ಬೆಂಗಳೂರಿನ ಅಜೀಂ ಪ್ರೇಮ್‌ಜಿ ವಿಶ್ವವಿದ್ಯಾಲಯದಲ್ಲಿ ಆಡಳಿತ ಮಂಡಳಿಯ ವಿರುದ್ಧ ಪ್ರಯಾಣ ಶುಲ್ಕವನ್ನು ಕೈಬಿಡುವಂತೆ ಆಗ್ರಹಿಸಿ ಉಪವಾಸ ಸತ್ಯಾಗ್ರಹ ಮಾಡುತ್ತಿದ್ದ ವಿದ್ಯಾರ್ಥಿಗಳ ಪೈಕಿ ಒಬ್ಬ ವಿದ್ಯಾರ್ಥಿ ಕುಸಿದುಬಿದ್ದು ಸಾವನ್ನಪ್ಪಿದ್ದಾನೆ.
ಬೆಂಗಳೂರು (ಫೆ.25): ಬೆಂಗಳೂರಿನ ಅಜೀಂ ಪ್ರೇಮ್‌ಜಿ ವಿಶ್ವವಿದ್ಯಾಲಯದಲ್ಲಿ ಆಡಳಿತ ಮಂಡಳಿಯ ವಿರುದ್ಧ ಪ್ರಯಾಣ ಶುಲ್ಕವನ್ನು ಕೈಬಿಡುವಂತೆ ಆಗ್ರಹಿಸಿ ಉಪವಾಸ ಸತ್ಯಾಗ್ರಹ ಮಾಡುತ್ತಿದ್ದ ವಿದ್ಯಾರ್ಥಿಗಳ ಪೈಕಿ ಒಬ್ಬ ವಿದ್ಯಾರ್ಥಿ ಸಾವನ್ನಪ್ಪಿದ್ದಾನೆ.
ಬೆಂಗಳೂರಿನಲ್ಲಿರುವ ಪ್ರತಿಷ್ಠಿತ ಅಜೀಂ ಪ್ರೇಮ್ ಜಿ ಯೂನಿವರ್ಸಿಟಿಯ ಆಡಳಿತ ಮಂಡಳಿ ವಿರುದ್ಧ ವಿದ್ಯಾರ್ಥಿಗಳ ಪ್ರತಿಭಟನೆ ಆರಂಭಿಸಿದ್ದರು. ವಿವಿಧ ಬೇಡಿಕೆಗಳ ಈಡೇರಿಕೆಗಾಗಿ ಕಳೆದ 12 ದಿನಗಳಿಂದ ಕ್ಯಾಂಪಸ್ ಆವರಣದಲ್ಲಿ ವಿದ್ಯಾರ್ಥಿಗಳು ಪ್ರತಿಭಟನೆ ಮಾಡುತ್ತಿದ್ದರು. ಆದರೆ, ಈ ವಿದ್ಯಾರ್ಥಿಗಳ ಹೋರಾಟಕ್ಕೆ ಅಜೀಂ ಪ್ರೇಮ್ ಜಿ ಯುನಿವರ್ಸಿಟಿ ಆಡಳಿತ ಮಂಡಳಿಯು ಕಡೆಗಣಿಸಿತ್ತು. ಕೆಲವು ವಿದ್ಯಾರ್ಥಿಗಳು ತರಗತಿಗೆ ಬಾರದಿದ್ದರೂ ಅವರನ್ನು ನಿರ್ಲಕ್ಷಿಸಿತ್ತು. ಆದರೆ, ಪಟ್ಟು ಬಿಡದ ವಿದ್ಯಾರ್ಥಿಗಳು ಕಳೆದ 3 ದಿನಗಳಿಂದ ಉಪವಾಸ ಸತ್ಯಾಗ್ರಹ ಹೋರಾಟ ಆರಂಭಿಸಿದ್ದರು. ಈ ವೇಳೆ ಕುಸಿದು ಬಿದ್ದ ವಿದ್ಯಾರ್ಥಿ ಸಾವನ್ನಪ್ಪಿದ್ದಾನೆ.
ಇನ್ನು ಪ್ರತಿಭಟನಾ ನಿರತ ವಿದ್ಯಾರ್ಥಿ ಕುಸಿದುಬಿದ್ದಿರುವ ವಿದ್ಯಾರ್ಥಿಯನ್ನು ಪ್ರಥಮ ವರ್ಷದ ಸ್ನಾತಕೋತ್ತರ ಪದವಿ ಎಂ.ಎ. ಡೆವಲಪ್ಮೆಂಟ್ ವಿಭಾಗದ ವಿದ್ಯಾರ್ಥಿ ಆಭಿಜಿತ್ ಶಿಂಧೆ (Abhijith Shindhe) ಎಂದು ಗುರುತಿಸಲಾಗಿದೆ. ವಿದ್ಯಾರ್ಥಿ ಕುಸಿದುಬಿದ್ದ ತಕ್ಷಣವೇ ಆತನನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ, ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಿಸದೇ ವಿದ್ಯಾರ್ಥಿ ಇಂದು ಮಧ್ಯಾಹ್ನ ಸಾವನ್ನಪ್ಪಿದ್ದಾನೆ ಎಂದು ಮಾಹಿತಿ ತಿಳಿದುಬಂದಿದೆ.
ಸೆಮಿಸ್ಟರ್‌ನಲ್ಲಿ ಫೇಲ್ ಮಾಡಿದ್ದಕ್ಕೆ ಪ್ರಿನ್ಸಿಪಾಲ್ ಮೇಲೆ ಪೆಟ್ರೋಲ್ ಸುರಿದ ಬೆಂಕಿ ಹಚ್ಚಿದ ವಿದ್ಯಾರ್ಥಿ!
ವಿದ್ಯಾರ್ಥಿಗಳ ಬೇಡಿಕೆಗಳೇನು?
ಅಜೀಂ ಪ್ರೇಮ್‌ಜೀ ವಿಶ್ವವಿದ್ಯಾಲಯ ಕ್ಯಾಂಪಸ್‌ನಲ್ಲಿ ದಾಖಲಾತಿ ಪಡೆದಿರುವ ವಿದ್ಯಾರ್ಥಿಗಳ ಹಾಸ್ಟೆಲ್ ಕೆಲವು ಕಿಲೋಮೀಟರ್‌ಗಳು ದೂರದಲ್ಲಿದೆ. ಇನ್ನು ಹಾಸ್ಟೆಲ್‌ನಿಂದ ಕಾಲೇಜಿಗೆ ಬರಲು ವಿದ್ಯಾರ್ಥಿಗಳುಇ ಬಸ್‌ನ ಮೂಲಕ ಪ್ರಯಾಣ ಮಾಡುವುದು ಅನಿವಾರ್ಯ ಆಗಿದೆ. ಆದರೆ, ಈ ವರ್ಷದಿಂದ ವಿದ್ಯಾರ್ಥಿಗಳು ಪ್ರಯಾಣ ಶುಲ್ಕವನ್ನು ಪಾವತಿಸಬೇಕು ಎಂದು ಕಾಲೇಜು ಆಡಳಿತ ಮಂಡಳಿಯು ಸೂಚಿಸಿದೆ. ಒಂದು ವರ್ಷಕ್ಕೆ 8,500 ರೂ. ಲೆಕ್ಕದಲ್ಲಿ ಎರಡು ವರ್ಷಗಳ ಪ್ರಯಾಣ ಶುಲ್ಕ 17,000 ರೂ. ಕಟ್ಟಲು ಪ್ರತಿಯೊಬ್ಬ ವಿದ್ಯಾರ್ಥಿಗೆ ವಿಶ್ವವಿದ್ಯಾಲಯ ಇಮೇಲ್ ಕಳಿಸಿದೆ.
ವಿದ್ಯಾರ್ಥಿಗಳಿಗೆ ಬೆದರಿಕೆ ನೋಟಿಸ್:
ವಿದ್ಯಾರ್ಥಿಗಳು ಪ್ರಯಾಣ ಶುಲ್ಕ ಪಾವತಿಸಬೇಕು ಎಂದು ಕಾಲೇಜು ಯಾವುದೇ ಸೂಚನೆ ನೀಡಿರಲಿಲ್ಲ. ಏಕಾಏಕಿ ಇ-ಮೇಲ್ ಮಾಡಿದೆ. ಏಕಾಏಕಿ ಪ್ರಯಾಣ ಶುಲ್ಕದ ಹೆಸರಿನಲ್ಲಿ ಹಣ ವಸೂಲಿಗೆ ಕಳುಹಿಸಿದ ಇಮೇಲ್ ಆದೇಶವನ್ನು ವಾಪಸ್ ಪಡೆದುಕೊಳ್ಳಬೇಕೆಂದು ಆಗ್ರಹಿಸಿ ಅಜೀಂ ಪ್ರೇಮ್ ಜಿ ಯೂನಿವರ್ಸಿಟಿ ಕ್ಯಾಂಪಸ್ ಆವರಣದಲ್ಲಿ ವಿದ್ಯಾರ್ಥಿಗಳು ಶಾಂತಯುತವಾಗಿ ಪ್ರತಿಭಟನೆ ಮಾಡಿದ್ದರು. ನಂತರ ಕುಲಪತಿಗಳಿಗೆ ಆದೇಶ ರದ್ದತಿಗೆ ಮನವಿ ಸಲ್ಲಿಕೆ ಮಾಡಿದ್ದರು. ಈ ಮನವಿ ಪತ್ರ ಸ್ವೀಕರಿಸಿದ ವಿವಿ ಕುಲಪತಿ ಬೇಡಿಕೆ ಈಡೇರಿಸುವ ಬದಲು ಪ್ರತಿಭಟನೆ ಮಾಡುವ ವಿದ್ಯಾರ್ಥಿಗಳ ಮೇಲೆ ಕ್ರಮ ಕೈಗೊಳ್ಳುವುದಾಗಿ ಬೆದರಿಸಿ ಇಮೇಲ್ ಕಳುಹಿಸಿದ್ದಾರೆ. ಈ ವಿಷಯ ವಿದ್ಯಾರ್ಥಿಗಳು ಮತ್ತು ವಿವಿ ನಡುವೆ ಜಿದ್ದಿಗೆ ಕಾರಣವಾಗಿದೆ. ನಿರಂತರ ಹೋರಾಟ ಮುಂದುವರೆಸಿದ್ದು, ಈಗ ಒಬ್ಬ ವಿದ್ಯಾರ್ಥಿ ಸಾವನ್ನಪ್ಪಿದ್ದಾನೆ.
2 ಸಾವಿರಕ್ಕೆ ಬಿಎಂಟಿಸಿ ಬಸ್ ಪಾಸ್: ಸಾಮಾನ್ಯವಾಗಿ ಕೆಎಸ್‌ಆರ್‌ಟಿಸಿ ಅಥವಾ ಬಿಎಂಟಿಸಿ ಬಸ್‌ಗೆ ವಾರ್ಷಿಕ 2 ಸಾವಿರಕ್ಕೆ ಪಾಸ್ ಬರುತ್ತದೆ. ಆದರೆ, ಈ ಕಾಲೇಜಿನಲ್ಲಿ ದುಬಾರಿ 17 ಸಾವಿರ ರೂ. ಪಾವತಿಸಬೇಕು ಎಂಬ ಆತಂಕದಿಂದ ವಿದ್ಯಾರ್ಥಿಗಳು ಈ ರೀತಿಯ ಪ್ರಯಾಣ ಶುಲ್ಕ ಕಟ್ಟಬೇಕೆಂದು ದಾಖಲಾತಿ ಸಮಯದಲ್ಲಿ ತಿಳಿಸಿರಲಿಲ್ಲ. ಹೀಗಾಗಿ, ಕಾಲೇಜು ಆಡಳಿತ ಮಂಡಳಿಯ ಕ್ರಮಕ್ಕೆ ಬೇಸತ್ತು ವಿದ್ಯಾರ್ಥಿಗಳು ಪ್ರತಿಭಟನೆಯ ಹಾದಿಯನ್ನು ಹಿಡಿದಿದ್ದರು. ಆದರೆ, ಕಾಲೇಜಿನ ದಿವ್ಯ ನಿರ್ಲಕ್ಷ್ಯಕ್ಕೆ ಉಜ್ವಲ ಭವಿಷ್ಯದ ಕನಸು ಕಟ್ಟಿಕೊಂಡು ಕಾಲೇಜಿಗೆ ದಾಖಲಾಗಿದ್ದ ವಿದ್ಯಾರ್ಥಿಯೊಬ್ಬ ಸಾವನ್ನಪ್ಪಿದ್ದಾನೆ.
Karnataka 5th and 8th Public Exam : 5ನೇ ಮತ್ತು 8ನೇ ತರಗತಿ ವಾರ್ಷಿಕ ಪರೀಕ್ಷೆಯ ಅಂತಿಮ ವೇಳಾಪಟ್ಟಿ ಪ್ರಕಟ
ವಿದ್ಯಾರ್ಥಿ ಸಂಘಟನೆಗಳಿಂದ ವಿವಿ ವಿರುದ್ಧ ಆಕ್ರೋಶ: ಅಜೀಂ ಪ್ರೇಮ್ ಜಿ ವಿಶ್ವವಿದ್ಯಾಲಯದಲ್ಲಿ ಹೋರಾಟ ನಿರತ ವಿದ್ಯಾರ್ಥಿ ಸಾವನ್ನಪ್ಪಿದ್ದು, ಸರ್ಕಾರ ವಿವಿ ವಿರುದ್ಧ ಸೂಕ್ತ ಕ್ರಮ ಆಗ್ರಹ ವ್ಯಕ್ತವಾಗುತ್ತಿದೆ. ಇದಕ್ಕೆ ಕಾರಣವಾದ ವಿವಿಯ ಆಡಳಿತ ಮಂಡಳಿ ವಿರುದ್ಧ ಸೂಕ್ತ ಕ್ರಮ ಜರುಗಿಸಬೇಕು. ನೂರಾರು ವಿದ್ಯಾರ್ಥಿಗಳು ಸತತ 12 ದಿನದಿಂದ ಹೋರಾಟ ಮಾಡುತ್ತಿದ್ದಾರೆ. ಇದಕ್ಕೆ ಸ್ಪಂದಿಸದ ಕಾರಣ ಉಪವಾಸ ಸತ್ಯಾಗ್ರಹ ಆರಂಭಿಸಿದ್ದಾರೆ. ನಿನ್ನೆ ಆಭಿಜಿತ್ ಶಿಂಧೆ ಪ್ರಜ್ಞೆ ತಪ್ಪಿ ಕುಸಿತು ಬಿದ್ದು, ಸಾವನ್ನಪ್ಪಿರುವ ದುರಂತ ಘಟನೆ ನಡೆದಿದೆ. ಇದಕ್ಕೆ ವಿವಿಯೇ ನೇರ ಕಾರಣ, ಇದೊಂದು ಶೈಕ್ಷಣಿಕ ಹತ್ಯೆಎಂದು ಎಸ್‌ಎಫ್‌ಐ ಆರೋಪ ಮಾಡಿದೆ.
ಅಜೀಂ ಪ್ರೇಮ್‌ಜಿ ವಿಶ್ವವಿದ್ಯಾಲಯ ಹೇಳೋದೇನು.?: ವಿಶ್ವವಿದ್ಯಾಲಯದ ಕ್ಯಾಂಪಸ್‌ನಲ್ಲಿ ವಿದ್ಯಾರ್ಥಿಯೊಬ್ಬ ಸಾವನ್ನಪ್ಪಿರುವುದು ದುರದೃಷ್ಟಕರ. ಇದರಿಂದ ನಾವೂ ತೀವ್ರ ದುಃಖಿತರಾಗಿದ್ದೇವೆ. ವಿದ್ಯಾರ್ಥಿಗಳ ವಾರ್ಷಿಕ ಉತ್ಸವದ ಉದ್ಘಾಟನಾ ಸಮಾರಂಭದಲ್ಲಿ ಭಾಗವಹಿಸಿದ್ದ ವಿದ್ಯಾರ್ಥಿ ಕುಸಿದು ಬಿದ್ದಿದ್ದನು. ಆತನನ್ನು ತಕ್ಷಣ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ, ಮೃತ ವಿದ್ಯಾರ್ಥಿಯು ಯಾವುದೇ ಉಪವಾಸ ಸತ್ಯಾಗ್ರಹ ನಡೆಸಿರಲಿಲ್ಲ ಎಂದು ಅಜೀಂ ಪ್ರೇಮ್‌ಜಿ ವಿಶ್ವವಿದ್ಯಾಲಯ ಸ್ಪಷ್ಟೀಕರಣ ನೀಡಿದೆ.