
ಮಂಡ್ಯ (ಸೆ. 21): ಮಗಳು ತನ್ನ ಪ್ರಿಯಕರೊಂದಿಗೆ ಓಡಿಹೋಗಿದ್ದಾಳೆಂದು ಮರ್ಯಾದೆಗೆ ಅಂಜಿ ತಂದೆ ಆತ್ಮಹತ್ಯೆಗೆ ಶರಣಾಗಿರುವ ಘಟನೆ ಮಂಡ್ಯ ಜಿಲ್ಲೆಯ ಕೆ.ಆರ್.ಪೇಟೆ ತಾಲೂಕಿನ ಬಾಚಹಳ್ಳಿಯಲ್ಲಿ ನಡೆದಿದೆ. ಬಾಚಹಳ್ಳಿ ಗ್ರಾಮದ ರವಿ(47) ಆತ್ಮಹತ್ಯೆಗೆ ಶರಣಾದ ವ್ಯಕ್ತಿ. ಅಪ್ರಾಪ್ತ ಪ್ರೇಮಿಗಳು ಕಳೆದ ಐದು ದಿನ ಹಿಂದೆ ಓಡಿ ಹೋಗಿದ್ದು, ಪ್ರೇಮಿಗಳನ್ನು ಹುಡುಕಿಕೊಡುವಂತೆ ಕೆ.ಆರ್.ಪೇಟೆ ಠಾಣೆಗೆ ಪೋಷಕರು ದೂರು ನೀಡಿದ್ದರು. ಆದರೆ 5 ದಿನವಾದರೂ ಪ್ರೇಮಿಗಳನ್ನ ಹುಡುಕಲು ಪೊಲೀಸರು ಮುಂದಾಗಿಲ್ಲ ಎನ್ನಲಾಗಿದೆ. ಹೀಗಾಗಿ ಮನನೊಂದ ಹುಡುಗಿ ತಂದೆ ಮನೆಯಲ್ಲಿಯೆ ನೇಣು ಬೀಗಿದು ಆತ್ಮಹತ್ಯೆಗೆ ಶರಣಾಗಿದ್ದಾರೆ.
ಕೆ.ಆರ್.ಪೇಟೆ ಪೊಲೀಸ್ ಠಾಣೆ ಮುಂದೆ ಮೃತ ರವಿ ಶವವಿಟ್ಟು ಕುಟುಂಬಸ್ಥರ ಪ್ರತಿಭಟನೆ ನಡೆಸಿದ್ದು ಪ್ರೇಮಿಗಳನ್ನ ಹುಡುಕುವಲ್ಲಿ ಪೊಲೀಸರು ನಿರ್ಲಕ್ಷ ವಹಿಸಿದ್ದಾರೆ ಎಂದು ಆರೋಪಿಸಿದ್ದಾರೆ.
ದಾವಣಗೆರೆ: ಬೆಂಗಳೂರಿನ ವಿವಾಹಿತೆ, ಪ್ರೇಮಿ ಆತ್ಮಹತ್ಯೆ: ಆಧಾರ್ ಕಾರ್ಡ್ ಮಾಡಿಸಲು ಹೋಗಿದ್ದ ವೇಳೆ ಆದ ಪರಿಚಯ ಪ್ರೇಮಕ್ಕೆ ತಿರುಗಿ, ತನ್ನ ಬೆಂಗಳೂರಿನ ಪ್ರೇಮಿಯೊಂದಿಗೆ ವಿವಾಹಿತ ಮಹಿಳೆ ತಮ್ಮ ಕೈಗಳಿಗೆ ವೇಲ್ ಕಟ್ಟಿಕೊಂಡು, ಕೆರೆಗೆ ಹಾರಿ ಆತ್ಮಹತ್ಯೆ ಮಾಡಿಕೊಂಡ ಘಟನೆ ಚನ್ನಗಿರಿ ಗ್ರಾಮದ ಬೆಂಕಿಕೆರೆಯಲ್ಲಿ ತಡವಾಗಿ ಬೆಳಕಿಗೆ ಬಂದಿದೆ.
ಬೆಂಗಳೂರಿನ ವಾಸಿಗಳಾದ ಟಿವಿಎಸ್ ಕಂಪನಿ ಸೂಪರ್ ವೈಸರ್ ಚರಣ್ (23 ವರ್ಷ) ಹಾಗೂ ನಾಗರತ್ನ (21 ವರ್ಷ) ಆತ್ಮಹತ್ಯೆ ಮಾಡಿದ ದುರ್ದೈವಿಗಳು. ಪೀಣ್ಯದಲ್ಲಿ ಫ್ಯಾಕ್ಟರಿಯೊಂದರಲ್ಲಿ ಕೆಲಸ ಮಾಡುತ್ತಿದ್ದ ಪ್ರಸನ್ನ ಕುಮಾರರನ್ನು ಮದುವೆಯಾಗಿದ್ದ ನಾಗರತ್ನ ಆಧಾರ್ ಕಾರ್ಡ್ ಮಾಡಿಸುವ ಕೇಂದ್ರವೊಂದರಲ್ಲಿ ಕೆಲಸ ಮಾಡಿಕೊಂಡಿದ್ದರು.
ತನ್ನ ಇಬ್ಬರು ಮಕ್ಕಳೊಂದಿಗೆ ತಾಯಿ ಆತ್ಮಹತ್ಯೆ
ಏಳು ತಿಂಗಳ ಹಿಂದೆ ಚರಣ್ ಕಾಲ್ ಸೆಂಟರ್‌ನಲ್ಲಿ ಕೆಲಸ ಮಾಡುತ್ತಿದ್ದ ವೇಳೆ ಆಧಾರ್ ಕಾರ್ಡ್ ಮಾಡಿಸಲು ಹೋದಾಗ ನಾಗರತ್ನ ಪರಿಚಯವಾಗಿತ್ತು. ಆ ಸ್ನೇಹವು ಪ್ರೀತಿ, ಪ್ರೇಮಕ್ಕೆ ಪರಿವರ್ತನೆಯಾಗಿ, ಸಂಬಂಧ ಹೊಂದಿದ್ದರು. ವಿವಾಹಿತೆ ನಾಗರತ್ನ-ಚರಣ್ ಪ್ರೀತಿಸುತ್ತಿರುವ ವಿಚಾರ ನಾಗರತ್ನ ಗಂಡ ಪ್ರಸನ್ನ ಕುಮಾರಗೆ ಗೊತ್ತಾಗಿ, ಎರಡೂ ಕುಟುಂಬಗಳ ಮಧ್ಯೆ ಜಗಳವೂ ಆಗಿತ್ತು. ನಾಲ್ಕು ದಿನಗಳ ಹಿಂದೆ ಚರಣ್, ನಾಗರತ್ನ ಇಬ್ಬರೂ ಮನೆಗಳನ್ನು ಬಿಟ್ಟು, ಬೈಕ್‌ನಲ್ಲಿ ಚನ್ನಗಿರಿ ತಾಲೂಕಿನತ್ತ ಬಂದಿದ್ದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ