10 ತಿಂಗಳ ಮಗು ಹೋಗಬೇಡವೆಂದು ಅಳುತ್ತಿದ್ದರೂ ಬಿಟ್ಟು ಹೋದ ತಾಯಿ: ಕಾರು ಅಪಘಾತದಲ್ಲಿ ಅಮ್ಮ-ಅಕ್ಕ ಸಾವು

By Sathish Kumar KH  |  First Published Feb 1, 2023, 2:30 PM IST

ಪುಟ್ಟ ಮಕ್ಕಳು ದೇವರು ಎಂಬುದಕ್ಕೆ ಇಲ್ಲಿದೆ ನೈಜ ಉದಾಹರಣೆ
ಬಿಟ್ಟು ಹೋಗಬೇಡವೆಂದು ಅಪ್ಪಿಕೊಂಡು ಅತ್ತರೂ ಬಿಟ್ಟು ಹೋದ ತಾಯಿ ಸಾವು
ರಸ್ತೆಯಲ್ಲಿ ಹೋಗುತ್ತಿದ್ದವರ ಮೇಲೆ ಜವರಾಯನಾಗಿ ಎರಗಿದ ಕಾಂಕ್ರೀಟ್‌ ಲಾರಿ


ಆನೇಕಲ್/ ಬನ್ನೇರುಘಟ್ಟ (ಫೆ.01): ಮನೆಯಲ್ಲಿ 10 ತಿಂಗಳ ಹಸುಗೂಸು ಅಮ್ಮನನ್ನು ಅಪ್ಪಿಕೊಂಡು ನೀನು ನನ್ನನ್ನು ಬಿಟ್ಟು ಹೋಗಬೇಡ ಎಂದು ಪರಿಪರಿಯಾಗಿ ಅಳುತ್ತಿತ್ತು. ಅದನ್ನು ಲೆಕ್ಕಿಸದೇ ನಾನು ನಿನ್ನ ಅಕ್ಕನನ್ನು ಕಾರಿನಲ್ಲಿ ಕರೆದುಕೊಂಡು ಹೋಗಿ ಶಾಲೆಗೆ ಬಿಟ್ಟು ಬರುವುದಾಗಿ ಹೇಳಿ ಹೋದ ತಾಯಿ ಮರಳಿ ಬಾರದ ಲೋಕಕ್ಕೆ ತೆರಳಿದ್ದಾರೆ. ಶಾಲೆಗೆ ಮತ್ತೊಬ್ಬ ಮಗಳನ್ನು ಕರೆದೊಯ್ಯುತ್ತಿದ್ದ ಕಾರಿನ ಮೇಲೆ ಕಾಂಕ್ರೀಟ್‌ ಸಿಮೆಂಟ್‌ ಲಾರಿ ಬಿದ್ದು, ಇಬ್ಬರೂ ತಾಯಿ- ಮಗಳು ಇಬ್ಬರೂ ಸಾವನ್ನಪ್ಪಿದ ಮನಕಲಕುವ ಘಟನೆ ಬೆಂಗಳೂರಿನಲ್ಲಿ ನಡೆದಿದೆ.

ಕಗ್ಗಲೀಪುರ ಸಮೀಪದ ತರಳು ನಿವಾಸಿಯಾಗಿರುವ ಐಟಿ ಉದ್ಯೋಗಿ ಗಾಯಿತ್ರಿ ಕುಮಾರ್(47) ಹಾಗೂ ಅವರ ಹಿರಿಯ ಮಗಳು ಸಮತಾ ಕುಮಾರ್(16)  ಮೃತ ದುರ್ದೈವಿಗಳಾಗಿದ್ದಾರೆ. ಯಾವಾಗಲೂ ಮನೆಯಿಂದ ದೊಡ್ಡ ಮಗಳು ಸಮತಾಳನ್ನು ಅವರ ತಂದೆ ಸುನೀಲ್ ಕುಮಾರ್ ಶಾಲೆಗೆ ಡ್ರಾಪ್‌ ಮಾಡುತ್ತಿದ್ದರು. ಆದರೆ ಇಂದು ಕಛೇರಿಯಲ್ಲಿ ಮೀಟಿಂಗ್ ಹಿನ್ನೆಲೆಯಲ್ಲಿ ಅವರು ಬೇಗನೆ ಕಚೇರಿಗೆ ತೆರಳಿ ಮನೆಯಲ್ಲಿದ್ದ ಪತ್ನಿ ಗಾಯಿತ್ರಿ ಅವರಿಗೆ ಹಿರಿಯ ಮಗಳನ್ನು ಶಾಲೆಗೆ ಬಿಡುವಂತೆ ತಿಳಿಸಿದ್ದಾರೆ. ಹೀಗಾಗಿ, ಕಾರು ತೆಗೆದುಕೊಂಡು ಮಗಳನ್ನು ಶಾಲೆಗೆ ಕಳಿಸಲು ಹೋಗುತ್ತಿದ್ದ ತಾಯಿ, ಮಗಳು ದುರಂತ ಅಂತ್ಯ ಕಂಡಿದ್ದಾರೆ.

Tap to resize

Latest Videos

ಕುಡುಕ ಗಂಡನಿಂದ ಪತ್ನಿ ಮತ್ತು ಇಬ್ಬರು ಮಕ್ಕಳ ಮೇಲೆ ಮಾರಣಾಂತಿಕ ಹಲ್ಲೆ: ಇಬ್ಬರು ಸಾವು

ವಿಧಿಯಾಟ ಮಗುವಿಗೆ ತಿಳಿದಿತ್ತೇನೋ?: 
ಮಕ್ಕಳನ್ನು ದೇವರು ಎಂದು ಕರೆಯುವುದು ಇಲ್ಲಿ ಅಕ್ಷರಶಃ ನಿಜವೇನೋ ಎನ್ನಿಸುತ್ತದೆ. ತನ್ನ ತಾಯಿ ತನ್ನಿಂದ ಶಾಶ್ವತವಾಗಿ ದೂರವಾಗುತ್ತಾಳೆ ಎನ್ನುವ ವಿಧಿಯಾಟ ಪುಟ್ಟ ಕಂದಮ್ಮನಿಗೆ ಮೊದಲೇ ಗೊತ್ತಿತ್ತು ಎನಿಸುತ್ತದೆ. ಇನ್ನು ಗಾಯಿತ್ರಿ ಅವರ 10 ತಿಂಗಳ ಮಗು ಮನೆಯಲ್ಲಿ ತನ್ನನ್ನು ಬಿಟ್ಟು ಹೋಗಬೇಡ ಎಂದು ಅಮ್ಮನನ್ನು ತಬ್ಬಿಕೊಂಡು ಬಿಕ್ಕಳಿಸಿ ಅಳುತ್ತಿದೆ. ಎಷ್ಟು ಸಮಾಧಾನ ಮಾಡಿದರೂ ಸುಮ್ಮನಾಗದ ಮಗುವನ್ನು ಮನೆಯಲ್ಲಿದ್ದ ಇತರೆ ಸದಸ್ಯರ ಕೈಯಲ್ಲಿ ಕೊಟ್ಟು ಹಿರಿಯ ಮಗಳನ್ನು ಬೇಗನೆ ಶಾಲೆಗೆ ಬಿಟ್ಟು ಬರುವುದಾಗಿ ಕಾರನ್ನು ತೆಗೆದುಕೊಂಡು ಮನೆಯಿಂದ ಹೊರಟಿದ್ದಾರೆ. ಆದರೆ, ವಿಧಿಯ ಆಟವೇ ಬೇರೆಯಾಗಿತ್ತು. ತಾವು ಹೋಗುತ್ತಿದ್ದ ಕಾರಿನಲ ಮೇಲೆ ಸಿಮೆಂಟ್‌ ಕಾಂಕ್ರೀಟ್‌ ಮಿಶ್ರಣ ತುಂಬಿಕೊಂಡು ಹೋಗುವ ಲಾರಿ ಬಿದ್ದು ಕಾರು ಸಂಪೂರ್ಣ ನಜ್ಜುಗುಜ್ಜಾಗಿದೆ. ಕಾರಿನಲ್ಲಿ ಇಬ್ಬರೂ ರಕ್ತಸ್ರಾವವಾಗಿ ಪ್ರಾಣ ಬಿಟ್ಟಿದ್ದಾರೆ.

ಕಾರು ಅಪಘಾತದ ಕೂಡಲೇ ಪತಿಗೆ ಸಂದೇಶ: ಸುನೀಲ್‌ ಕುಮಾತ್‌ ಮತ್ತು ಮೃತೆ ಗಾಯಿತ್ರಿ ಕುಮಾರ್(47) ಅವರ ಹಿರಿಯ ಮಗಳು ಸಮತಾ ಕುಮಾರ್ ಶೇರ್ ವುಡ್ ಹೈ ಶಾಲೆಯಲ್ಲಿ ಅಭ್ಯಾಸ ಮಾಡುತ್ತಿದ್ದಳು. ಪ್ರತಿನಿತ್ಯ ತಂದೆಯೇ ಶಾಲೆಗೆ ಬಿಟ್ಟು ಹೋಗುತ್ತಿದ್ದರು. ಆದರೆ, ಇಂದು ಅಮ್ಮ ಕರೆದುಕೊಂಡು ಹೋಗುತ್ತಿದ್ದರೂ ಜವರಾಯ ಲಾರಿಯ ರೂಪದಲ್ಲಿ ಬಂದು ಪ್ರಾಣವನ್ನು ಹೊತ್ತೊಯ್ದಿದ್ದಾನೆ. ಇವರು ತರಳು‌ ಗ್ರಾಮದ ನಿವಾಸಿ ಆಗಿದ್ದರು. ಮೀಟಿಂಗ್‌ ಹಿನ್ನೆಲೆಯಲ್ಲಿ ಬೇಗನೇ ಕಚೇರಿಗೆ ತೆರಳಿದ್ದ ಸುನೀಲ್‌ ಕುಮಾರ್‌ ಅವರ ಮೊಬೈಲ್‌ಗೆ ಕಾರು ಅಪಘಾತವಾಗುತ್ತಿದ್ದಂತೆ ಗೆ ಮೆಸೇಜ್ ರವಾನೆಯಾಗಿದೆ. ಕಾರು ಅಪಘಾತವಾಗಿದ್ದು, ಕ್ರಷ್ ಆಗಿದೆ ಎಂದು ಮೆಸೇಜ್ ಬಂದಿದೆ. ಇನ್ನು ಮೆಸೇಜ್ ಬರುತ್ತಿದ್ದಂತೆ ಪತಿ ಸ್ಥಳಕ್ಕೆ ಧಾವಿಸಿದ್ದಾರೆ. ಆದರೆ, ಅಷ್ಟರಲ್ಲಾಗಲೇ ಜೀವ ಹೋಗಿತ್ತು. 

Accident: ಮಹದೇಶ್ವರ ಬೆಟ್ಟದಲ್ಲಿ ಟೂರಿಸ್ಟ್‌ ಬಸ್‌ ಅಪಘಾತ: 15 ಮಂದಿಗೆ ಗಂಭೀರ ಗಾಯ

ಮೃತದೇಹ ತೆಗೆಯಲು ಹರಸಾಹಸ:  ಇನ್ನು ಬನ್ನೇರುಘಟ್ಟ ರಸ್ತೆಯಲ್ಲಿ ಕಾರನ ಮೇಲೆ ಕಾಂಕ್ರೀಟ್‌ ಲಾರಿ ಬಿದ್ದ ಕಾರಣ ಸಣ್ಣ ಕಾರು ಸಂಪೂರ್ಣ ನಜ್ಜುಗುಜ್ಜಾಗಿತ್ತು. ಲಾರಿ ಕೆಳಗೆ ಸಿಲುಕಿರುವ ಕಾರು ತೆಗೆಯಲು ಸ್ಥಳೀಯರು ಹರಸಾಹಸ ಮಾಡಿದ್ದಾರೆ. ಆದರೂ, ಕಾಂಕ್ರೀಟ್‌ ಲಾರಿಯ ಅವಶೇಷಗಳನ್ನು ಅಲುಗಾಡಿಸಲೂ ಆಗಿಲ್ಲ. ಸಾರ್ವಜನಿಕರ ಮುಂದೆ ಕಾರಿನಲ್ಲಿದ್ದವರ ಪ್ರಾಣ ಹೋಗುತ್ತಿದ್ದರೂ ಅವರನ್ನು ರಕ್ಷಣೆ ಮಾಡಲು ಸಾಧ್ಯವಾಗಲಿಲ್ಲ. ಇನ್ನು ಕಾರಿನಲ್ಲಿದ್ದ ತಾಯಿ- ಮಗಳ ಜೀವ ಹೋದ ನಂತರವೂ ಮೃತ ದೇಹ ತೆಗೆಯಲು ಹರಸಾಹಸಪಡುವಂತಾಗಿತ್ತು. ನಂತರ ನಾಲ್ಕು ಕ್ರೇನ್ ಹಾಗೂ ಒಂದು ಜೆಸಿಬಿ ನೆರವಿನಿಂದ ತೆರವು ಮಾಡಲಾಗಿದೆ.

ಲಾರಿ ಚಾಲಕನ ಅತಿವೇಗವೇ ಅಪಘಾತಕ್ಕೆ ಕಾರಣ:  ಬೆಂಗಳೂರು ನಗರದಲ್ಲಿ ಬೆಳಗ್ಗೆ ಜನರ ಸಂಚಾರ ಹೆಚ್ಚಾಗಿದ್ದು, ಬೃಹತ್‌ ಗಾತ್ರದ ವಾಹನಗಳ ಸಂಚಾರಕ್ಕೆ ಟ್ರಾಫಿಕ್‌ ಪೊಲೀಸರು ಕಡಿವಾಣ ಹಾಕಿದ್ದಾರೆ. ಆದರೆ, ನಗರದ ಹೊರ ವಲಯದಲ್ಲಿ ಟಿಪ್ಪರ್‌, ಲಾರಿ, ಟ್ರಕ್‌, ಕಾಂಕ್ರೀಟ್‌ ಸಾಗಣೆ ವಾಹನಗಳ ಸಂಚಾರಕ್ಕೆ ಕಡಿವಾಣವೇ ಇಲ್ಲ. ರಸ್ತೆಯಲ್ಲಿ ವೇಗವಾಗಿ ಹೋಗುತ್ತಿದ್ದ ಕಾಂಕ್ರಿಟ್‌ ಮಿಶ್ರಣ ಸಾಗಣೆ ಲಾರಿಯು ನಿಯಂತ್ರಣ ತಪ್ಪಿ ರಸ್ತೆಯಲ್ಲಿ ಹೋಗುತ್ತಿದ್ದ ಕಾರಿನ ಮೇಲೆ ಬಿದ್ದದೆ. ಇದರಿಂದ ಅಮಾಯಕ ಜೀವಗಳು ಲಾರಿಯ ಚಾಲಕನ ನಿರ್ಲಕ್ಷ್ಯಕ್ಕೆ ಬಲಿಯಾಗಿವೆ. ಕಾಂಕ್ರೀಟ್ ಮಿಕ್ಸರ್ ಲಾರಿ ಚಾಲಕನ ಅತಿ ವೇಗವೇ ಘಟನೆಗೆ ಕಾರಣ ಎಂದು ಸ್ಥಳೀಯರು ಹೇಳುತ್ತಿದ್ದಾರೆ. ಇನ್ನು ಅಪಘಾತ ನಡೆದ ತಕ್ಷಣ ಲಾರಿ ಚಾಲಕ ಅಲ್ಲಿಂದ ಪರಾರಿ ಆಗಿದ್ದಾನೆ. 

click me!