ಎದುರಿನಿಂದ ವೇಗವಾಗಿ ಬಂದ ಅಪರಿಚಿತ ವಾಹನ ಆಕೆಯ ತಲೆಗೆ ಡಿಕ್ಕಿ ಹೊಡೆದಿದೆ. ಮಹಿಳೆಯ ದೇಹ ಕ್ಷಣಮಾತ್ರದಲ್ಲಿ ಎರಡು ವಾಹನಗಳ ನಡುವೆ ಸಿಲುಕಿಕೊಂಡಿತ್ತು ಎಂದು ಪೊಲೀಸರು ತಿಳಿಸಿದ್ದಾರೆ.
ದೆಹಲಿ (ಆಗಸ್ಟ್ 31, 2023): 20 ವರ್ಷದ ಮಹಿಳೆಯೊಬ್ಬರು ದೆಹಲಿಯ ನರೇಲಾದಲ್ಲಿ ಬಸ್ ಕಿಟಕಿ ಹೊರಗೆ ತಲೆ ಹಾಕಿ ವಾಂತಿ ಮಾಡ್ತಿದ್ದಾಗ ಪ್ರಾಣವನ್ನೇ ಕಳೆದುಕೊಂಡಿದ್ದಾರೆ.
ಅಸ್ವಸ್ಥರಾಗಿದ್ದ ವೇಳೆ ವಾಂತಿ ಮಾಡ್ತಿದ್ದ ಅವರು ಎದುರಿನಿಂದ ಬಂದ ವಾಹನ ಡಿಕ್ಕಿ ಹೊಡೆದು ಆಕೆಯ ತಲೆ ನಜ್ಜುಗುಜ್ಜಾಗಿ ಬಲಿಯಾಗಿದ್ದಾರೆ. ಮಹಿಳೆಯು ಹರಿಯಾಣ ರೋಡ್‌ವೇಸ್ ಬಸ್‌ನಲ್ಲಿ ಪ್ರಯಾಣಿಸುತ್ತಿದ್ದಾಗ ಅಸ್ವಸ್ಥರಾಗಿದ್ದರು. ಈ ಹಿನ್ನೆಲೆ ಕಿಟಕಿ ಹೊರಗೆ ಒರಗಿ ವಾಂತಿ ಮಾಡ್ತಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.
ಆ ವೇಳೆಗೆ, ಎದುರಿನಿಂದ ವೇಗವಾಗಿ ಬಂದ ಅಪರಿಚಿತ ವಾಹನ ಆಕೆಯ ತಲೆಗೆ ಡಿಕ್ಕಿ ಹೊಡೆದಿದೆ. ಮಹಿಳೆಯ ದೇಹ ಕ್ಷಣಮಾತ್ರದಲ್ಲಿ ಎರಡು ವಾಹನಗಳ ನಡುವೆ ಸಿಲುಕಿಕೊಂಡಿತ್ತು ಎಂದು ಪೊಲೀಸರು ತಿಳಿಸಿದ್ದಾರೆ. ಆರೋಪಿಗಳು ಪರಾರಿಯಾಗಿದ್ದಾರೆ ಎಂದೂ ತಿಳಿದುಬಂದಿದೆ. ರಕ್ಷಾಬಂಧನ ಆಚರಣೆಗಾಗಿ ತನ್ನ ಸಹೋದರನನ್ನು ಭೇಟಿಯಾಗಲು ಲೂಧಿಯಾನಕ್ಕೆ ತೆರಳುತ್ತಿದ್ದ ಮಹಿಳೆ ಬಬ್ಲಿ ಕುಮಾರಿ ಮೃತಪಟ್ಟಿದ್ದು, ಆಕೆಯೊಂದಿಗೆ ಅವಳ ಸಹೋದರಿ, ಸೋದರ ಮಾವ ಮತ್ತು ಅವರ ಮೂವರು ಮಕ್ಕಳು ಇದ್ದರು ಎಂದೂ ತಿಳಿದುಬಂದಿದೆ.
ಇದನ್ನು ಓದಿ: ಹೆಂಡ್ತಿ ತಂಗಿಯನ್ನು ಮುಟ್ತಿದ್ದ ಅಪ್ರಾಪ್ತ ಬಾಲಕನ ಕೊಂದು ಬಾಡಿ ಪೀಸ್ ಪೀಸ್ ಮಾಡಿದ ಆಟೋ ಡ್ರೈವರ್!
ಮಧ್ಯಾಹ್ನ 1 ಗಂಟೆ ಸುಮಾರಿಗೆ ಈ ಘಟನೆ ನಡೆದಿದೆ ಎಂದು ಪೊಲೀಸರು ತಿಳಿಸಿದ್ದಾರೆ. ನರೇಲಾದಲ್ಲಿರುವ SRHC ಆಸ್ಪತ್ ಈ ಬಗ್ಗೆ ಪೊಲೀಸರಿಗೆ ವರದಿ ನೀಡಿದ್ದಾರೆ. ಈ ಬಗ್ಗೆ ಮಾಹಿತಿ ನೀಡಿದ ಡಿಸಿಪಿ ರವಿಕುಮಾರ್ ಸಿಂಗ್ ‘’ಬಬ್ಲಿ ಎಂಬ ಮಹಿಳೆ ಅಪಘಾತಕ್ಕೀಡಾಗಿದ್ದಾರೆ ಮತ್ತು ಗಾಯಗೊಂಡು ಮೃತಪಟ್ಟಿದ್ದಾರೆ ಎಂದು ವೈದ್ಯರು ನಮಗೆ ತಿಳಿಸಿದರು. ವಿಚಾರಣೆಯ ನಂತರ, ಮಹಿಳೆ ಮತ್ತು ಅವರ ಕುಟುಂಬವು ಬುಧವಾರ ಬೆಳಗ್ಗೆ ದೆಹಲಿಯ ಐಎಸ್‌ಬಿಟಿಯಿಂದ ಹರಿಯಾಣ ರೋಡ್‌ವೇಸ್ ಬಸ್‌ನಲ್ಲಿ ಹತ್ತಿ ಲುಧಿಯಾನಕ್ಕೆ ಹೋಗುತ್ತಿದ್ದರು ಎಂದು ಕಂಡುಬಂದಿದೆ. ಬಸ್ ಅಲಿಪುರ್ ಪ್ರದೇಶವನ್ನು ತಲುಪಿದಾಗ, ಮಹಿಳೆ ಅಸ್ವಸ್ಥಗೊಂಡರು ಮತ್ತು ವಾಂತಿ ಮಾಡಲು ಕಿಟಕಿಯಿಂದ ಹೊರಗೆ ಒರಗಿದರು ಆದರೆ ಅಪರಿಚಿತ ವಾಹನವು ಆಕೆಯ ತಲೆಯನ್ನು ನಜ್ಜು ಗುಜ್ಜು ಮಾಡಿತು’’ ಎಂದಿದ್ದಾರೆ.
ಅವಳು ಮತ್ತು ಅವಳ ಸಹೋದರಿ, ಪೂನಂ ರಕ್ಷಾಬಂಧನ ಹಬ್ಬವನ್ನು ಆಚರಿಸಲು ಮತ್ತು ಕೆಲವು ದಿನಗಳವರೆಗೆ ಅವರ ಮನೆಯಲ್ಲಿರಲು ಲೂಧಿಯಾನದಲ್ಲಿ ತಮ್ಮ ಅಣ್ಣನನ್ನು ಭೇಟಿಯಾಗಲು ಹೋಗುತ್ತಿದ್ದರು ಎಂದೂ ತಿಳಿದುಬಂದಿದೆ.
ಇದನ್ನೂ ಓದಿ: ಅಕ್ಕನಿಗೆ ಬಿಯರ್ ಕುಡಿಸಿ ತಂಗಿಯಿಂದ್ಲೇ ಕೊಲೆ? ಚಿನ್ನ, ಲಕ್ಷಾಂತರ ರೂ. ಹಣದೊಂದಿಗೆ ಬಾಯ್‌ಫ್ರೆಂಡ್ ಜತೆ ಪರಾರಿ!