ಹೊಸ ವರ್ಷಕ್ಕೆ ಪಾರ್ಟಿ ಮಾಡಲು ದರೋಡೆ ಮಾಡಿಸಿದವ ಅದೊಂದು ತಪ್ಪಿನಿಂದ ಸಿಕ್ಕಿಬಿದ್ದ

By Suvarna NewsFirst Published Jan 1, 2021, 3:12 PM IST
Highlights

ಹೊಸ ವರ್ಷ ಸಂಭ್ರಮಾಚರಣೆ ಮಾಡಲು  ಹಣಕ್ಕಾಗಿ ದರೋಡೆ/ ತಾನೇ ದರೋಡೆ ಮಾಡಿಸಿ ಪೊಲೀಸರಿಗೆ ಕರೆ ಮಾಡಿದ/ ವಿಚಾರಣೆ ವೇಳೆ ಸತ್ಯ ಬಯಲು/ ಸ್ನೇಹಿತರನ್ನು ಬಳಸಿಕೊಂಡು ದರೋಡೆ ಮಾಡಿಸಿದ್ದ

ನವದೆಹಲಿ(ಜ. 01)  ಹೊಸ ವರ್ಷದ ನಡೆಸಲು ಹಣಕ್ಕಾಗಿ ದರೋಡೆ ನಡೆಸಿದ ವ್ಯಕ್ತಿಯನ್ನು ಬಂಧಿಸಲಾಗಿದೆ.  ದರೋಡೆಕೋರ ಮತ್ತು ಆತನ ಸ್ನೇಹಿತ ಪೊಲೀಸರ ಬಲೆಗೆ ಬಿದ್ದಿದ್ದಾರೆ.  22 ವರ್ಷದ ಮಿಲ್ಕ್ ಮ್ಯಾನ್ ಬಂಧಿತ ಆರೋಪಿ. ಶಿಮ್ಲಾ ಪ್ರವಾಸಕ್ಕಾಗಿ ದರೋಡೆ ನಡೆಸಿದ್ದ. 

ಪ್ರಕರಣದಲ್ಲಿ ವಿಚಿತ್ರ ಎಂದರೇ ದರೋಡೆ ಮಾಡಿದವರೆ ಪೊಲೀಸರಿಗೆ ಕರೆ ಮಾಡಿ ದರೋಡೆ ನಡೆದಿದೆ ಎಂದು ಮಾಹಿತಿ ಕೊಟ್ಟಿದ್ದರು. ಪೊಲೀಸರಿಗೆ ಕರೆ ಮಾಡಿದ್ದ  ಫೈಜ್ ಅಹ್ಮದ್ ಸಿದ್ದಿಕಿ ಮತ್ತು ಮೊಹಮ್ಮದ್ ಸಾದಿಕ್ (21) ಯನ್ನು ಅನುಮಾನದ ಮೇಲೆ ಪ್ರತ್ಯೇಕವಾಗಿ ವಿಚಾರಣೆ ನಡೆಸಿದಾಗ ಅಸಲಿ ಬಣ್ಣ ಬಯಲಾಗಿದೆ.

ಚಿನ್ನ, ನಗದು ಹೊತ್ತೊಯ್ದ ನವವಧು.. ಹಣವೂ ಇಲ್ಲ.. ಹೆಂಡತಿಯೂ ಇಲ್ಲ

 ಫೈಜ್ ಅಹ್ಮದ್ ಸಿದ್ದಿಕಿ  ಮತ್ತು ಹಣ ಕಳೆದುಕೊಂಡ ಗುಜ್ಜರ್ ಒಂದೇ ಕಡೆ  ಕೆಲಸ ಮಾಡುತ್ತಿದ್ದವರು. ಹಾಲು ಸರಬರಾಜು ಮಾಡಿ ಹಣದೊಂದಿಗೆ ವಾಪಸ್ ಆಗುತ್ತಿದ್ದಾಗ ಗುಜ್ಜಾರ್ ಮೂತ್ರ ವಿಸರ್ಜನೆಗೆಂದು ತೆರಳಿದ್ದಾರೆ. ಈ ವೇಳೆ ಮೋಟಾರ್  ಬೈಕ್ ನಲ್ಲಿ ಬಂದವರು ಇವರ ಬಳಿ ಇದ್ದ ಹಣ ಕಸಿದುಕೊಂಡು ಪರಾರಿಯಾಗಿದ್ದಾರೆ.  ಈ ವೇಳೆ ಫೈಜ್ ಅಹ್ಮದ್ ಸಿದ್ದಿಕಿ ಅಲ್ಲಿಯೇ ಇದ್ದ.

ವಿಚಾರಣೆ ನಡೆಸಿದಾಗ ಸಿದ್ದಕಿ ಮೊಬೈಲ್ ನಲ್ಲಿ ಎಸ್ ಅಕ್ಷರದ ನಂಬರ್ ಸೇವ್ ಇದ್ದು ಅದರಿಂದ ನಿರಂತರ ಕರೆಗಳು ಬರುತ್ತಿದೆ ಎಂಬ ಮಾಹಿತಿ ಲಭ್ಯವಾಗಿದೆ. ಪೊಲೀಸರು ವಿಚಾರಣೆ ನಡೆಸಿದಾಗ ಸಾದಿಕ್  ಜತೆಗಿನ ಸ್ನೇಹ ಬಾಯಿಬಿಟ್ಟಿದ್ದಾನೆ.

ಹೊಸ ವರ್ಷ ಸಂಭ್ರಮ ಆಚರಣೆ ಮಾಡಲು ಶಿಮ್ಲಾಕ್ಕೆ ತೆರಳಬೇಕಾಗಿತ್ತು. ಕೈಯಲ್ಲಿ ಕಾಸಿರದ ಕಾರಣ ಇಂಥ ಕೆಲಸ ಮಾಡಬೇಕಾಯಿತು ಎಂದು ಪೊಲೀಸರ ಮುಂದೆ   ಹೇಳಿದ್ದಾನೆ.   ಬಂಧಿತರಿಂದ 65,000 ರೂ. ವಶಕ್ಕೆ ಪಡೆದುಕೊಳ್ಳಲಾಗಿದೆ. ತಪ್ಪಿಸಿಕೊಂಡಿರುವ ಇನ್ನೂ ಮೂವರಿಗಾಗಿ ಪೊಲೀಸರು ಬಲೆ ಬೀಸಿದ್ದಾರೆ.

click me!