
ನವದೆಹಲಿ (ಜೂನ್ 21): ಉತ್ತರ ಪ್ರದೇಶದ (Uttar Pradesh) ಶಹಜಹಾನ್‌ಪುರದಲ್ಲಿ (Shahjahanpur) ಆಘಾತಕಾರಿ ಪ್ರಕರಣವೊಂದು ಬೆಳಕಿಗೆ ಬಂದಿದೆ. ಇಲ್ಲಿ ಯುವತಿಯೊಬ್ಬಳು ತಾನು ಮೋಸ ಹೋಗಿರುವುದಾಗಿ ಆರೋಪಿಸಿದ್ದಾಳೆ. ತಾನು ನಪುಂಸಕ (impotent) ಯುವಕನನ್ನು ಮದುವೆಯಾಗಿದ್ದೇನೆ. ಹುಡುಗನ ಮನೆಯವರು ತನಗೆ ಮೋಸ ಮಾಡಿದ್ದಾರೆ ಎಂದು ಅರೋಪಿಸಿದ್ದಾಳೆ. ಇದೆಲ್ಲವೂ ಗೊತ್ತಾಗಿದ್ದು, ಹನಿಮೂನ್ (Honeymoon)ಮುಗಿದ ಮೇಲೆ ಎನ್ನುವುದು ಈಗ ಸುದ್ದಿಯಾಗಿದೆ.
ಮದುವೆಯ ಸಮಯದಲ್ಲಿ ವರನ ಕಡೆಯವರು 10 ಲಕ್ಷ ರೂಪಾಯಿ ವರದಕ್ಷಿಣೆ ( Dowry) ಕೇಳಿದ್ದರು. ಅದನ್ನು ನೀಡಿದ ಹೊರತಾಗಿಯೂ ನಪುಂಸಕನೊಂದಿಗೆ ನನ್ನನ್ನು ಮದುವೆ ಮಾಡುವ ಮೂಲಕ ಮೋಸ ಮಾಡಿದ್ದಾರೆ. ಹನಿಮೂನ್ ಮುಗಿದ ಬಳಿಕ ಹುಡುಗನ ಮನೆಯವರಲ್ಲಿ ಈ ವಿಚಾರವನ್ನು ಹೇಳಿದಾಗ ಅತ್ತೆ (Mother in Law ) ಸೇರಿ ಮನೆಯ ಎಲ್ಲರೂ ನನಗೆ ಥಳಿಸಿದ್ದಾರೆ ಎಂದೂ ಆರೋಪಿಸಿದ್ದಾಳೆ. ಪ್ರಕರಣದಲ್ಲಿ ಪೊಲೀಸರು ಎಂಟು ಜನರ ವಿರುದ್ಧ ಎಫ್ಐಆರ್ ದಾಖಲಿಸಲಾಗಿದ್ದು, ತನಿಖೆ ನಡೆಸಲಾಗುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಈಗ ದೊರೆತಿರುವ ಮಾಹಿತಿಯ ಪ್ರಕಾರ, ಶಹಜಹಾನ್‌ಪುರದ ಪುವಾಯನ್ ಪೊಲೀಸ್ ಠಾಣಾ ( Puwayan police station ) ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ. ಸಾದಾರ್ ಬಜಾರ್ ಪ್ರದೇಶದ ಹುಡುಗನೊಂದಿಗೆ ಜೂನ್ 5 ರಂದು ಮದುವೆಯಾಗಿತ್ತು. ಇಡೀ ಮದುವೆಯನ್ನು ಹುಡುಗಿಯ ಮನೆಯವರು ಅದ್ದೂರಿಯಾಗಿ ನಡೆಸಿಕೊಟ್ಟಿದ್ದರು. ಕುಟುಂಬಸ್ಥರ ಪ್ರಕಾರ, ಮದುವೆಯಲ್ಲಿ ಸುಮಾರು 10 ಲಕ್ಷ ವರದಕ್ಷಿಣೆ ನೀಡಲಾಗಿತ್ತು. ಮದುವೆಯಾದ ಬಳಿಕ ನವ ವಧು-ವರ ಹನಿಮೂನ್‌ಗೆ ತೆರಳಿದ್ದಾರೆ. ಹನಿಮೂನ್‌ನ ಮೊದಲ ದಿನವೇ ಗಂಡ ನಪುಂಸಕ ಎನ್ನುವುದು ಪತ್ನಿಗೆ ಗೊತ್ತಾಗಿದೆ. ಇದೇ ವಿಚಾರವನ್ನು ಹನಿಮೂನ್‌ನಿಂದ ಬಂದ ಬಳಿಕ ಅತ್ತೆಯ ಮನೆಯಲ್ಲಿ ಹೇಳಿದ್ದಾರೆ. ಇದನ್ನು ಕೇಳಿದವರೆ, ಅತ್ತೆಯ ಮನೆಯವರು ಹುಡುಗಿಗೆ ಥಳಿಸಿದ್ದಾರೆ.
ಈ ಬಗ್ಗೆ ಪೊಲೀಸರಿಗೆ ಮಾಹಿತಿ ತಲುಪಿದಾಗ, ಅವರು ವಿಷಯದ ಗಂಭೀರತೆಯನ್ನು ಪರಿಗಣಿಸಿ ಕ್ರಮ ಕೈಗೊಂಡಿದ್ದಾರೆ. ಇದರಲ್ಲಿ 10 ಲಕ್ಷ ವರದಕ್ಷಿಣೆ ನೀಡಿದ್ದರೂ, ಯುವತಿಗೆ ವಂಚನೆ ಮಾಡಿದ ಆರೋಪದಲ್ಲಿ ಆಕೆಯ ಪತಿ ಸೇರಿದಂತೆ 8 ಮಂದಿಯ ವಿರುದ್ಧ ಎಫ್ಐಆರ್ ದಾಖಲಿಸಲಾಗಿದೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಎಲ್ಲಾ ಆಯಾಮಗಳಲ್ಲಿ ತನಿಖೆ ನಡೆಸುತ್ತಿದ್ದಾರೆ.
ಈ ಬಗ್ಗೆ ಪೊಲೀಸ್ ಅಧೀಕ್ಷಕ (ಗ್ರಾಮೀಣ) ಸಂಜೀವ್ ಬಾಜಪೈ ಅವರು ಭಾನುವಾರ ಮಾತನಾಡಿ, ಈ ವಿಷಯವು ಪೊಲೀಸ್ ಠಾಣೆ ವ್ಯಾಪ್ತಿಯ ಹಳ್ಳಿಯೊಂದರದ್ದಾಗಿದೆ. ಗ್ರಾಮದಲ್ಲಿ ವಾಸವಾಗಿರುವ ಯುವತಿಯನ್ನು ಆಕೆಯ ಸಂಬಂಧಿಕರು ಶಹಜಹಾನ್ ಪುರದ ನಿವಾಸಿ ಸತ್ಯಂ ಎಂಬ ಯುವಕನೊಂದಿಗೆ ವಿವಾಹ ಮಾಡಿದ್ದರು.
ಸಚಿವನ ಪತ್ನಿ ನಾನು ಎಂದ ಮಹಿಳೆಯ ಬಂಧಿಸಿದ ಪೊಲೀಸರು
ಮದುವೆಯ ಸಮಯದಲ್ಲಿ 10 ಲಕ್ಷ ರೂಪಾಯಿ ನಗದು ಹಣವನ್ನು ವರದಕ್ಷಿಣೆಯಾಗಿ ನೀಡಲಾಗಿತ್ತು. ಮದುವೆಯಾಗಿ ಹನಿಮೂನ್‌ಗೆ ಹೋದ ವೇಳೆ ಹುಡುಗ ನಪುಂಸಕ ಎನ್ನುವುದು ಗೊತ್ತಾಗಿದೆ. ಆಕೆಯ ಮನೆಯವರಿಗೆ ಈ ವಿಚಾರ ತಿಳಿದಿಲ್ಲ ಎನ್ನುವ ಕಾರಣಕ್ಕಾಗಿ, ಅತ್ತೆಯ ಮನೆಗೆ ಈ ವಿಚಾರ ತಿಳಿಸಿದ್ದಾಳೆ. ಇದಕ್ಕಾಗಿ ಆಕೆಯ ಮೇಲೆ ಹಲ್ಲೆ ಮಾಡಲಾಗಿದೆ ಎಂದು ಸಂಜೀವ್ ಬಾಜಪೈ ಹೇಳಿದ್ದಾರೆ. ಇದರಿಂದಾಗಿ ಮದುವೆಯಾದ ಕೆಲ ದಿನಗಳವರೆಗೂ ಆಕೆ ಸುಮ್ಮನಿದ್ದಳು. ಆದರೆ, ತನ್ನ ಮನೆಗೆ ಬಂದಾಗ ಇದನ್ನು ಕುಟುಂಬಸ್ಥರಿಗೆ ತಿಳಿಸಿದ್ದಾಳೆ. ಇದರ ಬೆನ್ನಲ್ಲುಯೇ ದೂರು ದಾಖಲಾಗಿದೆ.
ಅಪ್ರಾಪ್ತೆ ಮೇಲೆ ಸೋದರ ಮಾವ ಅತ್ಯಾಚಾರ, ಬಾಲಕಿ 7 ತಿಂಗಳು ಗರ್ಭಿಣಿ
ಥಳಿಸುವುದನ್ನು ವಿರೋಧಿಸಿದಾಗ ಅತ್ತೆಯಂದಿರು ಕೊಲೆ ಬೆದರಿಕೆ ಹಾಕಿದ್ದಾರೆ ಎಂದು ಬಾಲಕಿ ಆರೋಪಿಸಿದ್ದಾರೆ. ವಂಚನೆಯ ಮೂಲಕ ಹುಡುಗಿಯ ಬದುಕಿನೊಂದಿಗೆ ಆಟವಾಡಲಾಗಿದೆ ಎಂದು ಎಫ್‌ಐಆರ್ ಉಲ್ಲೇಖಿಸಿ ಪೊಲೀಸ್ ವರಿಷ್ಠಾಧಿಕಾರಿ (ಗ್ರಾಮೀಣ) ಬಾಜಪೈ ತಿಳಿಸಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ