ಶಿವಮೊಗ್ಗ ನಗರದಲ್ಲಿ ಅಕ್ರಮ ವೇಶ್ಯಾವಾಟಿಕೆ ಅಡ್ಡೆಯ ಮೇಲೆ ಪೊಲೀಸರು ದಾಳಿ ಮಾಡಿ, ಮೂವರು ಮಹಿಳೆಯರು ಹಾಗೂ ಇಬ್ಬರು ಪುರುಷರನ್ನು ವಶಕ್ಕೆ ಪಡೆದಿದ್ದಾರೆ.
ಶಿವಮೊಗ್ಗ (ಡಿ.21): ರಾಜ್ಯದ ಮಲೆನಾಡಿನ ಹೆಬ್ಬಾಗಿಲು ಶಿವಮೊಗ್ಗ ನಗರದಲ್ಲಿ ಅಕ್ರಮವಾಗಿ ವೇಶ್ಯಾವಾಟಿಕೆ ನಡೆಸುತ್ತಿದ್ದ ಅಡ್ಡೆಯ ಮೇಲೆ ಪೊಲೀಸರು ದಾಳಿ ಮಾಡಿ, ಮೂವರು ಮಹಿಳೆಯರು ಹಾಗೂ ಇಬ್ಬರು ಆರೋಪಿಗಳನ್ನು ವಶಕ್ಕೆ ಪಡೆದಿದ್ದಾರೆ.
ರಾಜ್ಯದ ಹಲವು ಮಹಾನಗರಗಳಲ್ಲಿ ಅಕ್ರಮವಾಗಿ ಡ್ರಗ್ಸ್ ಮತ್ತು ಇತರೆ ಅನೈತಿಕ ಚಟುವಟಿಕೆಗಳು ನಡೆಯುತ್ತಲೇ ಇರುತ್ತವೆ. ಇದಕ್ಕೆ ಸಾಕ್ಷಿ ಎಂಬಂತೆ ಮಲೆನಾಡಿನ ಹೆಬ್ಬಾಗಿಲು ಶಿವಮೊಗ್ಗದಲ್ಲಿ ಈಗ ವೇಶ್ಯಾವಾಟಿಕೆ ಚಟುವಟಿಕೆಗಳು ನಡೆಯುತ್ತಿರುವುದು ಕಂಡುಬಂದಿದೆ. ಸೂಕ್ತ ಮಾಹಿತಿ ಆಧಾರದಲ್ಲಿ ವೈಶ್ಯವಾಟಿಕೆ ಅಡ್ಡೆಯ ಮೇಲೆ ಶಿವಮೊಗ್ಗದ ಜಯನಗರ ಠಾಣೆಯ ಪೊಲೀಸರು ಗಾಂಧಿನಗರದ 1ನೇ ಪ್ಯಾರಲಲ್ ರಸ್ತೆಯಲ್ಲಿರುವ ಮನೆಯ ಮೇಲೆ ದಾಳಿ ಮಾಡಿದ್ದಾರೆ. ಈ ವೇಳೆ ಮೂವರು ಮಹಿಳೆಯರು ಮತ್ತು ಇಬ್ಬರು ಗಂಡಸರನ್ನ ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಕೋವಿಡ್ ಮಾರ್ಗಸೂಚಿ: ಹೊಸ ವರ್ಷ, ಕ್ರಿಸ್‌ಮಸ್‌ಗೆ ನಿರ್ಬಂಧವಿಲ್ಲ, 60 ವರ್ಷ ಮೇಲ್ಪಟ್ಟವರಿಗೆ ಮಾಸ್ಕ್ ಕಡ್ಡಾಯ!
ಜಯನಗರ ಪೊಲೀಸ್ ಠಾಣೆ ಪೊಲೀಸ್ ಇನ್ಸ್‌ಪೆಕ್ಟರ್ ಸಿದ್ದೇಗೌಡ ಅವರ ನೇತೃತ್ವದಲ್ಲಿ ನಡೆದ ದಾಳಿ ಮಾಡಲಾಗಿದ್ದು, ಅಲ್ಲಿ ಸಿಕ್ಕಿಬಿದ್ದವರನ್ನು ವಿಚಾರಣೆ ಮಾಡಿದಾಗ ಮತ್ತಷ್ಟು ಸ್ಪೋಟಕ ವಿಚಾರಗಳು ಬೆಳಕಿಗೆ ಬಂದಿವೆ. ಶಿವಮೊಗ್ಗದ ಏಜೆಂಟ್ ಗಂಗಾಧರ್ ಎಂಬಾತ ಮೈಸೂರು, ಬೆಂಗಳೂರು ಮೊದಲಾದ ಮಹಾನಗರಗಳಿಂದ ಕಾಲ್ ಗರ್ಲ್ಸ್ ರೀತಿ ಕೆಲಸ ಮಾಡುವ ಮಹಿಳೆಯರನ್ನ ಕರೆಯಿಸಿ ದಂಧೆ ನಡೆಸುತ್ತಿದ್ದನು. ಇನ್ನು ಪೊಲೀಸರ ದಾಳಿಯ ವೇಳೆ ಸ್ಥಳೀಯ ಓರ್ವ ಮಹಿಳೆ, ಬೆಂಗಳೂರು ಮತ್ತು ಮೈಸೂರಿನಿಂದ ಬಂದ ಮಹಿಳೆಯರ ರಕ್ಷಣೆ ಮಾಡಲಾಗಿದೆ. ಈ ಘಟನೆಗೆ ಕುರಿತಂತೆ ಶಿವಮೊಗ್ಗದ ಜಯನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು ಆಗಿದೆ.
ಫೋನಲ್ಲಿ ಮಾತಾಡುವುದನ್ನು ಪ್ರಶ್ನಿಸಿದ ಗಂಡನ ಎದೆಗೆ ಚಾಕು ಚುಚ್ಚಿ ಕೊಲೆಗೈದ ಹೆಂಡ್ತಿ:
ಬನ್ನೇರುಘಟ್ಟ (ಡಿ.21): ಅನೈತಿಕ ಸಂಬಂಧ ವಿಚಾರಕ್ಕೆ ಪತಿ-ಪತ್ನಿ ನಡುವೆ ವಾಗ್ವಾದ ವಿಕೋಪಕ್ಕೆ ತಿರುಗಿ ಚೂರಿಯಿಂದ ಇರಿದು ಪತಿಯನ್ನೇ ಭೀಕರವಾಗಿ ಕೊಂದ ಘಟನೆ ಬನ್ನೇರುಘಟ್ಟ ಹುಳಿಮಾವು ಸಮೀಪದ ಪುಲ್ಲಿಂಗ್ ಪಾಸ್ ಎಂಬ ಕಾಲೇಜಿನಲ್ಲಿ ನಡೆದಿದೆ. ಉಮೇಶ್ ದಾಮಿ(27) ಕೊಲೆಯಾದ ಪತಿ. ಮನಿಷಾ ದಾಮಿ ಎಂಬಾಕೆಯಿಂದ ಕೃತ್ಯ ನಡೆದಿದೆ. ಇನ್ನು ದಂಪತಿ ಕಾಲೇಜಿನಲ್ಲಿ ಸೆಕ್ಯುರಿಟಿ ಹಾಗೂ ಹೌಸ್ ಕೀಪಿಂಗ್ ಕೆಲಸ ಮಾಡುತ್ತಿದ್ದರು. ಗಂಡ ರಾತ್ರಿ ಗೆಳೆಯನೊಂದಿಗೆ ಎಣ್ಣೆ ಪಾರ್ಟಿಗೆ ಹೋಗಿದ್ದು, ಪಾರ್ಟಿ ಮುಗಿಸಿ ರಾತ್ರಿ 12 ಗಂಟೆ ಸುಮಾರಿಗೆ ಮನೆಗೆ ವಾಪಸ್ಸಾಗಿದ್ದನು. ಆದರೆ, ಈ ವೇಳೆ ಪತ್ನಿ ಮನಿಷಾ ಫೋನ್‌ನಲ್ಲಿ ಯಾರೊಂದಿಗೆ ಮಾತನಾಡುತ್ತಿದ್ದಳು. ಉಮೇಶ್ ಕಂಡು ಫೋನ್ ಕಾಲ್ ಅರ್ಧಕ್ಕೆ ಕಟ್ ಮಾಡಿದ್ದಳು. ಇದರಿಂದ ಪತಿಗೆ ಅನುಮಾನ ಉಂಟಾಗಿದೆ.
ಪ್ರೀತ್ಸೆ ಪ್ರೀತ್ಸೆ ಅಂತಾ ಹಿಂದೆ ಬಿದ್ದ, ಮದುವೆ ಆಗಿದೆ ಮಕ್ಕಳಿವೆ ಎಂದವಳು ಇನ್ನೊಬ್ಬನೊಂದಿಗೆ ಲವ್ವಿಡವ್ವಿ!
ಇನ್ನು ಪತ್ನಿ ಅನೈತಿಕ ಸಂಬಂಧ ಹೊಂದಿದ್ದಾಳೆಂಬ ಅನುಮಾನದಿಂದ ಜಗಳ ತೆಗೆದಿದ್ದಾನೆ. ಇದೇ ವಿಚಾರವಾಗಿ ನಡೆದಿರೋ ಜಗಳ ಮಧ್ಯರಾತ್ರಿ ವಿಕೋಪಕ್ಕೆ ಹೋದಾಗ ಚಾಕು ತೆಗೆದುಕೊಂಡು ಉಮೇಶ್ ದಾಮಿ ಎದೆಗೆ ಆತನ ಪತ್ನಿ ಮನಿಷಾ ದಾಮಿ ಚಾಕು ಚುಚ್ಚಿದ್ದಾಳೆ. ಇದರಿಂದ ತೀವ್ರ ರಕ್ತಸ್ರಾವ ದಿಂದ ಸ್ಥಳದಲ್ಲೇ ಒದ್ದಾಡಿ ಜೀವಬಿಟ್ಟಿದ್ದಾನೆ. ಪೊಲೀಸರು ಘಟನೆ ಮಾಹಿತಿ ತಿಳಿದು ಸ್ಥಳಕ್ಕಾಗಮಿಸಿ ಪರಿಶೀಲನೆ ನಡೆಸಿದ್ದಾರೆ. ಸದ್ಯ ಆರೋಪಿ ಮನಿಷಾಳನ್ನು ಬಂಧಿಸಿದ್ದು, ವಿಚಾರಣೆ ಮುಂದುವರಿಸಿದ್ದಾರೆ. ಉಮೇಶ್ ಮೃತದೇಹ ವಿಕ್ಟೋರಿಯಾ ಆಸ್ಪತ್ರೆ ರವಾನಿಸಲಾಗಿದೆ. ಈ ಸಂಬಂಧ ಹುಳಿಮಾವು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು ಆಗಿದೆ.