ಗದಗ: ಅಕ್ಕನಿಗೆ ಕಿರುಕುಳ ನೀಡ್ತಿದ್ದ ಮಾಜಿ ಮಾವನ ಮೇಲೆ ಡೆಡ್ಲಿ ಅಟ್ಯಾಕ್‌..!

By Girish Goudar  |  First Published Jul 27, 2024, 9:34 PM IST

ಅಕ್ಕನಿಗೆ ಆದ ಅನ್ಯಾಯದ ವಿರುದ್ಧ ಸಹೋದರ ರೊಚ್ಚಿಗೆದ್ದಾನೆ. ಜಗದೀಶ್ ನನ್ನು ಡಿಸೇಲ್ ಹಾಕಿ, ಸುಡಬೇಕು ಅಂತಾ ಪ್ಲಾನ್ ಮಾಡಿದ್ದ.. ಆದ್ರೆ ಸ್ವಲ್ಪದರಲ್ಲಿ ದೊಡ್ಡದೊಂದು ಅನಾಹುತ ತಪ್ಪಿದೆ..ಎರಡು ಕಡೆ ಪ್ರಕರಣವನ್ನು ದಾಖಲಿಸಿಕೊಂಡು ರೋಣ ಪೊಲೀಸರು ತನಿಖೆ ನಡೆಸುತ್ತಿದ್ದಾರೆ. 


ಗದಗ(ಜು.27): ಆತ ಪ್ರೀತ್ಸೆ ಪ್ರೀತ್ಸೆ ಆತ ಆ ಹುಡುಗಿ ಹಿಂದೆ ಬಿದ್ದಿದ್ದ, ಹುಡುಗಿ ಕೂಡಾ ಅವನ ಪ್ರೀತಿಗೆ ಮರಳಾಗಿದ್ಲು.. ಇಬ್ಬರೂ ಓಡಿ ಹೋಗಿ ಮದುವೆ ಆಗಿದ್ರು‌.. ಆದ್ರೆ, ಹುಡುಗ ಮಾತ್ರ ದುಡಿಯದೆ, ನಿತ್ಯ ಕುಡಿದು ಬಂದು ಕಿರುಕುಳ ನೀಡ್ತಿದ್ದ.. ಹೀಗಾಗಿ ಪರಸ್ಪರ ದೂರಾಗಿದ್ರು.. ಆದ್ರೂ ಕೂಡಾ ಹುಡುಗಿ ಮನೆ ಮುಂದೆ ಹುಡುಗ ಗಲಾಟೆ ಮಾಡ್ತಾಯಿದ್ದ. ರೊಚ್ಚಿಗೆದ್ದ ಹುಡುಗಿ ಸಹೋದರ ಆತನ ಮೇಲೆ ಡೆಡ್ಲಿ ಅಟ್ಯಾಕ್ ಮಾಡಿದ್ದಾನೆ. 

ಗದಗ ಜಿಲ್ಲೆ ರೋಣ ಪಟ್ಟಣದ ಶಿವಪೇಟೆಯಲ್ಲಿ ನಿನ್ನೆ(ಶುಕ್ರವಾರ) ರಾತ್ರಿ ಸುಮಾರು 9;30ಕ್ಕೆ ಜಗದೀಶ್ ಎಂಬಾತನ ಮೇಲೆ ಬಸವರಾಜ್ ಹಲ್ಲೆ ಮಾಡಿದ್ದು, ಸದ್ಯ ಇಬ್ಬರು ಚಿಕಿತ್ಸೆ ಪಡೀತಿದ್ದಾರೆ. ಜಗದೀಶ್ ಶಿವಪೇಟೆಯ ತನ್ನ ಮನೆ ಎದ್ರುಗಡೆ ಇದ್ದ ಹುಡುಗಿಯನ್ನು ಲವ್ ಮಾಡಿದ್ದ. ಇಬ್ಬರೂ ಓಡಿ ಹೋಗಿ ಮದುವೆಯಾಗಿದ್ರು.. ಕೇವಲ ಐದು ತಿಂಗಳು ಸಂಸಾರ ನಡೆಸಿದ್ರು.. ಆದ್ರೆ, ಜಗದೀಶ ಕೆಲಸ ಇಲ್ಲದೆ ನಿತ್ಯ ಕುಡಿದು ಬಂದು ಮನೆಯಲ್ಲಿ ಗಲಾಟೆ ಮಾಡ್ತಿದ್ನಂತೆ.. ಹೀಗಾಗಿ ಎರಡು ಕುಟುಂಬಸ್ಥರು ಹಿರಿಯ ಸಮ್ಮುಖದಲ್ಲಿ ವಿಚ್ಛೇದನ ಮಾಡಿಸಿದ್ರು.. ಹುಡುಗನಿಗೆ ನೀನು ಇನ್ಮುಂದೆ ಹುಡುಗಿ ಸಹವಾಸಕ್ಕೆ ಹೋಗ್ಬೇಡ ಅಂತಾ ಕಂಡಿಷನ್ ಆಗಿದ್ರು.. ಆದ್ರೂ ಈ ಜಗದೀಶ್ ಮಾತ್ರ ನಿತ್ಯ ಕಂಠಪೂರ್ತಿ ಎಣ್ಣೆ ಹೊಡೆದು, ಹುಡುಗಿ ಮನೆ ಮುಂದೆ ಗಲಾಟೆ ಮಾಡ್ತಾಯಿದ್ದ.. ಎಷ್ಟು ಸಾರಿ ಬುದ್ದಿ ಹೇಳಿದ್ರು ಕೇಳಿಲ್ವಂತೆ.. ಹೀಗಾಗಿ ಹುಡುಗಿ ಸಹೋದರ ಬಸವರಾಜ್, ರೊಚ್ಚಿಗೆದ್ದು, ಜಗದೀಶ್ ಮೇಲೆ ಡೆಡ್ಲಿ ಅಟ್ಯಾಕ್ ಮಾಡಿದ್ದಾನೆ. ಬಕೆಟ್ ನಲ್ಲಿ ಡಿಸೇಲ್ ತೆಗೆದುಕೊಂಡು ಹೋಗಿ ಆತನ ಮೇಲೆ ಹಾಕಿ, ಬೆಂಕಿ ಹಚ್ಚಲು ಯತ್ನಿಸಿದ್ದಾನೆ. ಅಲ್ದೆ, ಚಾಕುವಿನಿಂದ ಕುತ್ತಿಗೆ ಚಾಕುವಿನಿಂದ ಹಲ್ಲೆ ಮಾಡಿದ್ದಾನೆ.. ಈ ಜಗದೀಶ್ ಕೂಡಾ ಬಸವರಾಜ್‌ ಮೇಲೆ ಹಲ್ಲೆ ಮಾಡಿದ್ದಾನೆ.. ಇಬ್ಬರಿಗೂ ಗಾಯವಾಗಿದ್ದು, ಗದಗ ಜಿಮ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ.. ಜಗದೀಶನ ಕಿರುಕುಳಕ್ಕೆ ಬೇಸತ್ತು ಅಟ್ಯಾಕ್ ಮಾಡಿದ್ದೇನೆ ಅಂತ ಬಸವರಾಜ್ ಹೇಳಿಕೊಂಡಿದ್ದಾನೆ. 

Tap to resize

Latest Videos

undefined

ಬ್ಲೂಫಿಲಂ ನೋಡಿ, ಪಕ್ಕದಲ್ಲೇ ಮಲಗಿದ್ದ 9 ವರ್ಷದ ತಂಗಿ ಬಾಯಿ ಮುಚ್ಚಿ 13ರ ಅಣ್ಣನಿಂದ ರೇಪ್; ಮಗನಿಗೆ ತಾಯಿ ಸಾಥ್!

ಕೆಲ ತಿಂಗಳ ಹಿಂದೆ ಜಗದೀಶ್, ಬಸವರಾಜನ ಅಕ್ಕನನ್ನ ಓಡಿಸಿಕೊಂಡು ಹೋಗಿ ಮದ್ವೆಯಾಗಿದ್ದ.. ಮದ್ವೆ ನಿಶ್ಚಯವಾಗಿದ್ದ ಹುಡುಗಿಯನ್ನೇ ಜಗದೀಶ್ ಎಸ್ಕೇಪ್ ಮಾಡಿದ್ದ.. ಹೀಗಾಗಿ ಹುಡುಗಿ ಪೋಷಕರಿಗೆ ಅವಮಾನ ಆಗಿತ್ತು.. ಓಡಿ ಹೋಗಿದ್ದ ಹುಡುಗಿಯ ಬದಲಾಗಿ ಅದೇ ಮಂಟಪದಲ್ಲಿ ಸಹೋದರಿ ಮದ್ವೆ ಮಾಡಿ ಮರಿಯಾದೆ ಉಳಿಸಿಕೊಂಡಿದ್ರು. ಹುಡುಗಿ ಕುಟುಂಬಸ್ಥರು ಬಡವರು ಹಾಗೂ ಸಮಾಜದಲ್ಲಿ ದುರ್ಬಲರು.. ಆದ್ರೆ ಹುಡುಗ ಜಗದೀಶ್ ಕುಟುಂಬಸ್ಥರು ಬಲಾಡ್ಯರು. ಹೀಗಾಗಿ, ಜಗದೀಶ್ ಈ ಕುಟುಂಬಸ್ಥರ ಮೇಲೆ ದಬ್ಬಾಳಿಕೆ ಮಾಡ್ತಾಯಿದ್ದನಂತೆ.. ಸ್ಥಳೀಯ ಹಿರಿಯರು ಬುದ್ಧಿ ಹೇಳಿದ್ದಾರೆ. ಆದ್ರೂ 30 ವರ್ಷದ ಈ ಬಸವರಾಜ್ ಉಪಟಳ ಹೆಚ್ಚಾಗಿದೆ.. ಸಹೋದರಿಗೆ ಅನ್ಯಾಯ ಮಾಡಿದ್ರು ಬಸವರಾಜ್ ಸುಮ್ಮನೆಯಿದ್ದ.. ಆದ್ರೆ  ನಿತ್ಯ ಮನೆ ಮುಂದೆ ಬಂದು ಗಲಾಟೆ ಮಾಡ್ತಾಯಿರೋದರಿಂದ 19 ವರ್ಷದ ಬಸವರಾಜ್ ಬಂಡಾರಿಮಠ ರೊಚ್ಚಿಗೆದ್ದ ಹಲ್ಲೆ ಮಾಡಿದ್ದಾನೆ.  

ಅಕ್ಕನಿಗೆ ಆದ ಅನ್ಯಾಯದ ವಿರುದ್ಧ ಸಹೋದರ ರೊಚ್ಚಿಗೆದ್ದಾನೆ. ಜಗದೀಶ್ ನನ್ನು ಡಿಸೇಲ್ ಹಾಕಿ, ಸುಡಬೇಕು ಅಂತಾ ಪ್ಲಾನ್ ಮಾಡಿದ್ದ.. ಆದ್ರೆ ಸ್ವಲ್ಪದರಲ್ಲಿ ದೊಡ್ಡದೊಂದು ಅನಾಹುತ ತಪ್ಪಿದೆ..ಎರಡು ಕಡೆ ಪ್ರಕರಣವನ್ನು ದಾಖಲಿಸಿಕೊಂಡು ರೋಣ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.. ಒಟ್ನಲ್ಲಿ ಲವ್ ಮ್ಯಾರೇಜ್ ಕಥೆ ಇಬ್ಬರು ಗಾಯಗೊಂಡು ಆಸ್ಪತ್ರೆಗೆ ಸೇರುವಂತೆ ಮಾಡಿದೆ.

click me!