
ಬೆಂಗಳೂರು(ಮಾ. 03) ರಮೇಶ್ ಜಾರಕಿಹೊಳಿ ಸಿಡಿ ಬಹಿರಂಗ ಮಾಡಿ ದೂರು ಕೊಟ್ಟಿದ್ದ ದಿನೇಶ್ ಕಲ್ಲಹಳ್ಳಿ ವಿರುದ್ಧವೇ ದೂರು ದಾಖಲಾಗಿದೆ. ಕರ್ನಾಟಕ ಕನ್ನಡಪರ ಸಂಘಟನೆ ಒಕ್ಕೂಟ ಸಂಸ್ಥಾಪಕ ಅಧ್ಯಕ್ಷ ಪಟ್ಟೇಗೌಡ ದೂರು ನೀಡಿದ್ದಾರೆ.
ಕಬ್ಬನ್ ಪಾರ್ಕ್ ಠಾಣೆಗೆ ಕಂಪ್ಲೆಂಟ್ ಕೊಟ್ಟಿದ್ದಾರೆ. ಇದು ಇಬ್ಬರ ಸಮ್ಮತಿಯಿಂದ ನಡೆದಿರುವ ದೈಹಿಕ ಕ್ರಿಯೆ. ರಮೇಶ್ ಜಾರಕಿಹೊಳಿ ಖಾಸಗಿ ವಿಡಿಯೋ ವೈರಲ್ ಮಾಡಿಸಿದ್ದಾರೆ. ದಿನೇಶ್ ಕಲ್ಲಹಳ್ಳಿಗೂ ಈ ವಿಡಿಯೋಗೂ ಏನು ಸಂಬಂಧ? ಅವರ ಚಾರಿತ್ರ್ಯ ವಧೆ ಮಾಡಲು ನಡೆದಿರುವ ಕುತಂತ್ರ ಇದು. ಅವರ ಖಾಸಗಿ ಜೀವನದಲ್ಲಿ ಏನನ್ನು ಬೇಕಾದ್ರೂ ಮಾಡಿಕೊಳ್ಳಬಹುದು. ಅದನ್ನ ಚಿತ್ರೀಕರಿಸಿ ಬಿತ್ತರಿಸಿರೋದು ತಪ್ಪು ಎಂದು ಆರೋಪಿಸಿದ್ದಾರೆ.
'ಇದು ಪಕ್ಕಾ ಹನಿ ಟ್ರ್ಯಾಪ್... ರಮೇಶ್ ಅವರೇ ಇಲ್ಲಿ ಸಂತ್ರಸ್ತ'!
ಯುವತಿಗೆ ಅನ್ಯಾಯವಾಗಿದ್ದರೇ ಆಕೆಯೇ ದೂರು ನೀಡಬಹುದಿತ್ತಲ್ವಾ? ತಕ್ಷಣ ದಿನೇಶ್ ಕಲ್ಲಹಳ್ಳಿ ಬಂಧಿಸಿ ವಿಚಾರಣೆ ನಡೆಸಬೇಕೆಂದು ಆಗ್ರಹಿಸಲಾಗಿದೆ. ಒಟ್ಟಿನಲ್ಲಿ ಸಿಡಿ ಪ್ರಕರಣ ಒಂದು ಕಡೆ ರಾಜಕೀಯ ಸಂಚಲನ ತಂದಿದ್ದು ರಮೇಶ್ ಜಾರಕಿಹೊಳಿ ತಮ್ಮ ಸಚಿವ ಸ್ಥಾನಕ್ಕೆ ರಾಜೀನಾಮೆಯನ್ನು ನೀಡಿದ್ದಾರೆ.
"
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ