
Delhi Neha Murder Case : ದೆಹಲಿಯ ಜ್ಯೋತಿ ನಗರದಲ್ಲಿ 19 ವರ್ಷದ ನೇಹಾ ಕೊಲೆ ಪ್ರಕರಣದಲ್ಲಿ ಪೊಲೀಸರು ಪ್ರಮುಖ ಆರೋಪಿ ತೌಫಿಕ್‌ನನ್ನು ಉತ್ತರ ಪ್ರದೇಶದ ರಾಂಪುರ ಜಿಲ್ಲೆಯ ತಾಂಡಾದಿಂದ ಬಂಧಿಸಿದ್ದಾರೆ.
ಜೂನ್ 23ರಂದು ನಡೆದ ಆಘಾತಕಾರಿ ಘಟನೆಯಲ್ಲಿ, ತೌಫಿಕ್ ಬುರ್ಖಾ ಧರಿಸಿ ನೇಹಾಳ ಮನೆಗೆ ಬಂದು, ಐದನೇ ಮಹಡಿಯಿಂದ ಅವಳನ್ನು ತಳ್ಳಿ ಕೊಲೆ ಮಾಡಿದ್ದಾನೆ ಎಂದು ಆರೋಪಿಸಲಾಗಿದೆ. ಚಿಕಿತ್ಸೆಯ ಸಮಯದಲ್ಲಿ ನೇಹಾ ಮೃತಪಟ್ಟಿದ್ದಾಳೆ.
ಪೊಲೀಸ್ ತನಿಖೆಯಲ್ಲಿ ಬಯಲು:
ಪೊಲೀಸ್ ಮೂಲಗಳ ಪ್ರಕಾರ, ನೇಹಾ ಮತ್ತು ತೌಫಿಕ್ ಪ್ರೇಮ ಸಂಬಂಧದಲ್ಲಿದ್ದರು. ಜೂನ್ 23ರ ಬೆಳಿಗ್ಗೆ ತೌಫಿಕ್ ಬೇರೆ ಹುಡುಗಿಯನ್ನು ಮದುವೆಯಾಗುತ್ತಿರುವ ವಿಷಯ ತಿಳಿದು ಇಬ್ಬರ ನಡುವೆ ಜಗಳವಾಗಿತ್ತು. ಆ ದಿನವೇ ತೌಫಿಕ್ ಬುರ್ಖಾ ಧರಿಸಿ ನೇಹಾಳ ಮನೆಗೆ ತಲುಪಿ, ಸ್ನೇಹಿತನಂತೆ ನಟಿಸಿ ಐದನೇ ಮಹಡಿಗೆ ಕರೆದೊಯ್ದಿದ್ದ ಅರೋಪಿ, ಮಹಡಿ ಮೇಲೆ ಇಬ್ಬರ ನಡುವೆ ಜಗಳ ನಡೆದಿದೆ. ಯಾರಿಗೂ ಗುರುತು ಸಿಗದಂತೆ ಮೊದಲ ಪ್ಲಾನ್ ಮಾಡಿಕೊಂಡು ಬಂದಿದ್ದ ಆರೋಪಿ ಐದನೇ ಮಹಡಿಯಿಂದ ನೇಹಳ್ಳನ್ನು ತಳ್ಳಿದ್ದಾನೆ.
ಪ್ರಕರಣದ ವಿವರ
ಜೂನ್ 23ರ ಬೆಳಿಗ್ಗೆ 8:30ರ ಸುಮಾರಿಗೆ ಜ್ಯೋತಿ ನಗರ ಪೊಲೀಸ್ ಠಾಣೆಗೆ ಘಟನೆ ವರದಿಯಾಗಿದೆ. ಆರಂಭದಲ್ಲಿ ಕೊಲೆ ಯತ್ನದಡಿ ಪ್ರಕರಣ ದಾಖಲಾಗಿತ್ತು. ಆದರೆ, ನೇಹಾಳ ಸಾವಿನ ನಂತರ ಭಾರತೀಯ ದಂಡ ಸಂಹಿತೆಯ ಸೆಕ್ಷನ್ 103 (ಕೊಲೆ) ಅಡಿಯಲ್ಲಿ ಆರೋಪ ಸೇರಿಸಲಾಗಿದೆ. ಪೊಲೀಸರು ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸಿ, ದೆಹಲಿ ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲಿ ಶೋಧ ನಡೆಸಿ, ರಾಂಪುರದಲ್ಲಿ ತೌಫಿಕ್‌ನನ್ನು ಬಂಧಿಸಿದ್ದಾರೆ.
ಕಠಿಣಶಿಕ್ಷೆಗೆ ನೇಹಾ ಕುಟುಂಬಸ್ಥರ ಆಗ್ರಹ:
ನೇಹಾಳ ಕುಟುಂಬವು ತೌಫಿಕ್‌ಗೆ ಕಠಿಣ ಶಿಕ್ಷೆಗೆ ಒತ್ತಾಯಿಸಿದೆ. ಇದು ಪೂರ್ವಯೋಜಿತ ಕೊಲೆ. ಆರೋಪಿಯನ್ನು ಗಲ್ಲಿಗೇರಿಸಬೇಕು ಎಂದು ಸಂಬಂಧಿಯೊಬ್ಬರು ಆಗ್ರಹಿಸಿದ್ದಾರೆ. ಘಟನೆಯ ನಂತರ ಸ್ಥಳೀಯರು ನೇಹಾಳ ಮನೆಯ ಬಳಿ ಜಮಾಯಿಸಿ ನ್ಯಾಯಕ್ಕಾಗಿ ಒತ್ತಾಯಿಸಿದ್ದಾರೆ. ಸದ್ಯ ಪೊಲೀಸರು ಈಗ ತೌಫಿಕ್‌ನಿಂದ ಹೆಚ್ಚಿನ ಮಾಹಿತಿ ಕಲೆಹಾಕುವ ಪ್ರಯತ್ನದಲ್ಲಿದ್ದಾರೆ. ಈ ಘಟನೆ ದೆಹಲಿಯಲ್ಲಿ ಭಾರೀ ಚರ್ಚೆಗೆ ಕಾರಣವಾಗಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ