ಫಾರೆಸ್ಟ್‌ ರೇಂಜರ್‌ ದರ್ಶನಾ ಪವಾರ್‌ ಮರ್ಡರ್‌ ಕೇಸ್‌, ಗೆಳತಿಯನ್ನು ಕೊಂದು ಬೆಟ್ಟದಿಂದ ದೂಡಿದ್ದ ಬಾಯ್‌ಫ್ರೆಂಡ್‌!

By Santosh Naik  |  First Published Jun 22, 2023, 6:52 PM IST

ರಾಜ್ಯ ಅರಣ್ಯ ಇಲಾಖೆ ಪರೀಕ್ಷೆಯಲ್ಲಿ ಟಾಪರ್‌ ಆಗಿ ಫಾರೆಸ್ಟ್‌ ರೇಂಜರ್‌ ಆಗಿ ಆಯ್ಕೆಯಾಗಿದ್ದ ದರ್ಶನಾ ಪವಾರ್‌ರನ್ನು ಆಕೆಯ ಸ್ನೇಹಿತನೇ ಕೊಲೆ ಮಾಡಿದ್ದ ಪ್ರಕರಣದಲ್ಲಿ ಪುಣೆ ಪೊಲೀಸರು ದೊಡ್ಡ ಸಕ್ಸಸ್‌ ಕಂಡಿದ್ದಾರೆ. ಆಕೆಯ ಸ್ನೇಹಿತನನ್ನು ಬಂಧಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ.


ಪುಣೆ (ಜೂ.22): ಮಹಾರಾಷ್ಟ್ರ ರಾಜ್ಯ ಅರಣ್ಯ ಪರೀಕ್ಷೆಯ ಟಾಪರ್ (ತೃತೀಯ) ದರ್ಶನಾ ಪವಾರ್ ಅವರ ಕೊಲೆ ರಹಸ್ಯ 10 ದಿನಗಳ ನಂತರ ಭೇದಿಸಲಾಗಿದೆ. ಬುಧವಾರ ತಡರಾತ್ರಿ ಆತನ ಸ್ನೇಹಿತ ರಾಹುಲ್ ಹಂದೋರೆಯನ್ನು ಪೊಲೀಸರು ಬಂಧಿಸಿದ್ದಾರೆ. ಜೂನ್ 12 ರಂದು ರಾಜಗಢ ಕೋಟೆಯಲ್ಲಿ ಆಕೆಯನ್ನು ಕೊಂದು ಶವವನ್ನು ಬೆಟ್ಟದ ಕೆಳಗೆ ಎಸೆದಿದ್ದ. ದರ್ಶನಾ ಅವರ ಮನೆಯವರು ಆಕೆಯ ಮದುವೆಯನ್ನು ಬೇರೊಬ್ಬ ಹುಡುಗನ ಜೊತೆ ಮಾಡಲು ನಿರ್ಧರಿಸಿದ್ದರು ಎಂದು ರಾಹುಲ್ ಹೇಳಿದ್ದಾರೆ. ತಾನೂ ಅವಳನ್ನು ಮದುವೆಯಾಗಲು ಬಯಸುತ್ತಿರುವಾಗಲೇ ಆಕೆಯ ಮದುವೆಯ ತಯಾರಿಯೂ ಶುರುವಾಗಿತ್ತು. 26 ವರ್ಷದ ದರ್ಶನಾ ಪವಾರ್‌ ಹಾಗೂ ರಾಹುಲ್ ಹಂದೋರೆ ಇಬ್ಬರೂ ಜೊತೆಯಾಗಿ ಪರೀಕ್ಷೆ ನೀಡಿದ್ದರು. ಆದರೆ, ಪಾಸ್‌ ಆಗಲು ರಾಹುಲ್‌ ವಿಫಲವಾಗಿದ್ದರು. 

ಫಾರೆಸ್ಟ್‌ ರೇಂಜರ್‌ ಆಗಿ ಆಯ್ಕೆಯಾಗಿದ್ದ ದರ್ಶನಾ: ಮಹಾರಾಷ್ಟ್ರದ ಕೋಪರಗಾಂವ್ ನಿವಾಸಿ 26 ವರ್ಷದ ದರ್ಶನಾ ದತ್ತು ಪವಾರ್ ಮಹಾರಾಷ್ಟ್ರ ಲೋಕಸೇವಾ ಆಯೋಗ (ಎಂಪಿಎಸ್‌ಸಿ) ನಡೆಸಿದ ಅರಣ್ಯ ಪರೀಕ್ಷೆ ಬರೆದಿದ್ದರು. ಇದರಲ್ಲಿ ಅವರು ರಾಜ್ಯಕ್ಕೆ ಮೂರನೇ ಸ್ಥಾನ ಪಡೆದರು. ಆ ಬಳಿಕ ಅರಣ್ಯ ಇಲಾಖೆಯಲ್ಲಿ ರೇಂಜರ್ ಆಗಿ ಆಯ್ಕೆಯಾಗಿದ್ದರು. ದರ್ಶನಾ ಅವರು ಎಂಪಿಎಸ್‌ಸಿ ಪರೀಕ್ಷೆಯಲ್ಲಿ ಪಾಸ್‌ ಆದ ಬಳಿಕ, ಆಕೆಯ ಕೋಚಿಂಗ್‌ ಸೆಂಟರ್‌ ಜೂನ್‌ 11 ರಂದು ಸನ್ಮಾನ ಕಾರ್ಯಕ್ರಮ ಏರ್ಪಡಿಸಿತ್ತು. ಇದಕ್ಕಾಗಿ ಜೂನ್‌ 9 ರಂದು ದರ್ಶನಾ ಪುಣೆ ತಲುಪಿದ್ದರು. ಈಲ್ಲಿ ಆಕೆ ತನ್ನ ಸ್ನೇಹಿತನ ಮನೆಯಲ್ಲಿ ತಂಗಿದ್ದಳು. ಇದಾದ ಮೂರು ದಿನಗಳ ನಂತರ, ಅಂದರೆ ಜೂನ್ 12 ರಂದು, ದರ್ಶನಾ ತನ್ನ ಕುಟುಂಬ ಮತ್ತು ಸ್ನೇಹಿತರಿಗೆ ತಾನು ರಾಜ್‌ಗಢ್ ಕೋಟೆಗೆ ಹೋಗುವುದಾಗಿ ಹೇಳಿದ್ದಳು. ರಾಜ್‌ಗಢ್ ಕೋಟೆ ತಲುಪಿದ ಎರಡು ಗಂಟೆಗಳ ನಂತರ ದರ್ಶನಾ ಅವರ ಮೊಬೈಲ್ ಸ್ವಿಚ್ ಆಫ್ ಆಗಿತ್ತು. ಇದಾದ ನಂತರ ಅವರ ಮನೆಯವರು ನಾಪತ್ತೆ ದೂರು ದಾಖಲಿಸಿದ್ದರು.

ರಾಜ್‌ಗಢ್‌ ಕೋಟೆಯಿಂದ ನಾಪತ್ತೆಯಾದ ಏಳು ದಿನಗಳ ಬಳಿಕ ಅಂದರೆ,  ಜೂನ್‌ 19 ರಂದು ದರ್ಶನಾ ಪವಾರ್‌ ಅವರ ಮೃತ ದೇಹವನ್ನು ಪುಣೆಯ ಗ್ರಾಮೀಣ ಪೊಲೀಸ್‌ ಪತ್ತೆ ಮಾಡಿತ್ತು. ಬೆಟ್ಟದ ಮೇಲಿರುವ ರಾಜಗಢ ಕೋಟೆಯ ಕೆಳಭಾಗದಲ್ಲಿ ಆಕೆಯ ದೇಹ ಕೊಳೆತ ಸ್ಥಿತಿಯಲ್ಲಿ ಪತ್ತೆಯಾಗಿತ್ತು. ಆಕೆಯ ಕನ್ನಡಕ, ಶೂ ಹಾಗೂ ಮೊಬೈಲ್‌ ಫೋನ್‌ಗಳು ದರ್ಶನಾಳ ದೇಹದಿಂದ 50-60 ಮೀಟರ್‌ ದೂರದಲ್ಲಿ ಪತ್ತೆಯಾಗಿತ್ತು. ಆಕೆಯನ್ನು ಕೊಲೆ ಮಾಡಿ ದೇಹವನ್ನು ಬೆಟ್ಟದ ಕೆಳಗೆ ದೂಡಿದ್ದು ಮಾತ್ರವಲ್ಲದೆ, ಆಕೆಯ ವಸ್ತಗಳನ್ನೂ ಕೂಡ ರಾಹುಲ್‌ ಬೆಟ್ಟದ ಮೇಲಿಂದ ಎಸೆದಿದ್ದ. ಮೊಬೈಲ್‌ ಫೋನ್‌ ಎಸೆಯುವ ಮುನ್ನ ಅದನ್ನು ಸ್ವಿಚ್ ಆಫ್‌ ಕೂಡ ಮಾಡಿದ್ದ. ಮರಣೋತ್ತರ ಪರೀಕ್ಷೆಯ ವರದಿಯಲ್ಲೂ ಕತ್ತು ಹಿಸುಕಿ ಕೊಲೆ ಮಾಡಿರುವುದು ಬೆಳಕಿಗೆ ಬಂದಿದೆ.

ನಾಪತ್ತೆಯಾಗಿದ್ದ ರಾಹುಲ್‌: ಸೈಬರ್ ಪೊಲೀಸ್ ತನಿಖೆಯಲ್ಲಿ ಜೂನ್ 12 ರಂದು ರಾಜ್‌ಗಢ ಕೋಟೆಯೊಳಗೆ ದರ್ಶನಾ ಅವರ ಮೊಬೈಲ್‌ನ ಕೊನೆಯ ಸ್ಥಳ ಇರುವುದು ಕಂಡುಬಂದಿದೆ. ಇದಾದ ನಂತರ, ರಾಜ್‌ಗಢದ ಸುತ್ತಮುತ್ತಲಿನ ಸ್ಥಳದ ಸಿಸಿಟಿವಿ ದೃಶ್ಯಗಳನ್ನು ಪರಿಶೀಲಿಸಲಾಯಿತು. ಈ ವೇಳೆ ದರ್ಶನಾ ಅವರೊಂದಿಗೆ ರಾಹುಲ್ ಹಂದೋರೆ ಕೂಡ ಕಾಣಿಸಿಕೊಂಡಿದ್ದಾರೆ. ಇಬ್ಬರೂ ಬೈಕ್‌ನಲ್ಲಿ ಕೋಟೆ ತಲುಪಿರುವುದು ಕೆಲವು ದೃಶ್ಯಗಳಲ್ಲಿ ಕಂಡುಬಂದಿದೆ. ಜೂನ್ 12 ರಿಂದ ರಾಹುಲ್ ನಾಪತ್ತೆಯಾಗಿದ್ದು, ಅವರ ಮೊಬೈಲ್ ಸ್ವಿಚ್ ಆಫ್ ಆಗಿತ್ತು. ರಾಹುಲ್ ಕುಟುಂಬದವರು ಕೂಡ ನಾಪತ್ತೆ ದೂರು ದಾಖಲಿಸಿದ್ದರು. ಅಂದಿನಿಂದ ದರ್ಶನಾ ಹತ್ಯೆಯ ಶಂಕೆ ರಾಹುಲ್ ಮೇಲಿತ್ತು.

ವಾಟ್ಸಾಪ್‌ ಕಾಲ್‌ನಲ್ಲಿ ಬೆತ್ತಲಾದ 78 ವರ್ಷದ ವೃದ್ಧ: ಮುತ್ತಿನ ನಗರಿಯಲ್ಲಿ ಸೈಬರ್‌ ವಂಚಕರಿಂದ 23 ಲಕ್ಷ ರೂ. ಪಂಗನಾಮ

ಇಬ್ಬರೂ ಒಟ್ಟಿಗೆ ಪರೀಕ್ಷೆ ಬರೆದಿದ್ದರು: ರಾಹುಲ್ ಹಂದೋರೆ ನಾಸಿಕ್ ಜಿಲ್ಲೆಯ ಸಿನ್ನಾರ್ ಲಟುಕ್ಯದ ಶಾ ಗ್ರಾಮದವರು. ಬಿಎಸ್‌ಸಿ ಪದವೀಧರನಾಗಿರುವ ರಾಹುಲ್‌, ಪುಣೆಯ ಕೋಚಿಂಗ್‌ ಸೆಂಟರ್‌ನಲ್ಲಿ ದರ್ಶನಾರನ್ನು ಭೇಟಿಯಾಗಿದ್ದರು. ಇಬ್ಬರೂ ಕೂಡ ಜೊತೆಯಾಗಿ ಸ್ಪರ್ಧಾತ್ಮಕ ಪರೀಕ್ಷೆಗೆ ತಯಾರಿ ನಡೆಸಿದ್ದರು. ರಾಹುಲ್ ಕೂಡ ದರ್ಶನಾಳ ದೂರದ ಸಂಬಂಧಿಯಾಗಿದ್ದ. ಇಬ್ಬರೂ ಒಟ್ಟಿಗೆ ಪರೀಕ್ಷೆ ಬರೆದಿದ್ದರು. ರಾಹುಲ್‌ ಫೇಲ್‌ ಆದರೆ, ದರ್ಶಾನಾ ಟಾಪರ್‌ ಆಗಿ ಫಾರೆಸ್ಟ್‌ ರೇಂಜರ್‌ ಹುದ್ದೆಗೆ ಆಯ್ಕೆಯಾಗಿದ್ದರು.

Tap to resize

Latest Videos

ಲೈಂಗಿಕ ಕಿರುಕುಳಕ್ಕೆ ವಿರೋಧ: ಚಲಿಸುತ್ತಿದ್ದ ರೈಲಿನಿಂದ ಮಹಿಳೆ ತಳ್ಳಿದ ಐವರು ಕಾಮುಕರು!

click me!