ಕಲ್ಪತರು ನಾಡು ತುಮಕೂರಿನಲ್ಲಿ ಮನೆಗಳ್ಳರ ಹಾವಳಿ ಹೆಚ್ಚಾಗಿದೆ ಬೀಗ ಹಾಕಿದ್ದ ಮನೆಗಳನ್ನೇ ಟಾರ್ಗೆಟ್ ಮಾಡಿ ಒಂದೇ ದಿನ ಬರೋಬ್ಬರಿ 7 ಮನೆಗಳಿಗೆ ಕನ್ನ ಹಾಕಿ ಲಕ್ಷಾಂತರ ರೂ. ನಗದು ಹಾಗೂ ಚಿನ್ನಾಭರಣವನ್ನ ದೋಚಿ ಪರಾರಿಯಾಗಿದ್ದಾರೆ.
ವರದಿ: ಮಹಂತೇಶ್ ಕುಮಾರ್, ಏಷ್ಯಾನೆಟ್ ಸುವರ್ಣನ್ಯೂಸ್, ತುಮಕೂರು
ತುಮಕೂರು (ಮೇ.03): ಕಲ್ಪತರು ನಾಡು ತುಮಕೂರಿನಲ್ಲಿ (Tumakuru) ಮನೆಗಳ್ಳರ ಹಾವಳಿ ಹೆಚ್ಚಾಗಿದೆ ಬೀಗ ಹಾಕಿದ್ದ ಮನೆಗಳನ್ನೇ (Locked Houses) ಟಾರ್ಗೆಟ್ ಮಾಡಿ ಒಂದೇ ದಿನ ಬರೋಬ್ಬರಿ 7 ಮನೆಗಳಿಗೆ ಕನ್ನ ಹಾಕಿ ಲಕ್ಷಾಂತರ ರೂ. ನಗದು ಹಾಗೂ ಚಿನ್ನಾಭರಣವನ್ನ (Jewelery) ದೋಚಿ ಪರಾರಿಯಾಗಿದ್ದಾರೆ. ಸದ್ಯ ಅದೊಂದು ಗ್ಯಾಂಗ್ ತುಮಕೂರು ಜನರ ನಿದ್ದೆಗೆಡಿಸಿದೆ ಅದರ ಡಿಟೈಲ್ಸ್ ಇಲ್ಲಿದೆ ನೋಡಿ.
ಹೌದು! ಕಲ್ಪತರುನಾಡು ತುಮಕೂರಿನಲ್ಲಿ ಇತ್ತೀಚೆಗೆ ಮನೆಗಳ್ಳರ ಹಾವಳಿ ಹೆಚ್ಚಾಗಿದೆ. ಖತರ್ನಾಕ್ ಗ್ಯಾಂಗ್‌ವೊಂದು ಇಡೀ ತುಮಕೂರು ಜಿಲ್ಲೆಯ ಜನರ ನಿದ್ದೆಗೆಡಿಸಿದೆ.ಬೀಗ ಹಾಕಿದ್ದ ಮನೆಗಳನ್ನೆ ಟಾರ್ಗೆಟ್ ಮಾಡಿ ಖದೀಮರು ಒಂದೇ ಏರಿಯಾದಲ್ಲಿ 7 ಮನೆಗಳಿಗೆ ತಡರಾತ್ರಿ ಕನ್ನಹಾಕಿದ್ದಾರೆ. ಕಳೆದ 15 ದಿನಗಳಿಂದ ಜಿಲ್ಲೆಯಲ್ಲಿ ಸಾಕಷ್ಟು ಕಡೆಗಳಲ್ಲಿ ಕಳ್ಳತನ ನಡೆಯುತ್ತಿದ್ದು, ಖತರ್ನಾಕ್ ಕಳ್ಳರ ಗ್ಯಾಂಗ್ ಜನರ ನಿದ್ದೆಗೆಡಿಸುತ್ತಿದೆ. ಚಿಕ್ಕನಾಯಕನ ಹಳ್ಳಿಯಲ್ಲೂ ಹಾಡಹಗಲೇ ಮಹಿಳೆಯ ಸರಗಳ್ಳತನಕ್ಕೆ ವಿಫಲ ಯತ್ನ ನಡೆದಿದ್ದು,ಮಹಿಳೆಯ ಚೀರಾಟದಿಂದ ಕಳ್ಳ ಸರ ಬಿಟ್ಟು ತಪ್ಪಿಸಿಕೊಂಡಿದ್ದಾನೆ.
Acid Attack Case:ಆರೋಪಿ ಪತ್ತೆಗೆ ಪೊಲೀಸರಿಂದ ಹಳೆ ಸ್ಟೈಲ್ನಲ್ಲಿ ಹೊಸ ಪ್ಲಾನ್!
ತುಮಕೂರಿನ ಸಿದ್ದರಾಮೇಶ್ವರ ಬಡಾವಣೆಯ 2ನೇ ಕ್ರಾಸ್ ಹಾಗೂ 3ನೇ ಕ್ರಾಸ್ ಸುತ್ತಮುತ್ತ ನಿನ್ನೆ ರಾತ್ರಿ ಬರೋಬ್ಬರಿ 7 ಮನೆಗಳಿಗೆ ನುಗ್ಗಿ 5 ಲಕ್ಷ ನಗದು, 150 ಗ್ರಾಂಗೂ ಅಧಿಕ ಚಿನ್ನಾಭರಣವನ್ನ ಕದ್ದು ಎಸ್ಕೇಪ್ ಆಗಿದ್ದಾರೆ. ಇನ್ನು ಹಗಲು ವೇಳೆ ಬೀಗ ಹಾಕಿದ ಮನೆಗಳನ್ನೆ ಟಾರ್ಗೆಟ್ ಮಾಡಿ ರಾತ್ರಿ ವೇಳೆ ಕಬ್ಬಿಣದ ರಾಡ್ ನಿಂದ ಡೋರ್‌ಗಳನ್ನ ಮೀಟಿ ಮನೆಗೆ ಕನ್ನ ಹಾಕ್ತಿದ್ದಾರೆ. ಸದ್ಯ ತುಮಕೂರಿನ ಹಲವು ಏರಿಯಾದಲ್ಲಿ ಇತ್ತೀಚೆಗೆ ಮನೆಗಳ್ಳರು ಹೆಚ್ಚಾಗಿದ್ದು, ಏರಿಯಾ ಜನರಲ್ಲಿ ಭಯದ ವಾತಾವರಣ ಸೃಷ್ಟಿಯಾಗಿದೆ. ಬೇಸಿಗೆ ಕಾಲ ಆದ್ದರಿಂದ ಜನರು ಮನೆಗೆ ಬೀಗ ಹಾಕಿ ಮಹಡಿ ಮೇಲೆ ಮಲಗುತ್ತಿದ್ದು, ಇದನ್ನ ಅರಿತ ಕಳ್ಳರು ಮನೆಗಳಿಗೆ ನುಗ್ಗುತ್ತಿದ್ದಾರೆ.
Udupi SSLC ಉತ್ತರ ಪತ್ರಿಕೆ ಕೊಠಡಿ ಭದ್ರತೆಯಲ್ಲಿದ್ದ ಕಾನ್ಸ್‌ಟೇಬಲ್ ಆತ್ಮಹತ್ಯೆ ಪ್ರಕರಣಕ್ಕೆ ಬಿಗ್ ಟ್ವಿಸ್ಟ್
ಈ ಘಟನೆ ಸಂಬಂಧ ಜಯನಗರ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ ಶ್ವಾನ ದಳದ ಸಿಬ್ಬಂದಿಯೂ ಸ್ಥಳವನ್ನು ಪರಿಶೀಲನೆ ನಡೆಸಿದ್ದಾರೆ. ಸದ್ಯ ಜಯನಗರ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು, ಏರಿಯಾದ ಸುತ್ತಮುತ್ತಲಿನ ಸಿಸಿಟಿವಿಗಳನ್ನ ಪರಿಶೀಲಿಸಿ ಖದೀಮರಿಗಾಗಿ ಹುಡುಕಾಟ ಶುರು ಮಾಡಿದ್ದಾರೆ. ಆದಷ್ಟು ಶೀಘ್ರ ಖದೀಮರನ್ನು ಬಂಧಿಸಬೇಕೆಂದು ಜನರು ಒತ್ತಾಯಿಸಿದ್ದಾರೆ.