ಆನೆಗೊಂದಿ ಉತ್ಸವದಲ್ಲಿ ಉಳಿದ ಆಹಾರ ಪದಾರ್ಥ ತಿಂದು 30ಕ್ಕೂ ಹೆಚ್ಚು ಕುರಿ, ಮೇಕೆಗಳು ಸಾವನ್ನಪ್ಪಿದ್ದು, 180ಕ್ಕೂ ಹೆಚ್ಚು ಕುರಿಗಳು ಅಸ್ವಸ್ಥಗೊಂಡ ದುರ್ಘಟನೆ ಕೊಪ್ಪಳ ಜಿಲ್ಲೆಯ ಗಂಗಾವತಿ ತಾಲೂಕಿನ ಆನೆಗೊಂದಿಯ ಕಡೆಬಾಗಿಲು ಗ್ರಾಮದ ಬಳಿ ನಡೆದಿದೆ.
ಕೊಪ್ಪಳ (ಮಾ.15): ಆನೆಗೊಂದಿ ಉತ್ಸವದಲ್ಲಿ ಉಳಿದ ಆಹಾರ ಪದಾರ್ಥ ತಿಂದು 30ಕ್ಕೂ ಹೆಚ್ಚು ಕುರಿ, ಮೇಕೆಗಳು ಸಾವನ್ನಪ್ಪಿದ್ದು, 180ಕ್ಕೂ ಹೆಚ್ಚು ಕುರಿಗಳು ಅಸ್ವಸ್ಥಗೊಂಡ ದುರ್ಘಟನೆ ಕೊಪ್ಪಳ ಜಿಲ್ಲೆಯ ಗಂಗಾವತಿ ತಾಲೂಕಿನ ಆನೆಗೊಂದಿಯ ಕಡೆಬಾಗಿಲು ಗ್ರಾಮದ ಬಳಿ ನಡೆದಿದೆ.
undefined
ಆನೆಗೊಂದಿ ಉತ್ಸವಕ್ಕೆ ಬಂದವರಿಗೆ ತಯಾರಿಸಿದ್ದ ಆಹಾರ. ಉತ್ಸವ ಮುಗಿದ ಬಳಿಕ ಉಳಿದ ಆಹಾರ ಪದಾರ್ಥವನ್ನು ಸಮರ್ಪಕವಾಗಿ ವಿಲೇವಾರಿ ಮಾಡದೆ ಅಲ್ಲೇ ಬಿಸಾಡಿದ್ದಕ್ಕೆ ನಡೆದ ದುರ್ಘಟನೆ. ಕೊಳೆತ ಆಹಾರ ಪದಾರ್ಥ ತಿಂದು ಸಾವನ್ನಪ್ಪಿರುವ ಕುರಿ, ಮೇಕೆಗಳು. ಮೂಕಪ್ರಾಣಿಗಳ ಸಾವಿಗೆ ಅಧಿಕಾರಿಗಳ ನಿರ್ಲಕ್ಷ್ಯವೇ ಕಾರಣ ಎಂದು ಕುರಿಗಾಯಿಗಳುಕ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಸ್ಥಳಕ್ಕೆ ಪಶು ವೈದ್ಯಕೀಯ ಇಲಾಖೆಯ ಡಾ. ಜಾಕೀರ ಹುಸೇನ್, ಡಾ.ಸೋಮಪ್ಪ ಆಗಮಿಸಿ, ಸ್ಥಳ ಪರಿಶೀಲನೆ ನಡೆಸಿದ್ದಾರೆ. ಅಸ್ವಸ್ಥಗೊಂಡ ನೂರಾರು ಕುರಿಗಳಿಗೆ ಪಶು ಇಲಾಖೆ ಸಿಬ್ಬಂದಿಯಿಂದ ಚಿಕಿತ್ಸೆ ನೀಡಲಾಗುತ್ತಿದೆ.