
ಬೆಂಗಳೂರು (ಏ.04): ಬೆಂಗಳೂರಿನಲ್ಲಿ ಸ್ವತಃ ಹೆತ್ತಮ್ಮನೇ ತನ್ನ ಮಗನಿಗೆ ಮಚ್ಚು ಹಾಗೂ ಚಾಕು ಕೊಟ್ಟು ಒಬ್ಬಂಟಿ ಮಹಿಳೆಯರನ್ನು ಬೆದರಿಸಿ ಚಿನ್ನ, ಬೆಳ್ಳಿ ಸೇರಿ ಬೆಲೆಬಾಳುವ ವಸ್ತುಗಳನ್ನು ರಾಬರಿ ಮಾಡಿಕೊಂಡು ಬರಲು ತರಬೇತಿ ನೀಡುತ್ತಿದ್ದಳು. ಈಗ ಪೊಲೀಸರು ಮಹಿಳೆಯಿಂದ ಬರೋಬ್ಬರಿ 103 ಗ್ರಾಂ ಚಿನ್ನವನ್ನು ವಶಕ್ಕೆ ಪಡೆದಿದ್ದಾರೆ.
ನಮ್ಮ ದೇಶದಲ್ಲಿ ತಾಯಿಯೇ ಮೊದಲು ಗುರು ಎಂದು ಪೂಜೆ ಮಾಡುವ ಸಂಪ್ರದಾಯವಿದೆ. ತಾಯಿ ತನ್ನ ಮಕ್ಕಳಿಗೆ ಏನು ಹೇಳಿಕೊಡುತ್ತಾಳೋ ಅದನ್ನು ಮಕ್ಕಳು ಕಲಿತುಕೊಳ್ಳುತ್ತಾರೆ. ಆದರೆ, ಇಲ್ಲೊಬ್ಬ ತಾಯಿ ಸಮಾಜಕ್ಕೆ ಪೂರಕ ವ್ಯಕ್ತಿಯಾಗುವಂತೆ ಮಗನನ್ನು ಬೆಳೆಸುವ ಬದಲು, ಮಾರಕವಾಗುವಂತೆ ಬೆಳೆಸಿದ್ದಾಳೆ. ಒಂದು ಏರಿಯಾದಲ್ಲಿ ಮೂರ್ನಾಲ್ಕು ದಿನ ಕಾದು ಕುಳಿತು ಒಬ್ಬಂಟಿಯಾಗಿ ಯಾವ್ಯಾವ ಮಹಿಳೆಯರು ಬರುತ್ತಾರೆ, ಅವರ ಬಳಿಯಿರುವ ಚಿನ್ನ, ಬೆಳ್ಳಿ ಹಾಗೂ ಹಣ ತೆಗೆದುಕೊಂಡು ಹೋಗುವುದನ್ನು ವಾಚ್ ಮಾಡುತ್ತಿದ್ದಳು. ನಂತರ ಮಗನಿಗೆ ಮಚ್ಚು ಕೊಟ್ಟು ಕಳಿಸಿ, ಒಬ್ಬಂಟಿ ಮಹಿಳೆಯರಿಗೆ ಬೆದರಿಕೆ ಹಾಕಿ ಅವರ ಬಳಿಯಿರುವ ಚಿನ್ನ ಸೇರಿ ಯಾವುದೇ ಬೆಲೆ ಬಾಳುವ ವಸ್ತುಗಳಿದ್ದರೂ ಅದನ್ನು ಕಿತ್ತುಕೊಂಡು ಬರುವಂತೆ ಹೇಳುತ್ತಿದ್ದಳು. ಇನ್ನು ತಾಯಿ ಮಾತನ್ನು ಕೇಳುತ್ತಿದ್ದ ಮಗ ಹಲವು ಮಹಿಳೆಯರಿಂದ ರಾಬರಿ ಮಾಡಿದ್ದಾನೆ.
ಬೆಂಗಳೂರು: ಮಜ್ಜಿಗೆಗೆ ಮದ್ದು ಹಾಕಿ ಮಾಲಕಿಯ ಪ್ರಜ್ಞೆ ತಪ್ಪಿಸಿ ಚಿನ್ನ ಕದ್ದ ಕೆಲಸದಾಕೆ ಅರೆಸ್ಟ್
ಮಗನನ್ನು ತಪ್ಪು ದಾರಿಗೆಳೆದ ತಾಯಿ ರೋಜ (32) ಎಂಬಾಕೆ ಆಗಿದ್ದಾಳೆ. ಈ ಘಟನೆಯ ಸಂಬಂಧ ಅನ್ನಪೂರ್ಣೇಶ್ವರಿ ನಗರ ಪೊಲೀಸರಿಂದ ತಾಯಿ ಮತ್ತು ಅಪ್ರಾಪ್ತ ಮಗನನ್ನು ಬಂಧಿಸಲಾಗಿದೆ. ಈಕೆ ಹೆತ್ತ ತಾಯಿ ಆಗಿದ್ದರೂ ತನ್ನ ಮಗನಿಗೆ ದುಡಿದು ತಿನ್ನುವುದನ್ನು ಬಿಟ್ಟು ಕಳ್ಳತನ ಮಾಡೋದನ್ನ ಹೇಳಿಕೊಡುತ್ತಿದ್ದಳು. ನಂತರ, ಅಪ್ರಾಪ್ತ ಹುಡುಗನಿಗೆ ಸುಲಿಗೆ ಮಾಡಲು ಮುಂದೆ ಬಿಟ್ಟು, ತಾನೂ ಮಗನಿಗೆ ಸಾಥ್ ನೀಡುತ್ತಿದ್ದಳು. ಒಂದು ವೇಳೆ ಮಗ ಏನಾದರೂ ಸಿಲುಕಿಕೊಳ್ಳುವ ಸಂದರ್ಭ ಬಂದಲ್ಲಿ ಈಕೆಯೇ ದರೋಡೆಕೋರ ಮಗನನ್ನು ರಕ್ಷಣೆ ಮಾಡುತ್ತಿದ್ದಳು.
Bengaluru: ಆಟೋ ಚಾರ್ಜ್ ಕೊಟ್ಟಿಲ್ಲವೆಂದು ಯುವತಿಯನ್ನು ಎಳೆದೊಯ್ದು ಅತ್ಯಾಚಾರವೆಸಗಿ ಕೊಲೆಗೈದ ಚಾಲಕ
ಕಳ್ಳತನಕ್ಕೆ ಸ್ಕೆಚ್ ಹಾಕುತ್ತಿದ್ದುದು ಹೇಗೆ?
ಪ್ರತಿನಿತ್ಯ ಬೆಳಗ್ಗೆ ಎದ್ದಕೂಡಲೇ ಮಹಿಳೆ ರೋಜಾ ಏರಿಯಾ ರೌಂಡ್ಸ್ ಹಾಕ್ತಿದ್ದಳು. ಯಾವ್ಯಾವ ಮನೆಯಲ್ಲಿ ಮಹಿಳೆ ಎಷ್ಟೊತ್ತಿಗೆ ಹೊರಗೆ ಬರ್ತಾರೆಂದು ಬ್ಲೂ ಪ್ರಿಂಟ್ ಸಿದ್ಧಪಡಿಸುತ್ತಿದ್ದಳು. ಹೀಗೆ ಎರಡ್ಮೂರು ದಿನ ವಾಚ್ ಮಾಡಿ ಮಗನಿಗೆ ಸುಪಾರಿ ಕೊಡುತ್ತಿದ್ದಳು. ನಂತರ, ಅಪ್ರಾಪ್ತ ಮಗನ ಕೈಯಲ್ಲಿ ಮಚ್ಚು ಕೊಟ್ಟು ಫೀಲ್ಡಿಗೆ ಕಳಿಸುತ್ತಿದ್ದಳು. ಆಗ ಫೀಲ್ಡಿಗೆ ಹೋಗುತ್ತಿದ್ದ ಮಗ ಮಹಿಳೆಯರನ್ನ ಹೆದರಿಸಿ ಚಿನ್ನದ ಸರ ಕಸಿದುಕೊಂಡು ಬರುತ್ತಿದ್ದನು. ಇದೇ ರೀತಿ ತಾಯಿ ಹಾಗೂ ಮಗ ಕೃತ್ಯ ಎಸಗುತ್ತಿದ್ದರು. ಈಗ ಮಹಿಳೆಯರು ದೂರು ನೀಡಿದ ಹಿನ್ನೆಲೆಯಲ್ಲಿ ಅನ್ನಪೂಣೇಶ್ವರಿ ನಗರ ಪೊಲೀಸರು ದೂರು ದಾಖಲಿಸಿಕೊಂಡು ತಾಯಿ-ಮಗನನ್ನು ಬಂಧಿಸಿದ್ದಾರೆ. ಬಂಧಿತ ತಾಯಿ ಮಗನಿಂದ 5 ಲಕ್ಷ ಮೌಲ್ಯದ 103 ಗ್ರಾಂ ಚಿನ್ನಾಭರಣ ವಶಕ್ಕೆ ಪಡೆಯಲಾಗಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ