ನವೀ ಮುಂಬೈನ ರೈಲ್ವೇ ಸ್ಟೇಷನ್‌ನ ಬಳಿ ಹುಡುಗಿಯ ಮೃತದೇಹ ಪತ್ತೆಯಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಮುಂಬೈ (ಜು.27): 20 ವರ್ಷದ ಯುವತಿಯೊಬ್ಬಳನ್ನು ಆಕೆಯ ಪ್ರಿಯಕರನೇ ಬರ್ಬರವಾಗಿ ಇರಿದು ಕೊಂದು ಶವವನ್ನು ನವಿ ಮುಂಬೈನ ರೈಲ್ವೆ ನಿಲ್ದಾಣದ ಬಳಿಯ ಪೊದೆಗಳಲ್ಲಿ ಎಸೆದಿದ್ದಾನೆ ಎಂದು ಪೊಲೀಸರು ಶನಿವಾರ ತಿಳಿಸಿದ್ದಾರೆ. ಉಪ ಪೊಲೀಸ್ ಆಯುಕ್ತ (ನವಿ ಮುಂಬೈ) ವಿವೇಕ್ ಪನ್ಸಾರೆ ಅವರು ಉರಾನ್ ರೈಲು ನಿಲ್ದಾಣದ ಬಳಿಯ ಪೊದೆಗಳಲ್ಲಿ ಬಾಲಕಿಯ ಮೃತದೇಹ ಪತ್ತೆಯಾಗಿದೆ ಎಂದು ತಿಳಿಸಿದ್ದಾರೆ. ಬೆಳಗಿನ ಜಾವ 2 ಗಂಟೆಯ ಸುಮಾರಿಗೆ ಪೊಲೀಸರಿಗೆ ಕರೆ ಬಂದಿತ್ತು. ಈ ವೇಳೆ ದೇಹದ ಮೇನೆ ಅನೇಕ ಗಾಯದ ಗುರುತುಗಳು ಆಗಿದ್ದವು. ಅದಲ್ಲದೆ, ಚೂರಿ ಇರಿತದ ಮಾರ್ಕ್‌ಗಳು ಕೂಡ ಇದ್ದವು. ಆಕೆಯನ್ನು ಅತ್ಯಂತ ಕ್ರೂರವಾಗಿ ಕೊಲ್ಲಲಾಗಿದೆ ಎನ್ನುವುದು ಇದರಿಂದ ಅರ್ಥಮಾಡಿಕೊಳ್ಳಬಹುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಕೊಲೆಯಾದ ಮಹಿಳೆಯನ್ನು ಯಶಶ್ರೀ ಶಿಂಧೆ ಎಂದು ಗುರುತಿಸಲಾಗಿದ್ದು, ಆಕೆ ನಾಪತ್ತೆಯಾಗಿರುವ ಬಗ್ಗೆ ದೂರು ಕೂಡ ದಾಖಲಾಗಿತ್ತು. 20 ವರ್ಷದ ಯುವಕ ಊರನ್ ನಿವಾಸಿಯಾಗಿದ್ದು, ಸುಮಾರು 25 ಕಿ.ಮೀ ದೂರದ ಬೇಲಾಪುರದಲ್ಲಿ ಕೆಲಸ ಮಾಡುತ್ತಿದ್ದ.
ಇದೆಂಥಾ ಪ್ರೀತಿ! ಎಲ್ಲಾ ಕಾನೂನು ಮೀರಿ ಕೈದಿಗೆ ತಾಜ್ ಮಹಲ್ ತೋರಿಸಲು ಕರೆದುಕೊಂಡು ಬಂದ ಪೊಲೀಸ್!
"ನಮ್ಮ ಪ್ರಾಥಮಿಕ ತನಿಖೆಯ ಪ್ರಕಾರ ಪ್ರೇಮ ಸಂಬಂಧದ ವಿಚಾರಕ್ಕಾಗಿ ಮಹಿಳೆಯನ್ನು ಕೊಲೆ ಮಾಡಲಾಗಿದೆ ಎಂದು ಸೂಚಿಸುತ್ತದೆ. ಹುಡುಗಿಯ ಗೆಳೆಯ ಕೂಡ ಹುಡುಗಿಯೊಂದಿಗೆ ನಾಪತ್ತೆಯಾಗಿದ್ದು ಇನ್ನೂ ಪತ್ತೆಯಾಗಿಲ್ಲ. ಅವನು ಪ್ರಾಥಮಿಕ ಶಂಕಿತನಾಗಿದ್ದಾನೆ. ಕೊಲೆ ಪ್ರಕರಣವನ್ನು ದಾಖಲಿಸಲಾಗಿದೆ ಮತ್ತು ಐದು ಪೊಲೀಸ್ ತಂಡಗಳು ಆತನ ಪತ್ತೆಗೆ ರಚಿಸಲಾಗಿದೆ,'' ಎಂದು ಅಧಿಕಾರಿಯೊಬ್ಬರು ತಿಳಿಸಿದರು.
ಫೇಸ್‌ಬುಕ್ ಬಾಯ್‌ಫ್ರೆಂಡ್‌ನ ಮದುವೆಯಾಗೋಕೆ ನಕಲಿ ದಾಖಲೆ ಬಳಸಿ ಪಾಕ್‌ಗೆ ಹೋಗಿದ್ದ ಮಹಿಳೆ ಅರೆಸ್ಟ್!