ಅತ್ಯಾಚಾರ ಮಾಡಿದ್ದರೂ ತಾನೇನೂ ತಪ್ಪೇ ಮಾಡಿಲ್ಲವೆಂದು ಜೈಲು ಗೋಡೆ ಹಾರಿ ಪರಾರಿಯಾಗಿದ್ದ ಆರೋಪಿಯನ್ನು ದಾವಣಗೆರೆ ಪೊಲೀಸರು 24 ಗಂಟೆಗಳಲ್ಲಿ ಬಂಧಿಸಿ ಜೈಲಿಗಟ್ಟಿದ್ದಾರೆ.
ದಾವಣಗೆರೆ (ಆ.27): ಸಮಾಜ ಘಾತುಕ ಕೆಲಸಗಳನ್ನು ಮಾಡಿದರೂ ಸ್ವಲ್ಪವೂ ಪ್ರಾಯಶ್ಚಿತ ಮಾಡಿಕೊಳ್ಳದಿರುವ ಹಲವರಿಗೆ ಇದೊಂದು ಪಾಠವಾಗಿದೆ. ಅತ್ಯಾಚಾರ ಮಾಡಿದ್ದರೂ ತಾನೇನೂ ತಪ್ಪೇ ಮಾಡಿಲ್ಲವೆಂದು ಜೈಲು ಗೋಡೆ ಹಾರಿ ಪರಾರಿಯಾಗಿದ್ದ ಆರೋಪಿಯನ್ನು ದಾವಣಗೆರೆ ಪೊಲೀಸರು 24 ಗಂಟೆಗಳಲ್ಲಿ ಬಂಧಿಸಿ ಜೈಲಿಗಟ್ಟಿದ್ದಾರೆ.
ಹೌದು, ಸಮಾಜದಲ್ಲಿ ತಲೆತಗ್ಗಿಸುವ ಕೆಲಸ ಮಾಡಿ, ಇನ್ನೊಂದು ಮಹಿಳೆಯ ಜೀವನ ಹಾಳು ಮಾಡಿದ ಅತ್ಯಾಚಾರ ಪ್ರಕರಣದ ಆರೋಪಿಗೆ ಈಗಾಗಲೇ ಜೈಲು ಶಿಕ್ಷೆ ಆಗಿತ್ತು. ಜೈಲಿನಲ್ಲಿದ್ದರೂ ಬುದ್ಧಿ ಕಲಿಯದೇ ಇನ್ನೂ ಜೈಲಿನಿಂದ ತಪ್ಪಿಸಿಕೊಳ್ಳಲು ಆಗಿಂದಾಗ್ಗೆ ಪ್ರಯತ್ನ ಮಾಡುತ್ತಲೇ ಇದ್ದನು. ಹೀಗೆ, ಶನಿವಾರ ಮಧ್ಯಾಹ್ನ ಜೈಲಿನಲ್ಲಿ ಕಾರಾಗೃಹ ಸಿಬ್ಬಂದಿ ಕಡಿಮೆ ಇರುತ್ತಾರೆ ಹಾಗೂ ಜೈಲಿನ ಸುತ್ತಲಿನ ಎಲ್ಲ ಅಂಗಡಿ ಮುಂಗಟ್ಟುಗಳು ಕೂಡ ಮುಚ್ಚಿರುತ್ತವೆ ಎಂದು ಅರಿತ ಆರೋಪಿ ಮಟ ಮಟ ಮಧ್ಯಾಹ್ನವೇ ಸುಮಾರು 12 ಅಡಿಗಿಂತ ಎತ್ತರವಾಗಿರುವ ಗೋಡೆಯನ್ನು ಜಿಗಿದು ಪರಾರಿ ಆಗಿದ್ದಾನೆ.
3 ಈಡಿಯಟ್ಸ್ ಸಿನಿಮಾ ಶೈಲಿಯಲ್ಲಿ ಹಸೆಮಣೆಯಿಂದ ಎದ್ದು ಹೋದ ಮಗಳನ್ನು ಪ್ರಿಯಕರನೊಂದಿಗೆ ಸೇರಿಸಿದ ಪೋಷಕರು
ಜೈಲಿನ ಗೋಡೆ ಜಿಗಿದು ಪರಾರಿ: ಈ ಘಟನೆ ದಾವಣಗೆರೆ ನಗರದ ಉಪಕಾರಾಗೃಹದಲ್ಲಿ ನಡೆದಿದೆ. ಜೈಲಿನ ಗೋಡೆ ಜಿಗಿದು ಪರಾರಿಯಾದವನು ವಸಂತ (23) ಆಗಿದ್ದಾನೆ. ಈತ ಜೈಲಿನಿಂದ ಪರಾರಿಯಾದ ದೃಶ್ಯ ಸಿಸಿ ಕ್ಯಾಮರಾದಲ್ಲಿ ದಾಖಲು ಆಗಿದೆ. ಕಾಲಿಗೆ ಪೆಟ್ಟಾದರೂ ಕೂಡ ಅದನ್ನು ಲೆಕ್ಕಿಸದೇ ಅಲ್ಲಿಂದ ಓಡಿ ಹೋಗಿ ಆಟೋ ಹತ್ತಿಕೊಂಡು ಹೋಗಿದ್ದಾನೆ. ಇನ್ನು ಈತ ಪರಾರಿಯಾದ ದೃಶ್ಯಾವಳಿಯ ಬಗ್ಗೆ ಮಾಹಿತಿ ಕಲೆಹಾಕಿದ ಪೊಲೀಸರು ಸುತ್ತಲಿನ ಪೊಲೀಸ್ ಠಾಣೆಗಳಿಗೆ ಮಾಹಿತಿ ರವಾನಿಸಿದ್ದಾರೆ. ನಗರದ ಸಿಸಿ ಕ್ಯಾಮರಾಗಳನ್ನು ಆಧರಿಸಿ ಆತನು ಹೋಗುತ್ತಿದ್ದ ಮಾರ್ಗವನ್ನು ಹುಡುಕಿ ಆರೋಪಿಯನ್ನು ಬಂಧಿಸಿ ವಾಪಸ್ ಕರೆತಂದಿದ್ದಾರೆ.
ಸರಗಳ್ಳರ ವಿರುದ್ಧ ಹೋರಾಡಿ ಕಳ್ಳನನ್ನು ಬೈಕ್‌ನಿಂದ ಬೀಳಿಸಿದ ಗಟ್ಟಿಗಿತ್ತಿ ಮಹಿಳೆ: ವೀಡಿಯೋ
ಹರಿಹರದ ದುಗ್ಗಾವತಿಯಲ್ಲಿ ಬಂಧನ: ಇನ್ನು ಪ್ರಕರಣಕ್ಕೆ ಬರುವುದಾದರೆ, ಆರೋಪಿ ವಸಂತನ ಮೇಲೆ ದಾವಣಗೆರೆ ಮಹಿಳಾ ಠಾಣೆಯಲ್ಲಿ ದೂರು ದಾಖಲು ಆಗಿತ್ತು. ಈ ಹಿನ್ನೆಲೆಯಲ್ಲಿ ಆರೋಪಿಯನ್ನು ಬಂಧಿಸಿದ ಮಹಿಳಾ ಠಾಣೆ ಪೊಲೀಸರು ಆತನ್ನು ಜೈಲಿಗೆ ಕಳುಹಿಸಿದ್ದರು. ಮಹಿಳಾ ಠಾಣೆಯಲ್ಲಿ ಇಟ್ಟುಕೊಳ್ಳದೇ ಉಪ ಕಾರಾಗೃಹಕ್ಕೆ ಶಿಫ್ಟ್ ಮಾಡಲಾಗಿತ್ತು. ಈ ಬಗ್ಗೆ ಬಸವನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿಕೊಂಡು ಆರೋಪಿಯನ್ನು ಪತ್ತೆ ಮಾಡಲು ಪೊಲೀಸರು ಮುಂದಾದರು. ಇನ್ನು ಕಾರ್ಯಾಚರಣೆಗೆ ಮುಂದಾದ ಪಲೀಸರು ಆರೋಪಿ ತಪ್ಪಿಸಿಕೊಂಡ 24 ಗಂಟೆಯೊಳಗೆ ಬಂಧಿಸಿದ್ದಾರೆ. ದಾವಣಗೆರೆ ಜೈಲಿನಿಂದ ಹರಿಹರ ತಾಲೂಕಿನ ದುಗ್ಗಾವತಿಗೆ ಹೋಗಿದ್ದಾನೆ. ಸೂಕ್ತ ಮಾಹಿತಿ ಆಧರಿಸಿ ಸ್ಥಳಕ್ಕೆ ತೆರಳಿದ ಪೊಲೀಸರು ದುಗ್ಗಾವತಿಯಲ್ಲಿ ಆರೋಪಿ ಆರೋಪಿ ವಸಂತ್‌ನನ್ನು ಸೆರಡಹಿಡಿದು ಬಸವನಗರ ಪೊಲೀಸ್ ಠಾಣೆಗೆ ಕರೆತಂದಿದ್ದಾರೆ.