ಈ ಆ್ಯಪ್ ಮೂಲಕ ಉದ್ಯೋಗಿ ಅಕೌಂಟ್‌ನಿಂದ 18 ಲಕ್ಷಕ್ಕೂ ಹೆಚ್ಚು ಹಣ ಎಗರಿಸಿದ ವಂಚಕರು!

By BK Ashwin  |  First Published Dec 21, 2023, 5:59 PM IST

ಸೈಬರ್ ವಂಚಕರು ಮಹಾರಾಷ್ಟ್ರದ ಪುಣೆಯ ಮಂಗಳವಾರ್ ಪೇಠ ನಿವಾಸಿಯೊಬ್ಬರಿಗೆ ಪ್ರಮುಖ ಖಾಸಗಿ ಬ್ಯಾಂಕ್‌ನ ಗ್ರಾಹಕ ಸೆಲ್ ಪ್ರತಿನಿಧಿಗಳೆಂದು ಬಿಂಬಿಸಿ 18.35 ಲಕ್ಷ ರೂ. ಪಂಗನಾಮ ಹಾಕಿದ್ದಾರೆ.


ಪುಣೆ (ಡಿಸೆಂಬರ್ 21, 2023): ಮಹಾರಾಷ್ಟ್ರದ ಪುಣೆಯ ನಿವಾಸಿಯೊಬ್ಬರ ಅಕೌಂಟ್‌ನಿಂದ 18 ಲಕ್ಷ ರೂ. ಗೂ ಹೆಚ್ಚು ಹಣ ಎಗರಿಸಿರುವ ಘಟನೆ ಬೆಳಕಿಗೆ ಬಂದಿದೆ. ಹಣ ಎಗರಿಸಿದ್ದು ಮಾತ್ರವಲ್ಲದೆ ಅವರ ಹೆಸರಲ್ಲಿ ಅವರದೇ ಅಕೌಂಟ್‌ ಮೂಲಕ ವೈಯಕ್ತಿಕ ಸಾಲವನ್ನೂ ಪಡೆದಿದ್ದಾರೆ. ಹಾಗಾದ್ರೆ, ಈ ವಂಚನೆ ನಡೆದಿದ್ದು ಹೇಗೆ ಅಂತೀರಾ.. ಮುಂದೆ ಓದಿ..

ಸೈಬರ್ ವಂಚಕರು ಮಂಗಳವಾರ್ ಪೇಠ ನಿವಾಸಿಯೊಬ್ಬರಿಗೆ ಪ್ರಮುಖ ಖಾಸಗಿ ಬ್ಯಾಂಕ್‌ನ ಗ್ರಾಹಕ ಸೆಲ್ ಪ್ರತಿನಿಧಿಗಳೆಂದು ಬಿಂಬಿಸಿ ಪಂಗನಾಮ ಹಾಕಿದ್ದಾರೆ. ರಿಮೋಟ್ ಆಕ್ಸೆಸ್‌ ಆ್ಯಪ್‌ವೊಂದರ ಮೂಲಕ ಅಕ್ಟೋಬರ್ 11 ಮತ್ತು 12 ರ ನಡುವೆ ಆ ವ್ಯಕ್ತಿಯ ಅಕೌಂಟ್‌ನಿಂದ ಒಟ್ಟು 18.35 ಲಕ್ಷ ರೂ.ಗಳನ್ನು ವಂಚಿಸಿದ್ದಾರೆ ಎಂದು ತಿಳಿದುಬಂದಿದೆ.

Tap to resize

Latest Videos

ಇದನ್ನು ಓದಿ: ಸುಲಭವಾಗಿ ವರ್ಕ್‌ ಫ್ರಂ ಹೋಂ ಮಾಡಿ ಹಣ ಗಳಿಸ್ಬೋದೆಂದು ನಂಬ್ಕೊಂಡು 14 ಲಕ್ಷ ಕಳ್ಕೊಂಡ ಭೂಪ!

ಭಾರತೀಯ ಬಹುರಾಷ್ಟ್ರೀಯ ಕಂಪನಿಯ ಉದ್ಯೋಗಿಯಾಗಿರುವ ಹಣ ಕಳೆದುಕೊಂಡ ವ್ಯಕ್ತಿ  ಪುಣೆ ಸೈಬರ್ ಪೊಲೀಸರಿಗೆ ಈ ಬಗ್ಗೆ ದೂರು ನೀಡಿದ್ದಾರೆ. ಪರಿಶೀಲನೆಯ ನಂತರ, ಸಮರ್ಥ್ ಪೊಲೀಸರು ಮಂಗಳವಾರ ಔಪಚಾರಿಕ ಎಫ್ಐಆರ್ ದಾಖಲಿಸಿದ್ದಾರೆ ಎಂದು ತಿಳಿದುಬಂದಿದೆ.

ಇನ್ನು, ಈ ಘಟನೆ ಬಗ್ಗೆ ಇನ್ಸ್‌ಪೆಕ್ಟರ್ (ಅಪರಾಧ) ಪ್ರಮೋದ್ ವಾಘಮಾರೆ ವಿವರಿಸಿದ್ದಾರೆ. ವಂಚಕರು ಈ ವ್ಯಕ್ತಿಗೆ ಕರೆ ಮಾಡಿ ಅವರ ಬ್ಯಾಂಕ್‌ ಖಾತೆಯೊಂದಿಗೆ ಪ್ಯಾನ್ ಕಾರ್ಡ್ ಅನ್ನು ಲಿಂಕ್ ಮಾಡುವಂತೆ ಹೇಳಿದರು, ಇಲ್ಲದಿದ್ದರೆ ಅದನ್ನು ಬ್ಲಾಕ್ ಮಾಡಲಾಗುತ್ತದೆ ಎಂದೂ ತಿಳಿಸಿದರು. ನಂತರ, ಅವರು ಅಪ್ಲಿಕೇಷನ್‌ ಒಂದನ್ನು ಅಪ್ಲಿಕೇಶನ್ ಡೌನ್‌ಲೋಡ್ ಮಾಡಲು ಹೇಳಿದರು. ಅದು ಅವರ ಫೋನ್‌ಗೆ ರಿಮೋಟ್ ಆಕ್ಸೆಸ್‌ ನೀಡಿದ್ದು, ಆ ಫೋನ್‌ನಲ್ಲಿದ್ದ ಬ್ಯಾಂಕಿಂಗ್ ಅಪ್ಲಿಕೇಶನ್ ಮೂಲಕ ವ್ಯಕ್ತಿಯ ಪ್ಯಾನ್ ಮತ್ತು ಡೆಬಿಟ್ ಕಾರ್ಡ್‌ಗಳ ವಿವರಗಳನ್ನು ಸಂಗ್ರಹಿಸಿದರು ಎಂದು ಹೇಳಿದ್ದಾರೆ.

 

ಸೈಬರ್ ವಂಚಕರ ವಿರುದ್ಧ ಸರ್ಕಾರದ ಸಮರ; ಅನುಮಾನಾಸ್ಪದ ಬ್ಯಾಂಕ್ ಖಾತೆ, ಮೊಬೈಲ್ ಬ್ಲಾಕ್ ಗೆ ಚಿಂತನೆ

ಅಲ್ಲದೆ, ಆ ವ್ಯಕ್ತಿ ಆ್ಯಪ್ ಡೌನ್‌ಲೋಡ್ ಮಾಡಿದ ನಂತರ, ವಂಚಕರು ತಾವು ವೈಯಕ್ತಿಕ ಸಾಲ ಪಡೆಯಲು ಅವರ ಹೆಸರು, ಸಹಿ ಬಳಸಿದರು ಎಂದೂ ತಿಳಿದುಬಂದಿದೆ. ಆರಂಭದಲ್ಲಿ ತನ್ನ ಪ್ಯಾನ್ ಕಾರ್ಡ್ ಅನ್ನು ಲಿಂಕ್ ಮಾಡುವಂತೆ ಕೇಳುವ ಕರೆಗಳನ್ನು ವ್ಯಕ್ತಿ ನಿರ್ಲಕ್ಷ್ಯ ಮಾಡಿದ್ದಾರೆ. ಆದರೆ, ತಮ್ಮ ಖಾತೆಯನ್ನು ನಿರ್ಬಂಧಿಸಲಾಗುವುದು ಎಂದು ಅವರು ಹೇಳಿದಾಗ ಅವರು ಅದನ್ನು ಗಂಭೀರವಾಗಿ ತೆಗೆದುಕೊಂಡರು ಎಂದೂ ಪೊಲೀಸ್‌ ಅಧಿಕಾರಿ ಹೇಳಿದ್ದಾರೆ.

ಅದರೆ, ತಮ್ಮ ಖಾತೆಯಲ್ಲಿ 16 ಲಕ್ಷ ರೂ. ಜಮಾ ಆಗಿದೆ ಎಂಬ ಸಂದೇಶವನ್ನು ಸ್ವೀಕರಿಸಿದ ನಂತರ ಬ್ಯಾಂಕ್‌ಗೆ ಎಂಎನ್‌ಸಿ ಉದ್ಯೋಗಿ ಅಲರ್ಟ್‌ನೀಡಿದರು. ಜತೆಗೆ, ವಂಚಕರೊಬ್ಬರಿಗೆ ಕರೆ ಮಾಡಿ ಘಟನೆಯ ಬಗ್ಗೆ ಹೇಳಿದರು. ಬಳಿಕ ಅವರ ಅಕೌಂಟ್‌ನಿಂದ 16 ಲಕ್ಷ ರೂ. ಹಣ ಡೆಬಿಟ್‌ ಆಗಿರುವ ಬಗ್ಗೆ ಒಂದು ಸಂದೇಶ ಹಾಗೂ 2.35 ಲಕ್ಷ ರೂ. ಡೆಬಿಟ್‌ ಮಾಡಿರುವ ಮತ್ತೊಂದು ಸಂದೇಶ ಪಡೆದಿದ್ದಾರೆ. 

ಅಲ್ಲದೆ, ಹಲವು ಟ್ರಾನ್ಸಾಕ್ಷನ್‌ ಮೂಲಕ ಅದನ್ನು ಬೇರೆ ಅಕೌಂಟ್‌ಗೆ ವರ್ಗಾಯಿಸಲಾಗಿದೆ ಎಂದೂ ತಿಳಿದುಬಂದಿದೆ. ಹಾಗೂ, ಪರಿಶೀಲನೆ ನಡೆಸದೆ ಬ್ಯಾಂಕ್‌ನವರು ಸಾಲ ಮಂಜೂರು ಮಾಡಿದ್ದಾರೆ. ತಾನು ದೂರು ನೀಡಿದೆ ಎಂದೂ ವ್ಯಕ್ತಿ ಪೊಲೀಸರ ಬಳಿ ಹೇಳಿಕೊಂಡಿದ್ದಾರೆ.

click me!