Cyber Crime: ನಿಮ್ಹಾನ್ಸ್‌ ಸಂಸ್ಥೆಯ ಕಂಪ್ಯೂಟರ್‌ ಹ್ಯಾಕ್‌: ಬಿಟ್ಕಾಯಿನ್‌ಗೆ ಬೇಡಿಕೆ

By Girish GoudarFirst Published May 3, 2022, 5:56 AM IST
Highlights

*  ಕಂಪ್ಯೂಟರ್‌ ಫೈಲ್‌ಗಳನ್ನೆಲ್ಲ ಅನ್‌ರೀಡೆಬಲ್‌ ಮಾಡಿದ ಹ್ಯಾಕರ್‌ಗಳು
*  ರೀಡೆಬಲ್‌ ಮಾಡಲು 3.8 ಲಕ್ಷಕ್ಕೆ ಬೇಡಿಕೆ
*  ಸೈಬರ್‌ ಠಾಣೆಗೆ ದೂರು
 

ಬೆಂಗಳೂರು(ಮೇ.03): ಸೈಬರ್‌ ಕಳ್ಳರು ನಿಮ್ಹಾನ್ಸ್‌ ಆಸ್ಪತ್ರೆಯ(NIMHANS Hospital) ಕಂಪ್ಯೂಟರ್‌ ಸೆಕ್ಷನ್‌ನ ಫೈಲ್‌ಗಳನ್ನು ಅನ್‌ ರೀಡೆಬಲ್‌ ಮಾಡಿದ್ದು, ರೀಡೆಬಲ್‌ ಮಾಡಲು ಬಿಟ್‌ಕಾಯಿನ್‌(Bitcoin) ಮೂಲಕ ಐದು ಸಾವಿರ ಅಮೆರಿಕನ್‌ ಡಾಲರ್‌ಗೆ (3.84 ಲಕ್ಷ ರು.) ಬೇಡಿಕೆ ಇರಿಸಿರುವ ಘಟನೆ ಬೆಳಕಿಗೆ ಬಂದಿದೆ.

ಈ ಸಂಬಂಧ ನಿಮ್ಹಾನ್ಸ್‌ನ ವೈದ್ಯೆ ಡಾ.ಪ್ರತಿಮಾ ಮೂರ್ತಿ ಅವರು ದಕ್ಷಿಣ ಸೈಬರ್‌ ಕ್ರೈಂ ಠಾಣೆಗೆ ದೂರು ನೀಡಿದ್ದಾರೆ. ಈ ದೂರು ಆಧರಿಸಿ ಎಫ್‌ಐಆರ್‌(FIR) ದಾಖಲಿಸಿರುವ ಪೊಲೀಸರು, ಸೈಬರ್‌ ವಂಚಕರ ಪತ್ತೆಗೆ ತನಿಖೆ ಕೈಗೊಂಡಿದ್ದಾರೆ.

ಚಿಕ್ಕಬಳ್ಳಾಪುರ: ಗೀತಂ ಯುನಿವರ್ಸಿಟಿಯಲ್ಲಿ ಉಗಾಂಡ ಮೂಲದ ವಿದ್ಯಾರ್ಥಿನಿ ಸಾವು

ಏನಿದು ಪ್ರಕರಣ:

ಇತ್ತೀಚೆಗೆ ನಿಮ್ಹಾನ್ಸ್‌ ಆಸ್ಪತ್ರೆಯ ಕಂಪ್ಯೂಟರ್‌ ಸೆಕ್ಷನ್‌ನ ಕಂಪ್ಯೂಟರ್‌ ಫೈಲ್‌ಗಳು ಅನ್‌ ರೀಡೆಬಲ್‌ ಆಗಿವೆ. ಅಂತೆಯೆ ಹಲವು ಕಂಪ್ಯೂಟರ್‌ಗಳು ಎನ್‌ಕ್ರಿಪ್‌ಟಆಗಿವೆ. ಡೆಸ್ಕ್‌ಕಟಾಪ್‌ನಲ್ಲಿ ರೀಡ್‌ ಓನ್ಲಿ ನೋಟ್‌ ಪ್ಯಾಡ್‌ ಮಾತ್ರ ಇದ್ದು, ಅದನ್ನು ತೆರೆದಾಗ, ನಾವು ಎಲ್ಲಾ ಫೈಲ್‌ಗಳನ್ನು ಎನ್‌ಕ್ರಿಪ್‌ಟಮಾಡಿದ್ದೇವೆ. ಅವುಗಳನ್ನು ಡೀಕ್ರಿಪ್‌ಟಮಾಡಬೇಕಾದರೆ ನಮನ್ನು ಸಂಪರ್ಕಿಸಿ ಎಂದು ಒಂದು ಲಿಂಕ್‌ ನೀಡಿದ್ದಾರೆ. ಆ ಲಿಂಕ್‌ ತೆರೆದಾಗ ಒಂದು ಚಾಟ್‌ ಬಾಕ್ಸ್‌ ಓಪನ್‌ ಆಗಿದೆ. ಫೈಲ್‌ಗಳನ್ನು ಡೀಕ್ರಿಪ್‌ಟಮಾಡಲು ಕೀ ಕೇಳಿದಾಗ ನಿಮಗೆ ಡೀ ಕ್ರಿಪ್‌ಟಕೀ ನೀಡಬೇಕಾದರೆ, ಬಿಟ್‌ ಕಾಯಿನ್‌ನಲ್ಲಿ ಐದು ಸಾವಿರ ಯುಎಸ್‌ಡಿ ನೀಡಬೇಕು ಎಂದು ಸೈಬರ್‌ ವಂಚಕರು(Cyber Fraudsters) ಕೇಳಿದ್ದಾರೆ. ಈ ಸಂಬಂಧ ನೀಡಲಾದ ದೂರಿನ ಮೇರೆಗೆ ಸೈಬರ್‌ ಠಾಣೆ ಪೊಲೀಸರು(Police) ಸೈಬರ್‌ ವಂಚಕರ ಬಂಧನಕ್ಕೆ ಬಲೆ ಬೀಸಿದ್ದಾರೆ.

ಯುವತಿ ಸಾವಿನ ಸುತ್ತ ಅನುಮಾನದ ಹುತ್ತ, ಆತ್ಮಹತ್ಯೆಯೋ? ಮರ್ಯಾದಾ ಹತ್ಯೆಯೋ?

ಬ್ಯಾಗ್‌ ಬದಲಾಗಿದ್ದಕ್ಕೆ ಇಂಡಿಗೋ ಏರ್‌ವೇಸ್‌ನ ವೆಬ್‌ಸೈಟ್‌ ಹ್ಯಾಕ್‌?

ಬೆಂಗಳೂರು: ಪ್ರಯಾಣದ ವೇಳೆ ಅದಲು ಬದಲಾಗಿದ್ದ ಬ್ಯಾಗನ್ನು ಹಿಂಪಡೆದುಕೊಳ್ಳಲು ಪ್ರಯಾಣಿಕರೊಬ್ಬರು(Passenger) ಇಂಡಿಗೋ ವೆಬ್‌ಸೈಟನ್ನೇ(Indigo Website) ಹ್ಯಾಕ್‌(Hack) ಮಾಡಿರುವ ಘಟನೆ ಏ.01 ರಂದು ನಡೆದಿತ್ತು. 

ಹೌದು, ವೃತ್ತಿಯಲ್ಲಿ ಸಾಫ್ಟ್‌ವೇರ್‌ ಎಂಜಿನಿಯರ್‌(Software Engineer) ಆಗಿರುವ ಕುಮಾರ್‌ ಎಂಬವರು ಭಾನುವಾರ ಪಟನಾದಿಂದ(Patna) ಬೆಂಗಳೂರಿಗೆ(Bengaluru) ಇಂಡಿಗೋ ವಿಮಾನದಲ್ಲಿ(Flight) ಪ್ರಯಾಣಿಸಿದ್ದರು. ಮನೆಗೆ ತೆರಳಿದ ನಂತರ ಬ್ಯಾಗ್‌ ಅದಲು ಬದಲಾಗಿದೆ. ಎರಡೂ ಬ್ಯಾಗುಗಳೂ ಒಂದೇ ತರ ಇದ್ದಿದ್ದುದ್ದರಿಂದ ಈ ಅಚಾತುರ‍್ಯ ನಡೆದಿದೆ ಎಂಬುದು ಗಮನಕ್ಕೆ ಬಂದಿದೆ. ತಕ್ಷಣ ಇಂಡಿಗೋ ಕಸ್ಟಮರ್‌ ಕೇರ್‌ ಸಂಪರ್ಕಿಸಿ ಹಲವು ಬಾರಿ ಕರೆ ಮಾಡಿ, ಉದ್ದುದ್ದ ಸರತಿಯಲ್ಲಿ ನಿಂತು ವಿಚಾರಿಸಿದರೂ ಯಾವುದೇ ಪ್ರಯೋಜನವಾಗಿಲ್ಲ. ಕನಿಷ್ಠ ಪ್ರಯಾಣಿಕರ ಮಾಹಿತಿ ಒದಗಿಸಿ ಎಂದರೂ ವಿಮಾನಯಾನ ಸಂಸ್ಥೆ ಗೌಪ್ಯತೆ ಕಾರಣದಿಂದ ಒದಗಿಸಿಲ್ಲ.
 

click me!