ಮದ್ಯ ಕೊಡಿಸುವ ವಿಚಾರಕ್ಕೆ ಕಿರಿಕ್, ಹತ್ಯೆ/ ಹತ್ಯೆ ನಡೆದ ಕೆಲವೇ ಗಂಟೆಗಳಲ್ಲಿ ಆರೋಪಿಗಳು ಅರೆಸ್ಟ್/ ಹಲಸೂರು ಪೊಲೀಸರ ಕಾರ್ಯಾಚರಣೆಯಿಂದ ಆರೋಪಿಗಳ ಬಂಧನ ನಾಗರಾಜ್ ಹಾಗೂ ಮನು ಬಂಧಿತ ಆರೋಪಿಗಳು ಕೊಲೆ ಮಾಡಿದ 24 ಗಂಟೆಗಳಲ್ಲಿ ಆರೋಪಿಗಳ ಬಂಧನ
ಬೆಂಗಳೂರು(ಮಾ. 03) ಎಣ್ಣೆ ಕೊಡಿಸುವ ವಿಚಾರಕ್ಕೆ ಕಿರಿಕ್ ಆಗಿದ್ದು ಪ್ರಕರಣ ಕೊಲೆಯಲ್ಲಿ ಅಂತ್ಯವಾಗಿದೆ. ಹತ್ಯೆ ನಡೆದ ಕೆಲವೇ ಗಂಟೆಗಳಲ್ಲಿ ಆರೋಪಿಗಳನ್ನು ಅರೆಸ್ಟ್ ಮಾಡಲಾಗಿದೆ.
ಹಲಸೂರು ಪೊಲೀಸರು ಆರೋಪಿಗಳನ್ನು ಬಂಧಿಸಿದ್ದಾರೆ. ನಾಗರಾಜ್ ಹಾಗೂ ಮನು ಬಂಧಿತ ಆರೋಪಿಗಳು. ಕೊಲೆ ಮಾಡಿದ 24 ಗಂಟೆಗಳಲ್ಲಿ ಆರೋಪಿಗಳ ಬಂಧನವಾಗಿದೆ ಕಳೆದ ತಿಂಗಳ 28ರಂದು ನಡೆದಿದ್ದ ಹತ್ಯೆ ಬೆಳಕಿಗೆ ಬಂದಿದೆ.
ದೊಡ್ಡವರ ಅಫೇರ್ ಗೆ ಬಲಿಯಾದ ಕಿರಿಯರ ಜೀವ
ಕ್ಷುಲ್ಲಕ ಕಾರಣಕ್ಕೆ ಸ್ಟಿಫನ್ ಎಂಬಾತನ ಹತ್ಯೆ ನಡೆದಿತ್ತು. ಪ್ರತಿವಾರಕ್ಕೊಮ್ಮೆ ಮೂರು ಜನ ಸೇರಿ ಎಣ್ಣೆ ಪಾರ್ಟಿ ಮಾಡುತಿದ್ದರು. ಅದೇ ರೀತಿ ಕಳೆದ ಭಾನುವಾರ ಸಹ ಮೂರು ಜನ ಒಟ್ಟಾಗಿ ಸೇರಿದ್ದರು ದೊಮ್ಮಲೂರಿನ ಬಯಲು ರಂಗ ಮಂದಿರದಲ್ಲಿ ಸೇರಿದ್ದ ಮೂವರಲ್ಲಿ ಜಗಳ ಆರಂಭವಾಗಿದೆ. ಮದ್ಯ ಕೊಡಿಸಿಲ್ಲ ಎಂದು ಆರೋಪ ಮಾಡಿಕೊಂಡಿದ್ದಾರೆ. ಆರೋಪಿಗಳಿಬ್ಬರು ಸ್ಟೀಫನ್ ಮೇಲೆ ಹಲ್ಲೆ ಮಾಡಿದ್ದಾರೆ. ನಂತರ ಬಯಲು ರಂಗಮಂದಿರದ ಒಳಭಾಗದಲ್ಲಿರುವ ಕಾಲುವೆಗೆ ತಳ್ಳಿದ್ದಾರೆ.
ಇಷ್ಟಕ್ಕೆ ಸುಮ್ಮನಾಗದೆ ತಲೆಯ ಮೇಲೆ ಸಿಮೆಂಟ್ ಇಟ್ಟಿಗೆ ಹಾಕಿ ಹತ್ಯೆ ಮಾಡಿದ್ದಾರೆ. ಕೃತ್ಯ ಎಸಗಿ ನಾಪತ್ತೆಯಾಗಿದ್ದ ಆರೋಪಿಗಳನ್ನು ಸಿಸಿಟಿವಿ ಮಾಹಿತಿ ಆಧರಿಸಿ ಬಂಧಿಸಲಾಗಿದೆ.