ಕಲಬುರಗಿ: ಕಡಿಮೆ ಬೆಲೆಗೆ ಬಂಗಾರ ಮಾರುವುದಾಗಿ ನಂಬಿಸಿ ನಿವೃತ್ತ ಶಿಕ್ಷಕನಿಗೆ ಲಕ್ಷಾಂತರ ರೂ. ವಂಚನೆ

By Kannadaprabha News  |  First Published Sep 8, 2023, 11:30 PM IST

ಕಡಿಮೆ ಬೆಲೆಗೆ ಬಂಗಾರ ಮಾರುವುದಾಗಿ ಹೇಳಿ ಮೂವರು ತಮಗೆ ಮೋಸ ಮಾಡಿದ್ದು, ಅವರನ್ನು ಪತ್ತೆ ಹಚ್ಚಿ ಅವರ ವಿರುದ್ಧ ಕಾನೂನು ಕ್ರಮ ಜರುಗಿಸುವಂತೆ ವಿಶ್ವವಿದ್ಯಾಲಯ ಪೊಲೀಸ್ ಠಾಣೆಯಲ್ಲಿ ದೂರು ಸಲ್ಲಿಸಿದ ನರಸಿಂಹ ಮಾನಕರ. 


ಕಲಬುರಗಿ(ಸೆ.08):  ಕಡಿಮೆ ಬೆಲೆಗೆ ಬಂಗಾರ ಸಿಗಲಿದೆ ಎಂಬ ಆಸೆಗೆ ನಿವೃತ್ತ ಶಿಕ್ಷಕನೊಬ್ಬ 3,75,000 ರು. ಕಳೆದುಕೊಂಡ ಪ್ರಕರಣ ನಗರದಲ್ಲಿ ನಡೆದಿದೆ. ಇಲ್ಲಿನ ಕುವೆಂಪು ನಗರದ ನರಸಿಂಹ ಮಾನಕರ (72) ಎಂಬುವವರೆ ಹಣ ಕಳೆದುಕೊಂಡಿದ್ದಾರೆ.

ಸೇಡಂ ರಸ್ತೆಯ ಇಎಸ್‍ಐಇ ಆಸ್ಪತ್ರೆ ಎದರುಗಡೆ ಇರುವ ಮೆಡಿಕಲ್ ಸ್ಟೋರ್ ಎದರುಗಡೆ ಕುಳಿತಿದ್ದ 42 ಮತ್ತು 24 ವರ್ಷ ವಯಸ್ಸಿನ ಇಬ್ಬರು ಪುರುಷರು ಮತ್ತು 55 ವರ್ಷ ವಯಸ್ಸಿನ ಒಬ್ಬ ಮಹಿಳೆ ನರಸಿಂಹ ಮಾನಕರ ಅವರನ್ನು ಪರಿಚಿತರಂತೆ ಮಾತನಾಡಿಸಿ ತಾವು ತುಂಬಾ ತೊಂದರೆಯಲ್ಲಿದ್ದು, ಹಣದ ಅವಶ್ಯಕತೆ ಇದೆ. ನಮ್ಮಲ್ಲಿ ಬಂಗಾರ ಇದ್ದು ಅದನ್ನು ಕಡಿಮೆ ಬೆಲೆಯಲ್ಲಿ ಮಾರುವುದಾಗಿ ಹೇಳಿ ನಂಬಿಸಿದ್ದಾರೆ.

Tap to resize

Latest Videos

undefined

ಕಲಬುರಗಿ: ಪ್ರೇಮ ವಿವಾಹಕ್ಕೆ ಯುವತಿ ಪೋಷಕರ ಅಡ್ಡಿ, ಯುವಕ ಆತ್ಮಹತ್ಯೆ

ಅವರ ಮಾತನ್ನು ನಂಬಿ ನರಸಿಂಹ ಅವರು 3,75,000 ರು.ಗಳನ್ನು ಅವರಿಗೆ ನೀಡಿದ್ದು, ಹಣ ಪಡೆದ ಮೇಲೆ ಮಹಿಳೆ ಮತ್ತು ಒಬ್ಬ ಪುರುಷ ಬಂಗಾರ ತರುವುದಾಗಿ ಹೇಳಿ ಇಎಸ್‍ಐಇ ಆಸ್ಪತ್ರೆ ಒಳಗೆ ಹೋಗಿದ್ದಾರೆ. ಇವರು ಇನ್ನೊಬ್ಬ ವ್ಯಕ್ತಿಯ ಜೊತೆ ಕುಳಿತು ಅವರು ಬಂಗಾರ ತರಬಹುದು ಎಂದು ಕಾದಿದ್ದಾರೆ.

ಆದರೆ, ಎಷ್ಟೊತ್ತಾದರೂ ಅವರು ಬಾರದಿರುವುದರಿಂದ ಆ ಇನ್ನೊಬ್ಬ ವ್ಯಕ್ತಿಯೂ ಅವರನ್ನು ಕರೆದುಕೊಂಡು ಬರುವುದಾಗಿ ಹೇಳಿ ಹೋದವನು ಮರಳಿ ಬಂದಿಲ್ಲ. ಕಡಿಮೆ ಬೆಲೆಗೆ ಬಂಗಾರ ಮಾರುವುದಾಗಿ ಹೇಳಿ ಮೂವರು ತಮಗೆ ಮೋಸ ಮಾಡಿದ್ದು, ಅವರನ್ನು ಪತ್ತೆ ಹಚ್ಚಿ ಅವರ ವಿರುದ್ಧ ಕಾನೂನು ಕ್ರಮ ಜರುಗಿಸುವಂತೆ ನರಸಿಂಹ ಮಾನಕರ ಅವರು ವಿಶ್ವವಿದ್ಯಾಲಯ ಪೊಲೀಸ್ ಠಾಣೆಯಲ್ಲಿ ದೂರು ಸಲ್ಲಿಸಿದ್ದಾರೆ.

click me!