ಬಾಯ್‌ಫ್ರೆಂಡ್ ಎದುರೇ ಕಾಲೇಜು ವಿದ್ಯಾರ್ಥಿನಿ ಮೇಲೆ ಐವರಿಂದ ಗ್ಯಾಂಗ್ ರೇಪ್!

By Suvarna News  |  First Published Jan 14, 2023, 4:12 PM IST

ಬಾಯ್‌ಫ್ರೆಂಡ್ ಜೊತೆ ಹೊರಗಡೆ ಹೋಗಿದ್ದ ಕಾಲೇಜು ವಿದ್ಯಾರ್ಥಿನಿ ಮೇಲೆ ಐವರು ಕಾಮುಕರು ಅತ್ಯಾಚಾರವೆಸಗಿದ ಭೀಕರ ಘಟನೆ ನಡೆದಿದೆ. ಬಾಯ್‌ಫ್ರೆಂಡ್‌ಗೆ ಹಲ್ಲೆ ಮಾಡಿ, ವಿದ್ಯಾರ್ಥಿನಿ ಮೇಲೆ ರೇಪ್ ಮಾಡಿದ್ದಾರೆ. 


ಚೆನ್ನೈ(ಜ.14): ಖಾಸಗಿ ಕಾಲೇಜಿನಲ್ಲಿ ವ್ಯಾಸಂಗ ಮಾಡುತ್ತಿದ್ದ 19 ವರ್ಷದ ವಿದ್ಯಾರ್ಥಿನಿ ತನ್ನ ಬಾಯ್‌ಫ್ರೆಂಡ್ ಜೊತೆ ಹೊರಗಡೆ ಹೋಗಿದ್ದಾಳೆ. ನಿರ್ಜನ ಪ್ರದೇಶದಲ್ಲಿ ಇವರನ್ನು ಅಡ್ಡಹಾಕಿದ ಐವರ ಗ್ಯಾಂಗ್, ಬಾಯ್‌ಫ್ರೆಂಡ್ ಮೇಲೆ ಹಲ್ಲೆ ಮಾಡಿದ್ದಾರೆ. ಬಳಿಕ ವಿದ್ಯಾರ್ಥಿನಿಯ ಮೇಲೆ ಐವರು ಗ್ಯಾಂಗ್ ರೇಪ್ ನಡೆಸಿದ್ದಾರೆ. ಸಹಕರಿಸಿದಿದ್ದರೆ ಚಾಕುವಿನಲ್ಲಿ ಹತ್ಯೆ ಮಾಡಿ ಇಲ್ಲೇ ಸುಟ್ಟು ಭಸ್ಮಮಾಡುವುದಾಗಿ ಬೆದರಿಸಿ ಒಬ್ಬರ ಹಿಂದೊಬ್ಬರು ಅತ್ಯಾಚರ ಎಸಗಿದ್ದಾರೆ. ತಮಿಳುನಾಡಿನ ಕಾಂಚಿಪುರಂ ಜಿಲ್ಲೆಯಲ್ಲಿ ಈ ಘಟನೆ ನಡೆದಿದೆ. ಪ್ರಕರಣ ಸಂಬಂಧ ಪೊಲೀಸರು ಐವರನ್ನು ಬಂಧಿಸಿದ್ದು, 6ನೇ ಆರೋಪಿಗಾಗಿ ಹುಡುಕಾಟ ಆರಂಭಗೊಂಡಿದೆ. 

ಖಾಸಗಿ ಕಾಲೇಜಿನಲ್ಲಿ ಬಿಬಿಎ ಹಾಗೂ ಬಿಕಾಂ ಒದುತ್ತಿದ್ದ ವಿದ್ಯಾರ್ಥಿನಿ(College Student) ಹಾಗೂ ಆಕೆಯ ಬಾಯ್‌ಫ್ರೆಂಡ್ (Boyfriend) ಸಂಜೆ 6 ಗಂಟೆಗೆ ಹೊರಗಡೆ ಹೋಗಿದ್ದಾರೆ. ಪುದುಚೇರಿ-ಬೆಂಗಳೂರು ರಸ್ತೆಯಲ್ಲಿ 2 ಕಿಲೋಮೀಟರ್ ಮುಂದೆ ಸಾಗಿದ್ದಾರೆ. ಕಾಂಚಿಪುರಂ(Kancheepuram Gang Rape Case) ಜಿಲ್ಲೆಯ ಹೊರವಲಯದ ನಿರ್ಜನ ಪ್ರದೇಶ ತಲುಪುತ್ತಿದ್ದಂತೆ ಕಾಮುಕರ ಗ್ಯಾಂಗ್ ಇವರನ್ನು ಅಡ್ಡಹಾಕಿದೆ. 

Tap to resize

Latest Videos

Maharashtra: 16 ವರ್ಷದ ಬಾಲಕಿ ಮೇಲೆ 12 ಗಂಟೆಗಳ ಕಾಲ ಸಾಮೂಹಿಕ ಅತ್ಯಾಚಾರ; 8 ಮಂದಿ ಬಂಧನ

ಈ ನಿರ್ಜನ ಪ್ರದೇಶದಲ್ಲಿ ಮದ್ಯ ಸೇವನೆ ಮಾಡುತ್ತಿದ್ದ ಕಾಮುಕರ ಗ್ಯಾಂಗ್ ಕಾಲೇಜು ವಿದ್ಯಾರ್ಥಿಗಳನ್ನು ಅಡ್ಡಹಾಕಿದ್ದಾರೆ. ಬಳಿಕ ಬಾಯ್‌ಫ್ರೆಂಡ್ ಮೇಲೆ ಹಲ್ಲೆ ನಡೆಸಿದ್ದಾರೆ. ಬಾಯ್‌ಫ್ರೆಂಡ್‌ನನ್ನು ಇಬ್ಬರು ಹಿಡಿದರೆ ಉಳಿದ ಮೂವರು ವಿದ್ಯಾರ್ಥಿನಿಯನ್ನು ದಾರಿಯಿಂದ ಪಕ್ಕಕ್ಕೆ ಎಳೆದೊಯ್ದು ಒಬ್ಬರ ಹಿಂದೆ ಒಬ್ಬರು ಅತ್ಯಾಚಾರ ಎಸಗಿದ್ದಾರೆ. ಚಾಕು ತೋರಿಸಿ ಸಹಕರಿಸದಿದ್ದರೆ, ಇಲ್ಲೇ ಹತ್ಯೆ ಮಾಡಿ ಸುಟ್ಟು ಭಸ್ಮಮಾಡುವುದಾಗಿ ಬೆದರಿಸಿ ಗ್ಯಾಂಗ್ ರೇಪ್ ಮಾಡಿದ್ದರೆ. 

ಅತ್ಯಾಚಾರ ಎಸಗಿದ ಕಾಮಕರು ಅಲ್ಲಿಂದ ಪರಾರಿಯಾಗಿದ್ದಾರೆ. ಇತ್ತ ವಿದ್ಯಾರ್ಥಿನಿ ಅಸ್ವಸ್ಥಳಾಗಿ ಪ್ರಜ್ಞೆ ತಪ್ಪಿದ್ದಾಳೆ. ಇತ್ತ ಬಾಯ್‌ಫ್ರೆಂಡ್ ತನ್ನ ಸಂಬಂಧಿಗೆ ಕರೆ ಮಾಡಿ ಮಾಹಿತಿ ತಿಳಿಸಿದ್ದಾರೆ. ತಕ್ಷಣವೇ  ಪೊಲೀಸರಿಗೆ ಮಾಹಿತಿ ನೀಡಿದ ಸಂಬಂಧಿ ಸ್ಥಳಕ್ಕೆ ಆಗಮಿಸಿದ್ದಾರೆ. ಬಳಿಕ ವಿದ್ಯಾರ್ಥಿನಿಯನ್ನು ಆಸ್ಪತ್ರೆಗೆ ದಾಖಲಿಸಿದ್ದಾರೆ. ದೂರು ದಾಖಲಿಸಿದ್ದಾರೆ. ಈ ದಾರಿನ ಆಧಾರದಲ್ಲಿ ಐವರನ್ನು ಪೊಲೀಸರು ಬಂಧಿಸಿದ್ದಾರೆ. ಮತ್ತೊರ್ವನಿಗಾಗಿ ಹುಡುಕಾಟ ನಡೆಯತ್ತಿದೆ.

ಅತ್ಯಾಚಾರ ಎಸಗಿರುವ ಕಾಮುಕರ ಮಾಸ್ಕ್ ಹಾಗೂ ತಲೆಗೆ ಸ್ಕಾರ್ಫ್ ಹಾಕಿದ್ದರು. ಹೀಗಾಗಿ ಆರೋಪಿಗಳನ್ನು ಗುರುತು ಹಿಡಿಯಲು ಬಾಯ್‌ಫ್ರೆಂಡ್ ಹಾಗೂ ವಿದ್ಯಾರ್ಥಿನಿಗೆ ಸಾಧ್ಯವಾಗುತ್ತಿಲ್ಲ. ಬಂಧಿತರನ್ನು ಮಣಿಕಂಕಣನ್(22) ವಿಮಲ್ ಕುಮಾರ್(25), ಶಿವಕುಮಾರ್(20) ವಿಗ್ನೇಶ್(22) ಹಾಗೂ ತೆನ್ನರಸು(23) ಎಂದು ಗುರುತಿಸಲಾಗಿದೆ. 

Mumbai News: ಮಹಿಳೆಯ ಖಾಸಗಿ ಅಂಗವನ್ನು ಸಿಗರೇಟ್‌ನಿಂದ ಸುಟ್ಟು, ಕಾಮುಕರಿಂದ ಗ್ಯಾಂಗ್‌ರೇಪ್‌..!

ಜನವರಿ 12ರಂದು ಸಂಜೆ ಈ ಘಟನೆ ನಡೆದಿದೆ. ಸದ್ಯ ಆಸ್ಪತ್ರೆಯಲ್ಲಿ ವಿದ್ಯಾರ್ಥಿನಿ ಚೇತರಿಸಿಕೊಳ್ಳುತ್ತಿದ್ದಾಳೆ. ಆದರೆ ವಿದ್ಯಾರ್ಥಿನಿ ದೈಹಿಕವಾಗಿ ಮಾತ್ರವಲ್ಲ, ಮಾನಸಿಕವಾಗಿಯೂ ಕುಗ್ಗಿಹೋಗಿದ್ದಾಳೆ. ಇತ್ತ ಬಾಯ್‌ಫ್ರೆಂಡ್ ಕೂಡ ಶಾಕ್‌ನಿಂದ ಹೊರಬಂದಿಲ್ಲ. ಪೊಲೀಸರು ಸಿಸಿಟಿವಿ ಸೇರಿದಂತೆ ಹಲವು ದಾಖಲೆ ಪರಿಶೀಲನೆ ನಡೆಸುತ್ತಿದ್ದಾರೆ. ಇದೀಗ ಕಾಂಚೀಪುರಂ ಜಿಲ್ಲೆಯಲ್ಲಿ ಆರೋಪಿಗಳಿಗೆ ಕಠಿಣ ಶಿಕ್ಷೆಗೆ ಆಗ್ರಹಿಸಿ ಪ್ರತಿಭಟನೆ ನಡೆಯುತ್ತಿದೆ. 

ವಿದ್ಯಾರ್ಥಿನಿ ಪೋಷಕರು ಮಗಳನ್ನು ಬಿಗಿದಪ್ಪಿ ಅಳುತ್ತಿರುವ ದೃಶ್ಯಗಳು ಮನಕಲುಕುತ್ತಿವೆ. ಆರೋಪಿಗಳಿಗೆ ಕಠಿಣ ಶಿಕ್ಷೆ ನೀಡುವುದಾಗಿ ಪೊಲೀಸರು ಭರವಸೆ ನೀಡಿದ್ದಾರೆ.  
 

click me!