ನಿರ್ಮಾಣ ಹಂತದ ಕಟ್ಟಡದಲ್ಲಿ ಅಡಗಿ ಮನೆಗಳಿಗೆ ಕನ್ನ!

By Kannadaprabha NewsFirst Published Mar 9, 2022, 1:47 AM IST
Highlights

ಮೂವರು ಕಳ್ಳರಿಗೆ ಜೈಲಲ್ಲಿಯೇ ಸ್ನೇಹ

ಜಾಮೀನಿನ ಮೇಲೆ ಹೊರಬಂದು ಒಟ್ಟಿಗೆ ಕೃತ್ಯ

1 ಕೇಜಿ ಚಿನ್ನಾಭರಣ, 2 ಕೆಜಿ ಬೆಳ್ಳಿ ವಶ
 

ಬೆಂಗಳೂರು (ಮಾ.9): ನಿರ್ಮಾಣ ಹಂತದ ಕಟ್ಟಡದಲ್ಲಿ ಅಡಗಿ, ಬೀಗ ಹಾಕಿದ ಮನೆಗಳಿಗೆ ತಡರಾತ್ರಿ ನುಗ್ಗಿ ಕಳವು (Theft) ಮಾಡುತ್ತಿದ್ದ ಮೂವರು ಕುಖ್ಯಾತ ಕಳ್ಳರನ್ನು ನಂದಿನಿ ಲೇಔಟ್‌ ಠಾಣೆ ಪೊಲೀಸರು (Nandini Lay Out Police) ಬಂಧಿಸಿದ್ದಾರೆ. ರಾಜಾನುಕುಂಟೆ ನಿವಾಸಿ ಸತೀಶ್‌ ಅಲಿಯಾಸ್‌ ಕೊಕ್ರೆ(38), ಯಶವಂತಪುರದ ಶ್ರೀನಿವಾಸ ಅಲಿಯಾಸ್‌ ಕರಾಟೆ ಸೀನ(36) ಹಾಗೂ ಕಮಲಾನಗರದ ತೇಜಸ್‌(23) ಬಂಧಿತರು. 

ಇವರು ನೀಡಿದ ಮಾಹಿತಿ ಮೇರೆಗೆ ಬರೋಬ್ಬರಿ .55.18 ಲಕ್ಷ ಮೌಲ್ಯದ ಒಂದು ಕೆ.ಜಿ. ಚಿನ್ನಾಭರಣ, 1.96 ಕೆ.ಜಿ. ಬೆಳ್ಳಿ ಸಾಮಗ್ರಿಗಳು ಹಾಗೂ ಕೃತ್ಯಕ್ಕೆ ಬಳಸಿದ್ದ ದ್ವಿಚಕ್ರ ವಾಹನ ಜಪ್ತಿ ಮಾಡಲಾಗಿದೆ. ಇತ್ತೀಚೆಗೆ ನಂದಿನಿ ಲೇಔಟ್‌ನಲ್ಲಿ ಬೀಗ ಹಾಕಿದ ಮನೆಯೊಂದರ ಬೀಗ ಮುರಿದು ಕಳ್ಳತನ (House Burglary) ಮಾಡಲಾಗಿತ್ತು. ಈ ಸಂಬಂಧ ದಾಖಲಾಗಿದ್ದ ದೂರಿನ ಮೇರೆಗೆ ಇನ್‌ಸ್ಪೆಕ್ಟರ್‌ ವೆಂಕಟೇಗೌಡ (Venkatesh Gowda) ನೇತೃತ್ವದಲ್ಲಿ ಕಾರ್ಯಾಚರಣೆ ಕೈಗೊಂಡು ಆರೋಪಿಗಳನ್ನು ಬಂಧಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಜೈಲಿನಲ್ಲಿ ಫ್ರೆಂಡ್‌ಶಿಪ್‌: ಮೂವರು ಆರೋಪಿಗಳು ವೃತ್ತಿಪರ ಕಳ್ಳರಾಗಿದ್ದು, ಹಲವು ಬಾರಿ ಜೈಲು ( Jail ) ಸೇರಿದ್ದರು. 2018ರಲ್ಲಿ ಕಳ್ಳತನ ಪ್ರಕರಣಗಳಲ್ಲಿ ಜೈಲು ಸೇರಿದ್ದರು. ಈ ವೇಳೆ ಮೂವರ ಪರಿಚಯವಾಗಿ ಸ್ನೇಹಿತರಾಗಿದ್ದರು. ಜಾಮೀನು ಪಡೆದು ಹೊರಬಂದ ಬಳಿಕ ಮೂವರು ಒಟ್ಟಿಗೆ ಮನೆಗಳವು ಮಾಡುತ್ತಿದ್ದರು. ಆರೋಪಿಗಳ ಬಂಧನದಿಂದ ನಂದಿನಿ ಲೇಔಟ್‌, ವಿದ್ಯಾರಣ್ಯಪುರ (Vidyaranyapura), ಬಾಗಲಗುಂಟೆ (Bagalagunte), ಕೊಡಿಗೇಹಳ್ಳಿ, ಸಂಜಯ ನಗರ, ಗಂಗಮ್ಮನಗುಡಿ ಹಾಗೂ ಪೀಣ್ಯ ಪೊಲೀಸ್‌ ಠಾಣೆಗಳಲ್ಲಿ ದಾಖಲಾಗಿದ್ದ 14 ಕಳ್ಳತನ ಪ್ರಕರಣಗಳು ಬೆಳಕಿಗೆ ಬಂದಿವೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.


ಮನೆಯಲ್ಲೇ ಸ್ಕೆಚ್‌: ಆರೋಪಿ ತೇಜಸ್‌ನನ್ನು 2021ನೇ ಸಾಲಿನಲ್ಲಿ ಅಪಹರಣ ಪ್ರಕರಣದಲ್ಲಿ ಬಸವೇಶ್ವರ ನಗರ ಪೊಲೀಸ್‌ ಠಾಣೆಯ ಬಂಧಿಸಿ ಜೈಲಿಗೆ ಕಳುಹಿಸಿದ್ದರು. ಬಳಿಕ ಜಾಮೀನಿನ ಮೇಲೆ ಬಿಡುಗಡೆಯಾದ ತೇಜಸ್‌, ಆರೋಪಿಗಳಾದ ಸತೀಶ್‌ ಮತ್ತು ಶ್ರೀನಿವಾಸವನನ್ನು ಮನೆಗೆ ಕರೆದೊಯ್ದು ಸ್ನೇಹಿತರೆಂದು ತಾಯಿಗೆ ಪರಿಚಯಿಸಿದ್ದ. ಹೀಗಾಗಿ ಮೂವರು ಮನೆಯಲ್ಲೇ ಉಳಿದುಕೊಂಡು ಕಳ್ಳತನಕ್ಕೆ ಸ್ಕೆಚ್‌ ಹಾಕುತ್ತಿದ್ದರು. ಬಳಿಕ ಕಳ್ಳತನ ಮಾಡಿ ಚಿನ್ನಾಭರಣ ಹಂಚಿಕೊಳ್ಳುತ್ತಿದ್ದರು. ಒಂದೆರೆಡು ಪ್ರಕರಣದಲ್ಲಿ ಕದ್ದ ಆಭರಣಗಳನ್ನು ತೇಜಸ್‌, ತಾಯಿಯ ಮೂಲಕ ಅಡವಿರಿಸಿ ಹಣ ಪಡೆದಿದ್ದ. ಸ್ನೇಹಿತರಿಗೆ ಕಷ್ಟವಿದೆ ಎಂದು ತಾಯಿಗೆ ಸುಳ್ಳು ಹೇಳಿ ಈ ಕೆಲಸ ಮಾಡಿಸಿದ್ದ ಎಂಬುದು ವಿಚಾರಣೆಯಿಂದ ತಿಳಿದು ಬಂದಿದೆ.

Prostitution Racket: ಸ್ಟುಡೆಂಟ್ಸ್ ಬಳಸಿಕೊಂಡು ವೇಶ್ಯಾವಾಟಿಕೆ ಜಾಲ
ಸಂಜೆ ವೇಳೆ ರೌಂಡ್ಸ್‌! ಆರೋಪಿಗಳು ಸಂಜೆ ವೇಳೆ ನಗರದ ವಿವಿಧೆಡೆ ಓಡಾಡಿ ಬೀಗ ಹಾಕಿದ ಮನೆಗಳನ್ನು ಗುರುತಿಸುತ್ತಿದ್ದರು. ಬಳಿಕ ಆ ಮನೆಗೆ ಹತ್ತಿರದಲ್ಲೇ ನಿರ್ಮಾಣದ ಹಂತದ ಕಟ್ಟಡಗಳನ್ನು ಗುರುತಿಸಿ ರಾತ್ರಿ ಅಲ್ಲೇ ಊಟ ಮಾಡಿ ಮಲಗುತ್ತಿದ್ದರು. ಬಳಿಕ ತಡರಾತ್ರಿ 1ರ ಸುಮಾರಿಗೆ ಎದ್ದು ಸಂಜೆ ಗುರುತಿಸಿದ ಬೀಗ ಹಾಕಿದ ಮನೆಗೆ ತೆರಳಿ ರಾಡ್‌ನಿಂದ ಬೀಗ ಮುರಿದು ಒಳ ನುಗ್ಗಿ ಚಿನ್ನಾಭರಣ ದೋಚಿ ಮತ್ತೆ ನಿರ್ಮಾಣ ಹಂತದ ಕಟ್ಟಡಕ್ಕೆ ಬರುತ್ತಿದ್ದರು.

Belagavi: ಸೈನಿಕ ಸತ್ಯಪ್ಪನ ಮಾನಸಿಕ ಅಸ್ವಸ್ಥತೆ BSF ಯೋಧರ ಹತ್ಯೆಗೆ ಕಾರಣ?
ಮುಂಜಾನೆ ಜಾಗ ಖಾಲಿ:
ತಡರಾತ್ರಿ ಕದ್ದ ಚಿನ್ನಾಭರಣಗಳನ್ನು ಆಗಲೇ ತೆಗೆದುಕೊಂಡು ಹೋದರೆ ಪೊಲೀಸರ ಕೈಗೆ ಸಿಕ್ಕಿ ಬೀಳುವ ಭೀತಿಯಲ್ಲಿ ಮತ್ತೆ ನಿರ್ಮಾಣ ಹಂತದ ಕಟ್ಟಡಕ್ಕೆ ಬರುತ್ತಿದ್ದರು. ಮುಂಜಾನೆ ರಸ್ತೆಗಳಲ್ಲಿ ವಾಹನ ಹಾಗೂ ಜನರ ಓಡಾಟ ಆರಂಭವಾಗುತ್ತಿದ್ದಂತೆ ಚಿನ್ನಾಭರಣಗಳೊಂದಿಗೆ ಜಾಗ ಖಾಲಿ ಮಾಡುತ್ತಿದ್ದರು. ಆರೋಪಿಗಳು ಬಚ್ಚಿಟ್ಟುಕೊಳ್ಳಲು ನಿರ್ಮಾಣ ಹಂತದ ಕಟ್ಟಡಗಳನ್ನೇ ಹುಡುಕುತ್ತಿದ್ದರು ಎಂಬುದು ವಿಚಾರಣೆಯಿಂದ ತಿಳಿದು ಬಂದಿದೆ ಅಧಿಕಾರಿಗಳು ತಿಳಿಸಿದ್ದಾರೆ.

click me!