Kanakapura: ಅಡವಿಟ್ಟ ಚಿನ್ನವನ್ನು ಬೇರೆಡೆ ಅಡವಿಟ್ಟು ಬ್ಯಾಂಕ್‌ ಸಿಬ್ಬಂದಿ ವಂಚನೆ

By Kannadaprabha News  |  First Published Jun 30, 2023, 9:23 PM IST

ರೈತ ಸೇವಾ ಸಹಕಾರ ಸಂಘದಲ್ಲಿ ಗ್ರಾಹಕರ ಅಡಮಾನವಿಟ್ಟಿದ್ದ ಕೋಟ್ಯಂತರ ರುಪಾಯಿ ಮೌಲ್ಯದ ಚಿನ್ನಾಭರಣವನ್ನು ಸಂಘದ ಮುಖ್ಯ ಕಾರ್ಯನಿರ್ವಾಹಕ ಬೇರೊಂದು ಕಡೆಗೆ ಅಡಮಾನವಿಟ್ಟಿದ್ದ ನೂರಕ್ಕೂ ಹೆಚ್ಚು ದಾಖಲೆಗಳನ್ನು ವಶಪಡಿಸಿಕೊಂಡಿರುವ ಪೊಲೀಸರು ನಾಲ್ಕು ಕೆಜಿಗೆ ಹೆಚ್ಚು ಚಿನ್ನಾಭರಣವನ್ನು ವಶಕ್ಕೆ ಪಡೆಯಲು ತನಿಖೆ ಕೈಗೊಂಡಿದ್ದಾರೆ. 


ಕನಕಪುರ (ಜೂ.30): ರೈತ ಸೇವಾ ಸಹಕಾರ ಸಂಘದಲ್ಲಿ ಗ್ರಾಹಕರ ಅಡಮಾನವಿಟ್ಟಿದ್ದ ಕೋಟ್ಯಂತರ ರುಪಾಯಿ ಮೌಲ್ಯದ ಚಿನ್ನಾಭರಣವನ್ನು ಸಂಘದ ಮುಖ್ಯ ಕಾರ್ಯನಿರ್ವಾಹಕ ಬೇರೊಂದು ಕಡೆಗೆ ಅಡಮಾನವಿಟ್ಟಿದ್ದ ನೂರಕ್ಕೂ ಹೆಚ್ಚು ದಾಖಲೆಗಳನ್ನು ವಶಪಡಿಸಿಕೊಂಡಿರುವ ಪೊಲೀಸರು ನಾಲ್ಕು ಕೆಜಿಗೆ ಹೆಚ್ಚು ಚಿನ್ನಾಭರಣವನ್ನು ವಶಕ್ಕೆ ಪಡೆಯಲು ತನಿಖೆ ಕೈಗೊಂಡಿದ್ದಾರೆ. ಸಂಗಮ ರಸ್ತೆಯಲ್ಲಿರುವ ರೈತ ಸೇವಾ ಸಹಕಾರ ಸಂಘದಲ್ಲಿ ಸಂಘದ ಮುಖ್ಯ ಕಾರ್ಯನಿರ್ವಾಹಕ ಸೇರಿದಂತೆ ಮೂವರು ಸಿಬ್ಬಂದಿ ಸೇರಿ ಕೋಟ್ಯಂತರ ರುಪಾಯಿ ಅವ್ಯವಹಾರ ನಡೆಸಿದ್ದು ಈ ಸಂಬಂಧ ಪೊಲೀಸರು ಮೂವರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದರು. 

ಗ್ರಾಹಕರು ಅಡಮಾನವಿಟ್ಟಿದ್ದ ನಾಲ್ಕು ಕೋಟಿಗೂ ಹೆಚ್ಚು ಮೌಲ್ಯದ ನಾಲ್ಕು ಕೆಜಿಗೂ ಹೆಚ್ಚಿನ ತೂಕದ ಚಿನ್ನಾಭರಣವನ್ನು ಸಂಘದ ವ್ಯವಸ್ಥಾಪಕ, ಸಿಬ್ಬಂದಿ ಸೇರಿ ಬೇರೆ ಬೇರೆ ಬ್ಯಾಂಕ್‌ ಮತ್ತು ಚಿನ್ನಾಭರಣ ಸಾಲ ನೀಡುವ ಸಂಸ್ಥೆಗಳಲ್ಲಿ ಅಡಮಾನವಿಟ್ಟಿರುವುದು ಬೆಳಕಿಗೆ ಬಂದಿದೆ. ರೈತ ಸೇವಾ ಸಹಕಾರ ಸಂಘದಲ್ಲಿ ನೂರಾರು ಗ್ರಾಹಕರು ಕೋಟ್ಯಂತರ ರುಪಾಯಿ ಮೌಲ್ಯದ ನಾಲ್ಕು ಕೆಜಿಗೂ ಹೆಚ್ಚು ಚಿನ್ನಾಭರಣ ಅಡಮಾನವಿಟ್ಟು ಸಾಲ ಪಡೆದಿದ್ದರು. ಇದರಲ್ಲಿ ಕೆಲವು ಗ್ರಾಹಕರಿಗೆ ಅಡಮಾನವಿಟ್ಟು ಕೊಂಡಿದ್ದ ಪೂರ್ತಿ ಹಣ ನೀಡದೆ ಇಂದು ನಾಳೆ ಎಂದು ಅಲೆದಾಡಿಸುತ್ತಿದ್ದರು. 

Tap to resize

Latest Videos

Ramanagara: ಪಿಡಿ​ಒ​ಗಳ ಸಮಸ್ಯೆ ಸರ್ಕಾ​ರದ ಗಮನಕ್ಕೆ ತರುವೆ: ಶಾಸಕ ಎಚ್‌.ಸಿ.ಬಾಲಕೃಷ್ಣ

ಇದರಿಂದ ಅನುಮಾನ ಗೊಂಡ ಗ್ರಾಹಕರಿಗೆ ಸಂಘದಲ್ಲಿ ಅವಿವಹಾರ ನಡೆದಿರುವುದು ಬೆಳಕಿಗೆ ಬಂದಿತ್ತು.ಸಂಘದ ವ್ಯವಸ್ಥಾಪಕ ರವಿಕುಮಾರ್‌ ಹಾಗೂ ಸಿಬ್ಬಂದಿ ಗ್ರಾಹಕರು ಅಡಮಾನ ಇಟ್ಟಿದ್ದ ಚಿನ್ನಾಭರಣವನ್ನು ದುರ್ಬಳಕೆ ಮಾಡಿಕೊಂಡಿದ್ದಾರೆ. ತಪ್ಪಿತಸ್ಥರ ವಿರುದ್ಧ ಕಾನೂನು ಕ್ರಮ ಕೈಗೊಂಡು ಗ್ರಾಹಕರಿಗೆ ನ್ಯಾಯ ಕೊಡಿಸಬೇಕು ಎಂದು ಸಂಘದ ಅಧ್ಯಕ್ಷ ಶೀಲಾ ವೇಣುಗೋಪಾಲ್‌ ನಗರ ಠಾಣೆಗೆ ದೂರು ನೀಡಿದ್ದರು. 

ಪ್ರಕರಣ ದಾಖಲಿಸಿಕೊಂಡ ನಗರ ಠಾಣೆ ಪೊಲೀಸರು ತನಿಖೆ ಕೈಗೊಂಡು ಸಂಘದ ಮುಖ್ಯ ಕಾರ್ಯನಿರ್ವಾಹಕ ಮತ್ತು ಸಿಬ್ಬಂದಿಗಳಾದ ಮೂವರು ಸಿಬ್ಬಂದಿಯನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದಾರೆ. ಮಣಪುರಂ ಗೋಲ್ಡನ್‌ ಶ್ರೀರಾಮ್‌ ಫೈನಾನ್ಸ್‌ ಮುತ್ತೂಟ್‌ ಫೈನಾನ್ಸ್‌ ಕ್ಯಾತೋಲಿಕ್‌ ಸಿರಿಯನ್‌ ಬ್ಯಾಂಕ್‌ ಸೇರಿದಂತೆ ವಿವಿಧ ಕಡೆಗಳಲ್ಲಿ ಸುಮಾರು ಮೂರರಿಂದ ನಾಲ್ಕು ಕೋಟಿಗೂ ಹೆಚ್ಚು ಮೌಲ್ಯದ ನಾಲ್ಕು ಕೆಜಿಗೂ ಹೆಚ್ಚು ತೂಕದ ಚಿನ್ನಾಭರಣವನ್ನು ಬೇರೆ ಬೇರೆ ವ್ಯಕ್ತಿಗಳ ಹೆಸರಿನಲ್ಲಿ ಅಡಮಾನವಿಟ್ಟು ಸಾಲ ಪಡೆದಿದ್ದಾರೆ. 

ಕಾಂಗ್ರೆಸ್‌ ಸರ್ಕಾರದಲ್ಲೀಗ ವರ್ಗಾವಣೆ ದಂಧೆ ದೊಡ್ಡ ಮಟ್ಟದಲ್ಲಿ ನಡೆಯುತ್ತಿದೆ: ಎಚ್‌ಡಿಕೆ

ಇದಕ್ಕೆ ಸಂಬಂಧಿಸಿದಂತೆ ಪೊಲೀಸರು ಅಡಮಾನ ವಿಟ್ಟಿರುವ ನೂರಕ್ಕೂ ಹೆಚ್ಚು ದಾಖಲೆಗಳನ್ನು ಸಂಗ್ರಹಿಸಿದ್ದು ಅಡಮಾನ ವಿಟ್ಟುಕೊಂಡಿರುವ ವಿವಿಧ ಫೈನಾನ್ಸ್‌ಗಳ ಅಧಿಕಾರಿಗಳ ಸಭೆ ಕರೆದು ಆ ಚಿನ್ನಾಭರಣವನ್ನು ವಶಕ್ಕೆ ಪಡೆಯಲು ಪೊಲೀಸರು ಕ್ರಮ ಕೈಗೊಂಡಿದ್ದು ಇನ್ಸೂರೆನ್ಸ್‌ ಕಂಪನಿ ಮೇಲೆ ಹೂಡಿಕೆ ಮಾಡಲು ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಸಿಬ್ಬಂದಿಗಳ ಸಹಾಯ ಪಡೆದು ಗ್ರಾಹಕರು ಅಡಮಾನ ಇಟ್ಟಿದ್ದ ಚಿನ್ನಾಭರಣವನ್ನು ಬೇರೆ ಬೇರೆ ಫೈನಾನ್ಸ್‌ ಸಂಸ್ಥೆಗಳಲ್ಲಿ ಅಡಮಾನ ವಿಟ್ಟಿರುವುದಾಗಿ ವಿಚಾರಣೆ ವೇಳೆ ಒಪ್ಪಿಕೊಂಡಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ. ರೈತ ಸೇವಾ ಸಹಕಾರ ಸಂಘದಲ್ಲಿ ಚಿನ್ನಾಭರಣ ಅಡಮಾನವಿಟ್ಟಿದ್ದ ಗ್ರಾಹಕರು ಆತಂಕ ಕೊಳಗಾಗಿ ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಂಡು ನಮ್ಮ ಒಡವೆಗಳನ್ನು ಮರಳಿ ಕೊಡಿಸು ವಂತೆ ಪೊಲೀಸರಿಗೆ ಒತ್ತಡ ಹಾಕುತ್ತಿದ್ದಾರೆ ಎಂದು ತಿಳಿದು ಬಂದಿದೆ.

click me!