ಟ್ಯೂಷನ್‌ಗೆ ಹೊರಟಿದ್ದ ಬಾಲಕಿ ಅಪಹರಣ ಯತ್ನ: ಆರೋಪಿ ಬಂಧನ

By Kannadaprabha News  |  First Published Jul 13, 2023, 10:15 AM IST

ನಗರದಲ್ಲಿ ಹಾಡುಹಗಲೇ ಬಾಲಕಿಯನ್ನು ಅಪಹರಣಕ್ಕೆ ಯತ್ನಿಸಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ಓರ್ವ ವ್ಯಕ್ತಿಯನ್ನು ಬಂಧಿಸಿರುವ ನಗರ ಪೊಲೀಸರು ತೀವ್ರ ವಿಚಾರಣೆಗೊಳಪಡಿಸಿದ್ದಾರೆ. ಇಲ್ಲಿನ ಮಾಳಮಾರುತಿ ನಗರದ ಗಜಾನನ ಪಾಟೀಲ (35) ಬಂಧಿತ. 


ಬೆಳಗಾವಿ (ಜು.13): ನಗರದಲ್ಲಿ ಹಾಡುಹಗಲೇ ಬಾಲಕಿಯನ್ನು ಅಪಹರಣಕ್ಕೆ ಯತ್ನಿಸಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ಓರ್ವ ವ್ಯಕ್ತಿಯನ್ನು ಬಂಧಿಸಿರುವ ನಗರ ಪೊಲೀಸರು ತೀವ್ರ ವಿಚಾರಣೆಗೊಳಪಡಿಸಿದ್ದಾರೆ. ಇಲ್ಲಿನ ಮಾಳಮಾರುತಿ ನಗರದ ಗಜಾನನ ಪಾಟೀಲ (35) ಬಂಧಿತ. ನಗರದ ಹಿಂದವಾಡಿ ಪ್ರದೇಶದಲ್ಲಿರುವ ಅಂಚೆ ಕಚೇರಿ ಹತ್ತಿರ ಮಂಗಳವಾರ ಸಂಜೆ ಟ್ಯೂಷನ್‌ಗೆಂದು ಹೋಗುತ್ತಿದ್ದ 9 ವರ್ಷ ಬಾಲಕಿಗೆ ಚಾಕೋಲೆಟ್‌ ಕೊಡುವುದಾಗಿ ಆಮಿಷಯೊಡ್ಡಿದ್ದಾನೆ. ಬಳಿಕ ಬಾಲಕಿಯನ್ನು ಅಪಹರಣ ಮಾಡುವ ಉದ್ದೇಶದಿಂದ ಹೆಗಲ ಮೇಲೆ ಹೊತ್ತುಕೊಂಡು ಓಡುತ್ತಿದ್ದ ವೇಳೆ ಬಾಲಕಿ ಆತನಿಗೆ ಹೊಡೆದಿದ್ದಾಳೆ. 

ಬಳಿಕ ಕೂಗಾಟ, ಚೀರಾಟ ನಡೆಸಿದ್ದಾಳೆ. ಬಾಲಕಿಯ ಧ್ವನಿ ಕೇಳಿದ ಸ್ಥಳೀಯರು ಅಪಹರಣಕಾರರನ್ನು ಬೆನ್ನು ಬಿಳುತ್ತಿದ್ದಂತೆ ಬಾಲಕಿಯನ್ನು ಬಿಟ್ಟು ಪರಾರಿಯಾಗಿದ್ದಾನೆ. ಬಾಲಕಿಯನ್ನು ಅಪಹರಿಸಿಕೊಂಡು ಹೋಗುತ್ತಿರುವ ದೃಶ್ಯ ಸ್ಥಳೀಯ ಕಟ್ಟಡಯೊಂದರಲ್ಲಿರುವ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಬಾಲಕಿ ಅಪಹರಣ ಯತ್ನ ಪ್ರಕರಣದ ಸುದ್ದಿ ನಗರದಲ್ಲಿ ವೈರಲ್‌ ವಾಗುತ್ತಿದ್ದಂತೆ ನಗರದ ಜನತೆ ಬೆಚ್ಚಿ ಬಿಳ್ಳುವಂತ ಪರಿಸ್ಥಿತಿ ಉದ್ಬವವಾಗಿತ್ತು. ಬಾಲಕಿ ಪೋಷಕರು ಹಾಗೂ ಸ್ಥಳೀಯರು ಟಿಳಕವಾಡಿ ಪೊಲೀಸ್‌ ಠಾಣೆಗೆ ಅಪಕರಣಕ್ಕೆ ಯತ್ನಿಸಿರುವ ಕುರಿತು ದೂರು ನೀಡಿದ್ದಾರೆ. ಬಳಿಕ ಇಂತಹ ಘಟನೆಗಳು ನಡೆಯದಂತೆ ಕ್ರಮಕೈಗೊಳ್ಳಬೇಕು ಎಂದು ಆಗ್ರಹಿಸಿದರು.

Tap to resize

Latest Videos

ಜನಬೆಂಬಲ ಸಹಿಸದೆ ರಾಹುಲ್‌ ವಿರುದ್ಧ ಕೇಂದ್ರ ಕುತಂತ್ರ: ಡಿಕೆಶಿ

ಈ ಘಟನೆಯಿಂದಾಗಿ ಎಚ್ಚೆತ್ತ ನಗರ ಪೊಲೀಸ್‌ ಅಧಿಕಾರಿಗಳು ತಕ್ಷಣ ಉದ್ಯಮಬಾಗ ಪೊಲೀಸ್‌ ಠಾಣೆಯ ಪೊಲೀಸ್‌ ಇನಸ್ಪೆಕ್ಟರ್‌ ರಾಮಣ್ಣ ಬಿರಾದಾರ ನೇತೃತ್ವದಲ್ಲಿ ವಿಶೇಷ ತಂಡವನ್ನು ರಚನೆ ಮಾಡಿದ್ದಾರೆ. ಬಳಿಕ ನಗರದಲ್ಲಿರುವ ಎಲ್ಲ ಠಾಣೆಯ ಪ್ರತಿ ಅಧಿಕಾರಿ ಹಾಗೂ ಸಿಬ್ಬಂದಿಗೂ ಮಾಹಿತಿ ನೀಡಿದ್ದಾರೆ. ಹಿರಿಯ ಅಧಿಕಾರಿಗಳ ಸೂಚನೆಯಂತೆ ಪೊಲೀಸರು ನಗರ ಗಲ್ಲಿ ಗಲ್ಲಿಗಳಲ್ಲಿ ಶೋಧ ಕಾರ್ಯ ನಡೆಸಿದ್ದಾರೆ. ಈ ವೇಳೆ ಅಪಹರಣಕ್ಕೆ ಯತ್ನಿಸಿದ ವ್ಯಕ್ತಿ ಪಶ್ಚಿಮ ಬಂಗಾಳ ಮೂಲದವನಾಗಿರಬಹುದು. ಜತೆಗೆ ನೆರೆಯ ಗೋವಾ ಅಥವಾ ಮಹಾರಾಷ್ಟ್ರದತ್ತ ಪ್ರಯಾಣ ಬೆಳೆಸಿರುವ ಚರ್ಚೆ ನಡೆಯುವುದರ ಜತೆಗೆ ಶಂಕೆಯನ್ನು ಪೊಲೀಸರು ವ್ಯಕ್ತಪಡಿಸಿದ್ದರು.

ಪೊಲೀಸರು ಬಿಸಿದ ಬಲೆಗೆ ಮಾರ್ಕೇಟ್‌ ಪೊಲೀಸ್‌ ಠಾಣಾ ವ್ಯಾಪ್ತಿಯ ಖಡೇಬಜಾರನಲ್ಲಿ ವ್ಯಕ್ತಿ ಇರುವ ಬಗ್ಗೆ ಮಾಹಿತಿ ಕಲೆ ಹಾಕಿದ ಪೊಲೀಸರು ಪ್ರಕರಣ ದಾಖಲಾದ ಕೇವಲ 12 ಗಂಟೆಯೊಳಗೆ ಆರೋಪಿಯನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಬಂಧಿತ ಗಜಾನನ ಪಾಟೀಲನನ್ನು ಉದ್ಯಮಬಾಗ ಪೊಲೀಸ್‌ ಠಾಣೆಗೆ ಕರೆದೊಯ್ದು ಖಡೇಬಜಾರ ಎಸಿಪಿ ಅರುಣ್‌ಕುಮಾರ ಕೋಳೂರ ಹಾಗೂ ತನಿಖಾಧಿಕಾರಿ ರಾಮಣ್ಣ ಬಿರಾದಾರ ತೀವ್ರ ವಿಚಾರಣೆಗೊಳಪಡಿಸಿದ್ದಾರೆ. ಈ ವೇಳೆ ಈತ ಬೆಳಗಾವಿಯ ಮಾಳಮಾರುತಿ ನಗರದ ನಿವಾಸಿ ಎಂದು ತಿಳಿಸಿದ್ದರಿಂದ ಪೊಲೀಸರು ಸ್ವಲ್ಪ ಮಟ್ಟಿಗೆ ನಿರಾಳರಾಗಿದ್ದಾರೆ. ಬಳಿಕ ಡಿಸಿಪಿ ಶೇಖರ್‌.ಎಚ್‌.ಟಿ ಅವರು ಉದ್ಯಮಬಾಗ ಪೊಲೀಸ್‌ ಠಾಣೆಗೆ ತೆರಳಿ ವಿಚಾರಣೆ ನಡೆಸಿದ್ದಾರೆ. ಈ ಸಮಯದಲ್ಲಿ ಆತ ಬಾಲಕಿ ಸುಂದರವಾಗಿದ್ದರಿಂದ ಎತ್ತುಕೊಂಡಿದ್ದೆ ಎಂದು ತಿಳಿಸಿದ್ದಾರೆ. ಮತ್ತಷ್ಟು ವಿಚಾರಣೆ ನಡೆಸಿದ ಸಮಯದಲ್ಲಿ ಆತನಿಗೆ ಆ ಕ್ಷಣಕ್ಕೆ ತಲೆಯಲ್ಲಿ ಏನು ಹೊಳೆಯುತ್ತದೇಯೂ ಅದನ್ನೇ ಮಾಡುತ್ತಿದ್ದನು ಎಂಬ ಬಗ್ಗೆ ಮಾಹಿತಿ ಲಭ್ಯವಾಗಿದೆ.

12 ಮದುವೆ, 6 ಮಕ್ಕಳು: ಬಗೆದಷ್ಟೂ ಬಯಲಾಗುತ್ತಿದೆ ಮಹೇಶನ ಕರ್ಮಕಾಂಡ...

ಬಾಲಕಿ ಅಪಹರಣ ಯತ್ನ ಪ್ರಕರಣ ಸಂಬಂಧಿಸಿದಂತೆ ಓರ್ವನನ್ನು ಬಂಧಿಸಿ ಆತನನ್ನು ವಿವಾರಣೆಗೊಪಡಿಸಲಾಗಿದೆ. ನಗರದಲ್ಲಿ ಮಕ್ಕಳ ಕಳ್ಳರ ಯಾವುದೇ ಗ್ಯಾಂಗ್‌ ಇಲ್ಲ. ಆದ್ದರಿಂದ ನಗರದ ಜತೆಗೆ ಭಯ ಪಡಬೇಕಿಲ್ಲ. ಅಂತಹ ವ್ಯಕ್ತಿಗಳ ಬಗ್ಗೆ ಮಾಹಿತಿ ಅಥವಾ ಅನುಮಾನ ಇದ್ದಲ್ಲಿ ತಕ್ಷಣ ಸ್ಥಳೀಯ ಅಥವಾ ಹಿರಿಯ ಪೊಲೀಸ ಅಧಿಕಾರಿಗಳ ಗಮನಕ್ಕೆ ತಂದಲ್ಲಿ ತ್ವರಿತ ಕ್ರಮ ಜರುಗಿಸಲು ಅನುಕೂಲವಾಗಲಿದೆ.
-ಶೇಖರ್‌.ಎಚ್‌.ಟಿ, ಡಿಸಿಪಿ ಕಾನೂನು ಸುವ್ಯವಸ್ಥೆ ವಿಭಾಗ.

click me!