ಕೆಲಸ ಕೊಟ್ಟ ಬಾಸ್‌ನ ಹೆಂಡ್ತಿ ಜೊತೆ ಉದ್ಯೋಗಿಯ ಅಕ್ರಮ ಸಂಬಂಧ, ವಿಷ್ಯ ಗೊತ್ತಾದ ಮೇಲೆ ಮನೆಗೆ ಕರೆಸಿದ..!

By Santosh Naik  |  First Published Apr 6, 2024, 5:58 PM IST


ದೆಹಲಿಯ ಕನ್ನಾಟ್ ಪ್ಲೇಸ್‌ನಲ್ಲಿನ ಉಪಾಹಾರ ಗೃಹದಲ್ಲಿ ಕೆಲಸ ಮಾಡುತ್ತಿದ್ದ ಸಚಿನ್ ಎನ್ನುವ ವ್ಯಕ್ತಿಯನ್ನು ಹಶೀಬ್‌ ಖಾನ್‌ ಚಾಕುವಿನಿಂದ ಇರಿದು ಕೊಂದಿದ್ದಾನೆ.


ನವದೆಹಲಿ (ಏ.6): ತಾನು ಕೆಲಸ ಮಾಡುತ್ತಿದ್ದ ಮಾಜಿ ಕಂಪನಿಯ ಮಾಲೀಕನ ಜೊತೆಗಿನ ಹಣದ ವಿವಾದ ಹಾಗೂ ಆತನ ಪತ್ನಿಯೊಂದಿಗಿನ ಅಕ್ರಮ ಸಂಬಂಧದ ಕಾರಣಕ್ಕೆ ದೆಹಲಿಯಲ್ಲಿ 22 ವರ್ಷದ ವ್ಯಕ್ತಿಯ ದಾರುಣ ಕೊಲೆಯಾಗಿದೆ. ಈತ ಕನ್ನಾಟ್‌ ಪ್ಲೇಸ್‌ನ ಹೋಟೆಲ್‌ನಲ್ಲಿ ಸದ್ಯ ಕೆಲಸ ಮಾಡುತ್ತಿದ್ದ ಎಂದು ದೆಹಲಿ ಪೊಲೀಸರು ತಿಳಿಸಿದ್ದಾರೆ. ಕನ್ನಾಟ್‌ ಪ್ಲೇಸ್‌ನ ಪ್ರಖ್ಯಾತ ಉಪಹಾರ ಗೃಹದಲ್ಲಿ ಕೆಲಸ ಮಾಡುತ್ತಿದ್ದ ಸಚಿನ್‌ ಕುಮಾರ್‌ ಹೆಸರಿನ ವ್ಯಕ್ತಿ ಕೊಲೆಯಾದ ವ್ಯಕ್ತಿ. ಆತನನ್ನು ಮನೆಗೆ ಕರೆದು, ಹಶೀಬ್‌ ಖಾನ್‌ ಎನ್ನುವ ವ್ಯಕ್ತಿ ಚಾಕುವಿನಿಂದ ಇರಿದು ಸಚಿನ್‌ ಕುಮಾರ್‌ನ ಕೊಲೆ ಮಾಡಿದ್ದಾನೆ ಎನ್ನಲಾಗಿದೆ. 31 ವರ್ಷದ ಹಶೀಬ್‌ ಖಾನ್‌ ದೆಹಲಿಯ ಸಂಗಮ್‌ ನಗರದಲ್ಲಿ ಟಿ-ಶರ್ಟ್‌ ಉತ್ಪಾದನಾ ಕಂಪನಿಯನ್ನು ಹೊಂದಿದ್ದಾನೆ. ಇದೇ ಕಂಪನಿಯಲ್ಲಿ ಸಚಿನ್‌ ಮೊದಲು ಕೆಲಸ ಮಾಡುತ್ತಿದ್ದ. ಘಟನೆಯ ಬೆನ್ನಲ್ಲಿಯೇ ಹಶೀಬ್‌ ಖಾನ್‌ ಹಾಗೂ ಆತನ ಪತ್ನಿ ಶಬೀನಾ ಬೇಗಂರನ್ನು ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಕಳೆದ ಭಾನುವಾರ ಸಚಿನ್‌ ಕುಮಾರ್‌ ಕನ್ನಾಟ್‌ ಪ್ಲೇಸ್‌ನಿಂದ ನಾಪತ್ತೆಯಾಗಿದ್ದ. ಇದರ ಬೆನ್ನಲ್ಲಿಯೇ ಸಚಿನ್‌ ಕುಮಾರ್‌ನ ಕುಟುಂಬ ಸದಸ್ಯರು ನಾಪತ್ತೆ ಪ್ರಕರಣವನ್ನು ದಾಖಲು ಮಾಡಿದ್ದರು ಎಂದು ದೆಹಲಿ ಪೊಲೀಸ್‌ ಉಪ ವರಿಷ್ಠಾಧಿಕಾರಿ ದೇವೇಶ್‌ ಕುಮಾರ್‌ ಮಹಾಲಾ ತಿಳಿಸಿದ್ದಾರೆ.

ತನಿಖೆಯ ವೇಳೆ ಸಚಿನ್‌ ಅವರ ಕೊನೆಯ ಲೊಕೇಷನ್‌ ಸಂಗಮ್‌ ವಿಹಾರ್‌ ಎನ್ನುವುದು ಗೊತ್ತಾಗಿದೆ. ಇದರ ಬೆನ್ನಲ್ಲಿಯೇ ಸಚಿನ್‌ ಕುಮಾರ್‌ನ ಮಾಜಿ ಉದ್ಯೋಗದಾತನಾಗಿದ್ದ ಹಶೀಬ್‌ ಖಾನ್‌ನನ್ನು ಪೊಲೀಸರು ವಿಚಾರಣೆ ಮಾಡಿದ್ದಾರೆ. ಸಚಿನ್‌ ಕುಮಾರ್‌, ಹಶೀಬ್‌ನಿಂದ 2 ಲಕ್ಷ ರೂಪಾಯಿ ಸಾಲ ಪಡೆದುಕೊಂಡಿದ್ದ ಎಂದೂ ವರದಿಯಾಗಿದೆ.  ನಂತರ ಪೊಲೀಸರು ದಂಪತಿಯನ್ನು ವಿಚಾರಣೆಗೆ ಒಳಪಡಿಸಿದ್ದಾರೆ.  ಪೊಲೀಸ್ ಮೂಲಗಳ ಪ್ರಕಾರ ಸಚಿನ್, ಶಬೀನಾ ಬೇಗಂ ಜೊತೆ ವಿವಾಹೇತರ ಸಂಬಂಧವನ್ನು ಹೊಂದಿದ್ದಾನೆ ಎನ್ನುವುದನ್ನು ತಿಳಿದುಕೊಂಡಿದ್ದರು.

Tap to resize

Latest Videos

ಅಕ್ರಮ ಸಂಬಂಧದ ಬಗ್ಗೆ ತಿಳಿಯುತ್ತಿದ್ದಂತೆ, ಶಬೀನಾ ಬೇಗಂ ಮೊಬೈಲ್‌ನಿಂದಲೇ ಸಚಿನ್‌ಗೆ ಕರೆ ಮಾಡಿಸಿದ ಹಶೀಬ್‌ ಖಾನ್‌, ಮನಗೆ ಬರುವಂತೆ ತಿಳಿಸಿದ್ದಾನೆ. ಮನೆಗೆ ಬಂದ ಸಚಿನ್‌ನನ್ನು ಚಾಕುವಿನಿಂದ ಇರಿದು ಹಶೀಬ್‌ ಕೊಂಡಿದ್ದಾರೆ. ಬಳಿಕ ಕಾರ್‌ನಲ್ಲಿ ಮೃತದೇಹವನ್ನು ತೆಗೆದುಕೊಂಡು ಹೋದ ಹಶೀಬ್‌, ದಾಸ್ನಾದ ದಟ್ಟಾರಣ್ಯದಲ್ಲಿ ಶವವನ್ನು ಎಸೆದಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.

ಅನೈತಿಕ ಸಂಬಂಧ ರಟ್ಟಾಗುತ್ತಿದ್ದಂತೆ ವಿದ್ಯುತ್ ಕಂಬ ಹತ್ತಿದ ಪತ್ನಿ, ಹೈಡ್ರಾಮಕ್ಕೆ ಗ್ರಾಮಸ್ಥರು ಸುಸ್ತು!

ಭಾನುವಾರ ತಡರಾತ್ರಿಯಾದರೂ ಸಚಿನ್‌ ಕುಮಾರ್‌ ಮನೆಗೆ ಬರದ ಹಿನ್ನಲೆಯಲ್ಲಿ ಹಾಗೂ ಆತನ ಫೋನ್‌ ಸ್ವಿಚ್‌ ಆಫ್‌ ಆಗಿದ್ದರಿಂದ ಕುಟುಂಬದವರು ಪೊಲೀಸರಿಗೆ ದೂರು ದಾಖಲಿಸಿದ್ದರು. ಅಂದಾಜು ಒಂದು ವರ್ಷಗಳ ಕಾಲ ಹಶೀಬ್‌ ಖಾನ್‌ನ ಫ್ಯಾಕ್ಟರಿಯಲ್ಲಿ ಸಚಿನ್‌ ಕೆಲಸ ಮಾಡಿಲ್ಲ. ಆದರೆ, ಹಣಕಾಸು ವ್ಯಾಜ್ಯದ ಕಾರಣದಿಂದಾಗಿ ಕಂಪನಿಯನ್ನು ತೊರೆದಿದ್ದ ಎಂದು ಆಲಿಘಡ ಮೂಲದ ಸಚಿನ್‌ ಅವರ ಸಹೋದರ ಮೋಹಿತ್‌ ತಿಳಿಸಿದ್ದಾರೆ.ಆತ ಒಂದು ಲಕ್ಷ ರೂಪಾಯಿ ನೀಡಿದ್ದ. ಆದರೆ, ಫೋನ್‌ನಲ್ಲಿ ಬೆದರಿಕೆ ಹಾಕುತ್ತಿದ್ದ ಆತ ಉಳಿದ ಹಣ ನೀಡುವಂತೆ ಪೀಡಿಸುತ್ತಿದ್ದ ಎಂದು ತಿಳಿಸಿದ್ದಾರೆ.

ನನ್ನಮ್ಮನ ಜೊತೆಯೇ ಗಂಡನ ರಾಸಲೀಲೆ, ಏನ್ಮಾಡೋದು ಕೇಳ್ತಿದ್ದಾಳೆ ಹೆಂಡತಿ?

click me!