Channapatna: ಆಸ್ಪತ್ರೆಯ ಶೌಚಾಲಯದಲ್ಲಿ ಮೃತ ಭ್ರೂಣ ಪತ್ತೆ: ಕೊಲೆ ಶಂಕೆ?

By Girish Goudar  |  First Published Mar 11, 2022, 12:13 PM IST

*  18 ಲಕ್ಷ ಮೌಲ್ಯದ ಮೊಬೈಲ್‌, ಚಿನ್ನಾಭರಣ ವಶಕ್ಕೆ
*  ರೈಲು ನಿಲ್ದಾಣ, ಸಂತೆಗಳೇ ಈ ಕಳ್ಳರ ಟಾರ್ಗೆಟ್‌
* ಲೈವ್‌ ಸ್ಕ್ಯಾ‌ನ್‌ ಉಪಕರಣ ಸಹಕಾರಿ 
 


ಚನ್ನಪಟ್ಟಣ(ಮಾ.11): ಗುರುವಾರ ಕೊಳೆತ ಸ್ಥಿತಿಯಲ್ಲಿದ್ದ ಮೃತ ಭ್ರೂಣ(Fetus) ನಗರದ ಸಾರ್ವಜನಿಕ ಆಸ್ಪತ್ರೆ ಶೌಚಾಲಯದಲ್ಲಿ ಪತ್ತೆಯಾಗಿದ್ದು, ಈ ಭ್ರೂಣ ಪತ್ತೆ ಪ್ರಕರಣಗ ಹಲವು ಅನುಮಾನಗಳಿಗೆ ಎಡೆಮಾಡಿಕೊಟ್ಟಿದೆ.
ಆಸ್ಪತ್ರೆಯ ತುರ್ತು ಚಿಕಿತ್ಸಾ ವಿಭಾಗದಲ್ಲಿರುವ ಶೌಚಾಲಯಲ್ಲಿ(Toilet) ಈ ಭ್ರೂಣ ಪತ್ತೆಯಾಗಿದೆ. ಆಸ್ಪತ್ರೆಯಲ್ಲಿಯೇ ಮೃತ ಭ್ರೂಣದ ಅವಶೇಷ ಪತ್ತೆಯಾಗಿರುವುದು ಆತಂಕದ ಜೊತೆಗೆ, ಹಲವು ಅನುಮಾನಗಳಿಗೆ ಎಡೆಮಾಡಿಕೊಟ್ಟಿದೆ. ಸುಮಾರು 5 ತಿಂಗಳ ಹೆಣ್ಣು ಭ್ರೂಣ ಎಂದು ಶಂಕಿಸಲಾಗಿದೆ.

ಸುಳಿವು ನೀಡಿದ ದುರ್ನಾತ:

Tap to resize

Latest Videos

ಸಾರ್ವಜನಿಕ ಆಸ್ಪತ್ರೆಯ(Government Hospital) ತುರ್ತು ಚಿಕಿತ್ಸಾ ವಿಭಾಗದ ಪಕ್ಕದಲ್ಲಿ ಇರುವ ನಿಗಾ ಕೊಠಡಿಯ ಶೌಚಾಲಯಲ್ಲಿ ಕೆಟ್ಟವಾಸನೆ ಬರುತ್ತಿದ್ದ ಹಿನ್ನೆಲೆಯಲ್ಲಿ ಆಸ್ಪತ್ರೆ ಸಿಬ್ಬಂದಿ ಪರಿಶೀಲನೆ ನಡೆಸಲಾಗಿ ಭ್ರೂಣ ಪತ್ತೆಯಾಗಿದೆ. ಎರಡು ಮೂರು ದಿನಗಳ ಹಿಂದೆ ಯಾರೋ ಭ್ರೂಣವನ್ನು ಹತ್ಯೆ(Murder) ಮಾಡಿ ಇಲ್ಲಿಗೆ ತಂದು ಬಿಸಾಡಿರಬಹುದೆಂದು ಶಂಕಿಸಲಾಗಿದೆ.

Pregnancy Act : ಬಾಲಕಿ ಗರ್ಭವತಿ,  20 ವಾರ ಕಳೆದ ಭ್ರೂಣ ತೆಗೆಯಲು ಹೈಕೋರ್ಟ್ ಸಮ್ಮತಿ

ಭ್ರೂಣ ಪತ್ತೆಯಾದ ಹಿನ್ನೆಲೆಯಲ್ಲಿ ಸಾರ್ವಜನಿಕ ಆಸ್ಪತ್ರೆಗೆ ಶಿಶು ಅಭಿವೃದ್ಧಿ ಅಧಿಕಾರಿ ಎಂ.ಕೆ.ಸಿದ್ದಲಿಂಗಯ್ಯ, ನಗರ ಠಾಣೆ ಪಿಎಸ್‌ಐ ಸಿ.ಎಂ ಹರೀಶ್‌ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಸಾರ್ವಜನಿಕ ಆಸ್ಪತ್ರೆ ವತಿಯಿಂದ ನಗರ ಠಾಣೆಯಲ್ಲಿ ಈ ಸಂಬಂಧ ಪ್ರಕರಣ ದಾಖಲಾಗಿದ್ದು, ಮೃತ ಭ್ರೂಣದ ವೈದ್ಯಕೀಯ ಪರೀಕ್ಷೆಯನ್ನು(Medical Examination) ಸಾರ್ವಜನಿಕ ಆಸ್ಪತ್ರೆ ವೈದ್ಯರು(Doctors) ನಡೆಸಿದ್ದು, ಹೆಚ್ಚಿನ ಪರಿಶೀಲನೆಗಾಗಿ ವಿಧಿ ವಿಜ್ಞಾನ ಪ್ರಯೋಗಾಲಯಕ್ಕೆ(SFIL) ಕಳುಹಿಸಲಾಗಿದೆ. ಈ ಪ್ರಕರಣವನ್ನು ಗಂಭೀರವಾಗಿ ಪರುಗಣಿಸಿರುವ ನಗರ ಪೊಲೀಸರು ಪ್ರಕರಣವನ್ನು ಭೇದಿಸಲು ವಿವಿಧ ಆಯಾಮಗಳಲ್ಲಿ ತನಿಖೆ(Investigation) ಮುಂದುವರೆಸಿದ್ದಾರೆ.

ಆಸ್ಪತ್ರೆಯಲ್ಲಿ ಕಳೆದೊಂದು ವಾರದಿಂದ ಯಾವುದೇ ಗರ್ಭಪಾತವನ್ನು(Abortion) ಮಾಡಿಲ್ಲ ಎಂದು ಆಸ್ಪತ್ರೆಯ ಅಧೀಕ್ಷಕ ಡಾ.ವಿಜಯನರಸಿಂಹ ಸ್ಪಷ್ಟಪಡಿಸಿದ್ದು, ಹೊರಗಿನಿಂದ ಯಾರೋ ಗೊಂದಲ ಮೂಡಿಸುವ ಸಲುವಾಗಿ ಇಲ್ಲಿಗೆ ತಂದು ಹಾಕಿದ್ದಾರೆ ಎಂದು ಶಂಕಿಸಿದ್ದಾರೆ. ಈ ಕುರಿತು ಪೊಲೀಸರಿಗೆ(Police) ದೂರು ನೀಡಿರುವುದಾಗಿ ತಿಳಿಸಿದ್ದಾರೆ. ಯಾರೋ ತಂದು ಭ್ರೂಣವನ್ನು ಆಸ್ಪತ್ರೆಯಲ್ಲಿ ಬಿಸಾಡಿದ್ದಾರೆ ಎಂದರೆ ಆಸ್ಪತ್ರೆಯ ಭದ್ರತೆಯ ಬಗ್ಗೆ ಸಾರ್ವನಿಕರಿಗೆ ಅನುಮಾನ ಮೂಡಿದೆ.

ಹೆಣ್ಣು ಭ್ರೂಣ ಹತ್ಯೆಗೆ ಸರ್ಕಾರ ಕಠಿಣ ಕಾನೂನು ಕ್ರಮಗಳನ್ನು ಕೈಗೊಂಡಿದೆ. ಹೀಗಿದ್ದರೂ ಪದೆಪದೇ ಭ್ರೂಣಹತ್ಯೆ ಪ್ರಕರಣಗಳು ಅಲ್ಲಲ್ಲಿ ಕಂಡುಬರುತ್ತಿದ್ದು, ಸರ್ಕಾರಿ ಆಸ್ಪತ್ರೆಯಲ್ಲಿ ಮೃತ ಭ್ರೂಣ ಪತ್ತೆ ಹಲವು ಅನುಮಾನಗಳಿಗೆ ಕಾರಣವಾಗಿದೆ. ಯಾರೋ ಕಿಡಿಗೇಡಿಗಳು ಈ ಭ್ರೂಣ ತಂದು ಹಾಕಿರುವರೋ ಅಥವಾ ಆಸ್ಪತ್ರೆ ಸಿಬ್ಬಂದಿ ವರ್ಗ ಏನಾದರೂ ಈ ಪ್ರಕರಣದಲ್ಲಿ ಭಾಗಿಯಾಗಿರುವವರೆ ಎಂಬುದು ಪೊಲೀಸ್‌ ತನಿಖೆಯಿಂದಲೇ ಹೊರಬೀಳಬೇಕಾಗಿದೆ.

ಆಸ್ಪತ್ರೆ ಶೌಚಾಲಯಲದಲ್ಲಿ ಹೆಣ್ಣು ಭ್ರೂಣ ಪತ್ತೆ

ಮಾಗಡಿ: ಪಟ್ಟಣದ ಸಾರ್ವಜನಿಕ ಆಸ್ಪತ್ರೆಯ ಮಹಿಳಾ ರೋಗಿಗಳ ವಾರ್ಡಿನ ಶೌಚಾಲಯದಲ್ಲಿ ಏಳುವರೆ ತಿಂಗಳಿನ ಮೃತ ಹೆಣ್ಣು ಶಿಶುವಿನ ಭ್ರೂಣ ಪತ್ತೆಯಾದ ಘಟನೆ 2020 ರಲ್ಲಿ ನಡೆದಿತ್ತು.

Rare Pregnancy: ಗರ್ಭದಲ್ಲಲ್ಲ, ಮಹಿಳೆಯ ದೇಹದ ಮತ್ಯಾವುದೋ ಭಾಗದಲ್ಲಿ ಭ್ರೂಣ ಪತ್ತೆ..!

ಪಟ್ಟಣದ ಸಾರ್ವಜನಿಕ ಆಸ್ಪತ್ರೆಯ ಮಹಿಳಾ ರೋಗಿಗಳ ವಾರ್ಡಿನಲ್ಲಿರುವ ಶೌಚಾಲಯಕ್ಕೆ ಬೆಳಿಗ್ಗೆ 8.30 ರ ಸುಮಾರಿಗೆ ನಾನ್‌ ಕ್ಲಿನಿಕ್‌ ಸಿಬ್ಬಂದಿಯೊಬ್ಬರು ತೆರಳಿದ್ದರು. ಈ ಸಮಯದಲ್ಲಿ ಅಲ್ಲಿ ಹೆಣ್ಣು ಮಗುವಿನ ಭ್ರೂಣ ಇರುವುದನ್ನು ಗಮನಿಸಿ ತಕ್ಷಣ ಕರ್ತ​ವ್ಯ​ದ​ಲ್ಲಿದ್ದ ವೈದ್ಯರಿಗೆ ವಿಷಯವನ್ನು ತಿಳಿಸಿದ್ದು, ಅವರು ಆಸ್ಪತ್ರೆಯ ಆರೋಗ್ಯ ವೈದ್ಯಾಧಿಕಾರಿಗಳ ಗಮನಕ್ಕೆ ತಂದಿದ್ದರು.

ಪೊಲೀಸ್‌ ಠಾಣೆಗೆ ದೂರು

ಆರೋಗ್ಯ ವೈದ್ಯಾಧಿಕಾರಿ ರಾಜೇಶ್‌ ಅವರು ಆಸ್ಪತ್ರೆಯ ಮಹಿಳಾ ರೋಗಿಗಳ ಶೌಚಾಲಯದಲ್ಲಿ ಹೆಣ್ಣು ಭ್ರೂಣ ಕಂಡು ಬಂದಿದೆ ಎಂದು ಮಾಗಡಿ ಪೊಲೀಸ್‌ ಠಾಣೆಗೆ ದೂರು ನೀಡಿದ್ದ ಹಿನ್ನಲೆಯಲ್ಲಿ ಪೊಲೀಸರು ಪರಿಶೀಲನೆ ನಡೆಸಿದರು. ಆಸ್ಪತ್ರೆಯಲ್ಲಿದ್ದ ಸಿಸಿ ಕ್ಯಾಮೆರಾಗಳನ್ನು ವೀಕ್ಷಿಸಿದ್ದು ಯಾವುದೇ ಅನುಮಾನಸ್ಪದ ಘಟನೆಗಳು ಕಂಡು ಬಂದಿಲ್ಲದಿದ್ದರೂ ಸಹ ಹೆಚ್ಚಿನ ತನಿಖೆ ಕೈಗೊಂಡಿದ್ದರು.

ಈ ಬಗ್ಗೆ ಆರೋಗ್ಯ ವೈದ್ಯಾಧಿಕಾರಿ ರಾಜೇಶ್‌ ಮಾತನಾಡಿ, ಸೋಮವಾರ ರಾತ್ರಿ ಆಸ್ಪತ್ರೆಯಲ್ಲಿ ಎರಡು ಹೆರಿಗೆ ಕೇಸ್‌ಗಳು ಬಂದಿದ್ದು, ಇಲ್ಲಿಯೇ ಹೆರಿಗೆ ಆಗಿವೆ. ಆದರೆ, ಮಹಿಳಾ ರೋಗಿಗಳ ಶೌಚಾಲಯದಲ್ಲಿ ಹೆಣ್ಣು ಭ್ರೂಣ ಹೇಗೆ ಬಂದಿದೆ ಎಂದು ತಿಳಿದಿಲ್ಲ, ಪೊಲೀಸರು ತನಿಖೆ ನಡೆಸುತ್ತಿದ್ದು, ನಾವು ಎಲ್ಲಾ ರೀತಿಯ ಸಹಕಾರ ನೀಡುತ್ತಿದ್ದೇವೆ ಎಂದು ಪ್ರತಿ​ಕ್ರಿ​ಯಿ​ಸಿ​ದರು.
 

click me!