
ನವದೆಹಲಿ (ಮಾ. 03) ರಾಜಧಾನಿಯಲ್ಲಿ ವಕೀಲರೊಬ್ಬರು ವಂಚನೆಗೆ ಒಳಗಾಗಿದ್ದಾರೆ. ಕ್ರೆಡಿಟ್ ಕಾರ್ಡ್ ವಂಚನೆಗೆ ಬಲಿಯಾಗಿ ಒಂದು ಲಕ್ಷ ರೂ. ಕಳೆದುಕೊಂಡಿದ್ದಾರೆ.
ಪ್ರಕರಣಕ್ಕೆ ಸಂಬಂಧಿಸಿ ದೆಹಲಿ ಪೊಲೀಸರು 21 ವರ್ಷದ ತುಸಾರ್ ತ್ಯಾಗಿ ಎಂಬಾತನ ಬಂಧಿಸಿದ್ದಾರೆ. ಅಡ್ವೋಕೆಟ್ ಸದಾಬ್ ಖಾನ್ ಮಾಲ್ವಿಯಾ ನಗರ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದರು.
ವಂಚನೆ ಹೇಗೆ: ನಿಮ್ಮ ಕ್ರೆಡಿಟ್ ಕಾರ್ಡ್ ಪಾಯಿಂಟ್ ಗಳನ್ನು ರೀಡಿಮ್ ಮಾಡಿಕೊಳ್ಳಿ ಎಂದು ವಕೀಲರ ಮೊಬೈಲ್ ಗೆ ಟೆಕ್ಸ್ಟ್ ಸಂದೇಶವೊಂದು ಬಂದಿದೆ. ಅದನ್ನು ಒಪನ್ ಮಾಡಿ ಡಿಟೇಲ್ಸ್ ತುಂಬಿದಾಗ ವಕೀಲರ ಕ್ರೆಡಿಟ್ ಕಾರ್ಡ್ ನಿಂದ ಒಂದು ಲಕ್ಷ ರೂ. ಕಡಿತವಾಗಿದೆ.
ಹಣ ಕದ್ದು ಪ್ರೆಯಸಿಯೊಂದಿಗೆ ಟೂರ್ ಗೆ ಹಾರಿದ್ದ
ಮೆಸೇಜ್ ಸರ್ವೀಸ್ ಒಂದನ್ನು ಬಳಸಿಕೊಂಡು ಆರೋಪಿ ಸಂದೇಶ ರವಾನೆ ಮಾಡಿದ್ದಾನೆ. ವಕೀಲರು ಸಂದೇಶ ತೆರೆದಾಗ ಅವರ ಖಾತೆ ಸ್ಕಾನ್ ಆಗಿದ್ದು ಅಲ್ಲಿಂದ ಈತನ ಪೆಟಿಎಂ ಖಾತೆಗೆ ಹಣ ಹಾಕಿಸಿಕೊಂಡಿದ್ದಾನೆ. ಕೆಲವನ್ನು ಗಿಫ್ಟ್ ವೋಚರ್ ಗಳಾಗಿ, ಬ್ರ್ಯಾಂಡೆಡ್ ಎಲೆಕ್ಟ್ರಾನಿಕ್ ವಸ್ತುಗಳ ಖರೀದಿಗೆ ಬಳಿಸಿದ್ದಾನೆ.
ತನಿಖೆಯಲ್ಲಿ ಮೊದಲಿಗೆ ಎಲೆಕ್ಟ್ರಾನಿಕ್ ಅಂಗಡಿ ಮಾಲೀಕನ ವಿಚಾರಣೆ ಮಾಡಿದ್ದು ನೀನು ಈ ವೋಚರ್ ಗಳನ್ನು ಎಲ್ಲಿಂದ ಪಡೆದುಕೊಂಡೆ ಎಂದಾಗ ಒಂದೊಂದೆ ಮಾಹಿತಿ ಗೊತ್ತಾಗುತ್ತ ಹೋಗಿದೆ.
ಲಾಕ್ ಡೌನ್ ಸಂದರ್ಭ ಪರಿಚಯವಾದ ವಿಶಾಲ್ ಕ್ರೆಡಿಟ್ ಕಾರ್ಡ್ ಹಣ ಹೇಗೆ ವಂಚನೆ ಮಾಡಬೇಕು ಎಂಬ ವಿಚಾರ ಹೇಳಿಕೊಟ್ಟಿದ್ದ ಎಂದು ಆರೋಪಿ ಬಾಯಿ ಬಿಟ್ಟಿದ್ದಾನೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ