ಪ್ರಿಯತಮೆ ದೂರ ಆಗಿದ್ದಕ್ಕೆ ನೊಂದ ದಾವಣಗೆರೆ ಮೂಲದ ಪ್ರಿಯಕರ ಬೆಂಗಳೂರಿನಲ್ಲಿ ಸಾವು!

By Suvarna News  |  First Published Mar 8, 2024, 5:28 PM IST

ಬೆಂಗಳೂರಿನಲ್ಲಿ ಪ್ರಿಯತಮೆ ದೂರ ಆಗಿದ್ದಕ್ಕೆ ನೊಂದ ಪ್ರಿಯಕರ ಸಾವನ್ನಪ್ಪಿರುವ ಘಟನೆ ನಡೆದಿದೆ. ಮೃತ ದುದೈವಿ ದಾವಣಗೆರೆ ಮೂಲದವನೆಂದು ತಿಳಿದುಬಂದಿದೆ.


ಬೆಂಗಳೂರು (ಮಾ.8): ಬೆಂಗಳೂರಿನಲ್ಲಿ ಪ್ರಿಯತಮೆ ದೂರ ಆಗಿದ್ದಕ್ಕೆ ನೊಂದ ಪ್ರಿಯಕರ ಸಾವನ್ನಪ್ಪಿರುವ ಘಟನೆ ನಡೆದಿದೆ. ದಾವಣಗೆರೆ ಮೂಲದ ಚೇತನ್ (21) ಮೃತ ದುರ್ದೈವಿಯಾಗಿದ್ದು,  ಬೆಂಗಳೂರು ನಗರದ ನಂದಿನಿ ಲೇಔಟ್ ನಲ್ಲಿ ಘಟನೆ ನಡೆದಿದೆ.

ದಾವಣಗೆರೆ ಮೂಲದ ಚೇತನ್ ಎರಡು ವರ್ಷದಿಂದ ಜನನಿ ಎಂಬಾಕೆಯನ್ನು ಪ್ರೀತಿಸುತ್ತಿದ್ದ. ಇಬ್ಬರು ಪಿಯುಸಿ ಓದುವಾಗ  ಪರಿಚಯವಾಗಿ ಸ್ನೇಹವಾಗಿ ಸ್ನೇಹ  ಪ್ರೀತಿಗೆ ತಿರುಗಿತ್ತು. ಈ ವಿಷಯ ಹುಡುಗಿ ಕಡೆಯವರಿಗೆ ಗೊತ್ತಾಗಿತ್ತು. ಹುಡುಗಿಯ ಚಿಕ್ಕಪ್ಪ ಚೇತನ್ ಜೊತೆ ಮದುವೆಗೆ ಒಪ್ಪಿರಲಿಲ್ಲ.

Tap to resize

Latest Videos

undefined

ಪ್ರೇಮಿಗಳು ಹಲವು ಬಾರಿ ಭೇಟಿಯಾಗಿ ಓಡಾಡಿದ್ರು. ಕೆಲ ದಿನಗಳ ಹಿಂದೆ ನಮ್ಮ ಚಿಕ್ಕಪ್ಪ ಮದುವೆಗೆ ಒಪ್ಪುತ್ತಿಲ್ಲ ಎಂದು ಜನನಿ ಹೇಳಿದ್ದಳು.  ನೀನು ಬೇರೆ ಹುಡುಗಿ ಮದುವೆಯಾಗು ಎಂದು ಚೇತನ್‌ ಗೆ ಹೇಳಿದ್ದಳು. ಪ್ರಿಯತಮೆ ಜನನಿಯಿಂದ ದೂರವಾಗಿದಕ್ಕೆ ಮನನೊಂದಿದ್ದ ಚೇತನ್ ಈಗ ಸಾವು ಕಂಡಿದ್ದಾನೆ.

Rameshwaram Cafe Blast ಬೆಂಗಳೂರಲ್ಲಿ ಸ್ಫೋಟಿಸಿ, ಬಳ್ಳಾರಿಯಲ್ಲಿ ಓಡಾಟ! ಚಹರೆ ಕೊನೆಗೂ ಪತ್ತೆ!

ಪ್ರೀತಿ ಕಳೆದುಕೊಳ್ಳುವ ನೋವಿನಲ್ಲಿ  ನಿನ್ನೆ ರಾತ್ರಿ 11 ಗಂಟೆಗೆ  ಚೇತನ್ ಹುಡುಗಿ ಮನೆ ಬಳಿ ಹೋಗಿ ಗಲಾಟೆ ಮಾಡಿದ್ದ. ಈ ವೇಳೆ ಜನನಿ ಸಿಗದಿದ್ರೆ, ಸಾಯುವುದಾಗಿ ಹೇಳಿದ್ದ. ಆಗ ಕತ್ತರಿಯಿಂದ ಹೊಟ್ಟೆಗೆ ಚೇತನ್ ತಿವಿದುಕೊಂಡಿದ್ದು, ಬಳಿಕ ಚೇತನ್ ತಂದೆ ತಾಯಿಗೆ ಜನನಿ ಕಡೆಯವರು ವಿಷಯ ತಿಳಿಸಿದ್ದರು.

ರಂಜಾನ್ ತಿಂಗಳು, ಶಾಲಾ ವೇಳಾಪಟ್ಟಿ ಬದಲಿಸಿ ರಾಜ್ಯ ಸರ್ಕಾರ ಸುತ್ತೋಲೆ

ಸ್ಥಳಕ್ಕೆ ಪೋಷಕರು ಬಂದು ನೋಡುವಾಗ ಆಟೋದಲ್ಲಿ ಚೇತನ್ ಬಿದ್ದಿದ್ದ, ಬಳಿಕ ನಾಗರಬಾವಿ ಖಾಸಗಿ ಆಸ್ಪತ್ರೆಗೆ ಚೇತನ್ ದಾಖಲಿಸಿದ್ರು. ಚಿಕಿತ್ಸೆ ಫಲಕಾರಿಯಾಗದೇ ಚೇತನ್ ಸಾವು ಕಂಡಿದ್ದಾನೆ. ಆದರೆ ಚೇತನ್ ಕುಟುಂಬಸ್ಥರು ಇದು ಕೊಲೆ ಎಂಬ  ಆರೋಪ ಮಾಡಿದ್ದಾರೆ.  ಹುಡುಗಿ ಮನೆಯವರೇ ಕೊಲೆ ಮಾಡಿದ್ದಾರೆ ಎಂದು ಆರೋಪಿಸಿದ್ದು, ನಂದಿನಿ ಲೇಔಟ್ ಪೊಲೀಸರು ಸದ್ಯ ಅನುಮಾನಸ್ಪಾದ ಸಾವು ಎಂದು ಪ್ರಕರಣ ದಾಖಲಸಿಕೊಂಡಿದ್ದಾರೆ.  

click me!