆಯಲ್ಲಿ ಸುಮಾರು 500 ಕೆಜಿಯಷ್ಟು ಸ್ಫೋಟಕ ವಸ್ತುಗಳನ್ನು(Explosive Items) ಪೊಲೀಸರು(Police) ವಶಪಡಿಸಿಕೊಂಡಿದ್ದಾರೆ. 

ಈ ಸ್ಫೋಟಕಗಳನ್ನು ಕಲ್ಲು ಗಣಿಗಾರಿಕೆಗಾಗಿ(Stone Mining) ಸಂಗ್ರಹಿಸಲಾಗಿತ್ತೆ ಅಥವಾ ಬೇರೆ ಯಾವುದಾದರೂ ಕೃತ್ಯಕ್ಕೆ ಬಳಸಲು ಸಂಗ್ರಹಿಸಲಾಗಿದೆಯೋ ಎಂಬುದು ತನಿಖೆಯಿಂದ(Investigation) ತಿಳಿಯಬೇಕಿದೆ, ಈ ಪೈಕಿ 250 ಕೆಜಿ ಸಿದ್ಧ ಸ್ಫೋಟಕ, 250 ಕೆಜಿ ಕಚ್ಚಾ ಪೌಡರ್‌ನ್ನು ವಶಕ್ಕೆ ಪಡೆದಿರುವ ಬಾಗಲಕೋಟೆ(Bagalkot) ಪೊಲೀಸರು ಪ್ರಕರಣಕ್ಕೆ ಸಂಬಂಧಿಸಿದಂತೆ ನಾರಾ ಹಾಗೂ ಕಂಕಣಮೇಲಿ ಎಂಬ ಇಬ್ಬರು ಆರೋಪಿಗಳನ್ನು(Accused) ಸಹ ವಶಕ್ಕೆ(Arrest) ಪಡೆದಿದ್ದಾರೆ.

ಸ್ಫೋಟ ಸಂಚು : ಉಪ್ಪಿನಂಗಡಿ ಶಂಕಿತ ವ್ಯಕ್ತಿ ಸೆರೆ?

ಹಾವೇರಿಯಲ್ಲಿ ಗ್ರೆನೇಡ್‌ ರೀತಿ ವಸ್ತು ಪತ್ತೆ

ಹಾವೇರಿಯ(Haveri) ನೇತಾಜಿ ನಗರದಲ್ಲಿ ನಿವೇಶನವೊಂದರ ಜಾಗ ಸ್ವಚ್ಛಗೊಳಿಸುತ್ತಿರುವ ವೇಳೆ ಗ್ರೆನೇಡ್‌ ರೀತಿಯ ವಸ್ತು ಪತ್ತೆಯಾಗಿದೆ. ರವಿ ಶಿವಬಸಯ್ಯ ಮುಷ್ಠಿ ಎಂಬವರ ಜಾಗದಲ್ಲಿ ಅನುಮಾನಾಸ್ಪದ ಸ್ಫೋಟಕ ವಸ್ತು ಪತ್ತೆಯಾಗಿದ್ದು, ಬಳಿಕ ತಕ್ಷಣ ಪೊಲೀಸರಿಗೆ ಮಾಹಿತಿ ತಿಳಿಸಿದ್ದಾರೆ. ಶಂಕಾಸ್ಪದ ವಸ್ತು ವಶಕ್ಕೆ ಪಡೆದಿರುವ ಪೊಲೀಸರು ತನಿಖೆ ನಡೆಸಿದ್ದಾರೆ.

ಪೊಲೀಸ್‌ ವಶದಲ್ಲಿದ್ದ ಸ್ಫೋಟಕಗಳು ನಾಪತ್ತೆ..!

ಮಂಡ್ಯ(Mandya): ಪೊಲೀಸರ ವಶದಲ್ಲಿದ್ದ ಭಾರೀ ಪ್ರಮಾಣದ ಸ್ಫೋಟಕಗಳು ನಾಪತ್ತೆಯಾಗಿದ್ದು, ಮಾರಾಟವಾಗಿರುವ ಆರೋಪ ಕೇಳಿಬಂದಿದೆ. ಇದರಲ್ಲಿ ಪೊಲೀಸರೇ ಶಾಮೀಲಾಗಿದ್ದಾರೆ ಎಂದು ಆರ್‌ಟಿಐ ಕಾರ್ಯಕರ್ತ ಕೆ.ಆರ್‌.ರವೀಂದ್ರ ದೂರಿದ ಘಟನೆ ಕಳೆದ ವರ್ಷ ಆ.02 ರಂದು ನಡೆದಿತ್ತು.   

ಜ.21ರಂದು ಕೆ.ಆರ್‌.ಪೇಟೆ ಗ್ರಾಮಾಂತರ ಠಾಣೆ ಪೊಲೀಸರು ಅಕ್ರಮವಾಗಿ ಸಾಗಿಸುತ್ತಿದ್ದ 6800 ಡಿಟೋನೇಟರ್‌, 14,400 ಜಿಲೆಟಿನ್‌ ಕಡ್ಡಿಗಳನ್ನು ವಶಕ್ಕೆ ಪಡೆದುಕೊಂಡಿದ್ದರು. ಇವನ್ನು ವ್ಯಕ್ತಿಯೊಬ್ಬರ ಸ್ಥಳದಲ್ಲಿರಿಸಿದ್ದರು. ಜು.18ರಂದು ನಾಶಪಡಿಸಲು ಹೋದಾಗ 4580 ಡಿಟೋನೇಟರ್‌ ನಾಪತ್ತೆಯಾಗಿದ್ದವು.  ಸ್ಫೋಟಕಗಳನ್ನು ಪೊಲೀಸರೇ ಗಣಿ ಮಾಲೀಕರಿಗೆ ಹೆಚ್ಚಿನ ಬೆಲೆಗೆ ಮಾರಾಟ ಮಾಡಿದ್ದಾರೆ ಎಂದು ರವೀಂದ್ರ ಆರೋಪಿಸಿದ್ದರು.

ಶಿವಮೊಗ್ಗದಲ್ಲಿ ಭಾರೀ ಪ್ರಮಾಣದ ಸ್ಫೋಟಕ ಪತ್ತೆ

ಶಿವಮೊಗ್ಗ(Shivamogga): ಶಿವಮೊಗ್ಗದ ಸೋಗಾನೆ ವಿಮಾನ ನಿಲ್ದಾಣ(Airport) ಸ್ಥಳದಲ್ಲಿ ಭಾರೀ ಪ್ರಮಾಣದ ಸ್ಫೋಟಕ ವಸ್ತು ಪತ್ತೆಯಾಗಿದ್ದ ಘಟನೆ ಕಳೆದ ವರ್ಷ ಮಾ.09 ರಂದು ನಡೆದಿತ್ತು. ಈ ಸ್ಫೋಟಕ ಕಾನೂನು ಬದ್ಧವಾಗಿಯೇ ಇಲ್ಲಿಗೆ ಬಂದಿದ್ದು, ಸ್ಫೋಟಿಸಲು ಕಾನೂನಾತ್ಮಕ ತೊಂದರೆ ಉಂಟಾದ ಪರಿಣಾಮ ಪೂರೈಕೆದಾರರು ಸ್ಫೋಟಕವನ್ನು ಅಲ್ಲಿಯೇ ಬಿಟ್ಟು ತೆರಳಿದ್ದರು ಎನ್ನಲಾಗಿತ್ತು.

ಸುಮಾರು 904 ಕೆ.ಜಿ ಜಿಲೆಟಿನ್ ಕಡ್ಡಿಗಳು, 3267 ಡಿಟೋನೇಟರ್, ಪೇಸ್ಟ್ ಪತ್ತೆಯಾಗಿದೆ. ವಿಮಾನ ನಿಲ್ದಾಣ ಕಾಮಗಾರಿಯಲ್ಲಿ ಬಂಡೆ ಸ್ಫೋಟಿಸಲು ಚಿಕ್ಕಬಳ್ಳಾಪುರದ ಪೂರೈಕೆದಾರರೊಬ್ಬರು ಕಾನೂನಾತ್ಮಕವಾಗಿಯೇ ಈ ಸ್ಫೋಟಕಗಳನ್ನು ಪೂರೈಕೆ ಮಾಡಿದ್ದರು ಎಂದು ಹೇಳಲಾಗಿತ್ತು.  

ಮಂಗಳೂರಿನಲ್ಲಿ ಬೃಹತ್‌ ಸ್ಫೋಟಕ ದಾಸ್ತಾನು : ಸುಳಿವು ನೀಡಿದ ನಾಯಿ ಹತ್ಯೆ

ಹುಣಸೊಡು ಘಟನೆ ಬಳಿಕ ಈ ಪ್ರಮಾಣದ ಸ್ಫೋಟಕ ಬಳಸಲು ಜಿಲ್ಲಾಡಳಿತ ಅನುಮತಿ ನೀಡಲಿಲ್ಲ. ಹೀಗಾಗಿ ಪೂರೈಕೆದಾರರು ದೊಡ್ಡ ಪ್ರಮಾಣದ ಸ್ಪೋಟಕ ವಸ್ತುಗಳನ್ನ ಸ್ಥಳದಲ್ಲಿಯೇ ಬಿಟ್ಟು ಹೋಗಿದ್ದರು.  ಕಳೆದ ಮೂರ್ನಾಲ್ಕು ದಿನಗಳ ಹಿಂದೆ ಈ ಘಟನೆ ನಡೆದಿದ್ದು, ಸ್ಥಳಕ್ಕೆ ಬೆಂಗಳೂರಿನಿಂದ ಬಾಂಬ್ ನಿಷ್ಕ್ರೀಯ ದಳ ಆಗಮಿಸಿ ಸ್ಫೋಟಕಗಳನ್ನು ನಿಷ್ಕ್ರೀಯ ಗೊಳಿಸಿತ್ತು.  ಅಜಾಗರೂಕತೆಯಿಂದ ಭಾರೀ ಪ್ರಮಾಣದ ಸ್ಪೋಟಕ ವಸ್ತುಗಳನ್ನು ಬಿಟ್ಟುಹೋದ ಚಿಕ್ಕಬಳ್ಳಾಪುರ ಮಾಲೀಕರ ವಿರುದ್ಧ ತುಂಗಾನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿತ್ತು.

616 ಡಿಟೋನೇಟರ್‌ ಪತ್ತೆಹಚ್ಚಿದ ಎಎಸ್‌ಸಿ ತಂಡ

ಹುಣಸೋಡು ಗ್ರಾಮದ ಕ್ರಷರ್‌ನಲ್ಲಿ ಜನವರಿ 21ರಂದು ಸ್ಫೋಟ ನಡೆದ ಸ್ಥಳದಲ್ಲಿ ಪೊಲೀಸರ ಪರಿಶೀಲನೆ ಮುಂದುವರಿಸಿದ್ದು, ಸ್ಥಳದಲ್ಲಿ ಮತ್ತಷ್ಟುಡಿಟೋನೇಟರ್‌ಗಳು ಪತ್ತೆಯಾಗಿವೆ.

ಎಎಸ್‌ಸಿ ತಂಡ ಹಾಗೂ ಪೊಲೀಸರು ಸೇರಿ ಕೈಗೊಂಡ ಜಂಟಿ ಸ್ಥಳ ತಪಾಸಣೆ ವೇಳೆ ಕ್ರಷರ್‌ ಸ್ಫೋಟಗೊಂಡ ಜಾಗದಲ್ಲೇ 175 ಡಿಟೋನೇಟರ್‌ಗಳು ಪತ್ತೆಯಾಗಿವೆ. ಈ ಮೂಲಕ ಹುಣಸೋಡು, ಗೆಜ್ಜೇನಹಳ್ಳಿಯ ತೆಂಗಿನ ತೋಟ ಹಾಗೂ ಘಟನೆಯಲ್ಲಿ ಮೃತಪಟ್ಟಪ್ರವೀಣನ ಮನೆಯಲ್ಲಿ ಸಿಕ್ಕ ಡಿಟೋನೇಟರ್‌ ಸೇರಿ ಒಟ್ಟು 616 ಡಿಟೋನೇಟರ್‌ನ್ನು ಎಎಸ್‌ಸಿ ತಂಡ ಪತ್ತೆ ಮಾಡಿದೆ. ಹಾಗೆಯೇ ಈ ತನಕ ಒಟ್ಟು 415 ಜಿಲೆಟಿನ್‌ ಪೇಸ್ಟ್‌ಗಳು ಸಿಕ್ಕಿವೆ.
 

click me!