* ಎಂಗೇಜ್ಮೆಂಟ್ ದಿನದಂದೇ ವಿಷ ಸೇವಿಸಿ ಆತ್ಮಹತ್ಯೆ
* ನಿಶ್ಚಿತಾರ್ಥದ ಮನೆಯಲ್ಲಿ ಸೂತಕದ ಛಾಯೆ
* ನಿಗೂಢ ಕಾರಣಕ್ಕೆ ಯುವಕ ಸೂಸೈಡ್
ವರದಿ: ಗಿರೀಶ್ ಕಮ್ಮಾರ್, ಗದಗ
ಗದಗ (ಮೇ.13): ನಿಶ್ಚಿತಾರ್ಥದ ದಿನದಂದೇ (engagement day) ವಿಷ ಸೇವಿಸಿ ಯುವಕ ಆತ್ಮಹತ್ಯೆ ಮಾಡಿಕೊಂಡ ಘಟನೆ ಬೆಳಕಿಗೆ ಬಂದಿದೆ. ಗದಗ (Gadag) ಜಿಲ್ಲೆ ಗಜೇಂದ್ರಗಢ (Gajendragadh) ತಾಲೂಕಿನ ರಾಜೂರು (Rajur) ಗ್ರಾಮದ ಕಳಕಪ್ಪ ಅಂಗಡಿ (29) ಆತ್ಮಹತ್ಯೆ ಮಾಡಿಕೊಂಡ ಯುವಕ.
ಮದುವೆ ಮಾಡಿಕೊಳ್ಳುವ ಹುಮ್ಮಸ್ಸಿನಲ್ಲಿದ್ದ ಕಳಕಪ್ಪ ಏಕಾಏಕಿ ಆತ್ಮ ಹತ್ಯೆ ನಿರ್ಧಾರ ಮಾಡಿದ್ದು ಕುಟುಂಬಸ್ಥರನ್ನ ದಿಗ್ಭ್ರಮೆಗೆ ತಳ್ಳಿದೆ. ಮದುವೆ ಸಂಭ್ರಮದ ಮನೆಯಲ್ಲಿ ಸೂತಕದ ಛಾಯೆ ಆವರಿಸುವಂತೆ ಮಾಡಿದೆ. ಆತ್ಮಹತ್ಯೆಗೆ ನಿಖರ ಕಾರಣ ತಿಳಿದು ಬಂದಿಲ್ಲ. ಮಾನಸಿಕವಾಗಿ ಮನ ನೊಂದು ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂದಷ್ಟೇ ಕುಟುಂಬಸ್ಥರು ಸಂಶಯ ವ್ಯಕ್ತಪಡಿಸಿದ್ದಾರೆ..
ಹಿಂದಿನ ದಿನ ನಿಶ್ವಿತಾರ್ಥಕ್ಕೆ ತಯಾರಿ.. ಬೆಳಗ್ಗೆ ಆತ್ಮಹತ್ಯೆ.! : ನಿಶ್ಚಿತಾರ್ಥದ ಹಿಂದಿನ ದಿನ ಅಂದರೆ ಗುರುವಾರ, ಓಡಾಡ್ಕೊಂಡು ಕಾರ್ಯಕ್ರಮದ ತಯಾರಿ ಮಾಡಿಕೊಂಡಿದ್ದ. ಸ್ವತಃ ಮಾರ್ಕೆಟ್ ಗೆ ಹೋಗಿ ತರಕಾರಿ, ದಿನಸಿ ಖರೀದಿಸಿದ್ದ ಕಳಕಪ್ಪ (Kalakappa Angadi) ಬೆಳಗ್ಗೆ ಆತ್ಮಹತ್ಯೆ ಮಾಡಿಕೊಂಡಿದ್ದಾನೆ..
ತೋಟದ ಮನೆಯಲ್ಲೇ ಆತ್ಮಹತ್ಯೆ: ರಾತ್ರಿ ಕಟಿಂಗ್ ಶೇವಿಂಗ್ ಮಾಡಿಸಿಕೊಂಡು ಬೆಳಗಿನ ಕಾರ್ಯಕ್ರಮಕ್ಕೆ ರೆಡಿಯಾದಂತೆ ಕಂಡಿದ್ದ ಕಳಕಪ್ಪ ಬೆಳಗ್ಗೆ ಆತ್ಮಹತ್ಯೆ ಮಾಡಿಕೊಳ್ಳೋದಕ್ಕೆ ಸಿದ್ಧನಾಗಿದ್ದ. ಬೆಳಗಿನ ಜಾವ ಗ್ರಾಮದ ಹೊರವಲಯದಲ್ಲಿರುವ ಯಜಮಾನರ ತೋಟದ ಮನೆಗೆ ತೆರಳಿ ವಿಷ ಸೇವಿಸಿದ್ದ. ಬೆಳಗ್ಗೆ ಮದುಮಗ ಎಲ್ಲಿ ಅಂತಾ ಹುಡುಕುವಾಗ ಆತ್ಮಹತ್ಯೆ ವಿಷಯ ಬೆಳಕಿಗೆ ಬಂದಿದೆ..
ನಿಗೂಢವಾಗೇ ಉಳಿದ ಆತ್ಮಹತ್ಯೆ ಕೇಸ್..!: ಊರಿನ ಸಾಹುಕಾರ ಹಾದಿಮನೆ ಅನ್ನೋರ ಜಮೀನಲ್ಲಿ ಕೆಲಸ ಮಾಡ್ತಿದ್ದ ಕಳಕಪ್ಪ, ಒಳ್ಳೆಯ ಮನುಷ್ಯ ಅನ್ನೋ ಹೆಸರನ್ನೂ ಮಾಡಿದ್ದ.. ಹಾದಿಮನೆ ಕುಟುಂಬಸ್ಥರು ಮುಂದೆನಿಂತು ಕಳಕಪ್ಪ ಮದ್ವೆಗೆ ಸಹಾಯ ಮಾಡ್ತಿದ್ರು.. ಮದುವೆಗೆ ಬಟ್ಟೆ ಬರೆ ಖರೀದಿ ಮಾಡಿದ್ದ ಕಳಕಪ್ಪ ಮನೆಮಂದಿಗೆ ತೋರಿಸಿ ಸಂಭ್ರಮಿಸಿದ್ದ.. ರಾತ್ರಿ ಊಟ ಮಾಡಿ ಮನೆ ಎದುರಿನ ಮಸೀದಿ ಕಟ್ಟೆ ಮೇಲೆ ಮಲ್ಕೊಂಡಿದ್ದ.. ಬೆಳಗ್ಗೆ ಹಾಸಿಗೆ ಮನೆಯಲ್ಲಿಟ್ಟು ತೋಟದ ಮನೆಗೆ ಹೋಗಿದ್ದ. ಅಲ್ಲಿಂದ ಕಳಕಪ್ಪ ಸಾವಿನ ಸುದ್ದಿ ಮನೆಗೆ ಬಂದಿದೆ..
RAPE CASE: ಗೋವಾದಲ್ಲಿ ರಷ್ಯನ್ ಬಾಲಕಿ ಮೇಲೆ ರೇಪ್: ಗದಗ ವ್ಯಕ್ತಿ ಬಂಧನ
ಗ್ರಾಮದಲ್ಲಿನ ಸ್ನೇಹಿತರಿಗೆ ಸಂಬಂಧಿಕರಿಗೆ ಕಳಕಪ್ಪ ಏನೂ ಹೇಳಿಕೊಂಡಿರಲಿಲ್ಲ.. ಆರೋಗ್ಯ ಸರಿಯಾಗಿತ್ತು.. ಮೂವರು ಸಹೋದರರಿದ್ದು ಕೌಟುಂಬಿಕ ಕಲಹ ಇಲ್ಲ. ಮದ್ವೆಯಾಗೋ ಹುಡುಗಿಯ ಜೊತೆಗೂ ಚೆನ್ನಾಗಿದ್ದ. ಹಾಗಿದ್ದರೂ ಆತ್ಮಹತ್ಯೆ ಯಾಕೆ ಮಾಡಿಕೊಂಡ ಅನ್ನೋ ಪ್ರಶ್ನೆ ಸದ್ಯಕ್ಕೆ ಮೂಡಿದೆ.
ಮದ್ಯ ಖರೀದಿಗೆ ಸರ್ಕಾರದ ಹೊಸ ರೂಲ್ಸ್..!
ಪ್ರಕರಣ ಸಂಬಂಧ ಗಜೇಂದ್ರಗಡ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ನಡೆಯುತ್ತಿದೆ. ಕಳಕಪ್ಪ ಆತ್ಮಹತ್ಯೆ ಮಾಡಿಕೊಂಡರೇ, ಮದುವೆ ಮೂಡ್ ನಲ್ಲಿದ್ದ ಕಳಕಪ್ಪ ಸಾವಿನ ನಿರ್ಧಾರ ಯಾಕೆ ಮಾಡಿದ? ನಿಶ್ಚಿತಾರ್ಥದ ಹಿಂದಿನ ರಾತ್ರಿ ನಡೆದಿದ್ದು ಏನು ಅನ್ನೋ ನೂರಾರು ಪ್ರಶ್ನೆಯನ್ನ ಕಳಕಪ್ಪ ಬಿಟ್ಟು ಹೋಗಿದ್ದಾರೆ.. ತನಿಖೆಯಿಂದಷ್ಟೆ ನಿಗೂಢದ ಮೂಟೆಯಾಗಿರುವ ಕೇಸ್ ನ ಸತ್ಯಾಸತ್ಯತೆ ಹೊರ ಬರಲಿದೆ.