ಜಮೀನು ವಿಚಾರಕ್ಕೆ ನಡೆದ ಜಗಳದಲ್ಲಿ ಕಾಂಗ್ರೆಸ್ ಮುಖಂಡನನ್ನ ಕಟ್ಟಿಹಾಕಿ ಮಾರಣಾಂತಿಕವಾಗಿ ಹಲ್ಲೆ ನಡೆಸಿದ ಘಟನೆ ಬೆಳಗಾವಿ ಜಿಲ್ಲೆಯ ಚಿಕ್ಕೋಡಿ ತಾಲೂಕಿನ ಜೋಡಕುರಳಿ ಗ್ರಾಮದಲ್ಲಿ ನಡೆದಿದೆ..
ಚಿಕ್ಕೋಡಿ (ಮಾ.15): ಜಮೀನು ವಿಚಾರಕ್ಕೆ ನಡೆದ ಜಗಳದಲ್ಲಿ ಕಾಂಗ್ರೆಸ್ ಮುಖಂಡನನ್ನ ಕಟ್ಟಿಹಾಕಿ ಮಾರಣಾಂತಿಕವಾಗಿ ಹಲ್ಲೆ ನಡೆಸಿದ ಘಟನೆ ಬೆಳಗಾವಿ ಜಿಲ್ಲೆಯ ಚಿಕ್ಕೋಡಿ ತಾಲೂಕಿನ ಜೋಡಕುರಳಿ ಗ್ರಾಮದಲ್ಲಿ ನಡೆದಿದೆ..
ಬಸನಗೌಡ ಪಾಟೀಲ್ ಹಲ್ಲೆಗೊಳಗಾದ ಕಾಂಗ್ರೆಸ್ ಮುಖಂಡ. ತಮ್ಮದೇ ಜಮೀನು ವಿವಾದ ಹಿನ್ನೆಲೆ ನಿನ್ನೆ ಮಧ್ಯಾಹ್ನ ಸಹೋದರರೊಂದಿಗೆ ಮಾತಿನ ಚಕಮಕಿ ನಡೆದಿತ್ತು. ಮಾತಿಗೆ ಮಾತು ಬೆಳೆದು ಹೊಡೆದಾಡಿಕೊಂಡ ಸಹೋದರರು.
ಬಿಟೆಕ್ ವಿದ್ಯಾರ್ಥಿ ಅನುಮಾನಾಸ್ಪದ ಸಾವು: ವಿವಿ ಕುಲಪತಿ ಸೇರಿ 7 ಜನರ ವಿರುದ್ಧ ಎಫ್‌ಐಆರ್
ಮಧ್ಯಾಹ್ನ ನಡೆದ ಜಗಳದ ಸಿಟ್ಟಿನಿಂದ ಕಳೆದ ರಾತ್ರಿ ಸುಮಾರು 20ಕ್ಕೂ ಹೆಚ್ಚು ಜನ ಸೇರಿಕೊಂಡು ದೊಣ್ಣೆ ಬಡಿಗೆಗಳೊಂದಿಗೆ ಬಸನಗೌಡ ಪಾಟೀಲ್ ಮೇಲೆ ದಾಳಿ ಮಾಡಿದ್ದಾರೆ. ಕೈ ಕಾಲುಗಳನ್ನ ಕಟ್ಟಿಹಾಕಿ ಮುಖಕ್ಕೆ ಖಾರದಪುಡಿಯ್ನ ಎರಚಿ ದೊಣ್ಣೆಗಳಿಂದ ಮಾರಣಾಂತಿಕವಾಗಿ ಹಲ್ಲೆ ನಡೆಸಿರುವ ಸಹೋದರರು ಮತ್ತು ಸಹಚರರು. ದೊಣ್ಣೆಯಿಂದ ಹೊಡೆದಿದ್ದಲ್ಲದೇ ಚಾಕುವಿನಿಂದ ತಲೆಗೆ ಹೊಡೆದು ಕೊಲೆಗೆ ಯತ್ನಿಸಿದ್ದಾರೆ.
ಒಂದು ಲಕ್ಷ ರೂಪಾಯಿ ಲಂಚ ಸ್ವೀಕರಿಸುವಾಗ ಲೋಕಾಯುಕ್ತ ಬಲೆಗೆ ಬಿದ್ದ ಕೆಆರ್ ಪುರಂ ಠಾಣೆ ಇನ್ಸ್‌ಪೆಕ್ಟರ್, ಪಿಎಸ್‌ಐ!
ಇನ್ನು ಗಲಾಟೆ ನಡೆಯುತ್ತಿದ್ದಂತೆ ಮನೆಯವರು 112 ಗೆ ಕರೆ ಮಾಡಿದ ಹಿನ್ನಲೆ ಕೂಡಲೇ 112 ಪೊಲೀಸ್ ಸಿಬ್ಬಂದಿ ಸ್ಥಳಕ್ಕೆ ಆಗಮಿಸಿದ ಹಲ್ಲೆಗೊಳಗಾದ ಬಸಗೌಡನನ್ನ ರಕ್ಷಣೆ ಮಾಡಿದ್ದಾರೆ. ಪೊಲೀಸರು ಆಗಮಿಸುತ್ತಿದ್ದಂತೆ ಹಲ್ಲೆ ನಡೆಸಿ ಪರಾರಿಯಾಗಿರುವ ಆರೋಪಿಗಳು.
ಸದ್ಯ ಗಾಯಾಳುವನ್ನ ಪೊಲೀಸರೇ ಖಾಸಗಿ ಆಸ್ಪತ್ರೆಗೆ ದಾಖಲಿಸಿದ್ದಾರೆ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಕಾಂಗ್ರೆಸ್ ಮುಖಂಡ ಬಸಗೌಡ ಪಾಟೀಲ್ 15 ಜನರ ವಿರುದ್ದ ದೂರು ನೀಡಿದ್ದಾರೆ.