
ಬರೇಲಿ (ಸೆ.9): ಪಡೆದ ಹಣವನ್ನು ಮರಳಿಸುವುದಾಗಿ ದಲಿತ ಮಹಿಳೆಯನ್ನು ಹೋಟೆಲಿನ ರೂಮಿಗೆ ಕರೆಸಿದ ವೇಳೆ ಮೂವರು ವ್ಯಕ್ತಿಗಳು ಸೇರಿಕೊಂಡು ಮಹಿಳೆಗೆ ಬಲವಂತವಾಗಿ ಗೋಮಾಂಸ ಕೊಟ್ಟು, ಮಾದಕ ವಸ್ತು ತಿನ್ನಿಸಿ ಸಾಮೂಹಿಕ ಅತ್ಯಾಚಾರ ಗೈದ ಘಟನೆ ಉತ್ತರಪ್ರದೇಶದ ಬರೇಲಿಯಲ್ಲಿ ನಡೆದಿದೆ. ಸಂತ್ರಸ್ತ ಮಹಿಳೆ ತನ್ನ ಸ್ನೇಹಿತ ಶೋಯೆಬ್‌ನಿಗೆ 30,000 ರು.ಗಳನ್ನು ನೀಡಿದ್ದರು. ಇದನ್ನು ಮರಳಿಸುವುದಾಗಿ ಶೋಯೆಬ್ ಮಹಿಳೆಯನ್ನು ಹೋಟೆಲಿನ ರೂಮಿಗೆ ಕರೆಸಿ, ತನ್ನ ಇಬ್ಬರು ಸ್ನೇಹಿತರೊಂದಿಗೆ ಈ ಘಟನೆ ಮಾಡಿದ್ದ. ಇದರ ವಿಡಿಯೋ ಚಿತ್ರೀಕರಿಸಿ 5 ಲಕ್ಷ ರು.ಬೇಡಿಕೆ ಇಟ್ಟಿದ್ದ. ಇದನ್ನು ಮಹಿಳೆಯ ಭಾವಿ ಪತಿಗೂ ಕಳಿಸಿದ್ದ. ಬಳಿಕ ಭಾವಿ ಪತಿ ನೀಡಿದ ದೂರಿನ ಮೇರೆಗೆ ಮೂವರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.
ದಾವಣಗೆರೆ ವಿಶ್ವವಿದ್ಯಾನಿಲಯದ ಆವರಣದಿಂದಲೇ ವಿದ್ಯಾರ್ಥಿನಿಯ ಕಿಡ್ನಾಪ್, ತಾಯಿಯಿಂದಲೇ ಕೃತ್ಯ!
ಬಿ ಫಾರ್ಮಾ ವಿದ್ಯಾರ್ಥಿ ಶೋಯೆಬ್ ಮತ್ತು ಕ್ಷೌರಿಕನಾಗಿ ಕೆಲಸ ಮಾಡುವ ನಾಜಿಮ್ ಎಂದು ಗುರುತಿಸಲಾದ ಆರೋಪಿಗಳು ಈ ಕೃತ್ಯವನ್ನು ಚಿತ್ರೀಕರಿಸಿದ್ದಾರೆ. ಯುವತಿಗೆ ಬ್ಲ್ಯಾಕ್ ಮೇಲ್ ಮಾಡಿ ಆಕೆಯನ್ನು ಮದುವೆಯಾಗುವ ವರನಿಗೆ 5 ಲಕ್ಷ ರೂ. ಕೊಡುವಂತೆ ಬೇಡಿಕೆ ಇಟ್ಟಿದ್ದಾರೆ. ವೀಡಿಯೊವನ್ನು ಯುವತಿಯ ಭಾವಿ ಪತಿಗೆ ಕಳುಹಿಸಿದ ನಾಜಿಮ್ ಬಳಿಕ ಕಾಶ್ಮೀರಕ್ಕೆ ಪಲಾಯನ ಮಾಡಲು ಪ್ರಯತ್ನಿಸಿದ್ದಾನೆ. ಬ್ಲ್ಯಾಕ್ ಮೇಲ್ ನಿಂದ ನೊಂದ ಕುಟುಂಬ ಪೊಲೀಸರಿಗೆ ದೂರು ನೀಡಿದ್ದಾರೆ.
ಸಿಟಿಸ್ಕ್ಯಾನ್ ವೇಳೆ ವೃದ್ಧೆಯನ್ನು ವಿವಸ್ತ್ರಗೊಳಿಸಿ ಲೈಂಗಿಕ ಕಿರುಕುಳ; ಖಾಸಗಿ ಆಸ್ಪತ್ರೆ ಲ್ಯಾಬ್ ಟೆಕ್ನಿಶಿಯ
ಅತ್ಯಾಚಾರಕ್ಕೊಳಗಾದ ಮಹಿಳೆ ತನ್ನ ಮುಸ್ಲಿಂ ಸ್ನೇಹಿತನಿಂದ ಸ್ವಲ್ಪ ಹಣವನ್ನು ಸಾಲ ಪಡೆದಿದ್ದಳು ಮತ್ತು ಅದನ್ನು ಹಿಂದಿರುಗಿಸಲು ಬಯಸಿದ್ದಳು ಎಂದು ವರದಿಯಾಗಿದೆ. ಸೆಪ್ಟೆಂಬರ್ 2 ರಂದು, ಆರೋಪಿಗಳು ಯುವತಿಯನ್ನು ಹಣ ತೆಗೆದುಕೊಳ್ಳುವ ನೆಪಕ್ಕೆ ಕೆಫೆಗೆ ಕರೆದರು, ಅಲ್ಲಿ ಇತರ ಇಬ್ಬರು ಪುರುಷರು ಕೂಡ ಇದ್ದರು. ನಂತರ ಆಕೆಯನ್ನು ವಂಚಿಸಿ, ಡ್ರಗ್ ಮಿಶ್ರಿತ ಜೂಸ್ ಕುಡಿಸಿ, ಬಳಿಕ ಹೋಟೆಲ್ ರೂಂಲ್ಲಿ ಸಾಮೂಹಿಕ ಅತ್ಯಾಚಾರವೆಸಗಲಾಗಿದೆ. ಮಾತವಲ್ಲ ಅತ್ಯಚಾರ ಮಾಡುತ್ತಿರುವ ವಿಡಿಯೋವನ್ನು ಚಿತ್ರೀರಿಸಿದ್ದಾರೆ.
ಸಂತ್ರಸ್ತೆಯ ದೂರಿನ ಆಧಾರದ ಮೇಲೆ ಎಸ್‌ಸಿ/ಎಸ್‌ಟಿ ಕಾಯ್ದೆಯ ಸಂಬಂಧಿತ ಸೆಕ್ಷನ್‌ಗಳ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ. ಸುಲಿಗೆ ಪ್ರಕರಣವೂ ಆಗಿತ್ತು. ಎಲ್ಲಾ ಆರೋಪಿಗಳನ್ನು ಬಂಧಿಸಲಾಗಿದೆ ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಆರೋಪಿ ಯುವಕರು ಕಾಲೇಜು ವಿದ್ಯಾರ್ಥಿಗಳು ಎಂದು ತಿಳಿದುಬಂದಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ