ಮದುವೆಗೆ ಅಡ್ಡಿಯಾಗಿದ್ದ ಬಾಯ್‌ಫ್ರೆಂಡ್‌ನ ಮಗನನ್ನು ಕೊಂದ ಘಟನೆಯಲ್ಲಿ ಪೊಲೀಸರು ಆರೋಪಿ ಪೂಜಾ ಕುಮಾರಿಯನ್ನು ಬಂಧಿಸಿದ್ದಾರೆ. 2019ರಿಂದಲೂ ಈಕೆ ಜೀತೇಂದ್ರ ಎನ್ನುವ ಹೆಸರಿನ ವ್ಯಕ್ತಿಯ ಜೊತೆ ಲಿವ್ ಇನ್ ರಿಲೇಷನ್‌ಷಿಪ್ ಹೊಂದಿದ್ದಳು.
ನವದೆಹಲಿ (ಆ.16): ತನ್ನ ಬಾಯ್‌ಫ್ರೆಂಡ್‌ನನ್ನು ಮದುವೆಯಾಗಲು ಅಡ್ಡಿಯಾಗಿದ್ದ ಆತನ 11 ವರ್ಷದ ಪುತ್ರನನ್ನು ದಾರುಣವಾಗಿ ಕೊಲೆ ಮಾಡಿದ ಆರೋಪದಲ್ಲಿ ದೆಹಲಿ ಪೊಲೀಸರು 24 ವರ್ಷದ ಪೂಜಾ ಕುಮಾರಿಯನ್ನು ಬಂಧಿಸಿದ್ದಾರೆ. ಬಾಯ್‌ಫ್ರೆಂಡ್‌ನ ಮಗನನ್ನು ಕೊಂದ ಬಳಿಕ, 'ನಾನು ನಿನ್ನಿಂದ ಅಮೂಲ್ಯ ವಸ್ತುವೊಂದನ್ನು ಕಿತ್ತುಕೊಂಡಿದ್ದೇನೆ' ಎಂದು ಪೂಜಾ ಕುಮಾರಿ ಹೇಳಿದ್ದಳು ಎಂದು ಪೊಲೀಸರು ತಿಳಿಸಿದ್ದಾರೆ. ಬಾಲಕನನ್ನು ಕೊಂದ ಬಳಿಕ ಆತನನ್ನು ಬಾಕ್ಸ್‌ಬೆಡ್‌ನಲ್ಲಿ ಬಚ್ಚಿಟ್ಟಿದ್ದಳು ಎಂದು ಪೊಲೀಸರು ತಿಳಿಸಿದ್ದಾರೆ. ಇದರ ನಡುವೆ ಘಟನೆಯ ಸಿಸಿಟಿವಿ ದೃಶ್ಯಾವಳಿಗಳು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿವೆ. ಕೊಲೆಯಾದ ಐದು ದಿನಗಳ ಬಳಿಕ ಪೂಜಾ ಕುಮಾರಿಯನ್ನು ಮಂಗಳವಾರ ದೆಹಲಿ ಪೊಲೀಸರು ಬಂಧಿಸಲು ಯಶಸ್ವಿಯಾಗಿದ್ದರು. ಪೂಜಾ ಕುಮಾರಿ 2019ರಿಂದಲೂ ಜೀತೇಂದ್ರ ಎನ್ನುವ ವ್ಯಕ್ತಿಯ ಒತೆ ಲಿವ್ ಇನ್ ರಿಲೇಷನ್‌ಷಿಪ್‌ನಲ್ಲಿದ್ದರು. ಅದೇ ವರ್ಷದ ಅಕ್ಟೋಬರ್ 17 ರಂದು ಇವರಿಬ್ಬರೂ ದೆಹಲಿಯ ಆರ್ಯ ಸಮಾಜದಲ್ಲಿ ಮದುವೆ ಕೂಡ ಆಗಿದ್ದರು. ಆದರೆ, ಜೀತೇಂದ್ರ ತನ್ನ ಮೊದಲ ಪತ್ನಿಗೆ ವಿಚ್ಛೇದನ ನೀಡದೇ ಇದ್ದ ಕಾರಣಕ್ಕೆ ಈ ಮದುವೆಯನ್ನು ನೋಂದಣಿ ಮಾಡಿಕೊಳ್ಳಲು ಸಾಧ್ಯವಾಗಿರಲಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ.
ಇದೇ ವಿಚಾರಕ್ಕೆ ಪೂಜಾ ಕುಮಾರಿ ಹಾಗೂ ಜೀತೇಂದ್ರ ನಡುವೆ ಪದೇ ಪದೇ ಗಲಾಟೆಗಳು ನಡೆಯುತ್ತಿದ್ದವು. ಕಳೆದ ವರ್ಷದ ಡಿಸೆಂಬರ್‌ನಲ್ಲಿ ಬಾಡಿಗೆ ಮನೆಯನ್ನು ಬಿಟ್ಟು ಹೋಗಿದ್ದ ಜೀತೇಂದ್ರ ಪತ್ನಿ ಹಾಗೂ ಮಕ್ಕಳೊಂದಿಗೆ ಬದುಕಲು ಆರಂಭ ಮಾಡಿದ್ದರು. ಜೀತೇಂದ್ರ ತನ್ನನ್ನು ತೊರೆದಿದ್ದಕ್ಕೆ ಹಾಗೂ ಮೊದಲ ಪತ್ನಿಗೆ ವಿಚ್ಛೇದನ ನೀಡದೇ ಇರೋದಕ್ಕೆ ಆತನ 11 ವರ್ಷದ ಮಗನೇ ಕಾರಣ ಎಂದು ಪೂಜಾ ಕುಮಾರಿ ಭಾವಿಸಿದ್ದಳು. ಮಗನ ಕಾರಣಕ್ಕಾಗಿಯೇ ಜೀತೇಂದ್ರ ವಿಚ್ಛೇದನದ ಅರ್ಜಿ ಸಲ್ಲಿಸಿರಲಿಲ್ಲ ಎಂದು ಪೂಜಾ ಅಂದುಕೊಂಡಿದ್ದಳು ಎಂದು ಪೊಲೀಸರು ತಿಳಿಸಿದ್ದಾರೆ.
ಸಿಸಿಟಿವಿ ದೃಶ್ಯಾವಳಿಯಿಂದ ಆರೋಪಿಯ ಬಂಧನ: ಕೊಲೆ ಘಟನೆ ನಡೆದ ಬಳಿಕ, ಪೊಲೀಸರು ಘಟನಾ ಸ್ಥಳದ ಅಕ್ಕಪಕ್ಕದ 200ಕ್ಕೂ ಅಧಿಕ ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲನೆ ಮಾಡಿದ್ದರು. ಬಾಲಕನ ಮನೆಯ ಹೊರಗೆ ಇದ್ದ ಸಿಸಿಟಿವಿಯಲ್ಲಿ ದಾಖಲಾದ ದೃಶ್ಯದಿಂದ ಪೂಜಾ ಕುಮಾರಿಯೇ ಆರೋಪಿ ಎನ್ನುವುದು ಗೊತ್ತಾಗಿದೆ. ನೀಲಿ ಸ್ಕಾರ್ಫ್‌ನಿಂದ ಮುಖವನ್ನು ಮುಚ್ಚಿಕೊಂಡಿದ್ದ ಮಹಿಳೆಯೊಬ್ಬರು ಮನೆಯೊಳಗೆ ಪ್ರವೇಶಿಸುತ್ತಿರುವುದನ್ನು ವೀಡಿಯೊ ತೋರಿಸಿದೆ. ಮಹಿಳೆ, ಜೀನ್ಸ್ ಮತ್ತು ಟಾಪ್ ಧರಿಸಿದ್ದು, ಬ್ಯಾಗ್ ಅನ್ನು ಇರಿಸಿಕೊಂಡಿದ್ದಳು. ಇನ್ನೊಂದು ವೀಡಿಯೊದಲ್ಲಿ, ಮಹಿಳೆ ತನ್ನ ಮುಖವನ್ನು ಸ್ಕಾರ್ಫ್‌ನಿಂದ ಮುಚ್ಚಲು ಪ್ರಯತ್ನ ಮಾಡುತ್ತಿರುವುದು ಕಂಡು ಬಂದಿದೆ.
ಅಪ್ಪನ ತೀಟೆಗೆ ಹೊರಟೋಯ್ತು ಪುಟ್ಟ ಮಗನ ಪ್ರಾಣ: ತಂದೆಯ ಲೀವಿಂಗ್ ಪಾರ್ಟನರ್‌ನಿಂದ ಮಗನ ಕೊಲೆ
ಸಿಸಿಟಿವಿ ದೃಶ್ಯಾವಳಿಗಳ ಹೆಚ್ಚಿನ ವಿಶ್ಲೇಷಣೆಯು ಇಂದರ್‌ಪುರಿಯಲ್ಲಿರುವ 11 ವರ್ಷದ ಬಾಲಕನ ಮನೆಗೆ ಕೊನೆಯ ಬಾರಿಗೆ ಭೇಟಿ ನೀಡಿದ ವ್ಯಕ್ತಿ ಪೂಜಾ ಎಂದು ಖಚಿತಪಡಿಸಲು ತನಿಖಾಧಿಕಾರಿಗಳಿಗೆ ಕಾರಣವಾಯಿತು.
ಸುಂದರಿಗೆ ಕಂಟಕವಾಯ್ತು ಮೊಬೈಲ್ ಗೀಳು: ಪ್ರೀತಿಸಿ ಮದ್ವೆಯಾಗಿದ್ದ ಮಡದಿಯನ್ನೇ ಕೊಂದು ನದಿಗೆಸೆದ ಪತಿ