ಈ ರೀತಿ ಕತ್ತು ಕೊಯ್ದುಕೊಂಡು ಕೈಯಲ್ಲಿ ಚಾಕು ಮತ್ತು ಪಿಸ್ತೂಲ್ ಹಿಡಿದು ಓಡಿದ ವ್ಯಕ್ತಿಯನ್ನು ಕ್ರಿಶನ್ ಶೇರ್ವಾಲ್ ಎಂದು ಗುರುತಿಸಲಾಗಿದ್ದು, ಅವನು ಪ್ರಸ್ತುತ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ ಎಂದು ತಿಳಿದುಬಂದಿದೆ.
ನವದೆಹಲಿ (ಮಾರ್ಚ್ 18, 2023): ದೇಶದಲ್ಲಿ ಸಾಕಷ್ಟು ಅಪರಾಧ ಪ್ರಕರಣಗಳು ಆಗಾಗ್ಗೆ ವರದಿಯಾಗುತ್ತಲೇ ಇರುತ್ತದೆ. ಅದೇ ರೀತಿ ಕೆಲವರು ಸಾರ್ವಜನಿಕವಾಗೇ ನಾನಾ ಅಪರಾಧಗಳನ್ನು ಮಾಡಿರುತ್ತಾರೆ. ಅಲ್ಲದೆ, ಕೆಲವರು ಹುಚ್ಚು ಹುಚ್ಚಾಗಿ ನಾನಾ ರೀತಿಯ ವರ್ತನೆಗಳನ್ನು ತೋರುತ್ತಾರೆ. ಇದರಿಂದ ಜನರು ಭಯಭೀತರಾಗಿರುತ್ತಾರೆ. ಇದೇ ರೀತಿ, ರಾಷ್ಟ್ರ ರಾಜಧಾನಿಯಲ್ಲಿ ವ್ಯಕ್ತಿಯೊಬ್ಬ ಸಾರ್ವಜನಿಕರಿಗೆ ಭಯ ಹುಟ್ಟಿಸುವ ವರ್ತನೆ ತೋರಿದ್ದಾನೆ. ಈ ಘಟನೆ ಕ್ಯಾಮೆರಾದಲ್ಲಿ ಸೆರೆಯಾಗಿದೆ. .
ವ್ಯಕ್ತಿಯೊಬ್ಬ ಚಾಕುವಿನಿಂದ ಕತ್ತು ಕೊಯ್ದುಕೊಂಡು ಕೈಯಲ್ಲಿ ಚಾಕು ಮತ್ತು ಪಿಸ್ತೂಲ್ ಹಿಡಿದು ದೆಹಲಿಯ ನಾಥು ಕಾಲೋನಿ ಚೌಕ್ ಬಳಿ ಸಾರ್ವಜನಿಕವಾಗಿ ಓಡುತ್ತಿದ್ದ ಘಟನೆ ಕ್ಯಾಮೆರಾದಲ್ಲಿ ಸೆರೆಯಾಗಿದ್ದು, ವಿಡಿಯೋ ವೈರಲ್ ಆಗಿದೆ. ಈ ಬಗ್ಗೆ ದೆಹಲಿ ಪೊಲೀಸರಿಗೆ ಸಹ ಮಾಹಿತಿ ನೀಡಲಾಗಿದ್ದು, ಹಲವರು ಆತಂಕ ವ್ಯಕ್ತಪಡಿಸಿದ್ದಾರೆ. ಈ ರೀತಿ ಕತ್ತು ಕೊಯ್ದುಕೊಂಡು ಕೈಯಲ್ಲಿ ಚಾಕು ಮತ್ತು ಪಿಸ್ತೂಲ್ ಹಿಡಿದು ಓಡಿದ ವ್ಯಕ್ತಿಯನ್ನು ಕ್ರಿಶನ್ ಶೇರ್ವಾಲ್ ಎಂದು ಗುರುತಿಸಲಾಗಿದ್ದು, ಅವನು ಪ್ರಸ್ತುತ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ ಎಂದು ತಿಳಿದುಬಂದಿದೆ.
ಇದನ್ನು ಓದಿ: ಕೈದಿಗಳೊಂದಿಗೆ ಜೈಲಲ್ಲೇ ಮಹಿಳಾ ಗಾರ್ಡ್ಸ್ ಸೆಕ್ಸ್: 18 ಮಂದಿ ವಜಾ, ಮೂವರು ಕಂಬಿ ಹಿಂದೆ..!
"ಮಾರ್ಚ್ 16 ರಂದು ಸಂಜೆ 6:40 ಮತ್ತು 6:50 ಕ್ಕೆ ಎಂ.ಎಸ್. ಪಾರ್ಕ್ ಪೊಲೀಸ್ ಠಾಣೆಯಲ್ಲಿ ಎರಡು ಪಿಸಿಆರ್ ಕರೆಗಳು ಬಂದವು, ಕ್ರಿಶನ್ ಶೇರ್ವಾಲ್ ಎಂಬ ವ್ಯಕ್ತಿ ಚಾಕುವಿನಿಂದ ತನ್ನ ಕತ್ತು ಕೊಯ್ದುಕೊಂಡು ನಾಥು ಕಾಲೋನಿ ಚೌಕ್ ಬಳಿ ಚಾಕುವಿನಿಂದ ಸಾರ್ವಜನಿಕವಾಗಿ ಓಡುತ್ತಿದ್ದ. ಮತ್ತು ಅವನ ಕೈಯಲ್ಲಿ ಪಿಸ್ತೂಲ್ ಇತ್ತು, ಅವನು ಗುಂಡು ಹಾರಿಸಿದನು ಎಂದು ಮಾಹಿತಿ ನೀಡಿದರು’’ ಎಂದು ಅಧಿಕಾರಿಯೊಬ್ಬರು ಹೇಳಿದರು.
ಇನ್ನು, ಅವನನ್ನು ವಶಕ್ಕೆ ಪಡೆಯಲು ಯತ್ನಿಸಿದ ಒಬ್ಬ ಪೊಲೀಸ್ ಅಧಿಕಾರಿ ಗಾಯಗೊಂಡಿದ್ದಾರೆ ಎಂದೂ ತಿಳಿದುಬಂದಿದೆ. "ನಾಥು ಕಾಲೋನಿ ಚೌಕ್‌ನಲ್ಲಿ, ಸಾರ್ವಜನಿಕರು ಮತ್ತು ನಮ್ಮ ಅಧಿಕಾರಿಗಳು ಅವನನ್ನು ಹಿಮ್ಮೆಟ್ಟಿಸಲು ಪ್ರಯತ್ನಿಸಿದರು ಮತ್ತು ನಂತರದ ಗಲಿಬಿಲಿಯಲ್ಲಿ, ಅವನು ಒಬ್ಬ ಅಧಿಕಾರಿಯನ್ನು ಗಾಯಗೊಳಿಸಿ ಮತ್ತು ಅವರ ಪಿಸ್ತೂಲ್ ಅನ್ನು ಕಸಿದುಕೊಂಡನು. ಅಲ್ಲದೆ, ಒಂದು ಸುತ್ತಿನ ಗುಂಡು ಹಾರಿಸಿದ್ದಾರೆ. ಆದರೆ, ಅಂತಿಮವಾಗಿ, ಪೊಲೀಸರು ಅವನನ್ನು ಹಿಡಿದರು ಮತ್ತು ಪಿಸ್ತೂಲ್ ಅನ್ನು ಅವನ ಸ್ವಾಧೀನದಿಂದ ವಶಪಡಿಸಿಕೊಂಡರು’’ ಎಂದು ಅಧಿಕಾರಿ ಮಾಹಿತಿ ನೀಡಿದ್ದಾರೆ.
ಇದನ್ನೂ ಓದಿ: Bengaluru: ಹೀಗೂ ಉಂಟು..! ಪತ್ನಿ ತಡವಾಗಿ ಏಳ್ತಾಳೆ ಎಂದು ಪತಿಯಿಂದ ಪೊಲೀಸರಿಗೆ ದೂರು
ಅಲ್ಲದೆ, ಈ ಸಂಬಂಧ ಅ ವ್ಯಕ್ತಿ ವಿರುದ್ಧ ಐಪಿಸಿ ಸೆಕ್ಷನ್ 307, 394, 397, 186 ಮತ್ತು 353 ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ. "ಕ್ರಿಶನ್ ಶೆರ್ವಾಲ್ ಪ್ರಸ್ತುತ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ. ಎಂಎಸ್ ಪಾರ್ಕ್ ಪೊಲೀಸ್ ಠಾಣೆಯಲ್ಲಿ ಐಪಿಸಿ ಸೆಕ್ಷನ್ 307, 394, 397, 186 ಮತ್ತು 353 ಹಾಗೂ ಶಸ್ತ್ರಾಸ್ತ್ರ ಕಾಯ್ದೆಯ ಸೆಕ್ಷನ್ 27 ರ ಅಡಿಯಲ್ಲಿ ಪ್ರಕರಣ ದಾಖಲಾಗಿದೆ. ಶೆರ್ವಾಲ್ ತನ್ನ ಪತ್ನಿಯಿಂದ ಬೇರ್ಪಟ್ಟಿದ್ದು, ಖಿನ್ನತೆಯ ಸ್ಥಿತಿಯಲ್ಲಿದ್ದಾನೆ" ಎಂದು ಅಧಿಕಾರಿ ಹೇಳಿದರು. ಈ ಪ್ರಕರಣ ಸಂಬಂಧ ಹೆಚ್ಚಿನ ತನಿಖೆ ನಡೆಯುತ್ತಿದೆ ಎಂದೂ ತಿಳಿದುಬಂದಿದೆ.
ಇದನ್ನೂ ಓದಿ: 5 ವರ್ಷದ ನಿರಂತರ ಸಮ್ಮತಿ ಲೈಂಗಿಕ ಕ್ರಿಯೆ ಅತ್ಯಾಚಾರವಲ್ಲ: ಕರ್ನಾಟಕ ಹೈಕೋರ್ಟ್