ದಲಿತ ಕೂಲಿಕಾರ್ಮಿಕರ ಮೇಲೆ ದೌರ್ಜನ್ಯ: ತನಿಖಾ ಸಮಿತಿ ರಚನೆಗೆ ಕೆಜಿಎಫ್‌ ಒತ್ತಾಯ

By Kannadaprabha News  |  First Published Oct 15, 2022, 7:49 AM IST
  • ದೌರ್ಜನ್ಯ: ತನಿಖಾ ಸಮಿತಿ ರಚನೆಗೆ ಕೆಜಿಎಫ್‌ ಒತ್ತಾಯ
  • ತೋಟ ಮಾಲೀಕರು- ಕಾರ್ಮಿಕರ ಉತ್ತಮ ಬಾಂಧವ್ಯ ಹದಗೆಡಿಸಲು ಮಧ್ಯವರ್ತಿಗಳ ಪ್ರಯತ್ನ: ಅತ್ತಿಕಟ್ಟೆಜಗನ್ನಾಥ್‌ ಆರೋಪ

ಚಿಕ್ಕಮಗಳೂರು (ಅ.15) : ಕಾಫಿತೋಟ ಮಾಲೀಕರು ಹಾಗೂ ಕಾರ್ಮಿಕರ ನಡುವೆ ನೂರಾರು ವರ್ಷಗಳಿಂದ ಉತ್ತಮ ಬಾಂಧವ್ಯವಿದೆ. ಇದನ್ನು ಕೆಡಿಸುವ ಪ್ರಯತ್ನ ಕಳೆದೆರಡು ವರ್ಷಗಳಿಂದ ಕಾರ್ಮಿಕರಲ್ಲದ ಮಧ್ಯವರ್ತಿಗಳಿಂದ ನಡೆಯುತ್ತಿದೆ ಎಂದು ಕರ್ನಾಟಕ ಬೆಳೆಗಾರರ ಒಕ್ಕೂಟ (ಕೆಜಿಎಫ್‌) ಮಾಜಿ ಅಧ್ಯಕ್ಷ ಅತ್ತಿಕಟ್ಟೆಜಗನ್ನಾಥ್‌ ಹೇಳಿದರು.

ದಲಿತ ಕಾರ್ಮಿಕರ ಮೇಲೆ ಹಲ್ಲೆ ಪ್ರಕರಣ; ಪ್ರತಿದೂರು ದಾಖಲಿಸಿದ ಜಗದೀಶಗೌಡ ಪತ್ನಿ ಅಶ್ವಿನಿ

Tap to resize

Latest Videos

ಕಾರ್ಮಿಕರನ್ನು ಮಾಲೀಕರ ವಿರುದ್ಧ ಎತ್ತಿಕಟ್ಟಿನಂತರ ಬ್ಲಾಕ್‌ಮೇಲ್‌ ಮಾಡುವುದು ನಿರಂತರವಾಗಿ ನಡೆಯುತ್ತಿದೆ. ಬಾಳೆಹೊನ್ನೂರಿನ ಜೇನುಗದ್ದೆ ಬಳಿ ಪುರ ಗ್ರಾಮದ ಅಬ್ಬಿಕೂಲ್‌ ಎಸ್ಟೇಟ್‌ ಮಾಲೀಕ ಪಿ.ಆರ್‌. ಜಗದೀಶ್‌ಗೌಡ ಅವರು ನಡೆಸಿದ್ದಾರೆ ಎನ್ನಲಾದ ಪ್ರಕರಣ ಇದರ ಒಂದು ಭಾಗ. ಈ ಘಟನೆಗೆ ಸಂಬಂಧಿಸಿದಂತೆ ಸತ್ಯಾಸತ್ಯತೆ ತಿಳಿಯಲು ತನಿಖಾ ಸಮಿತಿ ರಚನೆ ಮಾಡಬೇಕು. ನಿಜವಾದ ತಪ್ಪಿತಸ್ಥರಿಗೆ ಶಿಕ್ಷೆಯಾಗಬೇಕೆಂದು ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ರಕ್ಷಣಾಧಿಕಾರಿ ಅವರಿಗೆ ಮನವಿ ಸಲ್ಲಿಸಿ, ಕೋರಿಕೊಳ್ಳಲಾಗಿದೆ ಎಂದು ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ನಮ್ಮ ಜಿಲ್ಲೆಯಲ್ಲಿ ಕಾಫಿತೋಟಗಳಲ್ಲಿ ಕೆಲಸ ಮಾಡುವ ಸ್ಥಳೀಯ ಹಾಗೂ ಹೊರರಾಜ್ಯ, ದೇಶದ ಸುಮಾರು .3 ಲಕ್ಷ ಕಾರ್ಮಿಕರು ಇದ್ದಾರೆ. ಇವರಿಗೆ ಬೇಕಾದ ಮೂಲಭೂತ ಸವಲತ್ತುಗಳನ್ನು ನಮ್ಮ ತೋಟಗಳಲ್ಲಿ ನೀಡಲಾಗುತ್ತಿದೆ. ಜತೆಗೆ ಅಗತ್ಯವಿದ್ದಾಗ ಹಣಕಾಸಿನ ನೆರವು ಸಹ ನೀಡಲಾಗಿದೆ. ಹೆಚ್ಚಿನ ಪಾಲು ತೋಟಗಳಲ್ಲಿ ಕಾರ್ಮಿಕರ ಹಾಗೂ ಮಾಲೀಕರ ನಡುವೆ ಉತ್ತಮ ಬಾಂಧವ್ಯ ಇದೆ ಎಂದರು.

ಕಳೆದೆರಡು ವರ್ಷಗಳಿಂದ ಜಿಲ್ಲೆಯ ಕೆಲವೆಡೆ ಕಾರ್ಮಿಕರು ಹಾಗೂ ಮಾಲೀಕರ ನಡುವೆ ಚಿಕ್ಕಪುಟ್ಟವೈಮನಸ್ಸು ಕಂಡುಬರುತ್ತಿದೆ. ಇದಕ್ಕೆ ಕಾರಣ ಮಧ್ಯವರ್ತಿಗಳು, ಮಾಲೀಕರ ವಿರುದ್ಧ ಅವರನ್ನು ಎತ್ತಿಕಟ್ಟಿ, ಜಾತಿ ನಿಂದನೆಯ ದೂರು ನೀಡುವುದಾಗಿ ಬೆದರಿಸಿ ಹಣ ವಸೂಲಿ ಮಾಡುತ್ತಿದ್ದಾರೆ ಎಂದು ಹೇಳಿದರು.

.9 ಲಕ್ಷ ಮುಂಗಡವಾಗಿ ಪಡೆದು, ನಂತರ ಕೆಲಸಕ್ಕೆ ಹೋಗದೇ ಇದ್ದುದರಿಂದ ತೋಟದ ನಿರ್ವಹಣೆಗೆ ಜಗದೀಶ್‌ಗೌಡ ಅವರಿಗೆ ತುಂಬಾ ಕಷ್ಟವಾಗಿತ್ತು. ಈ ಸಂದರ್ಭದಲ್ಲಿ ಎರಡೂ ಕಡೆಯಿಂದಲೂ ಆವೇಶದ ಘರ್ಷಣೆ ಮಾತುಗಳು ಕೇಳಿಬಂದಿವೆ. ಜಾತಿ ನಿಂದನೆಯ ಪದಗಳು ಎಲ್ಲೂ ಬಳಕೆಯಾಗಿಲ್ಲ. ಪೂರ್ವ ನಿಯೋಜಿತವಾಗಿ ಮೊಬೈಲ್‌ಗಳಲ್ಲಿ ಸೆರೆಹಿಡಿಯುವ ಉದ್ದೇಶದಿಂದ ಕಾಲ್ಪನಿಕ ದೃಶ್ಯಗಳನ್ನು ಸೃಷ್ಟಿಮಾಡಿ ಸಾಮಾಜಿಕ ಜಾಲತಾಣ ಹಾಗೂ ಅನೇಕ ಮಾಧ್ಯಮಗಳಲ್ಲಿ ಪ್ರಸಾರ ಮಾಡಿದ್ದಾರೆ. ಇದೊಂದು ಪೂರ್ವ ನಿಯೋಜಿತ ಪ್ರಕರಣ ಎಂದರು.

ದಲಿತ ಕುಟುಂಬಕ್ಕೆ ಹಿಂಸೆ: ನಿಷ್ಷಕ್ಷಪಾತ ತನಿಖೆಗೆ ಸಿದ್ದು ಆಗ್ರಹ

ಜಗದೀಶ್‌ಗೌಡ ಅವರ ತೋಟಕ್ಕೆ ಬರುವ 3 ತಿಂಗಳ ಮೊದಲು ಈ ಕುಟುಂಬಗಳು ಚೀರನಹಳ್ಳಿಯ ಕಾಫಿತೋಟದಲ್ಲಿ ಮುಂಗಡವಾಗಿ .7 ಲಕ್ಷ ಪಡೆದು ಕೂಲಿಲೈನ್‌ನಲ್ಲಿ ವಾಸವಾಗಿದ್ದರು. ಅಲ್ಲಿಯೂ ಸಮಸ್ಯೆ ಆಗಿದ್ದರಿಂದ ಜಗದೀಶ್‌ಗೌಡ ತೋಟಕ್ಕೆ ಬಂದಿದ್ದರು. ತೋಟ ಕಾರ್ಮಿಕರು ಯಾವುದೇ ಸಮಸ್ಯೆಗೆ ಅವಕಾಶ ನೀಡಬಾರದು, ಚಿಕ್ಕಪುಟ್ಟವೈಮನಸ್ಸು ಬಂದರೆ ಸ್ಥಳೀಯವಾಗಿ ಕುಳಿತು ಬಗೆಹರಿಸಿಕೊಳ್ಳಬೇಕು. ಇಲ್ಲದೆ ಹೋದರೆ ಮಧ್ಯವರ್ತಿಗಳು ಇದರ ಲಾಭ ಪಡೆಯುತ್ತಾರೆ ಎಂದು ಹೇಳಿದರು. ಸುದ್ದಿಗೋಷ್ಠಿಯಲ್ಲಿ ಖಾಂಡ್ಯ ಕಾಫಿ ಬೆಳೆಗಾರರ ಸಂಘದ ಅಧ್ಯಕ್ಷ ಎಸ್‌.ಶಂಕರ್‌, ಆವತಿ ಕಾಫಿ ಬೆಳೆಗಾರರ ಸಂಘದ ಅಧ್ಯಕ್ಷ ಎಚ್‌.ಎನ್‌. ಶ್ರೀಧರ್‌, ಆಲ್ದೂರು ಘಟಕದ ಅಧ್ಯಕ್ಷ ಪಿ.ಸುರೇಶ್‌ ಉಪಸ್ಥಿತರಿದ್ದರು.

click me!