ಎಲೆಕ್ಟ್ರಿಸಿಟಿ ಬದಲು 'ಎಣ್ಣೆ' ಉತ್ಪಾದಿಸೋ ಜನರೇಟರ್..ಸ್ಮಗ್ಲರ್ ಗಳ ಐಡಿಯಾ ಕಂಡು ಪೊಲೀಸರೇ ಕಂಗಾಲು!

By Santosh NaikFirst Published May 13, 2022, 7:27 PM IST
Highlights

ಬಿಹಾರ ಸರ್ಕಾರ ರಾಜ್ಯದಲ್ಲಿ ಸಂಪೂರ್ಣವಾಗಿ ಮದ್ಯ ನಿಷೇಧ ಮಾಡಿದೆ. ಅದರೊಂದಿಗೆ ಮದ್ಯದ ಕಳ್ಳಸಾಗಣೆ ತಡೆಯುವಲ್ಲಿ ಸರ್ಕಾರದೊಂದಿಗೆ ಇಡೀ ವ್ಯವಸ್ಥೆ ನಿರತವಾಗಿದೆ. ನಿತ್ಯ ಸಾವಿರಾರು ಲಕ್ಷ ಲೀಟರ್ ಮದ್ಯವನ್ನು ವಶಪಡಿಸಿಕೊಳ್ಳಲಾಗುತ್ತಿದೆ. ಸಿಕ್ಕಿಬಿದ್ದವರನ್ನು ಜೈಲಿಗೆ ಹಾಕಲಾಗುತ್ತಿದೆ. ಇದರ ಪರಿಣಾಮ ಬಿಹಾರದ ಜೈಲುಗಳಲ್ಲಿ ಮದ್ಯದ ಕಳ್ಳಸಾಗಣೆ ಮಾಡಿ ಜೈಲು ಪಾಲಾದವರ ಸಂಖ್ಯೆ ವಿಪರೀತವಾಗಿ ಹೆಚ್ಚಾಗಿದ್ದು, ಉಳಿದ ಅಪರಾಧದ ಖೈದಿಗಳಿಗೆ ಜೈಲಿನಲ್ಲಿ ಸ್ಥಳವೇ ಇಲ್ಲದಂತಾಗಿದೆ.

ಪಾಟ್ನಾ (ಮೇ. 13): ಮದ್ಯ ನಿಷೇಧದ  (prohibition of liquor)ನಂತರ ಬಿಹಾರದಲ್ಲಿ(Bihar) ಕಳ್ಳಸಾಗಾಣಿಕೆದಾರರು ಹೊಸ ಹೊಸ ವಿಧಾನಗಳನ್ನು ಆವಿಷ್ಕರಿಸುವ ಮೂಲಕ ನಿರಂತರವಾಗಿ ಕಳ್ಳಸಾಗಣೆಯಲ್ಲಿ ತೊಡಗಿದ್ದಾರೆ. ಇದರಲ್ಲಿ ತನ್ನ ದೇಹವನ್ನೇ ಲಿಕ್ಕರ್ ಟ್ಯಾಂಕ್ (Liquor Tank) ಮಾಡುವುದರಿಂದ ಹಿಡಿದು ಬೈಕ್ ಟ್ಯಾಂಕ್‌ ನಲ್ಲೇ (Bike Tank) ಮದ್ಯ ತುಂಬಿಕೊಂಡು ಸರಬರಾಜು ಮಾಡುವವರೆಗೆ ಪ್ರಕರಣಗಳು ನಡೆದಿವೆ. ಆದರೆ, ಇತ್ತೀಚಿನ ಪ್ರಕರಣವು ಜನರೇಟರ್‌ಗೆ (Generator) ಸಂಬಂಧಿಸಿದ್ದಾಗಿ. ಇದರ ವಿಶೇಷ ಏನೆಂದರೆ, ಈ ಜನರೇಟರ್ ವಿದ್ಯುತ್ (Electricity) ಉತ್ಪಾದಿಸುವ ಬದಲು ಮದ್ಯವನ್ನು (Alcohol) ಹೊರಹಾಕುತ್ತದೆ.

ಈ ವಿಷಯ ಓದಿ ನಿಮಗೂ ಅಚ್ಚರಿಯಾಗಿರಬೇಕಲ್ವಾ.. ಇಂಥದ್ದೊಂದು ಖತರ್ನಾಕ್ ಐಡಿಯಾವನ್ನು ಕಂಡು ಸ್ವತಃ ಬಿಹಾರ ಪೊಲೀಸರೇ ಕಂಗಾಲಾಗಿದ್ದಾರೆ. ಕೈಮೂರ್ ಜಿಲ್ಲೆಯ ದುರ್ಗಾವತಿ ಟೋಲ್ ಪ್ಲಾಜಾ ಬಳಿಯ ಮುಸಹರಿ ಟೋಲಿ ಬಳಿ ಈ ಪ್ರಕರಣ ದಾಖಲಾಗಿದೆ. ಕಾರ್ಯಾಚರಣೆಯ ಸಂದರ್ಭದಲ್ಲಿ ಪೊಲೀಸರು ಡಿಸಿಎಂ ಟ್ರಕ್‌ನ ಮೇಲ್ಭಾಗದಲ್ಲಿ ಇರಿಸಲಾದ ಡಿಸಿ ಜನರೇಟರ್ ಅನ್ನು ಪರಿಶೀಲನೆ ಮಾಡಿದ್ದಾರೆ. ಪರಿಶೀಲನೆ ವೇಳೆ ಪತ್ತೆಯಾದ ವಿಚಾರ ಕಂಡು ಪೊಲೀಸರೇ ಹೌಹಾರಿದ್ದಾರೆ. ಮೇಲಿನಿಂದ ಸಂಪೂರ್ಣವಾಗಿ ಅದು ವಿದ್ಯುತ್ ಜನರೇಟರ್ ರೀತಿ ಕಾಣುತ್ತಿದ್ದರೆ, ಒಳನೆ ಸಂಪೂರ್ಣ ಮದ್ಯ ತುಂಬಿಕೊಂಡಿತ್ತು. ಡಿಸಿಎಂ ಟ್ರಕ್‌ನೊಳಗೆ ತುಂಬಿದ್ದ ಜನರೇಟರ್‌ನಲ್ಲಿ ಅಪಾರ ಪ್ರಮಾಣದ ವಿದೇಶಿ ಮದ್ಯ ಪತ್ತೆಯಾಗಿದೆ.

ಟ್ರಕ್ ಚಾಲಕನನ್ನು ಪೊಲೀಸರು ಬಂಧಿಸಿದ್ದಾರೆ. ದೆಹಲಿಯಿಂದ ಬಿಹಾರದ ಮುಜಾಫರ್‌ಪುರಕ್ಕೆ ಮದ್ಯ ರವಾನೆಯಾಗುತ್ತಿತ್ತು ಎನ್ನುವ ಮಾಹಿತಿಯನ್ನು ಪಡೆದುಕೊಂಡಿದ್ದಾರೆ. ತನಿಖೆಯ ವೇಳೆ ಟ್ರಕ್ ಚಾಲಕ ಪೊಲೀಸರಿಗೆ ಸಾಕಷ್ಟು ಮಾಹಿತಿಯನ್ನು ಒದಗಿಸಿದ್ದಾರೆ. ಬಂಧಿತ ಚಾಲಕ ತಾನು ಸೈದ್ ಪುರ ಗ್ರಾಮದವನಾಗಿದ್ದು, ಭೋಜಪುರ ಪೊಲೀಸ್ ಠಾಣೆ, ಗಾಜಿಯಾಬಾದ್ (ಉತ್ತರ ಪ್ರದೇಶ) ಜಿಲ್ಲೆಯವನು ಎಂದು ಹೇಳಿದ್ದಾನೆ. ದೆಹಲಿಯಿಂದ ಮುಜಾಫರ್‌ಪುರಕ್ಕೆ ಡಿಸಿಎಂ ಟ್ರಕ್‌ನಲ್ಲಿ ಮದ್ಯವನ್ನು ಲೋಡ್ ಮಾಡಲಾಗುತ್ತಿತ್ತು ಮತ್ತು ಅವರು ಒಂದು ಟ್ರಕ್ ಅನ್ನು ತಲುಪಿಸಲು 10000 ರೂಪಾಯಿಗಳನ್ನು ಬಾಡಿಗೆ ಎಂದು ಬಂಧಿತ ಆರೋಪದಲ್ಲಿ ತಿಳಿಸಲಾಗಿದೆ.

ಇದಕ್ಕಿಂತ ಇನ್ನೂ ದೊಡ್ಡ ವಿಚಾರವೆಂದರೆ, ಮದ್ಯ ಕಳ್ಳ ಸಾಗಣೆದಾರರು ಜನರೇಟರ್ ಗಳು ಮಾತ್ರವಲ್ಲದೆ, ಗೃಹಪಯೋಗಿ ವಸ್ತುಗಳಾದ ಫ್ರೀಜರ್ ಗಳು, ಟಿವಿಗಳಲ್ಲಿಯೂ ಮದ್ಯ ತುಂಬಿಸಿ ರವಾನೆ ಮಾಡುತ್ತಿದ್ದರು. ಇದನ್ನು ದೆಹಲಿಯಿಂದ ನೇರವಾಗಿ ಮುಜಾಫರ್ ಪುರಕ್ಕೆ ಕಳುಹಿಸಲಾಗುತ್ತದೆ. ಆರೋಪಿ ಚಾಲಕನಿಂದ ಪೊಲೀಸರು ಹೆಚ್ಚಿನ ಮಾಹಿತಿಯನ್ನು ಕಲೆಹಾಕುತ್ತಿದ್ದಾರೆ.

ಗರ್ಭಿಣಿಯ ಮೇಲೆ ಆಸ್ಪತ್ರೆಯ ಸಿಬ್ಬಂದಿಯಿಂದಲೇ ಅತ್ಯಾಚಾರ!

ಪೊಲೀಸರ ಪ್ರಕಾರ, ದೆಹಲಿಯಿಂದ ವಾರಣಾಸಿಗೆ ಕೈಮೂರ್ ಮೂಲಕ ಮತ್ತು ನಂತರ ಈ ಜನರು ತಮ್ಮ ಸರಬರಾಜುಗಳನ್ನು ಮುಜಾಫರ್‌ಪುರಕ್ಕೆ ಅಂದರೆ ಉತ್ತರ ಬಿಹಾರದ ಹಲವು ಜಿಲ್ಲೆಗಳಿಗೆ ಪೂರೈಸುತ್ತಾರೆ. ಚಾಲಕನಿಗೆ ಪ್ರತಿ ಟ್ರಿಪ್‌ಗೆ ಹತ್ತು ಸಾವಿರ ರೂಪಾಯಿಯನ್ನು ಪಡೆಯುತ್ತಿದ್ದ ಎಂದಿದ್ದಾರೆ.

ಸಾವಿರಕ್ಕೂ ಹೆಚ್ಚು ಮಹಿಳೆಯರಿಗೆ ವಂಚಿಸಿದ ಬಿಟೆಕ್ ಪದವೀಧರನ ಬಂಧನ

ಎಸ್‌ಎಚ್‌ಒ ರಾಜೀವ್ ರಂಜನ್ ಸಿಂಗ್ ಅವರು ಟೋಲ್ ಪ್ಲಾಜಾ ಬಳಿ ವಾಹನ ತಪಾಸಣೆ ನಡೆಸಿದಾಗ ಎಎಲ್‌ಟಿಎಫ್ ತಂಡ ಮತ್ತು ದುರ್ಗಾವತಿ ಪೊಲೀಸರು ಕ್ರಮ ಕೈಗೊಂಡಾಗ ಡಿಸಿಎಂ ಟ್ರಕ್‌ನಿಂದ ಅಪಾರ ಪ್ರಮಾಣದ ಮದ್ಯವನ್ನು ವಶಪಡಿಸಿಕೊಂಡಿದ್ದಾರೆ.

click me!