ಮದ್ವೆಯಾದ ಖುಷಿಯಲ್ಲಿ ಚಲಿಸುವ ಕಾರಲ್ಲಿ ಡಾನ್ಸ್‌ : ಮಧುಮಗನಿಗೆ ಬಿತ್ತು 2 ಲಕ್ಷ ದಂಡ

Published : Jun 16, 2022, 12:11 PM IST
ಮದ್ವೆಯಾದ ಖುಷಿಯಲ್ಲಿ ಚಲಿಸುವ ಕಾರಲ್ಲಿ ಡಾನ್ಸ್‌ : ಮಧುಮಗನಿಗೆ ಬಿತ್ತು 2 ಲಕ್ಷ ದಂಡ

ಸಾರಾಂಶ

ಲಕ್ನೋ: ಮದ್ವೆ ಸಂಭ್ರಮದಲ್ಲಿ ಸ್ನೇಹಿತರ ಜೊತೆಗೂಡಿ ರಸ್ತೆಯಲ್ಲಿ ಚಲಿಸುತ್ತಿದ್ದ ಕಾರ್‌ನಲ್ಲಿ ಡಾನ್ಸ್ ಮಾಡಿದ ಮಧುಮಗನಿಗೆ ಸಂಕಷ್ಟ ಎದುರಾಗಿದೆ. ಈತನ ಡಾನ್ಸ್ ನೋಡಿದ ಟ್ರಾಫಿಕ್ ಪೊಲೀಸರು ಬರೋಬರಿ ಎರಡು ಲಕ್ಷ ದಂಡ ವಿಧಿಸಿದ್ದಾರೆ. ಉತ್ತರಪ್ರದೇಶದಲ್ಲಿ ಈ ಘಟನೆ ನಡೆದಿದೆ.   

ಲಕ್ನೋ: ಮದ್ವೆ ಸಂಭ್ರಮದಲ್ಲಿ ಸ್ನೇಹಿತರ ಜೊತೆಗೂಡಿ ರಸ್ತೆಯಲ್ಲಿ ಚಲಿಸುತ್ತಿದ್ದ ಕಾರ್‌ನಲ್ಲಿ ಡಾನ್ಸ್ ಮಾಡಿದ ಮಧುಮಗನಿಗೆ ಸಂಕಷ್ಟ ಎದುರಾಗಿದೆ. ಈತನ ಡಾನ್ಸ್ ನೋಡಿದ ಟ್ರಾಫಿಕ್ ಪೊಲೀಸರು ಬರೋಬರಿ ಎರಡು ಲಕ್ಷ ದಂಡ ವಿಧಿಸಿದ್ದಾರೆ. ಉತ್ತರಪ್ರದೇಶದಲ್ಲಿ ಈ ಘಟನೆ ನಡೆದಿದೆ. 

ಮದ್ವೆ ಅಂದರೆ ಕುಟುಂಬದವರು ಬಂಧುಗಳು ಸ್ನೇಹಿತರು ಎಲ್ಲರೂ ಸೇರಿ ಸಂಭ್ರಮಿಸುವ ದಿನ. ಮದ್ವೆ ದಿನ ಮಾಡುವ ಮೋಜು ಮಸ್ತಿಗೆ ಲೆಕ್ಕವೇ ಇರುವುದಿಲ್ಲ. ಅದರಲ್ಲೂ ವಧು ಹಾಗೂ ವರನ ಸ್ನೇಹಿತರು ಮಾಡುವ ಕೀಟಲೆಗಳಿಗೆ ಪಾರವೇ ಇರುವುದಿಲ್ಲ. ಕೆಲವು ಸ್ನೇಹಿತರಂತೂ ಸ್ನೇಹಿತರ ಮದುವೆ ದಿನ ಸಿಕ್ಕಿದ್ದೇ ಚಾನ್ಸ್ ಎಂಬಂತೆ ಆತನಿಗೆ ಇಲ್ಲದ ಕಾಟ ಕೊಡುತ್ತಾರೆ. ಕೆಲವು ಸ್ನೇಹಿತರು ಮದ್ವೆ ದಿನವೇ ಮದುಮಗನಿಗೆ ಕುಡಿಸಿದ ಘಟನೆಯ ವಿಡಿಯೋ ಈ ಹಿಂದೆ ವೈರಲ್ ಆಗಿತ್ತು. ಈ ಮಧ್ಯೆ  ಮದುವೆ ದಿನ ಡಾನ್ಸ್ ಇರಲೇಬೇಕು ಎಂಬುದು ಅಲಿಖಿತ ನಿಯಮ ಡಾನ್ಸ್ ಮಾಡದೇ ಮದ್ವೆ ಪೂರ್ಣಗೊಂಡರೆ ಅದು ಮದ್ವೆಯೇ ಅಲ್ಲ ಎಂಬುದು ಅನೇಕ ಮೋಜು ಪ್ರಿಯರ ಮಾತು. 

ಈ ಮಧ್ಯೆ ಮದ್ವೆ ದಿನ ಡಾನ್ಸ್ ಮಾಡಿದ ವರನೋರ್ವ ಬರೋಬರಿ 2 ಲಕ್ಷ ರೂ ದಂಡ ಕಟ್ಟುವಂತಾಗಿದೆ. ಡಾನ್ಸ್ ಮಾಡಿದ್ದಕ್ಕೆ ದಂಡವೇಕೆ ಎಂದು ಅಚ್ಚರಿಯಾಗಬೇಡಿ. ಮದುವೆ ಮನೆಯಲ್ಲೇ ಇವರು ಡಾನ್ಸ್ ಮಾಡಿದ್ದರೆ ಹೆಚ್ಚಿನ ಅನಾಹುತವೂ ಆಗುತ್ತಿರಲಿಲ್ಲ ಯಾರಿಗೂ ತೊಂದರೆ ಆಗುತ್ತಿರಲಿಲ್ಲ. ಆದರೆ ಇವರು ಭಾರಿ ವಾಹನ ದಟ್ಟಣೆ ಇದ್ದ ರಸ್ತೆಯಲ್ಲಿ ಚಲಿಸುತ್ತಿರುವ ತೆರೆದ ಕಾರಿನಲ್ಲಿ ಡಾನ್ಸ್‌ ಮಾಡಿದ್ದಾರೆ. ಈ ಮೂಲಕ ಇತರ ವಾಹನ ಸವಾರರಿಗೂ ತೊಂದರೆ ಮಾಡಿದ್ದಾರೆ. ಇವರು ಹೀಗೆ ಮದ್ವೆ ಸಂಭ್ರಮದಲ್ಲಿ ಡಾನ್ಸ್ ರಸ್ತೆ ಟ್ರಾಫಿಕ್ ಎಲ್ಲವನ್ನು ಮರೆತು ಡಾನ್ಸ್ ಮಾಡುತ್ತಿದ್ದರೆ, ಇವರ ಹಿಂದೆ ಬರುತ್ತಿದ್ದ ಯಾರೋ ವಾಹನ ಸವಾರರು ಇವರ ಡಾನ್ಸ್‌ನ ದೃಶ್ಯವನ್ನು ಮೊಬೈಲ್‌ನಲ್ಲಿ ರೆಕಾರ್ಡ್ ಮಾಡಿ ಉತ್ತರಪ್ರದೇಶ ಪೊಲೀಸರಿಗೆ ಸಾಮಾಜಿಕ ಜಾಲತಾಣವಾದ ಟ್ವಿಟ್ಟರ್‌ನಲ್ಲಿ ಟ್ಯಾಗ್ ಮಾಡಿದ್ದಾರೆ.

Police vs Public ತ್ರಿಬಲ್ ರೈಡ್ ಸ್ಕೂಟಿ ನಿಲ್ಲಿಸಿದ ಪೊಲೀಸ್‌ಗೆ ಮಹಿಳೆ ಸೇರಿ ಸಾರ್ವಜನಿಕರಿಂದ ಥಳಿತ!

ವರನ ದಿಬ್ಬಣದ ಚಲಿಸುತ್ತಿದ್ದ ದಾರಿಯಲ್ಲೇ ಪ್ರಯಾಣಿಸುತ್ತಿದ್ದ  ಅಂಕಿತ್ ಕುಮಾರ್ (Ankit Kumar) ಎಂಬುವರು ಈ ದೃಶ್ಯವನ್ನು ರೆಕಾರ್ಡ್ ಮಾಡಿದ ನಂತರ ಘಟನೆ ಬೆಳಕಿಗೆ ಬಂದಿದೆ ಮತ್ತು ಅವರು ಕ್ರಮಕ್ಕಾಗಿ ವಿನಂತಿಸಿ ಉತ್ತರ ಪ್ರದೇಶ ಸಂಚಾರ ಪೊಲೀಸರಿಗೆ ಈ ವಿಡಿಯೋವನ್ನು ಟ್ವೀಟ್ ಮಾಡಿದ್ದರು. ಹರಿದ್ವಾರದಿಂದ (Haridwar) ನೋಯ್ಡಾಕ್ಕೆ (Noida) ನಾನು ಪ್ರಯಾಣಿಸುತ್ತಿದ್ದ ಸಮಯದಲ್ಲಿ, ಮುಜಫರ್‌ನಗರ ಜಿಲ್ಲೆಯ (Muzaffarnagar district) ಕೆಲವರು ತಮ್ಮ ಮನರಂಜನೆಗಾಗಿ ಇತರರ ಪ್ರಾಣವನ್ನು ಅಪಾಯಕ್ಕೆ ಒಡ್ಡುತ್ತಿದ್ದರು. ಟ್ರಾಫಿಕ್ ಪೊಲೀಸರು ಈ ವಿಷಯವನ್ನು ಅರಿತುಕೊಳ್ಳುತ್ತಾರೆ ಎಂದು ಭಾವಿಸುತ್ತೇವೆ ಎಂದು ಕುಮಾರ್ ಟ್ವೀಟ್‌ನಲ್ಲಿ ಬರೆದಿದ್ದಾರೆ.

ನಾನು ಯಾರ ಮಗಳು ಗೊತ್ತಾ?: ಟ್ರಾಫಿಕ್ ಪೊಲೀಸರೊಂದಿಗೆ ಅರವಿಂದ ಲಿಂಬಾವಳಿ ಪುತ್ರಿ ಕಿರಿಕ್

ವರನಂತೆ ಕಾಣಿಸುವ ವ್ಯಕ್ತಿಯೊಬ್ಬ ಚಲಿಸುತ್ತಿರುವ ಕಾರಿನೊಳಗೆ ನಿಂತು ತನ್ನ ಸ್ನೇಹಿತರೊಂದಿಗೆ ಕಾರ್ ಸ್ಟಂಟ್ ಮಾಡುವಾಗ ಸೆಲ್ಫಿ ತೆಗೆದುಕೊಳ್ಳುತ್ತಿರುವುದನ್ನು ವೀಡಿಯೊ ತೋರಿಸುತ್ತದೆ. ಅಂಕಿತ್ ಕುಮಾರ್ ಅವರ ಟ್ವಿಟ್ಟರ್ ಮೂಲಕ ಬಂದ ದೂರನ್ನು ಸ್ವಯಂ ಪ್ರೇರಣೆಯನ್ನು ಸ್ವೀಕರಿಸಿದ ಹಿರಿಯ ಪೊಲೀಸ್ ಅಧೀಕ್ಷಕ (ಎಸ್‌ಎಸ್‌ಪಿ) (Senior Superintendent of Police) ಅಭಿಷೇಕ್ ಯಾದವ್ (Abhishek Yadav), ಮುಜಫರ್‌ನಗರದ ಟ್ರಾಫಿಕ್ ಪೊಲೀಸರಿಗೆ ಈ ವೀಡಿಯೊದ ಬಗ್ಗೆ ಎಚ್ಚರಿಕೆ ನೀಡಿದರು ಮತ್ತು ಕಠಿಣ ಕ್ರಮ ಕೈಗೊಳ್ಳುವಂತೆ ಆದೇಶಿಸಿದರು.

ವೀಡಿಯೋ ಆಧರಿಸಿ ಒಂಬತ್ತು ವಾಹನಗಳನ್ನು ಗುರುತಿಸಲಾಗಿದ್ದು, ಮಾಲೀಕರ ವಿರುದ್ಧ 2 ಲಕ್ಷ ರೂಪಾಯಿ ಚಲನ್‌ಗಳನ್ನು ಜಾರಿ ಮಾಡಿದ್ದೇವೆ ಎಂದು ಸಂಚಾರ ವಿಭಾಗದ ಎಸ್‌ಪಿ ಕುಲದೀಪ್ ಸಿಂಗ್ ಹೇಳಿದ್ದಾರೆ. ಇದಲ್ಲದೇ ಸಂಬಂಧಿಸಿದ ಸೆಕ್ಷನ್‌ಗಳ ಅಡಿಯಲ್ಲಿ ಸೂಕ್ತ ಕ್ರಮ ಕೈಗೊಳ್ಳಲಾಗುವುದು. ಎಲ್ಲಾ ವಾಹನಗಳು ದೆಹಲಿ ನೋಂದಣಿ ಸಂಖ್ಯೆಯನ್ನು ಹೊಂದಿವೆ ಎಂದು ಅವರು ಹೇಳಿದರು.
 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಬೆಂಗಳೂರಿನ ಬಾಡಿಗೆ ಮನೆಯಲ್ಲಿ ಕೊಳೆತ ಸ್ಥಿತಿಯಲ್ಲಿ ವ್ಯಕ್ತಿಯ ಶವ ಪತ್ತೆ
ಬೆಂಗಳೂರು ಅಪಾರ್ಟ್‌ಮೆಂಟ್‌ನ 16 ಕುಟುಂಬಗಳಿಗೆ ರೌಡಿಸಂ ದರ್ಶನ; ಮಾಟ-ಮಂತ್ರ ಮಾಡಿಸಿ ಕಿರುಕುಳ!