ಶಾಲೆಗೆ ತೆರಳಲು ಬಸ್‌ಗೆ ಕಾದಿದ್ದ ವೇಳೆ ಹೃದಯಾಘಾತ; 7ನೇ ತರಗತಿ ವಿದ್ಯಾರ್ಥಿನಿ ಸಾವು!

By Ravi Janekal  |  First Published Dec 21, 2023, 4:48 PM IST

ಪ್ರಥಮ ಪಿಯುಸಿ ಓದುತ್ತಿದ್ದ ವಿದ್ಯಾರ್ಥಿ ಹೃದಯಾಘಾತದಿಂದ ಮೃತಪಟ್ಟ ಘಟನೆ ಉಡುಪಿ ಜಿಲ್ಲೆಯಲ್ಲಿ ನಡೆದಿದೆ. ಅಫ್ಕಾರ್ (17) ಹೃದಯಾಘಾತದಿಂದ ಮೃತಪಟ್ಟ ವಿದ್ಯಾರ್ಥಿ. 


ಮೂಡಿಗೆರೆ(ಡಿ.21): ಶಾಲೆಗೆ ತೆರಳಲು ಬಸ್ ಕಾಯುತ್ತಿದ್ದ ವೇಳೆ ಏಕಾಏಕಿ ಕುಸಿದು ಬಿದ್ದ ಬಾಲಕಿ ಹೃದಯಾಘಾತದಿಂದ ಸಾವನ್ನಪ್ಪಿದ ಘಟನೆ ತಾಲೂಕಿನ ದಾರದಹಳ್ಳಿ ವೃತ್ತದ ಬಳಿ ಬುಧವಾರ ನಡೆದಿದೆ. ತಾಲೂಕಿನ ಕೆಸವಳಲುಸಮೀಪದ ಜೊಗಣ್ಣನಕೆರೆ ಗ್ರಾಮದ ಸೃಷ್ಟಿ (13) ಮೃತಪಟ್ಟ ಬಾಲಕಿ. ದಾರದಹಳ್ಳಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ 7ನೇ ತರಗತಿ ವ್ಯಾಸಂಗ ಮಾಡುತ್ತಿದ್ದ ಸೃಷ್ಟಿ, ಅರ್ಜುನ ಹಾಗೂ ಸುಮ ದಂಪತಿಯ ಪುತ್ರಿ. ಬುಧವಾರ ಬೆಳಿಗ್ಗೆ ಶಾಲೆಗೆ ಹೋಗಲು ದಾರದಹಳ್ಳಿ ಸರ್ಕಲ್ ಬಳಿ ನಿಂತಿದ್ದ ಸಂದರ್ಭದಲ್ಲಿ ಇದ್ದಕ್ಕಿದ್ದಂತೆ ಕುಸಿದು ಬಿದ್ದಿದ್ದಾಳೆ. ಕೂಡಲೇ ಮೂಡಿಗೆರೆ ಆಸ್ಪತ್ರೆಗೆ ಬಾಲಕಿಯನ್ನು ಹೊತ್ತೊಯ್ಯಲಾಗಿದೆ. ಆದರೆ ತೀವ್ರ ಹೃದಯಾಘಾತದಿಂದ ಸ್ಥಳದಲ್ಲೆ ಬಾಲಕಿ ನಿಧನ ಹೊಂದಿರುವುದಾಗಿ ವೈದ್ಯರು ತಿಳಿಸಿದ್ದಾರೆ.

Health Tips: ಊಟ ತಿಂಡಿಗೆ ಹೊತ್ತು ಗೊತ್ತಿರಲಿ, ಹೃದಯದ ಆರೋಗ್ಯ ಜೋಪಾನ! 

Tap to resize

Latest Videos

undefined

ಪ್ರಥಮ ಪಿಯು ವಿದ್ಯಾರ್ಥಿ ಹೃದಯಾಘಾತಕ್ಕೆ ಬಲಿ!

ಉಡುಪಿ: ಪ್ರಥಮ ಪಿಯುಸಿ ಓದುತ್ತಿದ್ದ ವಿದ್ಯಾರ್ಥಿ ಹೃದಯಾಘಾತದಿಂದ ಮೃತಪಟ್ಟ ಘಟನೆ ಉಡುಪಿ ಜಿಲ್ಲೆಯಲ್ಲಿ ನಡೆದಿದೆ. ಅಫ್ಕಾರ್ (17) ಹೃದಯಾಘಾತದಿಂದ ಮೃತಪಟ್ಟ ವಿದ್ಯಾರ್ಥಿ. 

ಕಲ್ಯಾಣಪುರ ಮಿಲಾಗ್ರಿಸ್ ಪಿಯು ಕಾಲೇಜಿನಲ್ಲಿ ಪ್ರಥಮ ಪಿಯುಸಿ ವ್ಯಾಸಂಗ ಮಾಡ್ತಿದ್ದ ವಿದ್ಯಾರ್ಥಿ. ಸ್ಟೂಡೆಂಟ್ ಇಸ್ಲಾಮಿಕ್ ಅರ್ಗನೈಸೇಶನ್ ಆಫ್ ಇಂಡಿಯಾದ ಸದಸ್ಯನಾಗಿ ಸಕ್ರೀಯನಾಗಿದ್ದ ವಿದ್ಯಾರ್ಥಿ. ಹುಟ್ಟಿನಿಂದ ಹೃದಯ ಸಂಬಂಧಿ ಕಾಯಿಲೆಯಿಂದ ಬಳಲುತ್ತಿದ್ದ ಕಳೆದ ಡಿಸೆಂಬರ್ 6 ರಂದು ನಾರಾಯಣ ಹೃದಯಾಲಯದಲ್ಲಿ ಚಿಕಿತ್ಸೆ ಪಡೆದಿದ್ದ. 18 ರಂದು ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದ ಮನೆಗೆ ಮರಳಿದ್ದ ಅಫ್ಕಾರ, ಊರಿಗೆ ಹಿಂದಿರುಗಿದ ಬಳಿಕ ಆರೋಗ್ಯದಲ್ಲಿ ಏರುಪೇರು. ಆಸ್ಪತ್ರೆಗೆ ಸಾಗಿಸುವ ಮಾರ್ಗಮಧ್ಯೆ ಕೊನೆಯುಸಿರು ಎಳೆದ ವಿದ್ಯಾರ್ಥಿ.

click me!